ಉತ್ತಮ ಆರೋಗ್ಯ ಮತ್ತು ಶಕ್ತಿಗಾಗಿ ಡ್ರೈ ಫ್ರೂಟ್ಸ್.
ಡ್ರೈ ಫ್ರೂಟ್ಸ್ ಯಾರಿಗೆ ತಾನೇ ಇಷ್ಟ ಆಗುವುದಿಲ್ಲ ಹೇಳಿ. ಬಾಯಿಗೆ ರುಚಿ ಕೊಡುವ ಈ ಹಣ್ಣುಗಳನ್ನು ಎಲ್ಲರು ಇಷ್ಟ ಪಟ್ಟು ತಿನ್ನುತ್ತಾರೆ. ಇದು ಬರಿ ಬಾಯಿ ರುಚಿಗೆ ಸೀಮಿತವಾದ ಪದಾರ್ಥ ಅಲ್ಲ. ಡ್ರೈ ಫ್ರೂಟ್ಸ್ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಅನುಕೂಲಗಲಿವೆ. ಮಕ್ಕಳಿಗೆ , ಗರ್ಭಿಣಿಯರಿಗೆ, ಡ್ರೈ ಫ್ರೂಟ್ಸ್ ಕೊಡುವುದರಿಂದ ಅವರಿಗೇ ಹೆಚ್ಚು ಪೋಷಕಾಂಶಗಳು ದೊರೆಯುತ್ತದೆ. ಹಸಿ ಹಣ್ಣುಗಳನ್ನು ತಿಂದರೆ ಆಗುವ ಅನುಕೂಲಗಳಿಗಿಂತ ಒಣ ಹಣ್ಣುಗಳನ್ನು ತಿಂದರೆ ಹೆಚ್ಚು ಅನುಕೂಲಗಲಿವೆ. ಚಿಕ್ಕ ಮಕ್ಕಳಿಗೆ ಡ್ರೈ ಫ್ರೂಟ್ಸ್ ತಿನ್ನಿಸುವುದರಿಂದ ಅವರ ಬುದ್ದಿ ಚುರುಕಾಗುತ್ತದೆ ಮತ್ತು ನೆನಪಿನ ಶಕ್ತಿ ಹೆಚ್ಚುತ್ತದೆ.
ಬನ್ನಿ ಹಾಗಾದರೆ ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆಗುವ ಅನುಕೂಲಗಳನ್ನು ತಿಳಿಯೋಣ.
ಒಣದ್ರಾಕ್ಷಿ: ಒಣದ್ರಾಕ್ಷಿಯಲ್ಲಿ ಕಬ್ಬಿಣದ ಅಂಶ, ಕ್ಯಾಲ್ಶಿಯಂ, ವಿಟಮಿನ್ ಗಳು ಹೆಚ್ಚಾಗಿ ಇರುತ್ತದೆ. ಇದನ್ನು ತಿನ್ನುವುದರಿಂದ ನರ ಸಂಬಂಧಿ ಕಾಯಿಲೆಗಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ. ಖರ್ಜೂರ: ಖರ್ಜೂರ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಅನುಕೂಲಗಲಿವೆ. ಇದರಲ್ಲಿ ಕಬ್ಬಿಣದ ಅಂಶ , ನಾರಿನ ಅಂಶ ಹೆಚ್ಚಾಗಿರುತ್ತದೆ. ಇದರಿಂದ ನಮ್ಮ ದೇಹಕ್ಕೆ ಹೆಚ್ಚಿನ ಪೌಷ್ಟಿಕಾಂಶ ಮತ್ತು ಶಕ್ತಿ ದೊರೆಯುತ್ತದೆ. ಅಂಜೂರ: ಅಂಜೂರದಲ್ಲಿ ವಿಟಮಿನ್ ಬಿ 6, ವಿಟಮಿನ್ ಸಿ ಅಂಶ ಹೆಚ್ಚಾಗಿರುತ್ತದೆ. ಇದು ಕ್ಯಾನ್ಸರ್ ರೋಗ ಬರದಂತೆ ತಡೆಯುತ್ತದೆ. ಮಧುಮೇಹ ಕಾಯಿಲೆ ಇರುವವರಿಗೆ ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಪಿಸ್ತಾ: ಪಿಸ್ತಾವನ್ನು ಪ್ರತಿ ನಿತ್ಯ ತಿನ್ನುವುದರಿಂದ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಬಹುದು. ಪಿಸ್ತಾ ನಮ್ಮ ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಇದನ್ನು ಕಡಿಮೆ ಕ್ಯಾಲರಿ ಇರುವ ಹಣ್ಣುಗಳ ಸಾಲಿಗೆ ಸೇರಿಸಿದ್ದಾರೆ. ನೀವು ಪ್ರತಿನಿತ್ಯ ತೂಕ ಇಳಿಸಿಕೊಳ್ಳಲು ಕಷ್ಟ ಪಡುತ್ತೀರ. ಪಿಸ್ತಾ ತಿನ್ನುವುದರಿಂದ ನೀವು ಬಹಳ ಸುಲಭವಾಗಿ ನಿಮ್ಮ ತೂಕವನ್ನು ಕಡಿಮೆ ಮಾಡಬಹುದು. ಬಾದಾಮಿ: ಬಾದಾಮಿಯನ್ನು ಪ್ರತಿನಿತ್ಯ ತಿನ್ನುವುದರಿಂದ ನಮ್ಮ ಬುದ್ದಿ ಶಕ್ತಿ ಹೆಚ್ಚುತ್ತದೆ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಛಿಸುತ್ತದೆ. ಇದರಿಂದ ನೀವು ದಿನವಿಡೀ ಲವ ಲವಿಕೆಯಿಂದ ಇರುತ್ತೀರ ಮತ್ತು ನಿಮ್ಮ ಮನಸ್ಸು ಚೈತನ್ಯ ದಿಂದ ಕೂಡಿರುತ್ತದೆ.
ಗೋಡಂಬಿ: ಗೋಡಂಬಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಅದು ನಮ್ಮ ಹೃದಯವನ್ನು ಸ್ವಾಸ್ಥ್ಯಗೊಳಿಸುತ್ತದೆ. ಇದು ಅತ್ಯಂತ ಕಡಿಮೆ ಕೊಬ್ಬಿನಂಶವನ್ನು ಒಳಗೊಂಡಿದೆ. ಇದನ್ನು ತಿನ್ನುವುದರಿಂದ ನಮ್ಮ ದೇಹದಲ್ಲೂ ಕೂಡ ಕೊಬ್ಬಿನಂಶ ಕಡಿಮೆ ಆಗಿ ದೇಹ ಹಗುರಾಗುತ್ತದೆ. ಗೋಡಂಬಿಯನ್ನು ತಿನ್ನುವುದರಿಂದ ಮರೆವಿನ ಕಾಯಿಲೆ ದೂರವಾಗಿ ನೆನಪಿನ ಶಕ್ತಿ ಹೆಚ್ಚುವುದು. ಇಷ್ಟೊಂದು ಅನುಕೂಲವಿರುವ ಡ್ರೈ ಫ್ರೂಟ್ಸ್ ಗಳನ್ನು ಪ್ರತಿನಿತ್ಯ ನೀವು ಸೇವಿಸಿ. ಇದರಿಂದ ನಿಮ್ಮ ಆರೋಗ್ಯ ಉತ್ತಮಗೊಳ್ಳುವುದು. ನಮ್ಮ ವೆಬ್ಸೈಟ್ ನಲ್ಲಿರುವ ಬರಹಗಳಿಗೆ ಕಾಪಿ ರೈಟ್ಸ್ ಒಳಪಟ್ಟಿದ್ದು ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ.