ಆರೋಗ್ಯಕ್ಕೆ ತುಪ್ಪ ಒಳ್ಳೆಯದೋ ಬೆಣ್ಣೆ ಒಳ್ಳೆಯದೋ ತಿಳಿಯಿರಿ

0
1648

ನಾವು ನಮ್ಮ ನಿತ್ಯ ಜೀವನದಲ್ಲಿ ತುಪ್ಪ ಹಾಗೂ ಬೆಣ್ಣೆ ಎರಡನ್ನು ಸಹ ಸೇವಿಸುತ್ತಿರ ಅಲ್ಲವೇ ಆದರೆ ತುಪ್ಪವನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದೋ ಇಲ್ಲ ಬೆಣ್ಣೆ ಆರೋಗ್ಯಕ್ಕೆ ಒಳ್ಳೆಯದೋ ಎಂದು ಗೊತ್ತಿರುವುದಿಲ್ಲ ಆದರೆ ಎರಡನ್ನು ಸಹ ತಿನ್ನುತ್ತೇವೆ. ತುಪ್ಪವನ್ನು ಬೆಣ್ಣೆಯಿಂದಲೇ ಮಾಡುವುದು ಅದು ಹೇಗೆ ಗೊತ್ತೇ ಬೆಣ್ಣೆಯನ್ನು ಕಾಯಿಸಿ ಅದಕ್ಕೆ ಅರಿಶಿನ. ಮೆಂತೆ. ಬೆಳ್ಳುಳ್ಳಿ. ಕರಿಬೇವು. ಕೊತ್ತಂಬರಿ ಸೊಪ್ಪು. ಜೀರಿಗೆ. ವಿಳ್ಳೆದೆಲೆ. ಇವುಗಳೆಲ್ಲವನ್ನು ಹಾಕಿ ಚೆನ್ನಾಗಿ ಕಾಯಿಸಿದರೆ ಘಮ ಘಮ ತುಪ್ಪ ತಯಾರಾಗುತ್ತದೆ. ಬೆಣ್ಣೆಯನ್ನು ಮೊಸರಿನಿಂದ ಮಾಡುತ್ತಾರೆ ಅದು ಹೇಗೆಂದರೆ ಮೊಸರನ್ನು ಚೆನ್ನಾಗಿ ಕಡೆಯುತ್ತಾರೆ ಹೀಗೆ ಕಡೆಯುತ್ತ ಕಡೆಯುತ್ತ ಬೆಣ್ಣೆಯು ತಯಾರಾಗುತ್ತದೆ.

ಆದರೆ ಇವುಗಳು ಎರಡು ಸಹ ಆರೋಗ್ಯಕ್ಕೆ ಒಳ್ಳೆಯದು. ತುಪ್ಪದಲ್ಲಿ ಕೊಬ್ಬಿನಂಶ ಹೆಚ್ಚು ಇರುತ್ತದೆ. ಇದು ದೇಹಕ್ಕೆ ಸೇರಿದರೆ ದೇಹದ ಕೊಬ್ಬು ಹೆಚ್ಚುತ್ತದೆ ಎಂದು ಇದರಿಂದ ದೂರ ಇರುತ್ತಿದ್ದರು ಆದರೆ ತುಪ್ಪದಲ್ಲಿ ಇರುವ ಕೊಬ್ಬಿನಂಶ ಆರೋಗ್ಯಕರವಾದ ಕೊಬ್ಬಿನಂಶ ಹಾಗಾಗಿ ನಮ್ಮ ಆಹಾರದ ಜೊತೆ ತುಪ್ಪ ಇದ್ದರೆ ಆರೋಗ್ಯವು ಉತ್ತಮವಾಗಿ ಇರುತ್ತದೆ. ಇದನ್ನು ನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತುಪ್ಪದಲ್ಲಿ ಸಂಸ್ಕರಣೆ ಮಾಡದೆ ಇರುವ ಕೊಬ್ಬು ಇರುತ್ತದೆ ಜೊತೆಗೆ ವಿಟಮಿನ್ ಎ . ಒಮೆಗಾ 3 ಕೊಬ್ಬಿನ ಆಮ್ಲ ಇರುತ್ತದೆ. ತುಪ್ಪವನ್ನು ಹೆಚ್ಚಾಗಿ ನಾವು ಆಹಾರಗಳನ್ನು ತಯಾರಿಸಲು ಬಳಸಲಾಗುತ್ತದೆ ಇದು ಆಹಾರದಲ್ಲಿ ಇರುವ ಉಷ್ಣತೆಯನ್ನು ಕಡಿಮೆ ಮಾಡಿ ದೇಹವನ್ನು ತಂಪು ಮಾಡುತ್ತದೆ. ತುಪ್ಪವನ್ನು ಶೇಖರಣೆ ಮಾಡಿ ಇಡುವುದು ಹೇಗೆಂದರೆ ತುಪ್ಪವನ್ನು ಸಾಮಾನ್ಯ ತಾಪಮಾನದಲ್ಲಿ ಕನಿಷ್ಠ 2 ತಿಂಗಳು ಇಟ್ಟಿಕೊಳ್ಳಬಹುದು ಆದರೆ ಅದಕ್ಕೆ ಯಾವುದೇ ಸೂರ್ಯನ ಕಿರಣಗಳು ಬೀಳಬಾರದು ಹಾಗೂ ಗಾಳಿ ಹೋಗಬಾರದು. ತಿಳಿದುಕೊಳ್ಳಿ ಆದರೆ ಇತೀಚೆಗೆ ನಕಲಿ ತುಪ್ಪ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಸಿಗುತಿದ್ದು ಅದನ್ನು ಹೆಚ್ಚು ಸೇವನೆ ಮಾಡುವವರಿಗೆ ಕ್ಯಾನ್ಸರ್ ನಂತಹ ಭಯಂಕರ ಖಾಯಿಲೆಗಳು ಬರುತ್ತಿವಿ.

ಇನ್ನು ಬೆಣ್ಣೆ ಅಂದ್ರೆ ಯಾವ ಮಕ್ಕಳಿಗೆ ಇಷ್ಟ ಇಲ್ಲ ಹೇಳಿ ಬೆಣ್ಣೆ ನೋಡಿದರೆ ಸಾಕು ಕೃಷ್ಣನ ತರ ಕದ್ದು ತಿನ್ನುತ್ತಾರೆ. ಬೆಣ್ಣೆಯಲ್ಲಿ ವಿಟಮಿನ್ ಎ ಅಂಶವು ಇರುತ್ತದೆ. ಬೆಣ್ಣೆಯಲ್ಲಿ ಒಳ್ಳೆಯ ಕೊಬ್ಬಿನಂಶ ಸಹ ಇರುತ್ತದೇ ಹಾಗೆಯೇ ಕೆಟ್ಟ ಕೊಬ್ಬಿನಂಶ ಸಹ ಇರುತ್ತದೆ. ಬೆಣ್ಣೆಯನ್ನು ಸಾಮಾನ್ಯವಾಗಿ ಆಹಾರದ ಜೊತೆಗೆ ಸೇರಿಸಿಕೊಂಡು ಸೇವಿಸುತ್ತೇವೆ. ಬೆಣ್ಣೆಯನ್ನು ಶೇಖರಿಸಿ ಇಡುವುದು ಹೇಗೆ ಎಂದು ತಿಳಿಯೋಣ ಬನ್ನಿ. ಬೆಣ್ಣೆಯನ್ನು ಫ್ರಿಡ್ಜ್ ಅಲ್ಲಿ ಆದರೆ ಸುಮಾರು 1 ರಿಂದ 2 ತಿಂಗಳು ಇಟ್ಟಿ ಕೊಳ್ಳಬಹುದು ಆದರೆ ಹೊರಗೆ ಇಡುವುದದ್ದಾರೆ ಕನಿಷ್ಠ ಒಂದು ವಾರ ಇಟ್ಟಿಕೊಳ್ಳಬಹುದು ಆದರೂ ಅದು ವಾಸನೆ ಬರಲು ಆರಂಭವಾಗುತ್ತದೆ. ಹಾಗಾಗಿ ಬೆಣ್ಣೆಯನ್ನು ಒಂದು ಬಟರ್ ಪೇಪರ್ ಅಥವಾ ಝಿಪ್ ಇರುವ ಪ್ಲಾಸ್ಟಿಕ್ಗಳಲ್ಲಿ ಶೇಖರಣೆ ಮಾಡಿ ಇಟ್ಟಿಕೊಳ್ಳಬಹುದು. ತುಪ್ಪ ಬೆಣ್ಣೆ ಎರಡು ಸಹ ಆರೋಗ್ಯಕ್ಕೆ ಒಳ್ಳೆಯದು ಆದರೆ ಮಿತಿಯಾಗಿ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು

LEAVE A REPLY

Please enter your comment!
Please enter your name here