ಮನುಷ್ಯನಿಗೆ ಈ ಸಮಸ್ಯೆಗಳು ಬಂದ್ರೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಅನ್ಸುತ್ತೆ

0
1364

ಮನುಷ್ಯನಾಗಿ ಹುಟ್ಟಿದ ಮೇಲೆ ಒಂದಲ್ಲ ಒಂದು ದಿನ ಸಾಯಲೇ ಬೇಕು. ಮನುಷ್ಯ ಯಾವಾಗ ಜನಿಸುತ್ತಾನೆ ಎಂದು ಒಂದು ಅಂದಾಜಿನ ಮೇಲೆ ಮುಂಚಿತವಾಗಿ ಹೇಳಬಹುದು ಆದರೆ ಅದೇ ಮನುಷ್ಯನಿಗೆ ಸಾವು ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವೇ.ಈ ಸಾವು ಎಂಬುದು ಯಾವ ಸಮಯದಲ್ಲಿ ಹೇಗೆ ಬರುತ್ತದೆ ಯಾರಿಗೆ ಬರುತ್ತದೆ ಎಂದು ಊಹಿಸಲು ಕೂಡ ಆಗುವುದಿಲ್ಲ. ಯಾವುದೇ ಮನುಷ್ಯ ತಾನೇ ಸಾವು ಎಂಬುದಕ್ಕೆ ಹೆದರದೆ ಇರುವುದಿಲ್ಲ ಸಾವು ಎಂದರೆ ಸಾಕು ಎಲ್ಲರ ಜೀವ ನಡುಗುತ್ತದೆ.ಎಲ್ಲರಿಗೂ ಆರೋಗ್ಯವಾಗಿ ಜೀವಿಸಲು ಇಷ್ಟ ಪಡುತ್ತಾರೆ. ಆದರೆ ಕೆಲವರಿಗೆ ಬರುವ ಆರೋಗ್ಯದ ಸಮಸ್ಯೆಗಳು ಅವರನ್ನು ಸಾವಿನ ಹತ್ತಿರದ ಕಡೆಗೆ ಕರೆದುಕೊಂಡು ಹೋಗುತ್ತದೆ. ಆದರೆ ಇಂದು ಎಂತಹದೇ ಕಾಯಿಲೆಗಳಿಗೂ ಔಷಧಿಗಳು ಇವೆ ಇವುಗಳನ್ನು ತೆಗೆದುಕೊಳ್ಳುವುದರಿಂದ ತಮ್ಮ ಕಾಯಿಲೆಯಿಂದ ಸುಧಾರಿಸಿಕೊಳ್ಳಬಹುದು.

ಆದರೆ ಮನುಷ್ಯನಿಗೆ ದೈಹಿಕವಾಗಿ ಕಾಯಿಲೆಗಳು ಬಂದರೆ ಔಷಧಿ ತೆಗೆದುಕೊಂಡು ಗುಣಪಡಿಸಿಕೊಳ್ಳಬಹುದು ಆದರೆ ಆಂತರಿಕವಾಗಿ ಖಿನ್ನತೆಯನ್ನು ಅನುಭವಿಸುತ್ತಿರುವವರಿಗೆ ಯಾವುದೇ ಔಷಧಿ ಕೊಟ್ಟರು ಗುಣವಾಗಲು ಸಾಧ್ಯವಾಗುವುದಿಲ್ಲ. ಇಂತಹವರ ಕೊನೆಯ ಔಷಧಿ ಯಾವುದು ಗೊತ್ತೇ ಅದೇ ಆತ್ಮಹತ್ಯೆ. ಇದು ಎಲ್ಲ ಆಂತರಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಎಲ್ಲರ ಭಾವನೆ. ಇತ್ತೀಚಿನ ದಿನಗಳಲ್ಲಿ ಈ ಆತ್ಮಹತ್ಯೆ ಎಂಬುದು ಜನಸಂಖ್ಯೆ ಬೆಳೆಯುವ ರೀತಿಯಲ್ಲಿ ಬೆಳೆಯುತ್ತಲೇ ಇದೆ. ಸರಿಯಾಗಿ ಬುದ್ದಿ ಬೆಳೆವಣಿಗೆಯಾಗದೆ ಇರುವ ಇನ್ನು ಸರಿಯಾಗಿ ಸಮಾಜವನ್ನು ತಿಳಿಯಾದ ವಿದ್ಯಾರ್ಥಿಗಳು ಸಹ ಆತ್ಮಹತ್ಯೆ ಎಂಬುದನ್ನು ಮಾಡಿಕೊಳ್ಳುತ್ತಿದ್ದಾರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ 16 ರಿಂದ 25 ವರ್ಷದ ಯುವಕ ಯುವತಿಯರು ಆತ್ಮಹತ್ಯೆಗೆ ಶರಣಗುತ್ತಿದ್ದರೆ.

ಈ ಆತ್ಮಹತ್ಯೆಗೆ ಸಾಮಾನ್ಯ ಕಾರಣಗಳು ಯಾವುವು ಎಂದರೆ. ಆರ್ಥಿಕ ಸಮಸ್ಯೆ. ಓದುವುದರಲ್ಲಿ ಮಾಡುವ ಒತ್ತಡ. ಪ್ರೀತಿಯಲ್ಲಿ ನಿರಾಸೆ. ಪರೀಕ್ಷೆಯ ಅಂಕಗಳು. ಭಯ ಮನಸ್ಸಿನ ಮೇಲೆ ಹೆಚ್ಚುವ ಜವಾಬ್ದಾರಿಯನ್ನು ನಿಭಾಯಿಸಲು ಆಗದೆ ಇರುವಾಗ. ಜೀವನದ ಜಿಗುಪ್ಸೆಗೆ. ಅವಮಾನ ಸಹಿಸಲು ಆಗದೆ. ಇನ್ನು ಹಲವಾರು ರೀತಿಯ ಕಾರಣಗಳಿವೇ ಈ ಆತ್ಮಹತ್ಯೆಗೆ. ಆತ್ಮಹತ್ಯೆಯ ನಿರ್ಧಾರದಿಂದ ಮನುಷ್ಯನನ್ನು ಹೊರ ತರುವುದು ಹೇಗೆ ನೋಡೋಣ ಬನ್ನಿ.

ಆದರೆ ಈ ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿದ್ದರೆ ಎಂದು ಒಂದು ಚಿಕ್ಕ ಸುಳಿವು ಸಿಕ್ಕ ತಕ್ಷಣ ಅವರನ್ನು ಆ ಯೋಚನೆಯಿಂದ ಹೊರ ತರಬೇಕು.ಅವರನ್ನು ಮಾನಸಿಕ ತಜ್ಞರ ಬಳಿ ಕರೆದುಕೊಂಡು ಹೋಗಬೇಕು ಅವರ ಮನಸ್ಸಿನ ಭಾವನೆಗಳನ್ನು ಬದಲಾವಣೆ ಮಾಡಬೇಕು.ಅವರಲ್ಲಿ ಬದುಕುವ ಆಸೆ ಹುಟ್ಟಿಸಬೇಕು. ಆತ್ಮಹತ್ಯೆ ಬಗ್ಗೆ ಯೋಚಿಸುವವರನ್ನು ಯಾವುದೇ ಕಾರಣಕ್ಕೂ ಒಬ್ಬಂಟಿಯಾಗಿ ಬಿಡಬಾರದು ಅವರ ಜೊತೆ ಯಾರಾದರೂ ಒಬ್ಬರು ಇರ ಬೇಕು ಅವರಿಗೆ ಬದುಕಿನ ಬಗ್ಗೆ ಅಶಕ್ತಿ ಮೂಡುವಂತೆ ಮಾಡಬೇಕು.

ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುವವರನ್ನೂ ಸುಮ್ಮನೆ ಕೂರಲು ಯೋಚಿಸಲು ಅವಕಾಶ ನೀಡಬಾರದು ಅವರಿಗೆ ಆತ್ಮಹತ್ಯೆ ಬಗ್ಗೆ ಯೋಚಿಸಲು ಸಮಯ ಕೊಡದ ಹಾಗೆ ಅವರಿಗೆ ಒಂದಲ್ಲ ಒಂದು ಕೆಲಸಗಳನ್ನು ನೀಡಬೇಕು. ಆತ್ಮಹತ್ಯೆ ಯೋಚಿಸುವವರ ಬಳಿ ಯಾವುದೇ ಕಾರಣಕ್ಕೂ ಹರಿತ ಆಯುಧಗಳು. ಕೀಟನಾಶಕ. ಮಾತ್ರೆಗಳನ್ನು ಅವರ ಕೈಗೆ ಸಿಗುವ ಹಾಗೆ ಇಡಬಾರದು. ಹೆಚ್ಚಾಗಿ ಖಿನ್ನತೆ. ಮಾದಕ ವ್ಯಸನ. ಸ್ಕಿಜೋಫ್ರೆನಿಯ. ವ್ಯಕ್ತಿತ್ವ ಸಂಭಂದಿ ಕಾಯಿಲೆಗಳಿಂದ ಬಳಲುತ್ತಿರುವವರು ಆತ್ಮಹತ್ಯೆ ಬಗ್ಗೆ ಹೆಚ್ಚಾಗಿ ಯೋಚಿಸುತ್ತಾರೆ. ಮನುಷ್ಯರು ಶರೀರಕ ಆರೋಗ್ಯದ ಬಗ್ಗೆ ಮಾತ್ರ ಯೋಚಿಸದೆ ಮಾನಸಿಕ ಆರೋಗ್ಯದ ಬಗ್ಗೆಯೂ ಯೋಚಿಸಬೇಕು. ಯಾರಿಗೆ ಆದರೂ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ದೃಢವಾದ ನಿರ್ಧಾರಗಳು ಇದ್ದರೆ ಎಂತಹ ಸಮಸ್ಯೆಗಳನ್ನು ಸಹ ಸುಲಭವಾಗಿ ಪರಿಹರಿಸಿಕೊಳ್ಳಬಹುದು.

ಹಾಗಾಗಿ ಕಷ್ಟ. ನೋವು. ಸಂಕಟ. ಸಮಸ್ಯೆ ಎಂಬುದು ಮನುಷ್ಯನಿಗೆ ಬರದೆ ಇನ್ನು ಯಾರಿಗೆ ತಾನೇ ಬರಲು ಸಾಧ್ಯ ಅಲ್ಲವೇ ಸಮಸ್ಯೆ ಬಂತು ಎಂದು ಆತ್ಮಹತ್ಯೆ ಮಾಡಿಕೊಂಡರೆ ಯಲ್ಲದಕ್ಕೂ ಪರಿಹಾರ ಸಿಗುವುದಿಲ್ಲ ಅದರಿಂದ ನಿಮ್ಮ ಮನೆಯವರಿಗೆ ನೋವು ಆಗುತ್ತದೆ ಹಾಗಾಗಿ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಆತ್ಮಹತ್ಯೆ ಎಂಬುದನ್ನು ಕನಸಿನಲ್ಲೂ ಸಹ ಯೋಚಿಸಬೇಡಿ. ಈ ಆತ್ಮಹತ್ಯೆ ಎಂಬುದು ಮನುಷ್ಯನ ಧೈರ್ಯವನ್ನು ನುಂಗುವ ಕಾಯಿಲೆ ಇದಕ್ಕೆ ಯಾರು ಬಲಿ ಅಗಬೇಡಿ.

LEAVE A REPLY

Please enter your comment!
Please enter your name here