ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ನಮಿಸುತ್ತಾ ನಿಮ್ಮ ವಾರ ಭವಿಷ್ಯ

1
1357

ವಾರ ಭವಿಷ್ಯ ಇಂದಿನಿಂದ ರಿಂದ ಡಿಸಂಬರ್ 2 ನೇ ತಾರೀಖಿನವರೆಗೂ

ಮೇಷ: ನಿಮ್ಮಿಂದ ಈ ವಾರ ಜನಪರ ಉಪಯುಕ್ತ ಕೆಲಸಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಕೌಟುಂಬಿಕ ಜೀವನದ ಮೊದಲ ಎರಡು ದಿನ ಹೆಚ್ಚಿನ ಸಮಸ್ಯೆ ನಿಮಗೆ ಬರಲಿದೆ ಸೋಮವಾರ ಬೆಳ್ಳಗೆ ಶಿವನಿಗೆ ಬಿಲ್ವ ಪತ್ರೆ ಸಮರ್ಪಣೆ ಮಾಡುವುದು ಮರೆಯಲೇ ಬೇಡಿ. ವಾರದ ಅಂತ್ಯದ ದಿನದಲ್ಲಿ ನಿಮ್ಮ ಸಾಕಷ್ಟು ಸಮಸ್ಯೆಗಳು ದೂರ ಆಗಿ ನಿಮಗೆ ನೆಮ್ಮದಿ ದೊರೆಯಲಿದೆ. ನಿಮ್ಮ ಹೆಂಡತಿ ಮಕ್ಕಳು ಮತ್ತು ತಂದೆ ತಾಯಿಯ ಜೊತೆಗೆ ಹೆಚ್ಚಿನ ಸಂತೋಷ ನಿಮಗೆ ದೊರೆಯಲಿದೆ. ನಿಮ್ಮ ಹಣ ಕಾಸಿನ ವಿಷಯದಲ್ಲಿ ನಿಮಗೆ ಹೆಚ್ಚಿನ ನೆರವು ದೊರೆಯಲಿದ್ದು ನೀವು ಚಿಂತಿಸು ಅಗತ್ಯವೇ ಬರುವುದಿಲ್ಲ. ವಾರದ ಮದ್ಯದ ದಿನದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಒತ್ತು ನೀಡಿ ನಿಮಗೆ ಈ ವಾರ ಹೆಚ್ಚಿನ ಶುಭವಾಗಲಿದೆ.

ವೃಷಭ: ಹಲವು ವಾರಗಳ ನಂತರ ಈ ವಾರ ನಿಮಗೆ ಹೆಚ್ಚಿನ ಪ್ರಮುಖ ಎನ್ನಿಸುತ್ತದೆ ಏಕೆ ಅಂದರೆ ಈ ವಾರದಲ್ಲಿ ನೀವು ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ಬದಲಾವಣೆ ಆಗುವ ಸಂಭವವೇ ಹೆಚ್ಚು ಇರುತ್ತದೆ. ನೀವು ಅಂದುಕೊಂಡ ರೀತಿಯಲ್ಲಿ ನಿಮಗೆ ಉದ್ಯೋಗ ಅವಕಾಶ ಸಿಗಬಹುದು ಅಥವ ಕೆಲಸದಲ್ಲಿ ಇರುವವರಿಗೆ ಉನ್ನತ ಸ್ಥಾನಕ್ಕೆ ಬಡ್ತಿ ಸಿಗಬಹುದು. ನಿಮ್ಮ ಹಲವು ದಿನಗಳಿಂದ ಬಾಕಿ ಉಳಿದ ಎಷ್ಟೋ ಕೆಲಸಗಳು ವೇಗ ಪದೆದೆಕೊಂದು ಎಲ್ಲ ಕಾರ್ಯಗಳು ಸುಗಮವಾಗಿ ನಡೆಯುತ್ತದೆ. ನಿಮಗೆ ಮಕ್ಕಳು ಇದ್ದಲ್ಲಿ ನಾಲ್ಕನೆ ದಿಂದ ಅಂತ್ಯಕ್ಕೆ ಅವರ ಆರೋಗ್ಯದ ಚಿಂತೆ ನಿಮ್ಮನು ಹೆಚ್ಚು ಕಾಡಲಿದೆ. ಬಡವರಿಗೆ ಮಂಗಳವಾರ ಸಂಜೆ ಏಳು ಗಂಟೆ ನಂತರ ಒಂದು ಹಿಡಿ ಗೋದಿಯನ್ನು ದಾನ ಮಾಡಿದರೆ ನಿಮಗೆ ಈ ವಾರ ಹೆಚ್ಚಿನ ಶುಭ ಫಲ ಸಿಗಲಿದೆ.

ಮಿಥುನ: ಈ ವಾರ ಹೆಚ್ಚಿನ ಬಂಡವಾಳ ಹೊಡಿಕೆ ಮಾಡುವ ಸಾಧ್ಯತೆ ಇರುತ್ತದೆ ಶೇರು ಮಾರು ಕಟ್ಟೆ ಮೇಲೆ ಹೂಡಿಕೆ ಅಥವ ಬಂಗಾರ ನಿವೇಶನ ಖರೀದಿ ಯಾವುದಾದರು ಒಂದು ಖರೀದಿಸುವ ಹೆಚ್ಚಿನ ಅವಕಾಶ ನಿಮಗೆ ಸಿಗಲಿದೆ. ಕಳೆದ ವಾರ ಸಾಕಷ್ಟು ಮನಸ್ಸು ನೊಂದಿದೆ ನಿಮಗೆ, ಈ ವಾರ ಗ್ರಹಗತಿಗಳು ನಿಮ್ಮ ಕಡೆ ಇರುವುದರಿಂದ ನಿಮ್ಮ ಮನೆಯಲ್ಲಿ ಹೆಚ್ಚಿನ ಸುಖ ಶಾಂತಿ ದೊರೆಯಲಿದೆ. ಈ ವಾರದ ಮೂರನೇ ದಿನದಿಂದ ನಿಮಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದ್ದು ನಿಮ್ಮ ಮನಸಿಗೆ ಹೆಚ್ಚಿನ ಸಂತೋಷವನ್ನು ಉಂಟು ಮಾಡಲಿದೆ. ನಿಮ್ಮನು ಕಾಲು ಎಳೆಯುಲು ಕಾಯುತ್ತಾ ಇರುವ ಶತ್ರುಗಳಿಗೆ ನೀವು ಉತ್ತಮ ಪಾಠ ಕಲಿಸುವ ಸಂಧರ್ಭ ಬರಲಿದೆ. ವಾರದ ಐದನೇ ದಿನದಲ್ಲಿ ನೀವು ತಾಯಿ ಚಾಮುಂಡಿ ದರ್ಶನ ಪಡೆದು ದೇಗುಲದ ಮುಂದೆ ಇರುವ ಬಡವರಿಗೆ ನಿಮ್ಮ ಶಕ್ತಿ ಅನುಸಾರ ಕೆಂಪು ವಸ್ತ್ರ ದಾನ ಮಾಡಿದ್ರೆ ನಿಮಗೆ ಹೆಚ್ಚಿನ ಶುಭ ಫಲ ದೊರೆಯಲಿದೆ.

ಕರ್ಕಾಟಕ: ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಈ ವಾರ ನಿಮ್ಮ ಆರೋಗ್ಯ ಹೆಚ್ಚಿಗೆ ಸುಧಾರಿಸಲಿದೆ. ನೀವು ವಾರದ ಕೊನೆ ದಿನದಲ್ಲಿ ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡಿಕೊಳ್ಳಿ. ಹೆಚ್ಚಿನ ಸುಖ ಸಂತೋಷ ನಿಮಗೆ ದೊರೆಯಲಿದ್ದು. ವಾರದ ಅಂತ್ಯದಲ್ಲಿ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಬುಧವಾರ ಸಂಜೆ ಆರು ಗಂಟೆ ನಂತರ ಹುರುಳಿಯನ್ನು ಇಬ್ಬರು ಬಡವರಿಗೆ ದಾನ ಮಾಡಿ ನಿಮಗೆ ಹೆಚ್ಚಿನ ಫಲ ಸಿಗಲಿದೆ. ಯಾವುದೇ ಕೆಲಸ ಶುರು ಮಾಡುವ ಮೊದಲು ಆತುದರ ನಿರ್ಧಾರ ಬೇಡವೇ ಬೇಡ. ವಾರದ ಮೊದಲ ಎರಡು ದಿನ ನಿಮಗೆ ಅಷ್ಟಾಗಿ ಧನ ಲಾಭ ಇರುವುದಿಲ್ಲ. ಗೃಹ ಉಪಯೋಗಿ ವಸ್ತುಗಳ ಖರೀದಿ ಅಧಿಕವಾಗಿ ಮಾಡುವ ಸಂಭವ ಬರುವುದು. ಆದಷ್ಟು ವಿಶ್ರಾಂತಿ ನಿಮಗೆ ಬೇಕಾಗಿದೆ. ಈ ವಾರ ನಿಮಗೆ ಸಮಾಧಾನಕರ.

ಸಿಂಹ: ಹೊರ ದೇಶದಲ್ಲಿ ಕೆಲಸ ನೌಕರಿ ಮಾಡಬೇಕು ಎಂದು ಆಸೆ ಇದ್ದವರಿಗೆ ಮತ್ತು ಅದಕ್ಕೆ ಸಂಬಂಧ ಪಟ್ಟ ಹಾಗೇ ನೀವು ಏನಾದರು ಪ್ರಯತ್ನ ಮಾಡುತ್ತಿದ್ದಾರೆ ಈ ವಾರ ನಿಮ್ಮ ಕನಸು ನೆನಸು ಆಗಲಿದೆ. ಫ್ಯಾಕ್ಟರಿ ನಲ್ಲಿ ನೌಕರಿ ಮಾಡುವ ಜನಕ್ಕೆ ಕೆಲಸದಲ್ಲಿ ವೇಗ ಬೇಕಾಗಿದೆ ಮತ್ತು ಹಿರಿಯ ಸಿಬ್ಬಂದಿಯಿಂದ ಹೆಚ್ಚಿನ ಮಾನಸಿಕ ಕಿರಿ ಕಿರಿ ನಿಮಗೆ ಬರಲಿದೆ. ಕಿರಿ ಕಿರಿ ಮತ್ತು ಒತ್ತಡ ದಿಂದ ನೀವು ತಪ್ಪಿಸಿಕೊಳ್ಳಲು ಹನುಮಾನ್ ಚಾಲೀಸ ವಾರದಲ್ಲಿ ಮೂರು ದಿನ ತಪ್ಪದೇ ಪಾರಾಯಣ ಮಾಡಿ. ಹೆಣ್ಣು ಮಕ್ಕಳು ಮರುಳಾಗಿ ಮೋಸ ಹೋಗುವ ಸಾಧ್ಯತೆ ಇರುವುದರಿಂದ ನೀವು ಹೆಚ್ಚಿನ ಜಾಗ್ರತೆ ಇಟ್ಟುಕೊಂಡರೆ ನಿಮ್ಮ ಸಂಪತ್ತು ನಿಮ್ಮಲೇ ಉಳಿಯಲಿದೆ. ವಾರದ ಮದ್ಯ ದಿನದಲ್ಲಿ ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರದಿದ್ದರು ನಿಮಗೆ ಬೇರೆ ಮೂಲಗಳಿಂದ ಹೆಚ್ಚಿನ ಹಣ ಸಿಗಲಿದೆ. ಆರೋಗ್ಯ ಉತ್ತಮ ಸ್ತಿತಿಯಲ್ಲಿ ಇದ್ದು ನಿಮಗೆ ಈ ವಾರ ಸಮಾಧಾನಕರ.

ಕನ್ಯಾ: ಈ ವಾರದಲ್ಲಿ ನಿಮ್ಮ ಗ್ರಹಗತಿಗಳು ನಿಮ್ಮ ಕಡೆ ಇರುವುದರಿಂದ ಹೆಚ್ಚಿನ ಅದೃಷ್ಟ ಮತ್ತು ಒಳ್ಳೆಯ ಗೌರವ ನಿಮಗೆ ಸಿಗಲಿದೆ. ಗೃಹಿಣಿಯರು ಈ ಮಂಗಳವಾರ ಸಂಜೆ ಆರು ಗಂಟೆ ನಂತರ ಹನುಮಾನ್ ಚಾಲೀಸ ಪಾರಾಯಣ ಮಾಡಿ ಇದು ನಿಮಗೂ ಮತ್ತು ನಿಮ್ಮ ಮನೆ ಜನಕ್ಕೂ ಹೆಚ್ಚಿನ ಶುಭ ಫಲ ನೀಡಲಿದೆ. ಉದ್ಯೋಗ ಸಿಗದೇ ಅಲೆದಾಡುತ್ತಾ ಇದ್ದವರಿಗೆ ಖಂಡಿತ ಈ ವಾರ ಉದ್ಯೋಗ ಪ್ರಾಪ್ತಿ ಆಗುವ ಸಂಭವ ಇರುತ್ತದೆ. ವಾರದ ಅಂತ್ಯಕ್ಕೆ ಉತ್ತಮ ಧನ ಲಾಭ ಆಗಲಿದ್ದು ಜೊತೆಗೆ ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮನು ನೀವು ತೊಗಡಿಸಿಕೊಳ್ಳುವ ಜವಾಬ್ದಾರಿ ನಿಮಗೆ ದೊರೆಯಬಹುದು. ನಿಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುವ ಸನ್ನಿವೇಶ ಬರುವ ಸಾಧ್ಯತೆ ಇರುವುದರಿಂದ ನಿಮ್ಮ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಧಾನ್ಯಗಳನ್ನು ಪಾರಿವಾಳಗಳಿಗೆ ಆಹಾರ ನೀಡಿ ಶುಭವಾಗಲಿದೆ.

ತುಲಾ: ಹೊಸ ವ್ಯವಹಾರ ಶುರು ಮಾಡುವವರಿಗೆ ಈ ವಾರ ಹೆಚ್ಚಿನ ಶುಭ ತರಲಿದೆ. ನೀವು ಷೇರು ಮಾರುಕಟ್ಟೆಯಲ್ಲಿ ಹೊಡಿಕೆ ಮಾಡುವ ಆಲೋಚನೆ ನಿಮಗೆ ಇದ್ದಲ್ಲಿ ಖಂಡಿತ ಉತ್ತಮ ಲಾಭವನ್ನು ಈ ವಾರ ನೀವು ನಿರೀಕ್ಷೆ ಮಾಡಬಹುದು. ವಾರದ ಮೂರನೇ ದಿನ ಅಂದರೆ ಬುಧವಾರ ಗಣೇಶನ ದರ್ಶನ ಪಡೆದು ನಿಮ್ಮ ಕುಟುಂಬದ ಹೆಸರಲ್ಲಿ ಅರ್ಚನೆ ಮಾಡಿಸಿ. ನಿಮಗೂ ನಿಮ್ಮ ಕುಟುಂಬಕ್ಕೆ ಹೆಚ್ಚಿನ ಶುಭ ಫಲ ಸಿಗಲಿದೆ. ವಾರದ ಅಂತ್ಯಕ್ಕೆ ನೀವು ಎಷ್ಟೇ ಜಾಗ್ರತೆ ಇದ್ದರು ನಿಮ್ಮ ಶತ್ರುಗಳು ನಿಮಗೆ ಸಮಸ್ಯೆ ಮಾಡಲು ಕಾಯುತ್ತಾ ಕುಳಿತಿದ್ದಾರೆ. ಸಣ್ಣ ಸಣ್ಣ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿ ನಿಮ್ಮ ಅಮೂಲ್ಯವಾದ ಸಮಯ ಹಾಳು ಮಾಡಿಕೊಳ್ಳಬೇಡಿ. ವಾರದ ಅಂತ್ಯದಲ್ಲಿ ಹೆಚ್ಚಿನ ಒತ್ತಡ ನಿಮ್ಮ ಮೇಲೆ ಬರುವುದರಿಂದ ನಿಮಗೆ ತಲೆ ನೋವು ತರಿಸುವ ಸಂಭವ ಇರುತ್ತದೆ. ಸೋಮವಾರ ಅಥವ ಶುಕ್ರವಾರ ಪೂರ್ವ ದಿಕ್ಕಿನಲ್ಲಿ ನಿಮಗೆ ಕಾಣುವ ಪ್ರಾಣಿಗೆ ಆಹಾರ ನೀಡಿ ನಿಮಗೆ ಶುಭ ಆಗಲಿದೆ

ವೃಶ್ಚಿಕ: ವಾರದ ಶುರು ಆಗುವ ಮುಂಚೆಯೇ ನಿಮ್ಮ ಮನೆಯಲ್ಲಿ ಸಮಾಧಾನಕರ ವಾತಾವರಣ ನಿಮಗೆ ಸಿಗುವ ನಿರೀಕ್ಷೆ ಇದೆ. ನಿಮ್ಮ ತಂದೆ ತಾಯಿ ಅವರ ಮಾತು ಎಲ್ಲದರಲ್ಲೂ ನಡೆಯಬೇಕು ಎಂದು ಹೆಚ್ಚಿನ ವಾದ ನಿಮ್ಮೊಂದಿಗೆ ಮಾಡುವ ಸನ್ನಿವೇಶ ಬರಬಹುದು. ಹೆಚ್ಚಿನ ವಾಗ್ವಾದ ಆಗುವ ಸಂಭವ ಇದ್ದರು ಗ್ರಹಗತಿಗಳು ನಿಮ್ಮ ಕಡೆ ಇರುವುದರಿಂದ ಅಷ್ಟೇನೂ ಸಮಸ್ಯೆ ಈ ವಾರ ನಿಮಗೆ ಬರುವುದಿಲ್ಲ. ನಿಮ್ಮನು ಪ್ರೀತಿಸುವ ಸಂಗಾತಿ ನಿಮ್ಮ ಮೇಲೆ ಹೆಚ್ಚಿನ ಪ್ರೀತಿಯನ್ನು ತೋರುವರು ನಿಮ್ಮ ಸಂಭಂಧ ಮತ್ತಷ್ಟು ವ್ರುದ್ದಿಯಾಗಲಿದೆ. ನಿಮ್ಮ ದಿನ ನಿತ್ಯದ ಖರ್ಚುಗಳು ಹೆಚ್ಚಾಗಲಿದೆ ಆದರೆ ವಾರದ ಅಂತ್ಯಕ್ಕೆ ನಿಮಗೆ ಹೆಚ್ಚಿನ ಧನ ಲಾಭ ಆಗಲಿದ್ದು ಯಾವುದೇ ಆರ್ಥಿಕ ಸಮಸ್ಯೆ ಬರುವುದಿಲ್ಲ. ಸಾಧ್ಯ ಆದರೆ ಈ ವಾರದಲ್ಲಿ ನಿಮ್ಮ ಹಿರಿಯ ಗುರುಗಳ ಆಶಿರ್ವಾದ ಪಡೆದುಕೊಳ್ಳಿ ನಿಮಗೆ ಶುಭ ಆಗಲಿದೆ.

ಧನಸ್ಸು: ಈ ವಾರ ನೀವು ನಿಮ್ಮ ಮುಂದಿನ ಭವಿಷ್ಯದ ಕುರಿತು ಹೆಚ್ಚಿನ ಯೋಚನೆಯಲ್ಲಿ ಮುಳುಗುವ ಸಾಧ್ಯತೆ ಇರುತ್ತದೆ ಆದರೆ ಹೆಚ್ಚಿನ ಯೋಚನೆ ಯಾವುದೇ ಸಮಸ್ಯೆಗಳನ್ನು ಕಡಿಮೆ ಮಾಡುವುದಿಲ್ಲ. ಹೆಚ್ಚಿನ ಯೋಚನೆ ಮತ್ತು ನಿಮ್ಮ ಒತ್ತಡ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬಿದ್ದು ನಿಮಗೆ ನೀವೇ ಸಮಸ್ಯೆ ಮಾಡಿಕೊಳ್ಳುತ್ತೀರಿ. ಕಳೆದ ವಾರಕ್ಕಿಂತ ನಿಮಗೆ ಹೆಚ್ಚಿನ ಧನ ಲಾಭ ಆಗಲಿದೆ ನಿಮ್ಮ ವ್ಯವಹಾರ ಹೆಚ್ಚಿನ ಲಾಭ ತಂದು ಕೊಡಲಿದೆ. ಪಾಲುದಾರಿಕೆಯಲ್ಲಿ ವಾರದ ಮೊದ ಮೂರು ದಿನ ಅತೀಯಾದ ಲಾಭ ಸಿಗಲಿದ್ದು ವಾರದ ಕೊನೆಗೆ ಸಮಾಧಾನಕರ. ಗೃಹಿಣಿಯರು ವಾರದ ಮೊದಲ ಎರಡು ದಿನ ಹೆಚ್ಚಿನ ಹಣವನ್ನು ಖರ್ಚು ಮಾಡುವ ಸಂಭವ ಇದ್ದು ವಾರಾಂತ್ಯದ ಸಮಯದಲ್ಲಿ ಹೆಚ್ಚಿನ ಒತ್ತಡ ಅನುಭವಿಸುವ ಸಂಧರ್ಭ ನಿಮಗೆ ಬರಲಿದೆ.

ಮಕರ: ವಾರದಲ್ಲಿ ಬರುವ ಅನೇಕ ಸಣ್ಣ ಪುಟ್ಟ ಸಮಸ್ಯೆಗಳಿಗೆ ನಿಮ್ಮ ಸ್ನೇಹಿತರು ನಿಮ್ಮ ಜೊತೆಗೆ ಇರಲಿದ್ದಾರೆ. ವಿವಿಧ ಗೃಹ ಉಪಯೋಗಿ ವಸ್ತುಗಳು ಖರೀದಿ ಮಾಡುತ್ತೀರಿ. ವಾರದ ಮೊದಲ ಎರಡು ದಿನ ನಿಮಗೆ ಅಷ್ಟೇನೂ ಲಾಭವು ಇಲ್ಲ. ನಿಮ್ಮ ವ್ಯವಹಾರದಲ್ಲಿ ಹೆಚ್ಚು ನಷ್ಟ ಅನುಭವಿಸುವ ಸಾಧ್ಯತೆಗಳು ಹೆಚ್ಚು ಇರುತ್ತದೆ. ಆದರೆ ಉದ್ಯೋಗ ಮಾಡುವವರಿಗೆ ನಿಮ್ಮ ಜನ್ಮ ನಕ್ಷತ್ರ ಅನುಗುಣವಾಗಿ ನಿಮ್ಮ ಪಾಪ ಪುಣ್ಯದ ಅನುಗುಣವಾಗಿ ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ. ನಿಮ್ಮ ತಾಯಿಯ ಆರೋಗ್ಯ ಸಣ್ಣ ವ್ಯತ್ಯಾಸ ಕಾಣಲಿದ್ದು ವಾರದ ಅಂತ್ಯದಲ್ಲಿ ನೀವು ಹೆಚ್ಚಿನ ಚಿಂತೆಯಲ್ಲಿ ಇರುವ ಸಾಧ್ಯ್ಯತೆ ಇರುತ್ತದೆ. ಯಾರದೋ ಮಾತಿಗೆ ನಂಬಿ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಅನ್ಯ ಜನರಿಂದ ಎಚ್ಚರಿಕೆ ವ್ಯವಹಾರ ಮಾಡಿರಿ. ಹೆಚ್ಚಿನ ಶುಭವಾಗಲು ಕಪ್ಪು ಪ್ರಾಣಿಗೆ ಅಥವ ನಾಯಿಗೆ ಆಹಾರ ನೀಡಿ

ಕುಂಭ: ಈ ವಾರ ಯಾವುದದಾರು ಭೂಮಿ ಅಥವ ನಿವೇಶನ ಖರೀದಿ ಮಾಡುವ ಆಲೋಚನೆ ಇದ್ದರೆ ನಿಮಗೆ ಹೆಚ್ಚಿನ ಶುಭ ಫಲ ದೊರೆಯಲಿದೆ. ಆದರೆ ಖರೀದಿ ಮಾಡುವ ಮೊದಲೇ ಪತ್ರ ವ್ಯವಹಾರ ಹೆಚ್ಚಿನ ಜಾಗ್ರತೆಯಿಂದ ಪರೀಕ್ಷೆ ಮಾಡಿಕೊಳ್ಳಿ. ನೀವು ನಿಮ್ಮ ವ್ಯವಹಾರ ಅಥವ ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ಕೆಲಸ ಮಾಡುವುದರಿಂದ ವಾರದ ಅಂತ್ಯದಲ್ಲಿ ನಿಮ್ಮ ದೇಹಕ್ಕೆ ವಿಶ್ರಾಂತಿ ಅಗತ್ಯ ಇರುತ್ತದೆ. ನೀವು ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ಹೊಂದಲೇ ಬೇಕು. ನಿಮ್ಮ ಸಹೋದರ ನಿಮ್ಮನು ಆರ್ಥಿಕವಾಗಿ ಸಹಾಯ ಕೇಳುವ ಸಂಧರ್ಭ ಬರುವ ಸಾಧ್ಯತೆ ಇರುತ್ತದೆ. ವಾರದ ಕೊನೆ ದಿನದಲ್ಲಿ ನಿಮ್ಮ ಮನೆ ದೇವರ ದರ್ಶನ ಪಡೆಯಿರಿ ನಿಮಗೆ ಖಂಡಿತ ಎಲ್ಲವು ಶುಭ ಆಗಲಿದೆ.

ಮೀನ: ಈ ವಾರ ಯಾರದ್ದೋ ಮಾತು ಕೇಳಿ ನೀವು ಯಾವುದೇ ವ್ಯವಹಾರ ಮಾಡಲು ಹೋಗಬೇಡಿ. ನೀವು ದುಡುಕಿ ನಿರ್ಧಾರ ತೆಗೆದುಕೊಂಡರೆ ನಿಮಗೆ ಸಮಸ್ಯೆ ಆದೀತು. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ನಿಮ್ಮ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡು ಬರಲಿದೆ. ನಿಮ್ಮ ತಂದೆಯಿಂದ ನಿಮಗೆ ಅನೇಕ ರೀತಿಯ ಸಲಹೆ ಬರಬಹುದು. ಗೃಹಿಣಿಯರಿಗೆ ಅತ್ತೆಯಿಂದ ಮಾನಸಿಕ ಕಿರಿ ಕಿರಿ ಹೆಚ್ಚಾಗಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಹಿರಿಯರ ಮಾತುಗಳು ತಪ್ಪದೇ ಪಾಲಿಸುವುದು ನಿಮಗೆ ಉತ್ತಮ. ಅನಿರೀಕ್ಷಿತ ಕಂಕಣ ಭಾಗ್ಯ ಬರುವ ಸಾಧ್ಯತೆ ಇರುತ್ತದೆ. ವಾರದ ಕೊನೆ ದಿನದಲ್ಲಿ ಪ್ರಯಾಣ ಹೆಚ್ಚಾಗಲಿದೆ. ಶ್ರೀ ಕೋದಂಡರಾಮ ರಾಮ ದೇವರ ದರ್ಶನ ಪಡೆದರೆ ಈ ವಾರ ನಿಮಗೆ ಹೆಚ್ಚಿನ ಲಾಭ ದೊರೆಯಲಿದೆ.

1 COMMENT

LEAVE A REPLY

Please enter your comment!
Please enter your name here