ಈ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ಪಾರ್ಶ್ವವಾಯು ಅಥವಾ ಲಕ್ವ ಬರುವ ಸಾಧ್ಯತೆ ಇರುತ್ತೆ

0
1224

ತಾಯಿಯ ಹೊಟ್ಟೆಯೊಳಗಿನ ಮಗುವಿನಿಂದ ಹಿಡಿದು ನೂರು ವರ್ಷ ವಯಸ್ಸಾಗಿರುವವರಿಗೂ ವ್ಯಕ್ತಿಗಳಿಗೂ ಈ ಲಕ್ವ ಅಥವಾ ಪಾರ್ಶ್ವವಾಯು ಬರಬಹುದು. ಡಾಕ್ಟರ್ ಗಳ ಭಾಷೆ ಅಥವಾ ಇಂಗ್ಲೀಶ್ ಭಾಷೆಯಲ್ಲಿ ಇದನ್ನು ಪ್ಯಾರಲಿಸಿಸ್ ಎನ್ನುತ್ತಾರೆ. ಇದು ಸಾವನ್ನು ತರಿಸುವ ಮಹಾ ಖಾಯಿಲೆ ಆಗಿದೆ. ನಮ್ಮ ದೇಹದ ಪ್ರತಿ ಭಾಗವನ್ನು ಹತೋಟಿಯಲ್ಲಿ ಇಡಿದುಕೊಳ್ಳುವುದು ಮೆದುಳು, ಮೆದುಳು ನಮ್ಮ ದೇಹದ ಅಂಗಗಳಲ್ಲಿ ಬಹು ಮುಖ್ಯ ಅಂಗ. ಈ ಮೆದುಳಿಗೆ ಸರಿಯಾಗಿ ರಕ್ತ ಸಂಚಾರವಾಗಬೇಕು. ರಕ್ತ ಸಂಚಾರವು ರಕ್ತನಾಳಗಳ ಮೂಲಕ ಆಗುತ್ತದೆ. ಕೆಲವೊಮ್ಮೆ ರಕ್ತನಾಳಗಳಿಗೆ ತೊಂದರೆ ಉಂಟಾದರೆ ಅಥವಾ ಮುಚ್ಚಿಹೊದರೆ ರಕ್ತ ಸಂಚಾರವು ಸರಿಯಾಗಿ ಆಗುವುದಿಲ್ಲ. ಮೆದುಳಿನ ರಕ್ತ ಸಂಚಾರಕ್ಕೆ ತೊಂದರೆ ಉಂಟಾದಾಗ ಆಗುವುದೇ ಈ ಪಾರ್ಶ್ವವಾಯು ಅಥವಾ ಲಕ್ವ.

ಈ ಪಾರ್ಶ್ವವಾಯುವಿನಲ್ಲಿ ಎರಡು ವಿಧ, ಹಿಮೋರೇಜಿಕ್ ಸ್ಟ್ರೋಕ್ ಮತ್ತು ಇಷ್ಕೆಮಿಕ್ ಸ್ಟ್ರೋಕ್. ರಕ್ತನಾಳಗಳು ತಮ್ಮ ಕೆಲಸವನ್ನು ನಿಲ್ಲಿಸಿದಾಗ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಆಗ ಆಗುವುದೇ ಹಿಮೋರೇಜಿಕ್ ಸ್ಟ್ರೋಕ್. ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಅಥವಾ ಬೇರೆ ಏನಾದರು ತೊಂದರೆ ಉಂಟಾಗಿ ಮೆದುಳಿಗೆ ರಕ್ತ ಸಂಚಾರ ನಿಂತುಹೋದಾಗ ಆಗುವುದೇ ಇಷ್ಕೆಮಿಕ್ ಸ್ಟ್ರೋಕ್. ಪಾರ್ಶ್ವವಾಯುವಿನ ಲಕ್ಷಣಗಳನ್ನು ನೋಡುವುದಾದರೆ, ಕಣ್ಣು ಮಂಜು ಮಂಜಾದಂತೆ ಅನ್ನಿಸುವುದು.

ಕೈ ಕಾಲುಗಳು ತಮ್ಮ ಸ್ವಾಧೀನ ಕಳೆದುಕೊಂಡಂತೆ ಭಾಸವಾಗುವುದು ದೇಹದ ಸಮತೋಲನ ತಪ್ಪಿದಂತೆ ಅನ್ನಿಸುವುದು, ನೆನಪಿನ ಶಕ್ತಿ ಕಡಿಮೆ ಆಗುವುದು, ಮಾತು ತೊದಲುವುದು, ಆಹಾರ ಸೇವನೆಗೆ ಕಷ್ಟವಾಗುವುದು. ಈ ಮೇಲ್ಕಂಡ ಯಾವುದೇ ಲಕ್ಷಣಗಳು ಕಂಡುಬಂದರು ಡಾಕ್ಟರ್ ನ ಬಳಿ ಹೋಗುವುದು ಒಳಿತು. ಪಾರ್ಶ್ವವಾಯುವಿಗೆ ಕಾರಣಗಳನ್ನು ನೋಡುತ್ತಾ ಹೋದರೆ ಯಾರಿಗೆ ಹೆಚ್ಚು ಬರುತ್ತೆ ಅಂದ್ರೆ ಅತೀಯಾದ ಧೂಮಪಾನ ಮತ್ತು ಮಧ್ಯಪಾನ ಹಾಗೂ ಡ್ರಗ್ಸ್ ಸೇವನೆ ಮಾಡುವುದರಿಂದ ಬರುತ್ತದೆ. ಹೆಚ್ಚು ತೂಕ ಇರುವವರಿಗೂ ಬರಬಹುದು. ಅತಿಯಾದ ಯೋಚನೆ ಮಾಡುವುದರಿಂದ ಮೆದುಳಿಗೆ ಒತ್ತಡ ಹೆಚ್ಚಾಗಿ ರಕ್ತ ಸಂಚಾರ ಆಗದೆ ಪಾರ್ಶ್ವವಾಯು ಬರುವ ಸಾದ್ಯತೆಗಳು ಹೆಚ್ಚಾಗಿರುತ್ತದೆ.

ಬಿ ಪಿ ಇರುವವರಿಗೆ ಬರಬಹುದು. ಸರಿಯಾದ ಆಹಾರ ಕ್ರಮ ಇಲ್ಲದಿರುವುದು, ಕೆಲಸಗಳನ್ನು ಮಾಡದಿರುವುದು ಲವಲವಿಕೆ ಇಂದ ಇಲ್ಲದಿರುವುದು, ಇದರಿಂದ ಕೂಡ ಪಾರ್ಶ್ವವಾಯುಬರಬಹುದು. ಹೃದಯ ಸಂಬಂದ ಕಾಯಿಲೆ ಅಥವಾ ರಕ್ತನಾಳಗಳ ಸಂಬಂದ ಕಾಯಿಲೆ ಇರುವವರಿಗೆ ಪಾರ್ಶ್ವವಾಯು ಚಿಕ್ಕ ವಯಸ್ಸಿಗೆ ಬರಬಹುದು. ಹಾಗಾದ್ರೆ ಪಾರ್ಶ್ವವಾಯು ಬರದಂತೆ ತಡೆಗಟ್ಟಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ ಪಾರ್ಶ್ವವಾಯು ಬರಲು ಮುಖ್ಯ ಕಾರಣವಾದ ಅತೀಯಾದ ಧೂಮಪಾನ ಮತ್ತು ಮಧ್ಯಪಾನ ಇಂತಹ ಚಟಗಳನ್ನು ಮೊದಲು ಬಿಡಬೇಕು. ವಿಲಾಸಿ ಜೀವನ ಅಥವಾ ಸೋಂಬೇರಿತನ ಬಿಡಬೇಕು. ಯಾವಾಗಲು ಲವಲವಿಕೆ ಇಂದ ಇರಬೇಕು. ಪ್ರತಿನಿತ್ಯ ವ್ಯಾಯಾಮ ಮಾಡುವುದು, ನಡೆಯುವುದು ಮಾಡುವುದು ಮಾಡಬೇಕು. ಹೊರಗಿನ ತಿಂಡಿಗಳು, ಕರಿದ ತಿಂಡಿಗಳು, ಬಾಯಿಗೆ ಹೆಚ್ಚು ರುಚಿಕೊಡುವ ತಿನಿಸುಗಳು ಪಿಜ್ಜಾ , ಬರ್ಗರ್ ಇಂತಹವುಗಳನ್ನು ಹೆಚ್ಚು ತಿನ್ನಬಾರದು. ಅರೋಗ್ಯ ಕಾಪಾಡುವ ಸೊಪ್ಪು, ತರಕಾರಿ, ಹಣ್ಣುಗಳು, ಹಸಿ ಕಾಳುಗಳನ್ನು ತಿನ್ನಬೇಕು. ಇದರಿಂದ ಪಾರ್ಶ್ವವಾಯುವನ್ನು ತಡೆಗಟ್ಟಬಹುದು.

LEAVE A REPLY

Please enter your comment!
Please enter your name here