ಮಾತ್ರೆ ನುಂಗುವ ಮುನ್ನ ತಿಳಿಯಿರಿ

0
804

ಜ್ವರ ಕೆಮ್ಮು ನೆಗಡಿ ಏನೇ ಖಾಯಿಲೆ ಇರಲಿ ನಮ್ಮ ಜನರಲ್ಲಿ ಎರಡು ರೀತಿ ಸ್ವಲ್ಪ ಜನರು ಸ್ವಲ್ಪ ಉಷಾರು ತಪ್ಪಿದರು ಕೊಡಲೇ ವೈದ್ಯರ ಸಂಪರ್ಕ ಪಡೆಯುತ್ತಾರೆ ಇನ್ನು ಕೆಲವು ಜನ ತಮಗೆ ತಾವೇ ವೈದ್ಯರು ಆಗೋಗಿ ಮೆಡಿಕಲ್ ಶಾಪ್ ನಿಂದ ಮಾತ್ರೆ ನುಂಗುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ನಿಮಗೆ ನಿಮ್ಮ ಖಾಯಿಲೆ ಪ್ರಮಾಣ ಎಷ್ಟರ ಮಟ್ಟಿಗೆ ಇದೆ ತಿಳಿಯದೆ ನಿಮಗೆ ನೀವೇ ಇಂಗ್ಲಿಷ್ ಮೆಡಿಸಿನ್ ತೆಗೆದುಕೊಳ್ಳುವುದು ಒಮ್ಮೊಮ್ಮೆ ನಿಮ್ಮ ಜೀವಕ್ಕೆ ಕುತ್ತು ತರಬಹುದು ಇದು ಗೊತ್ತಿದರು ಅನೇಕ ಜನ ಮತ್ತೆ ಮತ್ತೆ ಇದೆ ತಪ್ಪು ಮಾಡುತ್ತಾರೆ. ಮನುಷ್ಯನಾಗಿ ಹುಟ್ಟಿದ ಮೇಲೆ ಆರೋಗ್ಯದಲ್ಲಿ ಏರು ಪೇರು ಕಂಡು ಬರುವುದು ಸಹಜ ಈ ಆರೋಗ್ಯದ ಸಮಸ್ಯೆಗಳು ಹೇಗೆ ಬರುತ್ತದೆ ಯಾವಾಗ ಬರುತ್ತದೆ ಎಂದು ಊಹೆ ಮಾಡಲು ಆಗುವುದಿಲ್ಲ. ಒಂದು ಕ್ಷಣದಲ್ಲಿ ಚೆನ್ನಾಗಿ ಇದ್ದವರು ಮತ್ತೊಂದು ಕ್ಷಣಕ್ಕೆ ಆರೋಗ್ಯ ಸರಿಯಿಲ್ಲದೇ ಒದ್ದಾಡುತ್ತಿರುತ್ತಾರೆ.

ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿದಗ ಅವರ ದೇಹದಲ್ಲಿ ಇರುವ ಎಲ್ಲ ಕಾಯಿಲೆಗಳ ಲಿಸ್ಟ್ ಹೊರ ಬರುತ್ತದೆ. ಹಿಂದಿನ ಕಾಲದಲ್ಲಿ ಆರೋಗ್ಯ ಕೆಟ್ಟರೆ ಕಾಷಾಯ ಮಾಡಿಕೊಂಡು ಕುಡಿದು ಗುಣಪಡಿಸಿಕೊಳ್ಳುತ್ತಿದ್ದರು ಅವರಂತೂ ಆಸ್ಪತ್ರೆಯತ್ತ ಮುಖ ಮಾಡಿ ಸಹ ಮಲಗುತ್ತಿರಲಿಲ್ಲ ಆದರೆ ಇಂದು ಜನಗಳಿಗೆ ಆರೋಗ್ಯ ಕೆಟ್ಟರೆ ಅಂಗಡಿಗೆ ಹೋಗಿ ಮಾತ್ರೆ ತೆಗೆದುಕೊಂಡು ಸೇವಿಸುತ್ತಾರೆ ಆಗ ಸಮಸ್ಯೆ ಸುದಾರಿಸಿದರೆ ಸುಮ್ಮನಾಗಿಬಿಡುತ್ತಾರೆ ಅದು ಕಡಿಮೆ ಆಗದೆ ತುಂಬಾ ಹೆಚ್ಚಾದರೆ ಆಗ ಆಸ್ಪತ್ರೆಯ ಕಡೆ ಓಡುತ್ತಾರೆ. ಹಿಂದಿನ ಕಾಲದಲ್ಲಿ ಆರೋಗ್ಯ ಕೆಡುವುದು ಸರ್ವೇ ಸಾಮಾನ್ಯ ಜೊತೆಗೆ ಎಲ್ಲೋ ಒಬ್ಬಬ್ಬರಿಗೆ ಆದರೆ ಇಂದು ಹುಟ್ಟುವ ಮಗುವಿಗೂ ಒಂದಲ್ಲ ಒಂದು ಸಮಸ್ಯೆ ಇರುತ್ತದೆ. ಆದರೆ ಇಂದಿನ ಆರೋಗ್ಯದ ಸಮಸ್ಯೆಗಳು ಹೇಗೆ ಅಂದರೆ ಜೀವವನ್ನೇ ತೆಗೆದುಕೊಳ್ಳುವ ಹಾಗೆ ಇರುತ್ತದೆ ಡೆಂಗ್ಯೂ ಚಿಕನ್ ಗುನ್ಯಾ ಮಲೇರಿಯ ಹೀಗೆ ಇನ್ನು ಹಲವಾರು ರೀತಿಯ ಸಮಸ್ಯೆಗಳು ಮನುಷ್ಯನ ಪ್ರಾಣವನ್ನೇ ತೆಗೆಯುತ್ತವೆ.

ಇಂದಿನ ಕಾಯಿಲೆಗಳು ಒಂದೇ ಬಾರಿ ಬರುವುದಿಲ್ಲ ಸಣ್ಣ ಸಣ್ಣ ಸಮಸ್ಯೆಗಳಿಂದ ಆರಂಭ ಆಗುತ್ತದೆ ಇದಕ್ಕೆ ಜನರು ಇದೆಲ್ಲ ಸಾಮಾನ್ಯ ಎಂದು ಯಾವುದೋ ಮಾತ್ರೆ ತೆಗೆದುಕೊಂಡು ಸುಮ್ಮನಗುತ್ತಾರೆ ಆದರೆ ಅದು ಕೊನೆಯ ಹಂತಕ್ಕೆ ಬಂದಾಗ ಗೊತ್ತಾಗುತ್ತದೆ ನಮ್ಮ ಆರೋಗ್ಯದಲ್ಲಿ ದೊಡ್ಡ ಸಮಸ್ಯೆ ಇದೆ ಎಂದು ಆದರೆ ಆ ಕೊನೆಯ ಹಂತದಲ್ಲಿ ಗುಣಪಡಿಸಿಕೊಳ್ಳುವುದು ಸದ್ಯ ಆಗದ ಮಾತಾಗಿರುತ್ತದೆ. ಅದಕ್ಕಾಗಿ ಯಾವುದೇ ಚಿಕ್ಕ ಪುಟ್ಟ ಸಮಸ್ಯೆ ಬಂದರು ಮಾತ್ರೆಗಳನ್ನು ಸೇವಿಸಿ ನಿಮ್ಮ ಆರೋಗ್ಯವನ್ನು ಮತ್ತಷ್ಟು ನೀವೇ ಕೆಡಿಸಿಕೊಳ್ಳಬೇಡಿ ಆಸ್ಪತ್ರೆಗೆ ಹೋಗಿ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ ವೈದ್ಯರ ಬಳಿ ಹೋಗಿ ಬರುವುದರಿಂದ ನಾವು ಏನು ಕಳೆದುಕೊಳ್ಳುವುದಿಲ್ಲ ಅಲ್ಲವೇ ಏನು ಅಂದಾಜು 500 ಖರ್ಚಾಗಬಹುದು ಆದರೆ ನಮ್ಮ ಆರೋಗ್ಯ ಸುದಾರಿಸುತ್ತದೇ ಅಲ್ಲವೇ 500 ರ ಮುಖ ನೋಡಿ 5 ಲಕ್ಷ ಖರ್ಚು ಮಾಡಿದವರು ಇದ್ದರೆ ಹಾಗಾಗಿ ಆರೋಗ್ಯದಲ್ಲಿ ಎಚ್ಚರ ವಹಿಸಿ.

ಜೊತೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಒತ್ತಡ ಎಂಬುದು ಬೀಳುತ್ತದೆ ನಮ್ಮ ಮನಸ್ಸಿನ ಮೇಲೆ ಬೀಳುವ ಅತಿಯಾದ ಒತ್ತಡ ಸಹ ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗಾಗಿ ಏನೇ ಸಮಸ್ಯೆ ಬಂದರು ಹೆಚ್ಚು ಒತ್ತಡ ತೆಗೆದುಕೊಳ್ಳಬೇಡಿ. ನೋಡಿದರಲ್ಲ ನಮ್ಮ ಆರೋಗ್ಯವನ್ನು ನಾವೇ ಹೇಗೆ ಹಾಳು ಮಾಡಿಕೊಳ್ಳುತ್ತೇವೆ ಹಾಗಾಗಿ ಮನುಷ್ಯನಿಗೆ ಮುಖ್ಯವಾಗಿ ಬೇಕಿರುವುದು ಆರೋಗ್ಯ ಆರೋಗ್ಯನೆ ಕೆಟ್ಟರೆ ಅವನು ಏನು ಮಾಡಲು ಸಾಧ್ಯವಿಲ್ಲ ಹಾಗಾಗಿ ಆದಷ್ಟು ಆರೋಗ್ಯದ ಬಗ್ಗೆ ನಿಗವಹಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

LEAVE A REPLY

Please enter your comment!
Please enter your name here