ಈಗಿನ ಕಾಲದ ಆಧುನಿಕ ಜೀವನದಲ್ಲಿ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಯಾರಿಗೂ ಸಮಯವೇ ಇರುವುದಿಲ್ಲ ಬಿಡಿ. ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಮರೆತು ಹಣ ಗಳಿಸುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಜನರಲ್ಲಿ ಆರೋಗ್ಯದ ಬಗೆಗಿನ ಅರಿವು ಮೂಡಿಸುವುದು ತುಂಬಾ ಅಗತ್ಯ. ಅದಕ್ಕೆ ಈ ಐದು ನಿಯಮಗಳನ್ನು ಅನುಸರಿಸಿದರೆ ನೂರಾರು ರೋಗಗಳನ್ನು ನಿಯಂತ್ರಣ ಮಾಡಬಹುದು ಹಾಗಾದ್ರೆ ಈ ರೋಗಗಳನ್ನು ಹೇಗೆ ಗುಣ ಮಾಡುವುದು ಎಂದು ತಿಳಿದುಕೊಳ್ಳೋಣ ಅದೂ ಸಹ ಕೇವಲ ನೀರಿನಿಂದ ಎಂಬುದೇ ಒಂದು ವಿಶೇಷ ಸಂಗತಿ. ನೀರು ಪ್ರತಿ ನಿತ್ಯ ಮನುಷ್ಯನಿಗೆ ಬೇಕೇ ಬೇಕು ವೈದ್ಯರು ಹೇಳಿರುವ ಪ್ರಕಾರ ಮನುಷ್ಯನಿಗೆ ಬಹು ಬೇಗನೆ ರೋಗ ಬರುವುದು ನೀರಿನಿಂದಲೇ ಮತ್ತು ಅದನ್ನು ಗುಣ ಪಡಿಸಲು ಸಹ ನೀರಿನ ಮದ್ದು ಉತ್ತಮ ಎಂದು ಈ ನೀರಿನ ಥೆರಪಿ ಮಾಡಿದ್ರೆ ಸಾಕಷ್ಟು ಲಾಭಗಳು ನಮಗೆ ಸಿಗುತ್ತೆ
ಮೊದಲನೆಯದಾಗಿ ಊಟ ಮಾಡುವ ಮೂವತ್ತು ನಿಮಿಷಗಳ ಮುಂಚೆ ಊಟ ಆದ ನಂತರ 45 ನಿಮಿಷಗಳವರೆಗೂ ನೀರು ಕುಡಿಯಬೇಡಿ ಇದು ಆರೋಗ್ಯ್ದಕ್ಕೆ ಒಳ್ಳೆಯದು ಅಲ್ಲ ಮತ್ತೊಂದು ಬೆಳಗ್ಗೆ ತಿಂಡಿಯಾಗಲಿ ಮಧ್ಯಾಹ್ನದ ಊಟವಾಗಾಲಿ ರಾತ್ರಿಯ ಊಟವಾಗಲಿ ಯಾವಾಗ ಆಹಾರ ತಿಂದರೂ 45 ನಿಮಿಷಗಳ ಕಾಲದವರೆಗೂ ನೀರು ಕುಡಿಯಬೇಡಿ, ಏಕೆಂದರೆ ನಾವು ತಿನ್ನುವ ಆಹಾರ ಅನ್ನನಾಳದಿಂದ ಹೊಟ್ಟೆಗೆ ತಲುಪುತ್ತದೆ, ಅಲ್ಲಿ ಹೈಡ್ರೋಕ್ಲೋರಿಕ್ ಆಸಿಡ್ ಸೂಕ್ಷ್ಮ ಜೀವಿಗಳನ್ನು ಸಾಯಿಸಿ, ಜೀರ್ಣಕ್ರಿಯೆ ಚೆನ್ನಾಗಿ ನಡೆಯುವಂತೆ ಮಾಡುತ್ತವೆ ಇದರಿಂದ ಶಕ್ತಿ ಬಿಡುಗಡೆ ಆಗುತ್ತದೆ. ಆದರೆ ಊಟ ಮಾಡಿದ ತಕ್ಷಣ ನೀರು ಕುಡಿದರೆ ಜೀರ್ಣಕ್ರಿಯೆ ನಿಧಾನವಾಗುತ್ತದೆ ಹಾಗೂ ಹೈಡ್ರಾಲಿಕ್ ಆಸಿಡ್, ಹೈಡ್ರೋಕ್ಲೋರಿಕ್ ಆಸಿಡ್ ಕರಗುತ್ತವೆ, ಇದರಿಂದ ಬೇಡದ ಆಹಾರ ಹೊಟ್ಟೆಯಲ್ಲಿ ಹಾಗೆಯೇ ಉಳಿದುಕೊಳ್ಳುತ್ತದೆ, ಇದರಿಂದ ಅನೇಕ ಖಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ರೆ ಉಟ ಆದ ಕೊಡಲೇ ಕೆಲವರು ಹೆಚ್ಚಿನ ನೀರು ಸೇವಿಸುವ ಬದಲು ಸ್ವಲ್ಪ ಮಾತ್ರ ಸೇವನೆ ಮಾಡಿ.
ಯಾವಾಗಲೂ ಬಿಸಿಬಿಸಿ ನೀರನ್ನು ಕುಡಿಯುವುದು ಅಥವ ಬೆಚ್ಚಗಿನ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ನೀರನ್ನು ಕುಡಿಯುವಾಗ ಅವಸರದಿಂದ ಕುಡಿಯಬಾರದು ನಿಧಾನವಾಗಿ ಕುಡಿಯುವುದು ಅಗತ್ಯ. ಇದರಿಂದ ಬಾಯಿಯಿಂದ ಲಾಲಾ ರಸ ಉತ್ಪತ್ತಿಯಾಗಿ ಜೀರ್ಣಕ್ರಿಯೆ ನಡೆಸಲು ಸಹಾಯಕಾರಿಯಾಗಿದೆ. ಬೇಗ ಬೇಗ ನೀರನ್ನು ಕುಡಿದರೆ ಹೈಡ್ರೋ ಕ್ಲೋರಿಕ್ ಆಸಿಡ್ ಕೆಲಸ ಹೆಚ್ಚಾಗುತ್ತದೆ. ಇದರಿಂದ ಗ್ಯಾಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಇದು ಹೃದಯದ ಮೇಲೆ ಪರಿಣಾಮ ಬೀರುವುದರಿಂದ ಬೇರೆ ಬೇರೆ ರೋಗಗಳು ಬರುವ ಸಾಧ್ಯತೆ ಹೆಚ್ಚು ಇರುತ್ತದೆ ಆದ್ದರಿಂದ ನೀರನ್ನು ನಿಧಾನವಾಗಿ ಕುಡಿಯುವುದು ಉತ್ತಮ.
ಫ್ರಿಡ್ಜಿನಿಂದ ನಲ್ಲಿ ಇಟ್ಟಿರುವ ತಣ್ಣನೆಯ ನೀರನ್ನು ಕುಡಿಯಬಾರದು ಏಕೆಂದರೆ ಯಾವಾಗಲೂ ರಕ್ತ ಸಂಚಲನೆ ನಡೆಯುವುದರಿಂದ ದೇಹವು ಬಿಸಿಯಾಗಿರುತ್ತದೆ ತಣ್ಣಗಿರುವ ನೀರು ಕುಡಿಯುವುದರಿಂದ ದೇಹದಲ್ಲಿ ರಕ್ತ ಸಂಚಲನೆಯು ಏರುಪೇರು ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ಇದರಿಂದ ಬೇರೆ ಬೇರೆ ಖಾಯಿಲೆಗಳು ಬರಬಹುದು. ಆದ್ದರಿಂದ ಬಿಸಿನೀರು ಕುಡಿಯುವುದು ಒಳ್ಳೆಯದು. ನೀರನ್ನು ಮಡಿಕೆಯಲ್ಲಿ ಅಥವಾ ತಾಮ್ರದ ಪಾತ್ರೆಯಲ್ಲಿ ರಾತ್ರಿ ಇಟ್ಟು ಬೆಳಗ್ಗೆ ಆ ನೀರನ್ನು ಕುಡಿಯುತ್ತಾ ಬಂದರೆ ತುಂಬಾ ಒಳ್ಳೆಯದು ನಿಮ್ಮ ಆರೋಗ್ಯವನ್ನು ಮತ್ತಷ್ಟು ಉತ್ತಮ ಗೊಳಿಸುತ್ತದೆ.
ಬೆಳಗ್ಗೆ ಎದ್ದ ತಕ್ಷಣ ಕನಿಷ್ಠ ಒಂದು ಲೀಟರ್ ನೀರು ಕುಡಿಯುವುದು ಅಗತ್ಯ ಏಕೆಂದರೆ ರಾತ್ರಿ ಮಲಗಿರುವ ವೇಳೆ ದೇಹದಲ್ಲಿ ಕ್ರಿಯೆಗಳು ಹೆಚ್ಚಾಗಿ ನಡೆಯುವುದರಿಂದ ದೇಹಕ್ಕೆ ನೀರಿನ ಅಗತ್ಯವಿರುವುದರಿಂದ ನೀರನ್ನು ಆದಷ್ಟೂ ಕುಡಿಯುವುದು ಅಗತ್ಯ. ದಿನಕ್ಕೆ ಏಳರಿಂದ ಎಂಟು ಲೀಟರ್ ನೀರು ಕುಡಿಯುವುದು ಒಳ್ಳೆಯದು ಇದರಿಂದ ಜಠರಕ್ಕೆ ಸಾಕಾಗುವಷ್ಟು ನೀರು ದೊರಕುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ ಹಾಗೂ ಕಿಡ್ನಿಯು ಚೆನ್ನಾಗಿ ಕ್ರಿಯೆ ನಡೆಸುವುದರಿಂದ ಮಲ ಮೂತ್ರ ವಿಸರ್ಜನೆಯ ಸರಿಯಾಗಿ ನಡೆಯುವುದರಿಂದ ದೇಹದ ಸಮತೋಲನ ಕಾಪಾಡಿಕೊಳ್ಳಲು ಸಹಾಯಕವಾಗಿದೆ.