ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮಾನ್ಯತೆ ಕೊಡುವುದು ಕೇವಲ ಹಣಕ್ಕೆ ಹಣ ಇದ್ದರೆ ಸಾಕು ಎಲ್ಲವೂ ಇದ್ದಂತೆ ಎಂದು ಎಲ್ಲರ ಅನಿಸಿಕೆ ದುಡಿಮೆ ಹಣ ಇದ್ದರೆ ಸಾಕು ಎಂದು ಅಂದು ಕೊಂಡಿದ್ದಾರೆ. ಆದರೆ ಮನುಷ್ಯನಿಗೆ ಹಣ ದುಡಿಮೆಗಿಂತ ಆರೋಗ್ಯವೇ ಮುಖ್ಯ ಎಂಬುದನ್ನು ಮರೆತು ತಮ್ಮ ಆರೋಗ್ಯದ ಕಾಳಜಿಯನ್ನು ಮರೆತು ಬಿಟ್ಟಿದ್ದಾರೆ ನಿತ್ಯ ಆರೋಗ್ಯದ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗೃತೆ ವಹಿಸಿದರು ಕೊನೆಯ ಕ್ಷಣದಲ್ಲಿ ಬರುವ ದೊಡ್ಡ ಆರೋಗ್ಯದ ಸಮಸ್ಯೆಯಿಂದ ಪಾರು ಆಗಬಹುದು. ಅದರಲ್ಲೂ ಅತಿ ಮುಖ್ಯವಾಗಿ ಗರ್ಭಿಣಿ ಮಹಿಳೆಯರು ಇವರು ಕೇವಲ ಒಬ್ಬರು ಮಾತ್ರ ಆಗಿರದೆ ಅವರ ಬಳಿ ಪ್ರಪಂಚವನ್ನೇ ನೋಡದ ಒಂದು ಪುಟ್ಟ ಕಂದಮ್ಮ ಜೊತೆಯಲ್ಲಿ ಇರುತ್ತದೆ ಹಾಗಾಗಿ ಇವರು ಎಲ್ಲರಿಗಿಂತ ತುಂಬಾ ಜಾಗೃತವಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜೀವಹಿಸಬೇಕು.
ಒಬ್ಬ ಗರ್ಭಿಣಿ ಮಹಿಳೆ ಇನ್ನೊಂದು ಜೀವಕ್ಕೆ ಜೀವವನ್ನು ಕೊಡಬೇಕು ಆ ಜೀವವನ್ನು ಅವಳು ಸುರಕ್ಷವಾಗಿ ಪ್ರಪಂಚಕ್ಕೆ ಬರುವಂತೆ ನೋಡಿಕೊಳ್ಳಬೇಕು ಜೊತೆಗೆ ಆ ಸಂದರ್ಭದಲ್ಲಿ ಅವಳ ಜೀವವು ಸಹ ಅಷ್ಟೇ ಮುಖ್ಯವಾಗಿ ಇರುತ್ತದೆ. ಹಾಗಾಗಿ ಅವಳು ಆರೋಗ್ಯವಾಗಿ ಇದ್ದು ಆ ಜೀವವನ್ನು ಆರೋಗ್ಯವಾಗಿ ಹೊರ ಬರುವಂತೆ ನೋಡಿಕೊಳ್ಳುವುದು ಅವಳ ಜವಾಬ್ದಾರಿ. ಹಾಗಾದರೆ ಗರ್ಭಿಣಿ ಮಹಿಳೆಯರು ಯಾವ ರೀತಿಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ನೋಡೋಣ ಬನ್ನಿ.
ಕೆಲವು ಮಹಿಳೆಯರು ಐಟಿ ಬಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ ಇವರು ಗರ್ಭಿಣಿ ಆಗಿದ್ದಾಗಲು ಸಹ ಕೆಲಸಕ್ಕೆ ಹೋಗುತ್ತಾರೆ ಆದರೆ ಕಂಪನಿಗಳಲ್ಲಿ ಹೆಚ್ಚಾಗಿ ನೆಡೆಯುವ ಪಾರ್ಟಿಗಳಲ್ಲಿ ಭಾಗವಹಿಸಿ ಸ್ನೇಹಿತರ ಜೊತೆಗಿನ ಖುಷಿ ಎಂಜಯ್ ಗೆ ಧೂಮಪಾನ ಮದ್ಯಪಾನ ಸೇವಿಸಿ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ. ಇದರಿಂದ ತಮ್ಮ ಮಗುವಿಗೂ ಸಹ ಆರೋಗ್ಯದಲ್ಲಿ ಸಮಸ್ಯೆ ಆಗುತ್ತದೆ ಹಾಗಾಗಿ ಧೂಮಪಾನ ಮದ್ಯಪಾನದಿಂದ ದೂರವಿರಬೇಕು. ಕೆಲವು ಮಹಿಳೆಯರಿಗೆ ತಂಬಾಕು ಅಗೆಯುವುದು. ಹೆಚ್ಚಿನ ಅಡಿಕೆ ಸೇವಿಸುವ ಅಭ್ಯಾಸ ಇರುತ್ತದೇ ಇದನ್ನು ಗರ್ಭಿಣಿ ಅದ ಸಮಯದಲ್ಲೂ ಮಾಡುವುದರಿಂದ ತಮ್ಮ ಹಾಗೂ ತಮ್ಮ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಗರ್ಭಿಣಿ ಮಹಿಳೆಯರು ಪೋಷಕಾಂಶಗಳನ್ನು ಒಳಗೊಂಡಿರುವ ಆಹಾರಗಳನ್ನು ಸೇವಿಸಬೇಕು. ಇದರಿಂದ ಗರ್ಭಿಣಿ ಮಹಿಳೆ ಹಾಗು ಮಗು ಕೂಡ ಆರೋಗ್ಯವಾಗಿ ಇರುತ್ತದೆ. ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯದಷ್ಟೇ ತಮ್ಮ ಸ್ವಚ್ಛತೆ ಬಗ್ಗೆ ಸಹ ಹೆಚ್ಚು ಕಾಳಜಿ ನೀಡಬೇಕು. ಗರ್ಭಿಣಿ ಮಹಿಳೆಯರು ಹೆಚ್ಚಾಗಿ ಟೀ ಕಾಫಿ ಸಕ್ಕರೆ ಅಂಶ ಚಾಕೊಲೇಟ್ ಅನ್ನು ಹೆಚ್ಚಾಗಿ ಸೇವಿಸಬಾರದು. ಗರ್ಭಿಣಿ ಮಹಿಳೆಯರು ಚಿಕ್ಕ ಪುಟ್ಟ ಸಮಸ್ಯೆ ಅಂದರೆ ತಲೆನೋವು ಜ್ವರ ಶೀತ. ಈ ರೀತಿಯ ಸಮಸ್ಯೆಗಳಿಗೆ ಬೇರೆ ಬೇರೆಯ ಮಾತ್ರೆಗಳನ್ನು ಸೇವಿಸಬಾರದು. ಗರ್ಭಿಣಿ ಮಹಿಳೆಯರು ನಿತ್ಯ ಚಿಕ್ಕ ಪುಟ್ಟ ಕೆಲಸಗಳು ವ್ಯಾಯಾಮವನ್ನು ಮಾಡಲೇಬೇಕು.
ಗರ್ಭಿಣಿ ಮಹಿಳೆಯರು ತಮ್ಮ ತೂಕದ ಬಗ್ಗೆ ಸಹ ಹೆಚ್ಚು ಕಾಳಜಿ ವಹಿಸಬೇಕು. ಆದರೆ ತೂಕ ಹೆಚ್ಚಾಗಬಾರದು ಎಂದು ಊಟ ಬಿಡುವುದು. ಕಷ್ಟದ ವ್ಯಾಯಾಮ ಮಾಡಬಾರದು. ಮಹಿಳೆಯರು ಗರ್ಭಿಣಿಯಾದ ನಂತರ ವೈದ್ಯರು ನೀಡುವ ಐರನ್. ವಿಟಮಿನ್ ಬಿ9. ಕ್ಯಾಲ್ಸಿಯಂ. ಮಾತ್ರಗಳನ್ನು ಸೇವಿಸಬೇಕು. ಗರ್ಭಿಣಿ ಮಹಿಳೆಯರು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುವ ಮುಂಚೆ ವೈದ್ಯರ ಸಲಹೆ ಪಡೆದುಕೊಳ್ಳಲೇಬೇಕು. ಮಹಿಳೆಯರು ಗರ್ಭ ಧರಿಸಿದ ನಂತರ ಅವರ ಯಾವುದೇ ರೀತಿಯ ಚಟುವಟಿಕೆ ಗಳ ಬಗ್ಗೆ ಸಹ ತುಂಬಾ ಜಾಗೃತರಾಗಬೇಕು .ಅಂದರೆ ಮೈಯೆಲ್ಲ ಕಣ್ಣಾಗಿ ಇರಬೇಕು .ಹಾಗಿದ್ದರೆ ಮಾತ್ರ ತಮ್ಮ ಆರೋಗ್ಯವು ಉತ್ತಮವಾಗಿ ಇದ್ದು ತಮ್ಮ ಮಗು ಸಹ ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ.