ಗಂಟಲಲ್ಲಿ ಕಫದ ಕಿರಿಕಿರಿಯೇ ಹಾಗಾದರೆ ಇಲ್ಲಿದೆ ಸುಲಭ ಮನೆ ಮದ್ದು

0
1622

ಮಳೆಗಾಲ, ಚಳಿಗಾಲ, ಬೇಸಿಗೆಕಾಲ, ಹೀಗೆ ಕಾಲ ಬದಲಾದಂತೆ ನಮ್ಮ ಆರೋಗ್ಯದಲ್ಲಿ ಕೂಡ ಹೇರು ಪೇರಾಗುತ್ತದೆ. ಸಾಮಾನ್ಯವಾಗಿ ಮೊದಲಿಗೆ ಬರುವ ಖಾಯಿಲೆಗಳೆಂದರೆ ಕೆಮ್ಮು, ಶೀತ, ನೆಗಡಿ, ಕಫ . ಈ ಖಾಯಿಲೆಗಳು ನಮಗೆ ಸರ್ವೇ ಸಾಮಾನ್ಯ ಆದ್ರೆ ಸಣ್ಣ ಕಫ ಬಂದಿದೆ ಎಂದು ಅದನ್ನು ನಿರ್ಲಕ್ಷ್ಯ ಮಾಡಿದರೆ ನಮ್ಮ ಮೆದುಳಿಗೆ ಸಮಸ್ಯೆ ಉಂಟಾಗುವ ಸಂಭವ ಇದೆ. ನಮ್ಮ ಸಮಸ್ಯೆಗಳಿಗೆ ಮೆಡಿಕಲ್ ನಲ್ಲಿ ಸಿಗುವ ಮಾತ್ರೆಗಳನ್ನು ಹೆಚ್ಚು ತೆಗೆದುಕೊಳ್ಳುತ್ತೇವೆ ಅಥವಾ ಆಸ್ಪತ್ರೆಗಳಿಗೆ ಅಲಿಯುತ್ತೇವೆ. ಇದರಿಂದ ನಾವು ಸಂಪಾದಿಸಿದ ಹಣವನ್ನು ಆಸ್ಪತ್ರೆ ಮತ್ತು ಮದ್ದಿಗೆ ಖರ್ಚು ಮಾಡಬೇಕಾಗುತ್ತದೆ. ಶೀತ, ಕೆಮ್ಮು ಆದರೆ ಕಫ ಅಗುವುದು ಸರ್ವೇ ಸಾಮಾನ್ಯ, ಇದು ಬಹುಕಾಲದವರೆಗೂ ಉಳಿದರೆ ನಮ್ಮ ಅನ್ನನಾಳ ಮತ್ತು ಶ್ವಾಸಕೋಶದ ತೊಂದರೆ ಉಂಟಾಗಬಹುದು. ಈ ಕಫದ ಕಾಯಿಲೆಯಿಂದ ರಾತ್ರಿ ನಿದ್ರೆ ಬರುವುದಿಲ್ಲ. ಇದರಿಂದ ನೆಮ್ಮದಿ ಕೂಡ ಹಾಳು. ಇದಕ್ಕೆ ನಮ್ಮ ಮನೆಯಲ್ಲಿಯೇ ಪರಿಹಾರವನ್ನು ಕಂಡು ಕೊಳ್ಳಬಹುದು. ಬನ್ನಿ ಮನೆ ಮದ್ದನ್ನು ಬಳಸಿ ಹೇಗೆ ಕಫದ ನಿವಾರಣೆ ಮಾಡಬಹುದೆಂದು ತಿಳಿಯೋಣ.

ಎಲ್ಲರಿಗೂ ಬೆಳಗ್ಗೆ, ಮಧ್ಯಾನ, ಸಂಜೆ ನಾವು ಕಾಫಿ, ಟೀ ಕುಡಿಯುವುದು ಅಭ್ಯಾಸ. ಇದು ಆರೋಗ್ಯಕ್ಕೆ ಅಷ್ಟು ಒಳಿತಲ್ಲ. ಇದರ ಬದಲು ಮೆಣಸಿನ ಕಾಫಿಯನ್ನು ಕುಡಿಯುವುದರಿಂದ ನಮ್ಮ ಗಂಟಲಿನ ಸಮಸ್ಯೆಯನ್ನು ತುಂಬಾ ಸುಲಭವಾಗಿ ಹೋಗಲಾಡಿಸಬಹುದು. ಒಂದು ಲೋಟ ಹಾಲಿಗೆ ಸ್ವಲ್ಪ ಪ್ರಮಾಣದಲ್ಲಿ ಕುಟ್ಟಿ ಪುಡಿ ಮಾಡಿದ ಮೆಣಸಿನ ಪುಡಿಯನ್ನು, ಶುಂಟಿ ಮತ್ತು ಜೇನುತುಪ್ಪದ ಮಿಶ್ರಣದೊಂದಿಗೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕುಡಿಯುವುದರಿಂದ ಕಫದ ಸಮಸ್ಯೆ ಬೇಗ ದೂರವಾಗುವುದು.

ಕಫದ ಸಮಸ್ಯೆಗೆ ರಾಮಬಾಣವೆಂದೆ ಹೆಸರಾಗಿರುವ ಬೆಳ್ಳುಳ್ಳಿಯನ್ನು ದಿನನಿತ್ಯದ ನಮ್ಮ ಆಹಾರದಲ್ಲಿ ಸೇವಿಸುವುದರಿಂದ ಕಫದ ಸಮಸ್ಯೆ ಇಂದ ಹೊರಬರಬಹುದು. ಉಗುರು ಬೆಚ್ಚಿನ ನೀರಿನಲ್ಲಿ ಜಜ್ಜಿದ ಬೆಳ್ಳುಳ್ಳಿಯನ್ನು ಮಿಶ್ರಣಮಾಡಿ ಬೆಳಗ್ಗೆ ಹಾಗೂ ರಾತ್ರಿ ಕುಡಿಯುವುದರಿಂದ ಕಫದ ಸಮಸ್ಯೆ ಬೇಗ ದೂರವಾಗುವುದು. ಈ ನೀರನ್ನು ಕುಡಿಯುವುದರಿಂದ ಶೀತದ ಸಮಸ್ಯೆ ಕೂಡ ದೂರವಾಗುವುದು.
ನಿಂಬೆ ಹಣ್ಣು , ನಿಂಬೆ ಹಣ್ಣಿನ ಜೂಸ್ ಯಾರಿಗೆ ಇಷ್ಟ ಇಲ್ಲ ಹೇಳಿ, ಎಲ್ಲರು ಇಷ್ಟ ಪಟ್ಟು ಆರೋಗ್ಯದ ದೃಷ್ಟಿ ಇಂದ ಕೂಡ ಕುಡಿಯುವುದು ಗೊತ್ತಿರುವ ವಿಚಾರ. ಆದರೆ ತುಂಬಾ ಜನಗಳಿಗೆ ನಿಂಬೆ ಹಣ್ಣಿನಲ್ಲಿರುವ ಬೇರೆ ರೋಗ ನಿರೋಧಕ ಅಂಶಗಳ ಬಗ್ಗೆ ಗೊತ್ತಿರುವುದಿಲ್ಲ. ನೀರನ್ನು ಚೆನ್ನಾಗಿ ಕುದಿಸಿ ನಂತರ ಆರಿಸಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಹಾಗೂ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಮಿಶ್ರಣ ಮಾಡಿ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕುಡಿಯುವುದರಿಂದ ಕಫದ ಸಮಸ್ಯೆ ಕಡಿಮೆಯಾಗುತ್ತದೆ.

ಒಂದು ಪಾತ್ರೆಯಲ್ಲಿ ಚೆನ್ನಾಗಿ ಜಜ್ಜಿದ ಶುಂಟಿಯನ್ನು ಹಾಕಿ ಒಂದು ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಅದನ್ನು ಆರಲು ಬಿಡಿ, ತದನಂತರ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಮಿಶ್ರ ಮಾಡಿ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕುಡಿಯುವುದರಿಂದ ಕಫದ ಸಮಸ್ಯೆಯಿಂದ ಮುಕ್ತವಾಗಬಹುದು. ಓದಿದರಲ್ಲ ಈ ಕಫ ಸಮಸ್ಯೆಗೆ ಮನೆಯಲ್ಲಿ ಮದ್ದು ಮಾಡಬಹದು. ಮಾಹಿತಿ ನಕಲು ಮಾಡದೆ ಶೇರ್ ಮಾಡಿಕೊಳ್ಳಿ ನಿಮ್ಮ ಹಲವು ಸ್ನೇಹಿತರಿಗೂ ಸಹಾಯ ಆಗಲಿದೆ

LEAVE A REPLY

Please enter your comment!
Please enter your name here