ಮೇಷ: ನೀವು ಈ ಹಿಂದೆ ಮಾಡಿರುವ ತಪ್ಪುಗಳನ್ನು ಮತ್ತೆ ಮತ್ತೆ ಮಾಡಿದರೆ ಖಂಡಿತ ನಿಮಗೆ ನೆಮ್ಮದಿ ಸಿಗುವುದಿಲ್ಲ. ಈ ದಿನ ನಿಮಗೆ ಹೆಚ್ಚಿನ ಸುಖ ನೆಮ್ಮದಿ ಸಿಗಲಿದ್ದು ಆರೋಗ್ಯದ ವಿಷಯದಲ್ಲಿ ನಿಮಗೆ ಏರು ಪೇರಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ದುರ್ಗೆಯನ್ನು ನೆನೆದು ಈ ದಿನ ಶುರು ಮಾಡಿ.
ವೃಷಭ: ನಿಮ್ಮ ಹತ್ತಿರದ ಕುಟುಂಬದ ಸದಸ್ಯರೇ ನಿಮಗೆ ಹಣದ ವಿಷಯಕ್ಕೆ ತಗಾದೆ ತೆಗೆಯುವರು. ನೀವು ಹೆಚ್ಚಿನ ವಿಷಯಗಳನ್ನು ಸ್ನೇಹಿತರ ಬಳಿ ವಿನಿಮಯ ಮಾಡಿಕೊಳ್ಳುತ್ತೀರಿ ಅದನ್ನು ಆದಷ್ಟು ಗುಪ್ತವಾಗಿ ಇಟ್ಟುಕೊಂಡರೆ ನಿಮಗೆ ಒಳ್ಳೆಯದು.
ಮಿಥುನ: ಈ ದಿನ ಆರೋಗ್ಯ ಸ್ಥಿರವಾಗಿ ಇರಲಿದೆ. ಆರ್ಥಿಕ ಹಣ ಕಾಸಿನ ಪರಿಸ್ತಿತಿ ಸಮಾಧಾನದ ಸ್ತಿತಿಯಲ್ಲಿ ಇದ್ದು. ಸ್ವಲ್ಪ ಹೆಚ್ಚಿನ ಗೃಹ ಉಪಯೋಗಿ ವಸ್ತುಗಳು ಮನೆಯಲ್ಲಿ ಮಡದಿ ಇದ್ದರೆ ಆಭರಣಗಳ ಖರೀದಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ತಾಯಿ ದುರ್ಗೆಯನ್ನು ನೆನೆದು ದಿನ ಶುರು ಮಾಡಿ.
ಕಟಕ: ನಿಮ್ಮ ಎಷ್ಟೋ ಕಷ್ಟಗಳು ಸುಲಭವಾಗಿ ಆದರು ಅದನ್ನು ನೀವೇ ಹೆಚ್ಚಿನ ಒತ್ತಡ ಹಾಕಿ ತಲೆ ಕೆಡಿಸಿಕೊಂಡು ದೊಡ್ದದಾದ ರೀತಿಯಲ್ಲಿಮಾಡಿಕೊಳ್ಳುತ್ತೀರಿ. ಉತ್ತಮ ನೌಕರಿ ಇಲ್ಲ ಏನು ಕೊರಗುವುದು ಬೇಡ ಖಂಡಿತ ನೌಕರಿ ಸಿಗದ ಜನಕ್ಕೆ ಒಳ್ಳೆಯ ಕಡೆ ಸಿಗಲಿದೆ.
ಸಿಂಹ: ನಿಮ್ಮ ಬಹು ದಿನದ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಇಂದು ಒಳ್ಳೆ ಪರಿಷ್ಕಾರ ದೊರೆಯಲಿದೆ. ಈ ದಿನ ನಿಮಗೆ ಹೆಚ್ಚಿನ ಸಂತೋಷ ಸಿಗಲಿದ್ದು. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಇರುವುದು ನಿಮಗೆ ಸೂಕ್ತ ತಾಯಿ ರಾಜ ರಾಜೇಶ್ವರಿ ದರ್ಶನ ಪಡೆಯಿರಿ ಶುಭವಾಗಲಿದೆ.
ಕನ್ಯಾ: ಹಿರಿಯರ ಮಾತುಗಳನ್ನು ನೀವು ಯಾವಾಗಲು ಪಾಲಿಸುವುದಿಲ್ಲ ಇದು ನಿಮಗೆ ತೊಂದರೆಗಳಿಗೆ ಆಹ್ವಾನ ನೀಡಿದಂತೆ. ನೀವು ಕೊಡಿಟ್ಟ ಹಣ ನಿಮ್ಮ ಕಣ್ಣ ಮುಂದೆಯೇ ಪೋಲಾಗುವ ಸಾಧ್ಯತೆ ಇರುತ್ತದೆ. ನಿಮಗೆ ರಾಜರಾಜೇಶ್ವರಿ ತಾಯಿ ದರ್ಶನ ಪಡೆದರೆ ವಿಶೇಷ ಲಾಭ
ತುಲಾ: ನಿಮ್ಮನು ಅವಮಾನ ಮಾಡಲೆಂದೇ ಕುಳಿತಿರುವ ಜನರು ನಿಮ್ಮ ಪ್ರತಿಯೊಂದು ತಪ್ಪುಗಳನ್ನು ದೊಡ್ಡದಾಗಿ ಮಾಡಿ ನಿಮಗೆ ಯಾವಾಗಲು ಸಮಸ್ಯೆ ಮಾಡುತ್ತಾ ಇರುತ್ತಾರೆ ಅಂತಹ ಜನರ ವಿರುದ್ದ ನೀವು ಯೋಚನೆ ಮಾಡಲು ಹೋಗಬೇಡಿ ಕಾಲವೇ ಜನಕ್ಕೆ ತಕ್ಕ ಪಾಠ ಕಲಿಸುತ್ತದೆ.
ವೃಶ್ಚಿಕ: ನಿಮ್ಮ ಬಹು ಮುಖ್ಯವಾದ ಕೆಲವು ವಸ್ತುಗಳು ಕಣ್ಮರೆ ಆಗುವ ಸಾಧ್ಯತೆ ಇಂದು ಹೆಚ್ಚಿದೆ ಇದರಿಂದ ನೀವು ಹೆಚ್ಚಿನ ಚಿಂತೆಯಲ್ಲಿ ಇರುವ ಸಾಧ್ಯತೆ ಇರುತ್ತದೆ ಈ ದಿನ ನಿಮ್ಮ ಎಲ್ಲ ರೀತಿಯ ಮುಖ್ಯ ವಸ್ತುಗಳನ್ನು ಜೋಪಾನ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ.
ಧನಸ್ಸು: ಈ ದಿನ ನಿಮಗೆ ನಿಮ್ಮ ವೃತ್ತಿಯಲ್ಲಿ ಹೆಚ್ಚಿನ ಬೇಸರ ಆಗಬಹುದು. ನಿಮ್ಮ ಜೀವನದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ನಿಮಗೆ ನೆಮ್ಮದಿ ಸಿಗಲಿದೆ. ಈ ದಿನ ಆರೋಗ್ಯ ನಿಮಗೆ ಉತ್ತಮವಾಗಿ ಇದ್ದು ಹೆಚ್ಚಿನ ಹಣ ಖರ್ಚು ಮಾಡುವಿರಿ.
ಮಕರ: ಇಂದು ನಿಮಗೆ ನಿಮ್ಮ ಗ್ರಹಗತಿಗಳು ಅಷ್ಟಾಗಿ ನಿಮ್ಮ ಕಡೆ ಇಲ್ಲದ ಕಾರಣ ಶ್ರೀ ರಾಮ ರಕ್ಷಾ ಸ್ತೋತ್ರ ಪಾರಾಯಣ ಮಾಡಿದರೆ ನಿಮಗೆ ಹೆಚ್ಚಿನ ಶುಭ ಫಲ ಸಿಗಲಿದೆ ಅನೇಕ ಸಂಕಷ್ಟಗಳಿಂದ ನಿಮಗೆ ಮುಕ್ತಿ ನೀಡಲಿದೆ. ಇಂದು ಸಣ್ಣ ಸಣ್ಣ ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭ ದೊರೆಯಲಿದೆ.
ಕುಂಭ: ನಿಮ್ಮ ಮನೆಯಲ್ಲಿರುವ ಜನರ ಜೊತೆಗೆ ವಿನಾಕಾರಣ ಕೋಪ ಮಾಡಿ ಕೊಳ್ಳುತೀರಿ. ನಿಮ್ಮ ಕೋಪವೇ ನಿಮಗೆ ಹಲವು ರೀತಿಯ ಸಮಸ್ಯೆ ತರುವುದು. ಸಂಜೆ ಸಮಯದಲ್ಲಿ ಚಾಮುಂಡಿ ತಾಯಿ ದರ್ಶನ ಪಡೆದು ವ್ರುದ್ದರೋಬ್ಬರಿಗೆ ಅನ್ನ ದಾನ ಮಾಡಿ ನಿಮಗೆ ಶುಭ ಫಲ ಸಿಗಲಿದೆ.
ಮೀನಾ: ಅನೇಕ ದಿನಗಳಿಂದ ಕಳೆದುಕೊಂಡ ಒಂದು ವಸ್ತು ನಿಮಗೆ ಸಿಗಲಿದೆ ನಿಮ್ಮ ಮುಖದಲ್ಲಿ ಹೆಚ್ಚಿನ ಸಂತೋಷ ಇರಲಿದೆ. ಈ ದಿನ ಆರೋಗ್ಯದ ಕಡೆಗೆ ಹೆಚ್ಚಿನ ಜಾಗ್ರತೆ ಇರಲಿ. ನೀವು ಹೆಚ್ಚಿನ ಒತ್ತಡದಿಂದ ಅನೇಕ ರೀತಿಯ ಸಣ್ಣ ಸಣ್ಣ ತಪ್ಪು ಮಾಡಿ ನಂತರ ನೀವೇ ಪಶ್ಚಾತಾಪ ಪಡುತ್ತೀರಿ