ರಕ್ತದಾನ ಮಾಡುವವರಿಗೆ ಹಾರ್ಟ್ ಅಟ್ಯಾಕ್ ಎಂದು ಸಹ ಬರೋದಿಲ್ಲ ಇನ್ನು ಹಲವಾರು ಲಾಭ ಇದೆ ಗೊತ್ತೇ

0
673

ಒಂದು ತೊಟ್ಟು ರಕ್ತಕ್ಕೂ ಎಷ್ಟು ಪ್ರಾಮುಖ್ಯತೆ ಇದೆ ಗೊತ್ತೇ. ಎಷ್ಟೋ ಅಪಘಾತ ಸಂಭವಿಸಿದಾಗ ಪೆಟ್ಟು ಬಿದ್ದಿರುವ ವ್ಯಕ್ತಿಗಳಿಂದ ಹೊರ ಹೋಗುವ ರಕ್ತವನ್ನು ನೋಡಲು ಮೈಯೆಲ್ಲ ಜುಮ್ ಅನ್ನುತ್ತದೆ. ಅಂತಹ ವ್ಯಕ್ತಿಗಳಿಗೆ ರಕ್ತವನ್ನು ಕೊಟ್ಟು ಅವರ ಪ್ರಾಣವನ್ನು ಉಳಿಸಿಕೊಳ್ಳುವುದು ಸಹ ಅಷ್ಟೇ ಮುಖ್ಯ. ಆಸ್ಪತ್ರೆಯಲ್ಲಿ ತುರ್ತು ಸಂಧರ್ಭದಲ್ಲಿ ಅವಶ್ಯ ವಾಗಿರುವ ರಕ್ತ ಕೊಟ್ಟು ಒಬ್ಬ ಆರೋಗ್ಯವಂತ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ರಕ್ತವನ್ನು ನೀಡಿ ಅವರ ಪ್ರಾಣವನ್ನು ಬದುಕಿಸುವುದು ಒಂದು ದೊಡ್ಡ ಕೆಲಸ ಅದನ್ನು ಪುಣ್ಯದ ಕೆಲಸ ಎಂದರೆ ತಪ್ಪಾಗಲಾರದು. ಈ ಪುಣ್ಯದ ಕೆಲಸ ಮಾಡಿದ್ರೆ ನಿಜಕ್ಕೂ ನಮಗೆ ಹೆಚ್ಚಿನ ಲಾಭ ಇದೆ ನಮ್ಮ ದೇಹಕ್ಕೆ ಹಾರ್ಟ್ ಅಟ್ಯಾಕ್ ಸಮಸ್ಯೆ ಎಂದು ಸಹ ಬರೋದೆ ಇಲ್ಲ.

ರಕ್ತದಾನವನ್ನು 18 ವರ್ಷದಿಂದ ಮೇಲ್ಪಟ್ಟ ವ್ಯಕ್ತಿಗಳು ಮಾಡಬಹುದು. ಜೊತೆಗೆ ಇವರು ಸಹ ಯಾವುದೇ ರೀತಿಯ ಆರೋಗ್ಯದ ಸಮಸ್ಯೆಗಳನ್ನು ಹೊಂದಿಲ್ಲದೆ ಹಾಗೂ 45 ಕೆಜಿ ತೂಕವನ್ನು ಹೊಂದಿರಬೇಕು. ಹಾಗೂ 12.5 ಗ್ರಾಮ್ ಗಿಂತ ಹೆಚ್ಚು ಹಿಮೋಗ್ಲೋಬಿನ್ ಅಂಶವನ್ನು ಹೊಂದಿರಬೇಕು. ನಮ್ಮ ದೇಶದಲ್ಲಿ ಸರಿಯಾಗಿ ರಕ್ತ ಸಿಗದೆ ಎಷ್ಟೋ ಜನರು ಸಾವನ್ನು ಅನುಭವಿಸಿದ್ದಾರೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ರಕ್ತದ ಬೇಡಿಕೆ ತುಂಬಾ ಇದೆ. ಆದರೆ ರಕ್ತವನ್ನು ದಾನ ಮಾಡಬೇಕು ಎಂಬ ಆಸೆ ಇದ್ದರು ಸಹ ಕೆಲವರು ಹಿಂಜರಿಯುತ್ತಾರೆ ಯಾಕೆಂದರೆ ಅವರಲ್ಲಿ ಭಯ ಎಂಬುದು ಇರುತ್ತದೆ ಅದು ಏನೆಂದರೆ ರಕ್ತವನ್ನು ದಾನ ಮಾಡಿದರೆ ನಮಗೆ ಏನಾದರೂ ಆರೋಗ್ಯದ ಸಮಸ್ಯೆ ಬರುತ್ತದೇ ಎಂಬ ಭಯದಲ್ಲಿ ಇರುತ್ತಾರೆ ಆದರೆ ಒಬ್ಬ ಆರೋಗ್ಯವಂತ ಮನುಷ್ಯನ ದೇಹದಲ್ಲಿ ಸರಾಸರಿ 5 ರಿಂದ 6 ಲೀಟರ್ ಅಷ್ಟು ರಕ್ತ ಇರುತ್ತದೆ. ಆದರೆ ನೀವು ದಾನ ಮಾಡಬೇಕು ಎಂದು ಆಸ್ಪತ್ರೆಗೆ ಹೋದಾಗ ಅಲ್ಲಿ ನಿಮ್ಮ ದೇಹದಿಂದ ಕೇವಲ 350 ಮಿಲಿಯಷ್ಟು ರಕ್ತವನ್ನು ಮಾತ್ರ ದಾನಿಯಿಂದ ತೆಗೆದುಕೊಳ್ಳುತ್ತಾರೆ ಇಷ್ಟು ರಕ್ತವನ್ನು ತೆಗೆದುಕೊಳ್ಳುವುದರಿಂದ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ.

ಯಾರು ರಕ್ತದಾನ ಮಾಡಬಾರದು ಎಂದು ನೋಡೋಣ ಬನ್ನಿ. 18 ವರ್ಷದ ಒಳಗೆ ಇರುವ ವ್ಯಕ್ತಿಗಳು ಮಾಡಬಾರದು. ಲಿವರ್ ಮೂತ್ರಪಿಂಡ ಹೃದಯದ ಸಮಸ್ಯೆ ಗರ್ಭಿಣಿಯರು ಋತುಸ್ರಾವದಲ್ಲಿ ಇರುವ ಮಹಿಳೆಯರು. ಮಗುವಿಗೆ ಹಾಲುಣಿಸುವ ಮಹಿಳೆಯರು. ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿರುವವರು. ಒಂದು ವರ್ಷದವರೆಗೆ ರಕ್ತ ವರ್ಗಾವಣೆ ಮಾಡಿಸಿಕೊಂಡವರು. 6 ರಿಂದ 7 ತಿಂಗಳವರೆಗೂ ಯಾವುದಾದರೂ ಕಾಯಿಲೆಗೆ ಲಸಿಕೆ ಪಡೆದವರು. ಇವರೆಲ್ಲರು ಸಹ ರಕ್ತದಾನ ಮಾಡಬಾರದು. ಮಾಡಿದರೆ ಅವರ ಆರೋಗ್ಯದ ಸಮಸ್ಯೆ ಕೆಡುತ್ತದೆ.

ರಕ್ತದಾನ ಮಾಡಿದ ವ್ಯಕ್ತಿಯು ತಿಳಿದುಕೊಳ್ಳಬೇಕಾದ ಅಂಶಗಳು. ರಕ್ತದಾನ ಮಾಡಿದ ವ್ಯಕ್ತಿಯು ಒಂದು ಗಂಟೆ ವಿಶ್ರಾಂತಿ ತೆಗೆದುಕೊಳ್ಳಬೇಕು. ಯಾವುದೇ ರೀತಿಯ ಔಷಧಿಗಳನ್ನು ತೆಗೆದುಕೊಳ್ಳುವ ಅಗತ್ಯ ಇರುವುದಿಲ್ಲ. ರಕ್ತದಾನ ಮಾಡಿದ ದಿನ ಹೆಚ್ಚು ನೀರು ಕುಡಿಯಬೇಕು.ಹಣ್ಣು ತರಕಾರಿ ಸೇವನೆ ಹೆಚ್ಚಾಗಿ ಮಾಡಬೇಕು. ರಕ್ತದಾನ ಮಾಡಿದ ಕೆಲವೇ ನಿಮಿಷಗಳಲ್ಲಿ ಹೊಸ ರಕ್ತ ಕಣ ಉತ್ಪತ್ತಿ ಆಗುತ್ತವೆ. ರಕ್ತವನ್ನು ವರ್ಗಾವಣೆ ಇಂದ ಏನಾದರೂ ತೊಂದರೆಗಳು ಆಗುತ್ತಾವ ಎಂದು ನೋಡಿದರೆ ರಕ್ತವನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವರ್ಗಾವಣೆ ಮಾಡುವ ಮುಂಚೆ ದಾನ ನೀಡುವ ವ್ಯಕ್ತಿಯ ರಕ್ತವನ್ನು ಪರೀಕ್ಷೆ ಮಾಡಿ ಯಾವುದೇ ರೀತಿಯ ತೊಂದರೆಗಳು ಇಲ್ಲ ಎಂಬುದು ಖಚಿತವಾದಗಲೇ ರಕ್ತವನ್ನು ವರ್ಗಾವಣೆ ಮಾಡುವುದು. ಇದರಿಂದ ಯಾವುದೇ ರೀತಿಯ ಸೋಂಕುಗಳು ಹರಡುವುದಿಲ್ಲ ಜೊತೆಗೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. ಹಾಗಾಗಿ ಯಾವುದೇ ವ್ಯಕ್ತಿಯಾಗಲಿ ರಕ್ತ ದಾನ ಮಾಡಿ ಇನ್ನೊಬ್ಬರ ಜೀವವನ್ನು ಉಳಿಸಿ.

LEAVE A REPLY

Please enter your comment!
Please enter your name here