ಈ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ಅದು ಮೂತ್ರಪಿಂಡದ ಸಮಸ್ಯೆ ಆಗಿರಬಹುದು ತಿಳಿಯಿರಿ

0
824

ಮೂತ್ರಾಂಗ ಸಮಸ್ಯೆ ಎಂಬುದು ಮನುಷ್ಯನ ಆರೋಗ್ಯವನ್ನು ಹಾಳು ಮಾಡುತ್ತದೆ. ಮನುಷ್ಯನಿಗೆ ಬೆನುಹುರಿಯ ಅಕ್ಕಪಕ್ಕದಲ್ಲಿ ಎರಡು ಹುರುಳಿ ಕಾಳಿನ ಆಕಾರದಲ್ಲಿ ನಮ್ಮ ಮುಷ್ಟಿ ಗಾತ್ರದ ಮೂತ್ರಪಿಂಡಗಳು ಇರುತ್ತವೆ. ಈ ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಮನುಷ್ಯನು ಆರೋಗ್ಯ ವಾಗಿ ಜೀವಿಸಲು ಸಾಧ್ಯ .ಇದರ ಕಾರ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆದರೂ ಹಲವರು ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಈ ಮೂತ್ರಪಿಂಡದ ಕಾರ್ಯ ಏನೆಂದರೆ ನಮ್ಮ ಶರೀರಕ್ಕೆ ಆಹಾರದ ಮೂಲಕ ಬಂದಿರುವ ವ್ಯರ್ಥ ಹಾಗೂ ವಿಷ ಪದಾರ್ಥಗಳನ್ನು ಮೂತ್ರದ ಮೂಲಕ ಹೊರಹಾಕುವ ಕೆಲಸವನ್ನು ಮಾಡುತ್ತದೆ ಶರೀರಕ್ಕೆ ಬೇಕಾಗುವ ಸೋಡಿಯಂ. ಪೊಟ್ಯಾಶಿಯಂ. ನೀರಿನಂಶವನ್ನು ಕಾಪಾಡುವ ಕೆಲಸವನ್ನು ಸಹ ಮಾಡುತ್ತದೆ. ರಕ್ತದ ಸಮತೋಲನ ಒತ್ತಡವನ್ನು ಕಾಪಾಡುತ್ತದೆ. ಕೆಂಪು ರಕ್ತಕಣಗಳನ್ನು ನಿರ್ಮಾಣ ಮಾಡಿ ಮೂಳೆಗಳನ್ನು ಗಟ್ಟಿ ಮಾಡುತ್ತದೆ.

ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಲಕ್ಷಣಗಳು ಕಂಡು ಬರುತ್ತವೆ. ಅವುಗಳನ್ನು ನೋಡೋಣ ಬನ್ನಿ. ರಕ್ತದ ಒತ್ತಡ ವಿಪರಿತಗೊಳ್ಳುತ್ತದೆ. ವಾಕರಿಕೆ. ಚರ್ಮವು ಒಣಗುತ್ತದೆ. ಹಸಿವು ಎಂಬುದು ಇರುವುದಿಲ್ಲ. ಪಾದಗಳು ಹೆಚ್ಚು ಬಿರುಕು ಬೀಳುತ್ತವೆ. ಕಣ್ಣಿನ ಕೆಳಗೆ ಉದಿಕೊಳ್ಳುತ್ತವೆ. ಬಿಳಿಚಿಕೊಳ್ಳುತ್ತೇವೆ. ಮೈಕೈ ಉದಿಕೊಳ್ಳುತ್ತವೆ. ಶರೀರದಲ್ಲಿ ಶಕ್ತಿ ಕುಂದುತ್ತದೆ. ಮೂತ್ರಪಿಂಡದ ಸಮಸ್ಯೆ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ ಆದರೆ ಈ ಸಮಸ್ಯೆ ಇದ್ದರು ಸಹ ಅವರಿಗೆ ಗೊತ್ತೇ ಆಗುವುದಿಲ್ಲ. ದಿನಗಳು ಕಳೆದಂತೆ ಆರೋಗ್ಯದಲ್ಲಿ ಆಗುವ ಏರು ಪೇರಿನಿಂದ ರಕ್ತ ಪರೀಕ್ಷೆ ಮಾಡಿಸಿಕೊಂಡರೆ ಆಗ ಮೂತ್ರಪಿಂಡದ ಸಮಸ್ಯೆ ಗೊತ್ತಾಗುತ್ತದೆ.

ಮೂತ್ರಪಿಂಡದ ಸಮಸ್ಯೆಗೆ ಕಾರಣಗಳನ್ನು ನಿಖರವಾಗಿ ಹೇಳಲು ಸಾಧ್ಯ ಆಗುವುದಿಲ್ಲ ಆದರೂ ತಕ್ಕ ಮಟ್ಟಿಗೆ ಹೇಳುವುದಾದರೆ ಮೂತ್ರಪಿಂಡದ ಸಮಸ್ಯೆಯಲ್ಲಿ ಎರಡು ರೀತಿಯಾಗಿ ನೋಡಬಹುದು ಅದು ಅಲ್ಪಕಾಲೀನ ಹಾಗೂ ದೀರ್ಘಕಾಲೀನ ಮೂತ್ರಪಿಂಡ ಸಮಸ್ಯೆ. ಇದರಲ್ಲಿ ಅಲ್ಪಕಾಲೀನ ಮೂತ್ರಪಿಂಡ ಸಮಸ್ಯೆಯಲ್ಲಿ ಹೆಚ್ಚು ರಕ್ತ ಸ್ರಾವ. ಸುಟ್ಟ ಗಾಯಗಳು. ಮೂತ್ರಪಿಂಡದಲ್ಲಿ ಆಗುವ ಕಲ್ಲುಗಳು. ಕಾರಣವಾಗುತ್ತದೆ. ದೀರ್ಘಕಾಲೀನ ಸಮಸ್ಯೆಯಲ್ಲಿ ಮಧುಮೇಹ. ಹೆಚ್ಚು ರಕ್ತದ ಒತ್ತಡ. ಅನುವಂಶಿಯತೆಯಿಂದ ಬಂದ ಮೂತ್ರಪಿಂಡ ಕಾಯಿಲೆ. ಹೆಚ್ಚು ಔಷಧಿ ಸೇವನೆ. ಕಾರಣಗಳಾಗುತ್ತವೆ.

ಮೂತ್ರಪಿಂಡದ ಸಮಸ್ಯೆಯ ಬಗ್ಗೆ ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ಅಂಶಗಳು. ಅಲ್ಪಕಾಲದ ಮೂತ್ರಪಿಂಡ ಸಮಸ್ಯೆಗಳನ್ನು ಸುಲಭವಾಗಿ ಗುಣಪಡಿಸಿಕೊಳ್ಳಬಹುದು ಆದರೆ ದೀರ್ಘಕಾಲೀನ ಮೂತ್ರಪಿಂಡ ಸಮಸ್ಯೆಗಳನ್ನು ಗುಣಪಡಿಸಲು ಆಗುವುದಿಲ್ಲ ಇದು ಒಮ್ಮೆ ಬಂದರೆ ಅದರಿಂದ ಹೊರಬರಲು ಆಗುವುದಿಲ್ಲ ಆದರೆ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಅದು ಹೇಗೆ ಅಂದರೆ ವೈದ್ಯರು ಹೇಳುವ ಔಷಧಿ ಹಾಗೂ ಚಿಕಿತ್ಸೆಗಳನ್ನು ಕ್ರಮಬದ್ಧವಾಗಿ ಪಡೆಯಬೇಕು. ಜೊತೆಗೆ ಪೋಷಕಾಂಶ ಆಹಾರಗಳನ್ನು ಸೇವಿಸಬೇಕು ಆಗ ಮಾತ್ರ ಮೂತ್ರಪಿಂಡದ ಸಮಸ್ಯೆ ಇದ್ದರು ಅದನ್ನು ಹತೋಟಿಯಲ್ಲಿ ಇಟ್ಟುಕೊಂಡು ಅರಮದಾಯಕವಾಗಿ ಜೀವನ ನೆಡೆಸಬಹುದು.

LEAVE A REPLY

Please enter your comment!
Please enter your name here