ಸದಾಶಿವ ದೇವರಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
670

ಮೇಷ: ಈ ದಿನ ನಿಮ್ಮ ಜೀವನದಲ್ಲಿ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡುವ ಅವಕಾಶ ನಿಮಗೆ ದೊರೆಯಲಿದೆ. ನಿಮ್ಮ ಅಂದುಕೊಂಡ ಎಲ್ಲ ಕೆಲಸಗಳು ಯಾವುದೇ ಒತ್ತಡ ಇಲ್ಲದೆ ಪೂರ್ಣವಾಗಲಿದೆ. ನಿಮ್ಮ ವ್ಯವಹಾರದಲ್ಲಿ ನಿಮಗೆ ಉತ್ತಮ ಲಾಭ ದೊರೆಯಲಿದೆ.
ವೃಷಭ: ಮನೆಯಲ್ಲಿ ಸಂತಸದ ವಾತಾವರಣ ನಿಮಗೆ ಸಿಗಲಿದೆ. ನೀವು ನೇರವಾಗಿ ಮಾತನಾಡುವುದರಿಂದ ನಿಮ್ಮ ಮಾತು ಕೆಲವು ಜನಕ್ಕೆ ಕೋಪ ತರಿಸುವ ಸಾಧ್ಯತೆ ಇರುತ್ತದೆ. ಈ ದಿನ ನಿಮಗೆ ಆರೋಗ್ಯ ಸ್ತಿತಿ ಸಾದಾರಣವಾಗಿದ್ದು ಶಿವನ ಮಹಾ ಮಂತ್ರ ಪಾರಾಯಣ ಮಾಡಿ.

ಮಿಥುನ: ನೀವು ಇಷ್ಟು ಕಾಲ ನಂಬಿಕೆ ಇಟ್ಟ ಕೆಲವು ವ್ಯಕ್ತಿಗಳಿಂದ ನಿಮಗೆ ಮೋಸವಾಗಿ ನಿಮ್ಮ ಮರ್ಯಾದೆಗೆ ದಕ್ಕೆ ಬರುವ ಸಾಧ್ಯತೆ ಇರುತ್ತದೆ. ಕೆಲಸದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಸಂಜೆ ಸಮಯ ಅಧಿಕ ಧನ ಲಾಭ ನಿಶ್ಚಿತ
ಕರ್ಕಾಟಕ: ಇಂದು ನಿಮ್ಮ ಒಳ್ಳೆಯ ಸ್ನೇಹಿತರಿಂದಲೇ ನಿಮ್ಮ ಎಷ್ಟೋ ಒಳ್ಳೆ ಕೆಲಸಗಳಿಗೆ ಸಹಾಯ ಆಗಲಿದೆ. ದೈನಂದಿನ ಇಂದಿನ ದಿನದಲ್ಲಿ ನಿಮಗೆ ಆರ್ಥಿಕ ಸಮಸ್ಯೆ ಬಂದರು ದೇವರ ಕೃಪೆ ನಿಮ್ಮ ಮೇಲೆ ಇರುವುದರಿಂದ ನಿಮಗೆ ಹೆಚ್ಚಿನ ತೊಂದ್ರೆ ಆಗದು.

ಸಿಂಹ: ನಿಮ್ಮ ಹೆಚ್ಚಿನ ಪ್ರಯತ್ನವೇ ನಿಮಗೆ ನಿಮ್ಮ ಕೆಲಸದಲ್ಲಿ ಯಶಸ್ಸು ಕೊಡುತ್ತದೆ. ನಿಮ್ಮ ರಹಸ್ಯ ವಿಷಯಗಳನ್ನು ನಂಬಿ ಅನ್ಯರ ಬಳಿ ತಿಳಿಸಬೇಡಿ ನಿಮಗೆ ಕೆಡುಕು ಆಗುವ ಸಂಭವ ಹೆಚ್ಚಿದೆ. ಸಂಜೆ ಐದು ಗಂಟೆ ಒಳಗೆ ಶಿವನ ದರ್ಶನ ಪಡೆಯಿರಿ.
ಕನ್ಯಾ:ಕೆಲವು ವ್ಯಕ್ತಿಗಳ ಅಸಮಾಧಾನದಿಂದ ನಿಂತು ಹೋಗಿದ್ದ ಕೆಲವು ಕೆಲಸಗಳು ಇಂದು ಪರಿಪೂರ್ಣವಾಗಲಿದೆ. ಕುಟುಂಬದ ಜೊತೆಗೆ ಶುಭಕಾರ್ಯಗಳಿಗೆ ತೆರಳುವ ಅವಕಾಶ ನಿಮಗೆ ಸಿಗಲಿದೆ. ಹಿರಿಯರ ಆಶಿರ್ವಾದ ನಿಮಗೆ ಶುಭ ಫಲ ನೀಡಲಿದೆ.

ತುಲಾ: ನಿಮ್ಮ ಮನಸಿನ ಬಾದೆಯನ್ನು ನಿಮ್ಮ ಪ್ರೀತಿಪಾತ್ರ ಜನರೊಂದಿಗೆ ಹಂಚಿಕೊಳ್ಳಿ ನಿಮ್ಮಲಿರುವ ಕೆಲವು ನೋವುಗಳು ಕಡಿಮೆ ಆಗಲಿದೆ.ಸಣ್ಣ ಜನರೊಂದಿಗೆ ವಾಗ್ವಾದಕ್ಕೆ ನಿಂತು ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ನಿಮಗೆ ಒಳ್ಳೆ ಕಾಲ ಬರಲಿದೆ
ವೃಶ್ಚಿಕ:ನಿಮ್ಮ ಉದ್ಯೋಗದಲ್ಲಿ ನಿಮಗೆ ಹೆಚ್ಚಿನ ಪ್ರಗತಿ ಸಿಗಲಿದೆ ಮನೆಯಲ್ಲಿ ಮಕ್ಕಳು ಇದ್ದರೆ ನಿಮಗೆ ಇಂದು ಹೆಚ್ಚಿನ ಖರ್ಚು ಬರುವ ಸಾಧ್ಯತೆಯೂ ಇರುತ್ತದೆ. ದೂರದ ಊರಿನಿಂದ ನಿಮ್ಮ ಸ್ನೇಹಿತರು ನಿಮ್ಮ ಸಹಾಯಕ್ಕಾಗಿ ನಿರೀಕ್ಷೆ ಮಾಡುವರು.

ಧನಸ್ಸು: ಇಂದು ನಿಮ್ಮ ಗುಣಕ್ಕೆ ಮತ್ತು ವ್ಯಕ್ತಿತ್ವಕ್ಕೆ ನಿಮ್ಮ ಸಂಗಾತಿ ಅಥವ ನಿಮ್ಮ ಸ್ನೇಹಿತರಿಂದ ಪ್ರಶಂಶೆ ಸಿಗಲಿದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನಿಮಗೆ ಸಿಗಲಿದು ಆದ್ಯಾತ್ಮದ ಕಡೆ ಹೆಚ್ಚಿನ ಒಲವನ್ನು ತೋರಿಸುವ ಸಾಧ್ಯತೆ ಇರುತ್ತದೆ.
ಮಕರ: ನಿಮಗೆ ಕುಟುಂಬದ ಜನರು ಅನೇಕ ರೀತಿಯ ಸಲಹೆ ನೀಡುವರು ಆದರು ಅದನ್ನು ಅಷ್ಟು ಯೋಚಿಸದೆ ಕೊನೆಗೆ ನಿಮ್ಮ ಸ್ವಂತ ನಿರ್ಧಾರ ಮಾತ್ರವೇ ತೆಗೆದುಕೊಳ್ಳಿರಿ.ಸಂಜೆ ಸಮಯದಲ್ಲಿ ರಕ್ತದ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಕುಂಭ:ನಿಮಗೆ ವಹಿಸಿದ ಜವಾಬ್ದಾರಿ ಪೂರ್ಣ ಮಾಡುವ ಸಮಯ ನಿಮಗೆ ದೊರೆಯಲಿದೆ. ಆರೋಗ್ಯ ಉತ್ತಮ ಸ್ತಿತಿಯಲ್ಲಿ ಇಂದು ಇರಲಿದೆ. ನಿಮ್ಮ ವ್ಯಾಪಾರ ಮತ್ತು ವ್ಯವಹಾರದಲ್ಲಿ ಒಳ್ಳೆಯ ಲಾಭ ನಿಮಗೆ ದೊರೆಯಲಿದೆ. ಶಿವನ ದರ್ಶನ ಪಡೆಯಿರಿ
ಮೀನ: ನೀವು ನಷ್ಟದ ಕಡೆ ವಾಲುವುದನ್ನು ನಿಮ್ಮ ಹಿರಿಯರು ತಪ್ಪಿಸುವರು. ನಿಮಗೆ ಸೂಕ್ತ ಸಮಯಕ್ಕೆ ಸರಿಯಾಗಿ ಹಿರಿಯ ಜನರಿಂದ ಮಾರ್ಗ ದರ್ಶನ ದೊರೆಯಲಿದೆ. ಹಿರಿಯರ ಮಾತುಗಳನ್ನು ಪಾಲಿಸಿ ನಿಮಗೆ ಶುಭ ಆಗಲಿದೆ. ಬೆಳ್ಳಗೆ ಆಫೀಸಿಗೆ ತೆರಳುವ ಮುನ್ನ ಶಿವನ ದರ್ಶನ ಪಡೆಯಿರಿ

LEAVE A REPLY

Please enter your comment!
Please enter your name here