ಹೋಟೆಲ್ ನಲ್ಲಿ ಕ್ಯಾಶಿಯರ್ ಬಳಿ ಇಟ್ಟಿರುವ ಜೀರಿಗೆಯನ್ನು ತಿನ್ನುವ ಅಭ್ಯಾಸ ಇದೆಯೇ

0
780

ಜೀರಿಗೆ ಯಾರಿಗೆ ಗೊತ್ತಿಲ್ಲ ಹೇಳಿ, ಚಿಕ್ಕದಾಗಿ ಕಾಣುವ ಈ ಜೀರಿಗೆ ಇಂದ ಆಗುವ ಉಪಯೋಗಗಳು ದೊಡ್ಡದಾಗಿವೆ. ಜೀರಿಗೆಯನ್ನು ಅನೇಕ ರುಚಿಕರ ಖಾದ್ಯಗಳನ್ನು ಮಾಡಲು ಬಳಸುತ್ತಾರೆ. ಅದಲ್ಲದೆ ಈ ಜೀರಿಗೆಯನ್ನು ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ಹೆಚ್ಚು ಬಳಸುತ್ತಾರೆ. ಜೀರಿಗೆಯನ್ನು ಹೆಚ್ಚಾಗಿ ಅಜೀರ್ಣಕ್ಕೆ ಬಳಸುತ್ತಾರೆ. ಊಟದ ನಂತರ ಜೀರಿಗೆಯನ್ನು ತಿಂದರೆ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಜೀರಿಗೆಯನ್ನು ವಾಂತಿ ನಿಲ್ಲಲು, ಹೊಟ್ಟೆನೋವು ನಿಲ್ಲಲು, ಸಂಧಿವಾತ ಕಡಿಮೆಯಾಗಲು, ಕೂದಲು ಸಮಸ್ಯೆಗಳಿಗೆ, ಪಿತ್ತ ಕಡಿಮೆಯಾಗಲು, ಗರ್ಭಿಣಿಯರಿಗೆ ಎದೆ ಹಾಲು ಹೆಚ್ಚಿಸಲು ಇನ್ನು ಅನೇಕ ಉಪಯೋಗಗಳಿಗೆ ಬಳಸುತ್ತಾರೆ. ಇಷ್ಟೆಲ್ಲಾ ಉಪಯೋಗ ಇರುವ ಜೀರಿಗೆಯನ್ನು ಹೋಟೆಲ್ ನಲ್ಲಿ ಟೇಬಲ್ ನ ಮೇಲೆ ಹಾಗೂ ಕ್ಯಾಶಿಯರ್ ಹತ್ತಿರ ಬಟ್ಟಲಿನಲ್ಲಿ ಇಟ್ಟಿರುತ್ತಾರೆ.

ಪ್ರತಿಯೊಬ್ಬರೂ ಅದನ್ನು ಊಟ ಆದಮೇಲೆ ಸೇವಿಸುತ್ತಾರೆ. ಅದು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಅದರಲ್ಲಿ ಇಟ್ಟಿರುವ ಜೀರಿಗೆ ಎಷ್ಟು ಚೆನ್ನಾಗಿರುತ್ತದೆ, ಎನ್ನುವುದು ಮುಖ್ಯ. ಸಾಮಾನ್ಯವಾಗಿ ಅತಿಹೆಚ್ಚು ಹೋಟೆಲ್ ಗಳು ರಸ್ತೆ ಬದಿ ಇರುತ್ತವೆ. ರಸ್ತೆ ಬದಿ ಎಂದರೆ ಕೇಳಬೇಕ ಧೂಳು ಮತ್ತು ಪ್ರದೂಷಣೆ ಇದ್ದೆ ಇರುತ್ತದೆ. ಆ ದೂಳು ನೆರವಾಗಿ ಹೋಟೆಲ್ ನ ಒಳಗೆ ಹೋಗುತ್ತದೆ, ಅಲ್ಲಿರುವ ಎಲ್ಲಾ ಪದಾರ್ಥಗಳ ಮೇಲೆ ಬೀಳುತ್ತದೆ. ಕ್ಯಾಶಿಯರ್ ಕೌಂಟರ್ ಹೋಟೆಲ್ ನ ಬಾಗಿಲ ಬಳಿಯೇ ಇರುತ್ತದೆ, ಕೌಂಟರ್ ನ ಮೇಲೆ ಇಟ್ಟಿರುವ ಜೀರಿಗೆಯ ಬಟ್ಟಲಿನ ಮೇಲೂ ಕೂಡ ಧೂಳು ಬೀಳುತ್ತದೆ. ಬಟ್ಟಲನ್ನು ಧೂಳಿನಿಂದ ರಕ್ಷಿಸಲು ಯಾವುದೇ ಮುಚ್ಚಳ ಮುಚ್ಚಿರುವುದಿಲ್ಲ ಅದನ್ನು ಯಾರೂ ಕೂಡ ಗಮನಿಸುವುದಿಲ್ಲ

ಇದನ್ನು ಹೊರೆತುಪಡಿಸಿ ಹೋಟೆಲ್ ಗಳಿಗೆ ಎಲ್ಲಾ ರೀತಿಯ ವ್ಯಕ್ತಿಗಳು ಬರುತ್ತಾರೆ, ಎಲ್ಲರು ಬಂದು ನೇರವಾಗಿ ಕ್ಯಾಶಿಯರ್ ಟೇಬಲ್ ಮೇಲೆ ಇಟ್ಟಿರುವ ಜೀರಿಗೆ ಬಟ್ಟಲಿಗೆ ಕೈ ಹಾಕುತ್ತಾರೆ. ಅವರು ಕೈ ತೊಳೆದಿರುತ್ತಾರೆಯೋ ಇಲ್ಲವೋ ಗೊತ್ತಿರುವುದಿಲ್ಲ. ಎಲ್ಲರು ನೇರವಾಗಿ ಬಂದು ಅವರ ಕೊಳಕು ಕೈಗಳಿಂದ ಜೀರಿಗೆಯ ಬಟ್ಟಲಿಗೆ ಕೈ ಹಾಕುತ್ತಾರೆ, ಈ ಜೀರಿಗೆಯನ್ನು ತಿನ್ನುವುದರಿಂದ ಖಾಯಿಲೆಗಳು ಬರಬಹುದು. ನಾವು ಹೋಗುವ ಹೋಟೆಲ್ ಗಳ ಮೇಲು ಇದು ನಿರ್ಧಾರವಾಗುತ್ತದೆ, ಯಾಕೆಂದರೆ ಅನೇಕ ಹೋಟೆಲ್ ಗಳಲ್ಲಿ ಶುಭ್ರತೆಯನ್ನು ಕಾಪಾಡಿರುವುದಿಲ್ಲ. ಹೋಟೆಲ್ ಎಂದ ಮೇಲೆ ಕೇಳಬೇಕಲ್ಲ, ತಿಂಡಿ ತಿನಿಸುಗಳು ಹೆಚ್ಚಾಗಿರುತ್ತದೆ, ಇದರಿಂದ ಇರುವೆಗಳು, ನೊಣಗಳು, ಇಲಿಗಳು ಮತ್ತು ಕೀಟಗಳು ಹೆಚ್ಚಾಗಿ ಇರುತ್ತದೆ. ಇದರಿಂದ ಹೋಟೆಲ್ ನಲ್ಲಿ ಇಟ್ಟಿರುವ ಜೀರಿಗೆಯು ಕೂಡ ಹಾಳಾಗಬಹುದು, ಮತ್ತು ಅ ಜೀರಿಗೆ ಎಷ್ಟು ಅಳೆಯದು ಎಂದು ಯಾರಿಗೆ ತಿಳಿದಿರುತ್ತದೆ. ಅದಕ್ಕಾಗಿ ನಾವು ಹೋಗುವ ಹೋಟೆಲ್ ಎಷ್ಟು ಚೆನ್ನಾಗಿ ಶುಭ್ರವನ್ನು ಕಾಪಾಡಿರುತ್ತಾರೆ ಎಂದು ತಿಳಿದುಕೊಂಡು ನಾವು ಹೋಟೆಲ್ ಗೆ ಹೋಗಬೇಕು.ಇನ್ನು ಮುಂದೆ ಹೋಟಲ್ ಗಳಿಗೆ ಹೋದಾಗ ಜೀರಿಗೆ ತಿನ್ನುವ ಮೊದಲು ಈ ವಿಷಯಗಳನ್ನು ಮನಸ್ಸಿನಲ್ಲಿ ಒಮ್ಮೆ ಯೋಚಿಸಿ ನಂತರ ತಿನ್ನಿ.

LEAVE A REPLY

Please enter your comment!
Please enter your name here