ಪಪ್ಪಾಯಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ತುಂಬಾ ಉಪಯೋಗಕಾರಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಮಕ್ಕಳಿಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ಕೊಡುವುದರಿಂದ ಜಂತು ಹುಳುವಿನ ಸಮಸ್ಯೆ ನಿವಾರಣೆ ಆಗುತ್ತದೆ. ಪಪ್ಪಾಯಿಯನ್ನು ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಬೆಳಿಗ್ಗೆ ಎದ್ದಾಗ ಸೇವಿಸುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದು ತುಂಬಾ ಒಳ್ಳೆಯ ವಿಷಯ. ಪಪ್ಪಾಯಿ ಹಣ್ಣು ತುಂಬಾ ರುಚಿ ಇರುವ ಹಣ್ಣಾಗಿರುವುದರಿಂದ ಪ್ರತಿ ದಿನ ಸೇವಿಸುವುದು ಕಷ್ಟ ಎನಿಸುವುದಿಲ್ಲ. ಇದರಲ್ಲಿ ವಿಟಮಿನ್ ಎ, ಬಿ,ಸಿ ಅಂಶವಿರುವುದರಿಂದ ಜೀರ್ಣಕ್ರಿಯೆ ಹೆಚ್ಚುವುದು ಅಲ್ಲದೆ ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪಪ್ಪಾಯಿ ಹಣ್ಣಿನಲ್ಲಿ ಪೋಷಕಾಂಶದ ಪ್ರಮಾಣ ಹೆಚ್ಚಾಗಿ ಇರುವ ಕಾರಣ ದೇಹವು ಚಟುವಟಿಕೆಯಿಂದಿರಲು ಸಹಾಯ ಮಾಡುತ್ತದೆ. ಪಪ್ಪಾಯದಲ್ಲಿ ಬೀಟಾ ಕೆರೋಟಿನ್ ಅಂಶ ಹೆಚ್ಚಾಗಿರುವುದರಿಂದ ಅಸ್ತಮಾ ಖಾಯಿಲೆಯ ನಿಯಂತ್ರಣ ಸುಲಭವಾಗುತ್ತದೆ. ಡಾಕ್ಟರ್ ಗಳು ಸಹ ಅಸ್ತಮಾ ಇರುವ ಮಕ್ಕಳಿಗೆ ಪಪ್ಪಾಯಿಯನ್ನು ಕೊಡಲು ಸಲಹೆ ನೀಡುತ್ತಾರೆ.
ಪಪ್ಪಾಯಿ ಹಣ್ಣು ಅಲ್ಲದೆ ಪಪ್ಪಾಯಿಯ ಎಲೆಯೂ ಸಹಕಾರಿಯಾಗಿದೆ. ಮಹಾಮಾರಿ ಡೆಂಗ್ಯೂ ಖಾಯಿಲೆಗೆ ರಾಮ ಬಾಣವಿದ್ದಂತೆ ಅದಕ್ಕಾಗಿ ಪಪ್ಪಾಯಿಯ ಎಲೆಗಳನ್ನು ಚೆನ್ನಾಗಿ ರುಬ್ಬಿ ಅದರ ರಸ ತೆಗೆದು ಸೇವಿಸಿದರೆ ದೇಹದಲ್ಲಿ ಪ್ಲೇಟ್ ಲೇಟ್ ಪ್ರಮಾಣ ಹೆಚ್ಚಾಗಿ ಗುಣಮುಕರಾಗಲು ಸಹಾಯಕಾರಿಯಾಗಿದೆ. ಪಪ್ಪಾಯಿಯಲ್ಲಿ ಕೇವಲ ಔಷಧಿಯ ಗುಣಗಳು ಇರುವುದು ಅಲ್ಲದೆ ಸೌಂದರ್ಯ ವರ್ದಕವಾಗಿಯೂ ಸಹ ಬಳಸಬಹುದಾಗಿದೆ. ಚೆನ್ನಾಗಿ ಹಣ್ಣಾಗಿರುವ ಪಪ್ಪಾಯಿಯನ್ನು ಪೇಸ್ಟ್ ಮಾಡಿಕೊಂಡು ಅದನ್ನು ವಾರಕ್ಕೆ ಒಮ್ಮೆಯಾದರೂ ಮುಖಕ್ಕೆ ಕೈ ಕಾಲುಗಳಿಗೆ ಹಚ್ಚುತ್ತಾ ಬಂದರೆ ಚರ್ಮವು ಮೃದುವಾಗಿ ಕಾಂತಿಯುತವಾಗಿ ಕಾಣುತ್ತದೆ.
ಪಪ್ಪಾಯಿ ಹಣ್ಣನ್ನು ಬ್ಯೂಟಿ ಪಾರ್ಲರ್ ಗಳಲ್ಲೂ ಉಪಯೋಗಿಸುತ್ತಾರೆ. ರಾಸಾಯನಿಕ ವಸ್ತುಗಳನ್ನು ಉಪಯೋಗಿಸದೆ ಮನೆಯಲ್ಲಿಯೇ ನೈಸರ್ಗಿಕವಾಗಿ ತ್ವಚೆಯನ್ನು ಕಂಗೊಳಿಸುವಂತೆ ಮಾಡಬಹುದು ಮತ್ತು ತ್ವಚೆಯನ್ನು ರಾಸಾಯನಿಕ ವಸ್ತುಗಳಿಂದ ಕಾಪಡಿಕೊಳ್ಳಬಹುದು. ಪಪ್ಪಾಯಿಯಲ್ಲಿ ಕ್ಯಾಲೋರಿಸ್ ಪ್ರಮಾಣ ಕಡಿಮೆ ಇರುವುದರಿಂದ ಪ್ರತಿ ನಿತ್ಯ ಒಂದು ಕಪ್ನಷ್ಟು ಪಪ್ಪಾಯಿಯನ್ನು ಸೇವಿಸಿ ಆಹಾರ ಸೇವನೆಯ ಪ್ರಮಾಣ ಕಡಿಮೆ ಮಾಡದರೆ ದೇಹದ ತೂಕವನ್ನು ಕಡಿಮೆ ಮಾಡಿ ನಂತರ ದೇಹವು ಹಗುರವಾಗುತ್ತದೆ. ಸಣ್ಣ ಆಗಬೇಕು ಎಂದು ಬಯಸುವವರು ಈ ಪ್ರಯತ್ನ ಮಾಡಿದರೆ ಖಂಡಿತ ವಾಗಿಯೂ ಒಳ್ಳೆಯ ಫಲಿತಾಂಶ ನಿರೀಕ್ಷಿಸಬಹುದು. ಸಕ್ಕರೆ ಖಾಯಿಲೆ ಇರುವವರೂ ಸಹ ಈ ಹಣ್ಣನ್ನು ಸೇವಿಸುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಪಪ್ಪಾಯಿಯನ್ನು ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರು ಹೆಚ್ಚಾಗಿ ಸೇವಿಸುವುದು ಅಗತ್ಯ, ಕಾರಣ ಇದರಲ್ಲಿ ಮೆಗ್ನಿಶಿಯಮ್, ಕ್ಯಾಲ್ಸಿಯಂ ಮತ್ತು ತಾಮ್ರದ ಅಂಶ ಹೆಚ್ಚಾಗಿ ಇರುವುದರಿಂದ ಮೂಳೆಗಳನ್ನು ಗಟ್ಟಿ ಮಾಡಿ ರಕ್ತದ ಚಲನೆ ಸರಿಪಡಿಸಲು ಸಹಕಾರಿಯಾಗಿದೆ.