ಹೈಪರ್ ಟೆನ್ಷನ್ ಬರದಂತೆ ತಡೆಯುವುದು ಹೇಗೆ

0
911

ಮನುಷ್ಯನಾಗಿ ಹುಟ್ಟಿದ ಮೇಲೆ ಒಂದಲ್ಲ ಒಂದು ಕಾಯಿಲೆಗಳು ಎಂಬುದು ಬಂದೆ ಬರುತ್ತದೆ ಅದು ದೊಡ್ಡ ಕಾಯಿಲೆ ಆಗಿರಬಹುದು ಅಥವಾ ಚಿಕ್ಕ ಕಾಯಿಲೆ ಆಗಿರಬಹುದು. ಕಾಯಿಲೆಗಳು ಎಂಬುದು ಮನುಷ್ಯನನ್ನು ಗೋಳಾಡುತ್ತದೆ ಮನುಷ್ಯನನ್ನು ನೋಡಿದಾಗ ಅವರಿಗೆ ಯಾವುದೇ ಸಮಸ್ಯೆ ಇಲ್ಲ ಚೆನ್ನಾಗಿದ್ದರೆ ಎಂದು ಕಾಣಿಸುತ್ತದೆ ಆದರೆ ಅವರ ಒಳಗೆ ಒಂದಲ್ಲ ಒಂದು ರೀತಿಯ ಕಾಯಿಲೆ ಇರುತ್ತದೆ. ಹಿಂದಿನ ಕಾಲದಲ್ಲಿ ಕೆಲವು ಕಾಯಿಲೆಗಳು ಕೆಲವೇ ಮಂದಿಗಳಲ್ಲಿ ಕಾಣಿಸುತ್ತಿತ್ತು ಆದರೆ ಇಂದು ಎಲ್ಲ ಕಾಯಿಲೆಗಳು ಎಲ್ಲರಲ್ಲೂ ಕಾಣಿಸುತ್ತದೆ. ಅದರಲ್ಲಿ ಕೆಲವು ಅನುವಂಶೀಯವಾಗಿ ಬಂದರೆ ಕೆಲವು ಕಾಯಿಲೆಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತ ಬರುತ್ತವೆ. ಇನ್ನು ಕೆಲವು ಮನುಷ್ಯನ ನಿರ್ಲಕ್ಷ್ಯದಿಂದ ಬರುತ್ತವೆ. ಆದರೆ ಕೆಲವು ಕಾಯಿಲೆಗಳನ್ನು ಸುಲಭವಾಗಿ ಬೇಗ ಗುಣ ಮಾಡಬಹುದು ಆದರೆ ಕೆಲವು ಕಾಯಿಲೆಗಳನ್ನು ಗುಣ ಮಾಡಲು ಕಷ್ಟ ಆಗುತ್ತದೆ.ಆದರೆ ತಕ್ಕ ಮಟ್ಟಿಗೆ ನಿಯಂತ್ರಣ ಮಾಡಬಹುದು.

ಹೀಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾದ ಕಾಯಿಲೆಗಳಲ್ಲಿ ಅಧಿಕ ರಕ್ತದೊತ್ತಡ ಅಂದರೆ ಹೈಪರ್ ಟೆನ್ಷನ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಸಿಸ್ಪೊಲೀಕ್ ಬ್ಲಡ್ ಫ್ರೆಶರ್ 120 ಕ್ಕಿಂತ ಹಾಗೂ ದಯಾಸ್ಪೊಲಿಕ್ ಬ್ಲಡ್ ಫ್ರೆಷರ್ 80 ರಿಂದ 120 ಗಿಂತ ಜಾಸ್ತಿಯಾಗಿದ್ದರೆ ಅದನ್ನು ಹೈಪರ್ ಟೆನ್ಷನ್ ಎಂದು ಕರೆಯುತ್ತಾರೆ. ಹೈಪರ್ ಟೆನ್ಷನ್ಗೆ ಕಾರಣಗಳು. ಅತಿಯಾದ ದೇಹದ ತೂಕ. ಅನುವಂಶಿಯತೆ. ಹೆಚ್ಚು ಮಾನಸಿಕ ಒತ್ತಡ. ಧೂಮಪಾನ ಮದ್ಯಪಾನ ಸೇವನೆ ಮಾಡುವುದು. ದೈಹಿಕವಾಗಿ ವ್ಯಾಯಾಮವನ್ನು ಮಾಡದೆ ಇರುವುದು. ಹೆಚ್ಚಾಗಿ ಉಪ್ಪು ಸೇವಿಸುವುದು. ಅತಿಯಾದ ಬೊಜ್ಜು. ಹೆಚ್ಚು ಯೋಚನೆ. ಈ ಕೊರತೆಗಳಿಂದ ಹೈಪರ್ ಟೆನ್ಷನ್ ಸಮಸ್ಯೆ ಬರುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಹೃದಯದ ಸಮಸ್ಯೆಗಳು ಶುರು ಆಗುತ್ತವೆ. ಅದರಲ್ಲೂ ಹೃದಯವು ರಕ್ತವನ್ನು ಪಂಪ್ ಮಾಡುವ ಕ್ರಿಯೆಗೆ ಅಡಚಣೆ ಆಗುತ್ತದೆ ಇದು ಹೆಚ್ಚಾದಲ್ಲಿ ಹೃದಯ. ಮೂತ್ರಪಿಂಡ. ಮೆದುಳುಗಳಿಗೆ ಹೆಚ್ಚು ಹಾನಿಯಾಗುತ್ತದೆ.ಈ ಸಮಸ್ಯೆಗಳು ಕೊನೆ ಹಂತಕ್ಕೆ ಬಂದರೆ ಸಾವು ಕೂಡ ಸಂಭವಿಸುತ್ತದೆ.

ಹಾಗಾದರೆ ಈ ಹೈಪರ್ ಟೆನ್ಷನ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಹೇಗೆ ನೋಡೋಣ ಬನ್ನಿ. ಮೊಟ್ಟ ಮೊದಲು ಉಪ್ಪು ಕೆಲವರು ಹೆಚ್ಚು ಉಪ್ಪು ಸೇವನೆ ಮಾಡುತ್ತಾರೆ ಊಟದ ಜೊತೆ ಉಪ್ಪಿನಕಾಯಿ ಎನ್ನುವ ಹಾಗೆ ಕೆಲವರಿಗೆ ಊಟದ ಜೊತೆಗೆ ಉಪ್ಪು ಇರಲೇಬೇಕು ಎನ್ನುತ್ತಾರೆ ಆದರೆ ಇದರಲ್ಲಿ ಹೆಚ್ಚು ಸೋಡಿಯಂ ಅಂಶ ಇರುವುದರಿಂದ ಇದು ಟೆನ್ಷನ್ ಅನ್ನು ಹೆಚ್ಚು ಮಾಡುತ್ತದೆ ಹಾಗಾಗಿ ನಿಮ್ಮ ನಿತ್ಯದ ಉಪ್ಪಿನ ಸೇವನೆ 10 ರಿಂದ 20 ಗ್ರಾಂ ಗಿಂತ ಹೆಚ್ಚಾಗಿ ಇರದಂತೆ ನೋಡಿಕೊಳ್ಳಬೇಕು. ಅತಿಯಾದ ತೂಕ ಇದು ಸಹ ಹೈಪರ್ ಟೆನ್ಷನ್ಗೆ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ವಯಸ್ಸಿಗೆ ತಕ್ಕಂತೆ ನಿಮ್ಮ ತೂಕವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು.

ಮದ್ಯಪಾನ ಧೂಮಪಾನ ಸೇವನೆಯನ್ನು ಮಾಡಬಾರದು. ಪೊಟ್ಯಾಶಿಯಂ. ಮೆಗ್ನಿಶಿಯಂ. ಕ್ಯಾಲ್ಸಿಯಂ. ಹೆಚ್ಚಿನ ಪ್ರಮಾಣದಲ್ಲಿ ಇರುವ ತರಕಾರಿಗಳು ಹಣ್ಣುಗಳ ಸೇವನೆ ಮಾಡಬೇಕು. ಹೆಚ್ಚು ಎಣ್ಣೆ ಪದಾರ್ಥಗಳನ್ನು ಸೇವಿಸಬಾರದು. ಹೆಚ್ಚು ಕೊಬ್ಬಿನ ಅಂಶ ಇರುವ ಆಹಾರಗಳಿಂದ ದೂರವಿರಬೇಕು. ನಿತ್ಯ ಬೆಳಿಗ್ಗೆ ಹಾಗೂ ಸಂಜೆ ವ್ಯಾಯಾಮ ಮಾಡಬೇಕು. ಹೆಚ್ಚು ಯೋಚಿಸುವುದನ್ನು ಬಿಡಬೇಕು.
ಸಮಸ್ಯೆಗಳನ್ನು ನಿದಾನವಾಗಿ ಸಮಾಧಾನದಿಂದ ಪರಿಹರಿಸಿಕೊಳ್ಳಬೇಕು .ಯಾವಾಗಲೂ ಸಂತೋಷದಿಂದ ಇರಬೇಕು ಮನಸ್ಸನ್ನು ಸದಾ ಹಗುರವಾಗಿ ಇಟ್ಟುಕೊಳ್ಳಬೇಕು. ಮನಸ್ಸು ಸದಾ ಸಂತೋಷದಿಂದ ಏನೇ ಸಮಸ್ಯೆ ಬಂದರು ಟೆನ್ಷನ್ ಮಾಡಿಕೊಳ್ಳದೆ ಸಮದಾನವಾಗಿ ಪರಿಹಾರ ಕಂಡುಕೊಳ್ಳಬೇಕು ಆಗ ಯಾವುದೇ ಹೈಪರ್ ಟೆನ್ಷನ್ ಎಂಬುದು ಸುಲಭವಾಗಿ ನಿಯಂತ್ರಣದಲ್ಲಿ ಇರುತ್ತದೆ.

LEAVE A REPLY

Please enter your comment!
Please enter your name here