ಬುಲೆಟ್ ಪ್ರೂಫ್ ಜಾಕೆಟ್ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು.

0
739

ಈ ಮುಂಚೆ ನಮ್ಮ ಹೆಮ್ಮೆಯ ಭಾರತದ ಯೋಧರಿಗೆ ಬುಲೆಟ್ ಪ್ರೊಫ್ ಜ್ಯಾಕೆಟ್ ಸಿಕ್ಕಿರಲಿಲ್ಲ ಆದರೆ ಈಗ ನಮ್ಮ ಭಾರತವು ಪ್ರಪಂಚದಲ್ಲೇ ಅತ್ಯಂತ ಬಲಾಡ್ಯ ಶಕ್ತಿ ಶಾಲಿ ಸೈನ್ಯ ಹೊಂದಿದೆ ನಮ್ಮ ದೇಶವು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಪ್ರಥಮ ಸ್ಥಾನ ಇದೆ ಎಂದು ಹೇಳಲು ನನಗೆ ಹೆಮ್ಮೆ ಅನಿಸುತದೆ. ಈಗ ನಮ್ಮ ದೇಶದ ಸೈನ್ಯವು ಹೆಚ್ಚಿನ ಶಕ್ತಿ ಹೊಂದಿದ್ದು ನಮ್ಮ ಎಲ್ಲ ಸೈನಿಕರಿಗೂ ಬುಲೆಟ್ ಪ್ರೂಫ್ ಜ್ಯಾಕೆಟ್ ನೀಡಲಾಗಿದೆ. ಈ ಜ್ಯಾಕೆಟ್ ಅವರಿಗೆ ತುಂಬಾ ಅವಶ್ಯಕತೆ ಇದೆ ಶತ್ರು ದೇಶದ ಸೈನ್ಯದ ವಿರುದ್ದ ಹೋರಾಡುವಾಗ ಗುಂಡು ತೆಗುಲಿದರು ಅದು ನಮ್ಮ ದೇಹದ ಒಳಗೆ ಹೋಗದಂತೆ ತಡೆಯುತ್ತದೆ.ಆದರೆ ಇತ್ತೀಚಿನ ದಿನಗಳಲ್ಲಿ ವಿಐಪಿಗಳು ಸೆಲೆಬ್ರೆಟಿಗಳು ರಾಜಕೀಯ ನಾಯಕರು ಜನಪ್ರತಿನಿಧಿಗಳು ಸೇರಿದಂತೆ ಹಲವರು ಮಂದಿ ಬಳಕೆ ಮಾಡುತ್ತಿದ್ದಾರೆ.

ಈ ಜಾಕೆಟ್ ಅನ್ನು ಹೇಗೆ ತಯಾರು ಮಾಡುತ್ತಾರೆ ಎಂದು ಗೊತ್ತೇ.? ಬುಲೆಟ್ ಫ್ರುಫ್ ಜಾಕೆಟ್ ಅನ್ನು ಕೇವಲರ್ ಎಂದು ಕರೆಯುತ್ತಾರೆ. ಇದನ್ನು ಸಿಂಥೆಟಿಕ್ ಫೈಬರ್ನಿಂದ ತಯಾರು ಮಾಡುತ್ತಾರೆ ಇದು ಸಾಮಾನ್ಯವಾದ ಫೈಬರ್ ಗಿಂತ ದುಪ್ಪಟ್ಟು ದೃಢವಾಗಿದೆ ಆದರೆ ಹಗುರವಾಗಿ ಇರುತ್ತದೆ ಇದನ್ನು ಗಟ್ಟಿಯಾದ ನೂಲುಗಳನ್ನು ರಾಸಾಯನಿಕ ದ್ರವದಲ್ಲಿ ಮಿಶ್ರಣ ಮಾಡಿ ತೆಗೆದಾಗ ಕೇವಲರ್ ನೂಲು ತಯಾರಾಗುತ್ತದೆ ಈ ನುಲಿನಿಂದ ತಯಾರು ಮಾಡಿದ ಜಾಕೆಟ್ ಗಳು ತುಂಬಾ ಹಗುರವಾಗಿರುತ್ತದೆ .ಇದು ಚಿಕ್ಕ ಚಿಕ್ಕ ಪಿಸ್ತೂಲ. ರೈಫಲ್ಸ್ನಿಂದ ಬರುವ ಬುಲೆಟಗಳನ್ನು ತಡೆಯುತ್ತದೆ. ಇನ್ನು ದೊಡ್ಡ ದೊಡ್ಡ ರೈಫಲ್ಸ್. ಮೆಷಿನ್ ಗನ್ ನಿಂದ ಬರುವ ಬುಲೆಟ್ಗಳಿಂದ ರಕ್ಷಣೆ ಪಡೆಯಲು ಇನ್ನಷ್ಟು ದೃಢವಾಗಿರುವ ಬುಲೆಟ್ ಫ್ರುಫ್ ಜಾಕೆಟ್ಗಳನ್ನು ಧರಿಸುತ್ತಾರೆ.ಇದನ್ನು ದೃಢವಾದ ಸಿರಾಮಿಕ್. ಸ್ಟಿಲ್ ನಂಥ ಪದಾರ್ಥಗಳನ್ನು ಬಳಕೆ ಮಾಡಿ ತಯಾರು ಮಾಡುತ್ತಾರೆ.ಇವು ತುಂಬಾ ದಪ್ಪ ಹಾಗೂ ತೂಕ ಇರುತ್ತವೆ.

ಇನ್ನು ಡೈನಿಮ ಎಂಬ ಹೆಸರಿನಿಂದ ತಯಾರಿಸುತ್ತಾರೆ. ಡೈನಿಮ ಎಂಬ ನೂಲನ್ನು ಪಾಲಿಥಿಲೀನ್ ಎಂಬ ವಸ್ತುವನ್ನು ಅರೆ ಘನರೂಪದ ದ್ರಾವಣದಲ್ಲಿ ಮಿಶ್ರಣಮಾಡಿ ತಯಾರಿಸುತ್ತಾರೆ. ಇದರಿಂದ ತಯಾರಾದ ಜಾಕೆಟ್ಗಳು ತುಂಬಾ ಮೃದು ಹಾಗೂ ಹೆಚ್ಚು ಬಲಿಷ್ಠವಾಗಿರುತ್ತವೆ. ಹೀಗೆ ತಯಾರು ಮಾಡಿದ ಬುಲೆಟ್ ಫ್ರುಫ್ ಜಾಕೆಟ್ಗಳು ದೇಹದ ಎಡೆಭಾಗಕ್ಕೆ ಹಾಗೂ ಬೆನ್ನಿನ ಭಾಗಕ್ಕೆ ಬರುವಂತೆ ಹೋಲೆಯುತ್ತಾರೆ. ಇದನ್ನು ದಪ್ಪ ಹಾಗೂ ಗುಣಮಟ್ಟವನ್ನು ನೋಡಿ ಸಿದ್ಧಮಾಡುತ್ತಾರೆ ಇದನ್ನು ನೀರು ಮತ್ತು ಬಿಸಿಯಿಂದ ಕಾಪಾಡುವಂತಹ ಹೊದಿಕೆಯೊಳಗೆ ಸೇರಿಸಿ ಅದರ ಮೇಲ್ಪದರವನ್ನು ತಯಾರು ಮಾಡುತ್ತಾರೆ.

ಬುಲೆಟ್ ಫ್ರುಫ್ ಜಾಕೆಟ್ ಹೇಗೆ ಕೆಲಸ ನಿರ್ವಹಿಸುತ್ತವೆ ಎಂದು ನೋಡೋಣ ಬನ್ನಿ.. ಬುಲೆಟ್ ಫ್ರುಫ್ ಜಾಕೆಟ್ಗಳು ಮೆಕಾನಿಸಂ ಬುಲೆಟ್ ಫ್ರುಫ್ ಅನ್ನು ಹೊಂದಿರುತ್ತವೆ ಇವುಗಳನ್ನು ಪದರ ಪದರವಾಗಿ ತಯಾರು ಮಾಡಿರುತ್ತಾರೆ ಬಂದುಕಿನಿಂದ ಹೊರ ಬರುವ ಬುಲೆಟ್ಗಳು ಜಾಕೆಟ್ ಬಳಿ ಹೋಗಿ ಅದಕ್ಕೆ ಏನು ಆಗದೆ ಕೆಳಗೆ ಬೀಳುತ್ತದೆ. ಯಾವುದೇ ರೀತಿಯ ಅಪಾಯಗಳು ಆಗದಂತೆ ಈ ಜಾಗೆಟ್ ತಡೆಯುತ್ತದೆ. ಸಣ್ಣ ಸಣ್ಣ ಪಿಸ್ತೂಲ್. ರೈಫಲ್ ಗಳಿಂದ ರಕ್ಷಣೆ ಪಡೆಯಲು ಬಳಸುವ ಸಿಂಥೆಟಿಕ್ ಫೈಬರ್ ಕೇವಲರ್ ನಿಂದ ತಯಾರು ಮಾಡಿರುವ ಜಾಕೆಟ್ಗಳ ಬೆಲೆ 15000 ದಿಂದ ಪ್ರಾರಂಭವಾಗುತ್ತದೆ  ದೊಡ್ಡ ರೈಫಲ್ಸ್ ಗಳನ್ನು ತಡೆಯುವ ಜಾಕೆಟ್ ಗಳ ಬೆಲೆ ಸುಮಾರು 1 ಲಕ್ಷ ದಿಂದ ಪ್ರಾರಂಭವಾಗುತ್ತದೆ.

LEAVE A REPLY

Please enter your comment!
Please enter your name here