ನಾವು ಈ ವಯಸ್ಸಿನಲ್ಲಿ ತಪ್ಪು ಮಾಡಿದ್ರೆ ನಮ್ಮ ವೃದ್ಯಾಪದ ಸಮಯದಲ್ಲಿ ಈ ಸಮಸ್ಯೆ ಬರುತ್ತೆ

0
767

ಮನುಷ್ಯನಾಗಲಿ. ಪ್ರಾಣಿಗಳಾಗಲಿ ಯಾವುದೇ ಜೀವಿಯಾಗಿ ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಸಾಯಲೇ ಬೇಕು. ಎಲ್ಲ ಜೀವಿಗಳಿಗೂ ಸಹ ತಮ್ಮ ಜನನದ ದಿನದಿಂದ ಬಾಲ್ಯ ಯೌವನ  ಮುಪ್ಪು ಎಂಬ ಮೂರು ಹಂತಗಳು ಬರುತ್ತದೆ ಈ ಎಲ್ಲ ಹಂತಗಳಲ್ಲೂ ಅವರ ಆರೋಗ್ಯದಲ್ಲಿ ತುಂಬಾ ಏರುಪೇರುಗಳು ಉಂಟಾಗುತ್ತವೆ ಜೊತೆಗೆ ಈ ಎಲ್ಲ ಹಂತಗಳಲ್ಲೂ ಅವರ ಆರೋಗ್ಯದ ಬಗ್ಗೆ ತುಂಬಾ ಕಾಳಜಿಯನ್ನು ವಹಿಸಬೇಕು. ಅದರಲ್ಲೂ ಮುಖ್ಯವಾಗಿ ತಮ್ಮ ಮುಪ್ಪಿನ ಹಂತ ಇದು ಸಾವಿನ ಹತ್ತಿರದ ಹಂತ ಈ ಹಂತಕ್ಕೆ ಬಂದವರಿಗೆ ಆಸೆಗಳು ಹೆಚ್ಚುತ್ತವೆ ವಿಧವಿದವಾದ ಆಹಾರಗಳನ್ನು ಸೇವಿಸಬೇಕು ಬದುಕುವುದು ಇನ್ನೆಷ್ಟು ದಿನಗಳೋ ಸಾಯುವವಳಗೆ ಆಸೆ ಪಟ್ಟಿದೆಲ್ಲ ತಿನ್ನಬೇಕು ಎಂದು ಆಸೆ ಪಡುತ್ತಾರೆ ಆದರೆ ತಮ್ಮ ಆರೋಗ್ಯದ ಬಗ್ಗೆ ವಹಿಸಬೇಕದ ಕಾಳಜಿಯನ್ನುಮರೆತು ಬಿಡುತ್ತಾರೆ. ಮನುಷ್ಯನಿಗೆ ವಯಸ್ಸಾದಂತೆ ಅವನ ಶರೀರದಲ್ಲಿ ಹಲವಾರು ರೀತಿಯ ಬದಲಾವಣೆಗಳು ನೆಡೆಯುತ್ತದೆ ಇದರಲ್ಲಿ ಹಲವಾರು ಬಗೆಯ ಆರೋಗ್ಯದ ಸಮಸ್ಯೆಗಳು ಇರುತ್ತವೆ ಅವುಗಳ ಬಗ್ಗೆ ಎಚ್ಚರಿಕೆ ತೆಗೆದುಕೊಂಡರೆ ತುಂಬಾ ಒಳ್ಳೆಯದು. ಹಾಗಾದರೆ ವೃದ್ಯಾಪದಲ್ಲಿ ವಹಿಸಬೇಕದ ಎಚ್ಚರಿಕೆಗಳನ್ನು ನೋಡೋಣ ಬನ್ನಿ.

ವೃದ್ಯಾಪದಲ್ಲಿ ಹೆಚ್ಚಾಗಿ ಕಂಡು ಬರುವುದು ಮೂಳೆಗಳ ದೌರ್ಬಲ್ಯ ಮೂಳೆಗಳು ನೋವು ಬರುತ್ತವೆ ಮೂಳೆಗಳಲ್ಲಿ ಶಕ್ತಿ ಇರುವುದಿಲ್ಲ ಅದರಲ್ಲೂ ಹೆಂಗಸರಲ್ಲಿ ಋತು ಚಕ್ರ ನಿಂತ ನಂತರ ಅವರ ಶರೀರದಲ್ಲಿ ಈಸ್ಟ್ರೋಜನ್ ನ ಉತ್ಪಾದನೆ ಕಡಿಮೆ ಆಗುತ್ತದೆ ಇದು ಮೂಳೆಗಳ ದೌರ್ಬಲ್ಯಕ್ಕೆ ಹೆಚ್ಚು ಕಾರಣವಾಗುತ್ತದೆ. ಜೊತೆಗೆ ಕರುಳಿನಲ್ಲಿ ಕ್ಯಾಲ್ಸಿಯಂ. ಡಿ ಜೀವಸತ್ವಗಳ ಉತ್ಪಾದನೆ ಕಡಿಮೆ ಆಗುವುದರಿಂದ ಸಹ ಮೂಳೆಗಳು ದೌರ್ಬಲ್ಯ ಉಂಟಾಗುತ್ತವೆ. ಇದಕ್ಕಾಗಿ ಅವರು ಕ್ಯಾಲ್ಸಿಯಂ ಆಗು ಡಿ ಜೀವಸತ್ವಗಳ ಮಾತ್ರೆಗಳನ್ನು ಸೇವಿಸಬೇಕು. ಇದು ಮೂಳೆಗಳ ದೌರ್ಬಲ್ಯ. ಸವೆತವನ್ನು ಕಡಿಮೆ ಮಾಡುತ್ತವೆ.

ವೃದ್ಯಾಪದಲ್ಲಿ ದೇಹದ ಜೀವಕೋಶಗಳ ಆಂತರಿಕ ಕ್ರಿಯೆಗಳು ಕುಗ್ಗಿ ಹೋಗುತ್ತವೆ ಇದರಿಂದ ಮನುಷ್ಯನ ದೈಹಿಕ ಸಾಮರ್ಥ್ಯ ಕಡಿಮೆ ಆಗುತ್ತದೆ. ವೃದ್ಯಪಾದಲ್ಲಿ ಶರೀರದಲ್ಲಿನ ಖನಿಜಾಂಶಗಳ ಕೊರತೆ ಉಂಟಾಗುತ್ತದೆ ಇದರಿಂದ ಹಲ್ಲುಗಳು ಉದರುತ್ತವೆ ಹಲ್ಲು ಮತ್ತು ವಸಡುಗಳು ದುರ್ಬಲಕ್ಕೆ ಒಳಗಾಗುತ್ತವೆ. ವೃದ್ಯಪಾದಲ್ಲಿ ಬಾಯಲ್ಲಿ ಜೊಲ್ಲು ರಸ ಉತ್ಪಾದನೆ ಆಗುವುದು ಕಡಿಮೆ ಇದರಿಂದ ಬಾಯಿಯು ಬೇಗ ಒಣಗುತ್ತದೆ ಇದರಿಂದ ಯಾವುದೇ ಆಹಾರಗಳನ್ನು ಸೇವಿಸಲು ಕಷ್ಟವಾಗುತ್ತದೆ. ವೃದ್ಯಪಕ್ಕೆ ಬಂದ ನಂತರ ನಾಲಿಗೆಯ ರುಚಿಗ್ರಂಥಿಗಳ ಶಕ್ತಿ ಕುಗ್ಗಿರುತ್ತದೇ ಇದರಿಂದ ಆಹಾರದ ಉಪ್ಪು. ಹುಳಿ ಖಾರ ಇನ್ನಿತರ ಯಾವುದೇ ರುಚಿಗಳು ಸಹ ಗೊತ್ತಾಗುವುದಿಲ್ಲ.

ವೃದ್ಯಪಾದಲ್ಲಿ ಹಸಿವು ಸಹ ಆಗುವುದಿಲ್ಲ ಏಕೆಂದರೆ ನಾಲಿಗೆಯ ಮೇಲೆ ರುಚಿ ಹೋಗಿರುವುದರಿಂದ ಹಸಿವು ಕೂಡ ಆಗುವುದಿಲ್ಲ. ವೃದ್ಯಪಾದಲ್ಲಿ ಯಾವುದೇ ರೀತಿಯ ಹೆಚ್ಚಿನ ಕೆಲಸ . ವ್ಯಾಯಾಮ ಮಾಡದೆ ಬೊಜ್ಜು ಹೆಚ್ಚುತ್ತದೆ.ಇದರಿಂದ ಬೇಗ ಮಧುಮೇಹ ಸಮಸ್ಯೆ ಬರುತ್ತದೆ. ವೃದ್ಯಪಾದಲ್ಲಿ ನಿದ್ರೆ ಬರುವುದಿಲ್ಲ ನಿದ್ರೆ ಮಾಡಲು ಹೋದರೆ ಮನಸ್ಸಿನಲ್ಲಿ ಕಳವಳ. ಸುಸ್ತು ಆಗುತ್ತದೆ ಇದು ಅವರ ದೇಹದಲ್ಲಿ ಆಗುವ ರಕ್ತ ಹೀನತೆಯ ಸಮಸ್ಯೆಯೇ ಕಾರಣವಾಗುತ್ತದೆ. ರಕ್ತ ಹೀನತೆ ಕಂಡು ಬರಲು ಕಾರಣ ಅವರ ದೇಹದಲ್ಲಿ ಕಬ್ಬಿಣ ಅಂಶ. ಮತ್ತು ಸಿ ಜೀವಸತ್ವದ ಕೊರತೆ ಕಂಡು ಬಂದಾಗ ಹಾಗಾಗಿ ಹೆಚ್ಚಾಗಿ ಸೊಪ್ಪು ತರಕಾರಿ.

ಕಾಳುಗಳು ಮೊಟ್ಟೆಯನ್ನು ಸೇವಿಸಬೇಕು. ವೃದ್ಯಪಾದಲ್ಲಿ ಕಂಡು ಬರುವ ಇನ್ನೊಂದು ಸಮಸ್ಯೆ ಮಲಬದ್ಧತೆ ಇದರಿಂದ ಹೊಟ್ಟೆ ಉಬ್ಬರ ಆಲಸ್ಯ ಹೊಟ್ಟೆ ತುಂಬಿದಂತೆ ಆಗುವುದು. ಈ ಸಮಸ್ಯೆಯಿಂದ ದೂರ ಆಗಲು ನಾರಿನ ಅಂಶ ಹೆಚ್ಚಿರುವ ತರಕಾರಿಗಳನ್ನು ಹಾಗೂ ಹೆಚ್ಚು ನೀರನ್ನು ಸೇವಿಸಬೇಕು ವೃದ್ಯಪಾದಲ್ಲಿ ದೇಹದಲ್ಲಿ ಹಾಗೂ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತವೆ ಹಾಗಾಗಿ ಆದಷ್ಟು ತಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು. ಆಗಿದ್ದಲ್ಲಿ ಮಾತ್ರ ವೃದ್ಯಪಾದಲ್ಲೂ ಸಹ ಆರೋಗ್ಯವಾಗಿ ಸಂತೋಷವಾಗಿ ಇರಲು ಸಾಧ್ಯವಾಗುತ್ತದೆ.

LEAVE A REPLY

Please enter your comment!
Please enter your name here