ನಿಮ್ಮ ಮನೆಯಲ್ಲಿ ಸಣ್ಣ ವಯಸ್ಸಿನ ಬೆಳೆಯುವ ಮಕ್ಕಳು ಇದ್ರೆ ಈ ಮಾಹಿತಿ ನಿಮಗಾಗಿ

0
722

ಬೆಳೆಯುವ ಮಕ್ಕಳ ಆರೋಗ್ಯವನ್ನು ತುಂಬಾ ಜೋಪಾನವಾಗಿ ಕಾಪಾಡಿಕೊಳ್ಳಬೇಕು ಮಕ್ಕಳಲ್ಲಿ ಏನಾದರೂ ಆರೋಗ್ಯಾದ ಸಮಸ್ಯೆ ಉಂಟಾದರೆ ಅವರನ್ನು ಸುಧಾರಿಸುವುದು ತುಂಬಾ ಕಷ್ಟ ಏಕೆಂದರೆ ಅವರಿಗೆ ಯಾವುದೇ ರೀತಿಯ ನೋವುಗಳನ್ನು ತಡೆಯುವ ಶಕ್ತಿ ಇರುವುದಿಲ್ಲ. ಜೊತೆಗೆ ಈ ಮಕ್ಕಳಿಗೆ ಯಾವುದೇ ಆಹಾರಗಳನ್ನು ತಿನ್ನಿಸಬೇಕು ಎಂದರೆ ತುಂಬಾ ಕಷ್ಟ ತಿನ್ನುವ ವಿಚಾರದಲ್ಲಿ ಮಕ್ಕಳು ತುಂಬಾ ಹಠ ಮಾಡುತ್ತರೆ ಕೇವಲ ಬಿಸ್ಕೆಟ್ ಚಾಕೋಲ್ಟ್ ಕೇಕ್ ಈ ರೀತಿಯ ತಿನಿಸುಗಳನ್ನು ತಿನ್ನಲು ಇಷ್ಟ ಪಡುತ್ತಾರೆ ಆದರೆ ಇವುಗಳಿಂದ ಅವರ ಆರೋಗ್ಯ ಉತ್ತಮವಾಗುವುದಿಲ್ಲ, ಮಕ್ಕಳು ಬಾಯಿಗೆ ರುಚಿ ಕಂಡಿದ್ದು ಎಲ್ಲವು ತಿನ್ನಬೇಕು ಎಂದು ಹಠ ಮಾಡುತ್ತಾರೆ ಆದರೆ ನಾವು ಅವರಿಗೆ ಸಣ್ಣ ವಯಸ್ಸಿಗೆ ಏನು ಬೇಕು ಅದನ್ನೇ ಕೊಡಬೇಕು, ಸಿಕ್ಕ ಸಿಕ್ಕ ಜಂಕ್ ಫುಡ್ಗಳಿಂದ ಮಕ್ಕಳ ದೇಹಕ್ಕೆ ಶಕ್ತಿ ಕೂಡ ಸಿಗುವುದಿಲ್ಲ ಹಾಗಾಗಿ ಬೆಳೆಯುವ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರ ಸಮತೋಲನ ಆಹಾರವನ್ನು ನೀಡಬೇಕು. ಹಾಗಾದರೆ ಮಕ್ಕಳಿಗೆ ಯಾವ ರೀತಿಯ ಆಹಾರವನ್ನು ನೀಡಬೇಕು ಎಂದು ನೋಡೋಣ ಬನ್ನಿ.

ಧಾನ್ಯಗಳು ಇವುಗಳಲ್ಲಿ ಹೆಚ್ಚಾಗಿ ಆ್ಯಂಟಿ ಆಕ್ಸಿಡಂಟ್‍ಗಳಾದ ಫ್ಲಾವೊನಾಯ್ಡ್ಸ್, ಕ್ಯಾರೊಟೆನಾಯ್ಡ್ಸ್, ಫೆನಾಲಿಕ್ ಆಸಿಡ್ ಮತ್ತು ಪಾಲಿಫೆನಾಲ್ಸ್‍ನಂಥವುಗಳು ಸಮೃದ್ಧವಾಗಿವೆ. ಇನ್ನು ಈ ಧಾನ್ಯಗಳನ್ನು ಮೊಳಕೆ ಕೊಟ್ಟು ಹಸಿಯಾಗಿ ಸೇವಿಸಿ ಇಲ್ಲವೇ ಬೇಯಿಸಿ ತಿನ್ನಿಸಿದರು ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊಸರು ಇದರಲ್ಲಿ ಪ್ರೋಬಯಾಟಿಕ್ಸ್ ಹೆಚ್ಚಾಗಿ ಇರುತ್ತದೆ ಇದನ್ನು ಮಕ್ಕಳು ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ನಟ್ಸ್ ಹಾಗೂ ಬೀಜಗಳು ಬಾದಾಮಿ. ವಾಲ್ ನಟ್ ಖರ್ಜೂರ ಒಣದ್ರಾಕ್ಷಿ ಪಿಸ್ತಾ ಒಣಪಿಗ್ ಗೋಡಂಬಿ ಕುಂಬಳಕಾಯಿ ಬೀಜ ಸೂರ್ಯ ಕಾಂತಿ ಬೀಜ ಅಗಸೆ ಬೀಜಗಳು ಇವುಗಳಲೆಲ್ಲ ವಿಟಮಿನ್ಸಿ ಆಂಟಿ ಆಕ್ಸಿಡೆಂಟ್. ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ ಹಾಗಾಗಿ ಇವುಗಳನ್ನು ಮಕ್ಕಳಿಗೆ ನಿತ್ಯ ಸೇವಿಸಲು ಕೊಟ್ಟರೆ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ. ಮೆಣಸು ಇದೊಂದು ರಾಸಾಯನಿಕ ಕ್ಯಾಪ್ಸಾಸಿನ್ ಅನ್ನು ಹೊಂದಿರುವ ವಸ್ತು ಇದು ಶೀತ ಕೆಮ್ಮು ನೆಗಡಿ ಪ್ಲೋನಿಂದ ಹೊರಡುವ ರೋಗ ನಿರೋಧಕ ವ್ಯವಸ್ಥೆಯನ್ನು ಹೊಂದಿದೆ. ಹಾಗಾಗಿ ನಿತ್ಯ ಅಡುಗೆಗೆ ಇದನ್ನು ಬಳಸಿದರೆ ಅಡುಗೆಯ ರುಚಿ ಸಹ ಹೆಚ್ಚುತ್ತದೆ ಜೊತೆಗೆ ಮಕ್ಕಳ ಆರೋಗ್ಯ ಸಹ ಉತ್ತಮವಾಗಿರುತ್ತದೆ.

ಮೊಟ್ಟೆಗಳು ಪ್ರೋಟಿನನ್ನು ಒಳಗೊಂಡಿರುವ ಸಮೃದ್ಧ ಆಹಾರ. ಇದರ ಒಳಗೆ ಇರುವ ಹಳದಿ ಭಾಗವು ವಿಟಮಿನ್ ಮತ್ತು ಖನಿಜಗಳನ್ನು ಹೊಂದಿದೆ ಹಾಗಾಗಿ ಮಕ್ಕಳಿಗೆ ನಿತ್ಯ ಒಂದು ಮೊಟ್ಟೆಯನ್ನು ತಿನ್ನಿಸಿ ಮಕ್ಕಳು ಇಷ್ಟ ಪಟ್ಟು ಸೇವಿಸುವ ಹಾಗೆ ವಿದ ವಿಧವಾದ ರುಚಿಯಲ್ಲಿ ಮಾಡಿಕೊಡಿ. ಹಣ್ಣುಗಳಲ್ಲಿ ಎಲ್ಲ ರೀತಿಯ ಪೌಷ್ಟಿಕಾಂಶವಿರುವ ಅಂಶಗಳು ಇರುತ್ತವೇ ಹಾಗಾಗಿ ನಿತ್ಯ ಮಕ್ಕಳಿಗೆ ಹಣ್ಣುಗಳನ್ನು ತಿನ್ನಿಸಿ ಇಲ್ಲವಾದರೆ ಹಣ್ಣುಗಳಿಂದ ಜ್ಯೂಸ್ ಮಾಡಿಕೊಡಿ. ಇವುಗಳೆಲ್ಲ ಮಕ್ಕಳ ಆರೋಗ್ಯವನ್ನು ಸಮತೋಲನವಾಗಿ ಕಾಪಾಡಲು ಸಹಾಯ ಮಾಡುತ್ತದೆ ಹಾಗಾಗಿ ಇವುಗಳನ್ನು ನಿತ್ಯ ಮಕ್ಕಳಿಗೆ ಆಹಾರವಾಗಿ ಕೊಡಿ.

LEAVE A REPLY

Please enter your comment!
Please enter your name here