ಪಾರ್ಕಿನ್ಸನ್ ಎಂಬ ಭಯಾನಕ ಖಾಯಿಲೆ ಯಾರಿಗೆ ಮತ್ತು ಏಕೆ ಬರುತ್ತೆ

0
987

ಪಾರ್ಕಿನ್ಸನ್ ಎಂಬ ಖಾಯಿಲೆ ಬಗ್ಗೆ ಸಾಕಷ್ಟು ಜನಗಳಿಗೆ ತಿಳಿದಿರುವುದಿಲ್ಲ. ಪಾರ್ಕಿನ್ಸಿನ್ಸ್ ಖಾಯಿಲೆಯ ಲಕ್ಷಣಗಳು ಹೇಗೆ ಇರುತ್ತದೆ ಅದಕ್ಕೆ ಕಾರಣಗಳೇನು ಈ ಖಾಯಿಲೆ ಯಾರಿಗೆ ಮತ್ತು ಏಕೆ ಬರುತ್ತೆ ಅದರಿಂದ ಆಗುವ ತೊಂದರೆಗಳ ಬಗ್ಗೆ ಇಲ್ಲಿದೆ ಮಾಹಿತಿ. ಪಾರ್ಕಿನ್ಸನ್ ಖಾಯಿಲೆಯ ಲಕ್ಷಣಗಳು ಅನುವಂಶಿಯವಾಗಿ ಅಥವಾ ಹಿರಿಯರಲ್ಲಿ ಬರುವ ಈ ಖಾಯಿಲೆ ಮೆದುಳಿಗೆ ಸಂಬಂಧಿಸಿದ ಖಾಯಿಲೆಯಾಗಿದೆ. ಈ ಕಾಯಿಲೆ ೬೦ ವರ್ಷದ ನಂತರ ಬರುತ್ತದೆ. ಇದರಲ್ಲಿ ಕೈ ಕಾಲುಗಳ ನಡುಕ ಕಂಡುಬರುವುದು, ಸ್ನಾಯುಗಳ ನೋವು, ಆಹಾರ ತಿನ್ನಲು ಕಷ್ಟವಾಗುವುದು. ದೇಹದ ಸ್ತಿತಿಯಲ್ಲಿ ಅಸಮತೋಲನ, ಮಲಬದ್ದತೆ, ಲವ ಲವಿಕೆಯಿಂದ ಇಲ್ಲದಿರುವುದು, ಕೂರಲು ನಿಲ್ಲಲು ಕಷ್ಟವಾಗುವುದು, ಬೇಗ ಆಯಾಸಗೊಳ್ಳುವುದು, ಬೆನ್ನು ಬಾಗುವುದು, ಜೊಲ್ಲು ಸುರಿಸುವುದು, ನೆನಪಿನ ಶಕ್ತಿ ಕಡಿಮೆಯಾಗುವುದು ಇವು ಪಾರ್ಕಿನ್ಸುನ್ಸ್ ರೋಗದ ಲಕ್ಷಣಗಳು.

ಈ ಖಾಯಿಲೆಯನ್ನು ಸಂಪೂರ್ಣ ಗುಣಪಡಿಸಲು ಸಾದ್ಯವಿಲ್ಲ. ಪಾರ್ಕಿನ್ಸಲನ್ಸ್ ಖಾಯಿಲೆಗೆ ಮುಖ್ಯ ಕಾರಣಗಳು.
ನಮ್ಮ ಮೆದುಳಿನಲ್ಲಿ ಡೊಪಾಮೈನ್‌ ಎಂಬ ರಾಸಾಯನಿಕವಿರುತ್ತದೆ. ಇವುಗಳು ನಮ್ಮ ಸ್ನಾಯುಗಳ ಚಲನೆವಲನೆಗಳಿಗೆ ಸಹಕಾರಿಯಾಗಿದೆ . ಯಾವಾಗ ಮೆದುಳಿನ ನರಕೊಶಗಳು ಡೊಪಾಮೈನ್‌ ಅನ್ನು ನಾಶಗೊಳಿಸಲು ಪ್ರಾರಂಬಿಸುತ್ತದೆ ಆಗ ಪಾರ್ಕಿನ್ಸಿನ್ಸ್ ಖಾಯಿಲೆ ಬರುತ್ತದೆ. ಡೊಪಾಮೈನ್‌ ರಾಸಾಯನಿಕವಿಲ್ಲದೆ ಮೆದುಳು ಕೆಲಸ ಮಾಡುವುದಿಲ್ಲ. ಇದರಿಂದ ಸ್ನಾಯುಗಳ ಸೀಮತ ಕಳೆದುಕೊಳ್ಳುತ್ತೇವೆ. ಇದು ಹೆಚ್ಚಾಗಿ ವಯಸ್ಸಾದವರಿಗೆ ಬರುತಿತ್ತು ಆದರೆ ಈಗ ಯುವಕರಿಗೂ ಬರುವ ಖಾಯಿಲೆ ಆಗೋಗಿದೆ. ಆದಷ್ಟು ವಯಸ್ಸಾದವರು ಹೆಚ್ಚು ಯೋಚನೆ ಮಾಡಬಾರದು, ಹೆಚ್ಚು ಯೋಚನೆ ಮಾಡುವುದರಿಂದ ಮೆದುಳಿನ ಮೇಲೆ ಒತ್ತಡ ಹೆಚ್ಚಾಗುತ್ತದೆ, ಇದರಿಂದ ಪಾರ್ಕಿನ್ಸಬನ್ಸ್ ಖಾಯಿಲೆ ಬರುವ ಸಾದ್ಯತೆ ಹೆಚ್ಚಾಗಿರುತ್ತದೆ. ಯಾವುದಾದರು ಸಮಯದಲ್ಲಿ ತಲೆಗೆ ಪೆಟ್ಟು ಬಿದ್ದರೆ ಈ ಕಾಯಿಲೆ ಬರುವ ಸಾದ್ಯತೆ ಇರುತ್ತದೆ.

ಪಾರ್ಕಿನ್ಸನ್ ಖಾಯಿಲೆಯನ್ನು ತಡೆಗಟ್ಟುವ ವಿಧಾನ  ಪ್ರತಿನಿತ್ಯ ವ್ಯಾಯಾಮ ಮಾಡಬೇಕು, ದೇಹಕ್ಕೆ ಸಾಕಷ್ಟು ವಿಶ್ರಾಂತಿ ಕೊಡಬೇಕು. ಹೆಚ್ಚು ಯೋಚನೆ ಮಾಡದೇ ಲವ ಲವಿಕೆಯಿಂದ ಇರಬೇಕು. ಉತ್ತಮವಾದ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಹಣ್ಣುಗಳು, ತರಕಾರಿಗಳು, ಸೊಪ್ಪುಗಳನ್ನು ಚೆನ್ನಾಗಿ ತಿನ್ನಬೇಕು. ಚೆನ್ನಾಗಿ ನೀರನ್ನು ಕುಡಿಯಬೇಕು. ಪ್ರೋಟೀನ್, ವಿಟಮಿನ್ ಇರುವಂತಹ ಆಹಾರಗಳನ್ನು ಸೇವಿಸಿ. ಹಾಡು ಕೇಳುವುದು, ಟಿ ವಿ ನೋಡುವುದು ನಿಮ್ಮ ಮನಸನ್ನು ಯೋಚನೆಗಳಿಂದ ದೂರ ಇರುವಂತೆ ಮಾಡಿ. ಸುಮ್ಮನೆ ಒಬ್ಬರೇ ಕೂರಬೇಡಿ. ನೀವು ನಿಮಗೆ ಇಷ್ಟವಾದ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಜೀವನದ ಬಗ್ಗೆ ಉತ್ಸಾಹ ಕಳೆದುಕೊಳ್ಳಬೇಡಿ.

ಪಾರ್ಕಿನ್ಸೆನ್ಸ್ ಖಾಯಿಲೆಯಿರುವ ವ್ಯಕ್ತಿಯ ಆರೈಕೆ ಮಾಡುವುದು ತುಂಬಾ ಅವಶ್ಯ. ಇದು ಮುಂದೊಂದು ದಿನ ನಮಗೂ, ನಿಮಗೂ ಬೇಕಾದರೆ ಬರಬಹುದು. ಪ್ರತಿಯೊಬ್ಬ ವ್ಯಕ್ತಿಗೂ ಇನ್ನೊಬ್ಬರ ಸಹಾಯ ಬೇಕೇ ಬೇಕು. ಖಾಯಿಲೆ ಇರುವ ವ್ಯಕ್ತಿಯನ್ನು ಖಿನ್ನತೆಗೆ ಒಳಗಾಗದಂತೆ ನೋಡಿಕೊಳ್ಳಬೇಕು, ಅವರನ್ನು ಯಾವಾಗಲು ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಅವರ ಆಹಾರ ಕ್ರಮಗಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಬೇಕು. ಅವರಿಗೆ ಖಾಯಿಲೆ ಇರುವುದನ್ನು ಮರೆಸುವಂತಿರಬೇಕು ನಮ್ಮ ನಡವಳಿಕೆ. ಅವರಿಗೆ ನಾವು ಕಿರಿಕಿರಿ ಆಗದಂತೆ ನೋಡಿಕೊಳ್ಳಬೇಕು. ಈ ಖಾಯಿಲೆ ಬಗ್ಗೆ ಹೆಚ್ಚು ತಿಳಿದುಕೊಂಡಲ್ಲಿ ಖಾಯಿಲೆ ಇರುವವರ ಆರೈಕೆ ಮಾಡುವುದು ಸುಲಭವಾಗುತ್ತದೆ. ಆದಷ್ಟು ಪಾರ್ಕಿನ್ಸನ್ ಬರದಂತೆ ನೋಡಿಕೊಳ್ಳುವುದೇ ಉತ್ತಮ ಏಕೆ ಅಂದರೆ ನಮ್ಮ ದೇಹಕ್ಕೆ ಒಮ್ಮೆ ಬಂದಮೇಲೆ ಖಾಯಿಲೆ ಗುಣ ಆಗೋದು ಅಪರೂಪ ಆಗಿದೆ ಮಾಹಿತಿ ನಕಲು ಮಾಡದೆ ಶೇರ್ ಮಾಡಿ.

LEAVE A REPLY

Please enter your comment!
Please enter your name here