ಈ ಲಕ್ಷಣಗಳು ಇದ್ರೆ ಅದು ಕಿಡ್ನಿ ಸಮಸ್ಯೆ ಆಗಿರಬಹುದು ತಿಳಿದುಕೊಳ್ಳಿ

0
832

ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸಮಸ್ಯೆ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿದೆ. ನಮ್ಮ ದೇಹದಲ್ಲಿ ಮೂತ್ರಪಿಂಡಗಳು ಬಹು ಮುಖ್ಯ ಪಾತ್ರವನ್ನು ನಿರ್ವಹಿಸುತ್ತವೆ. ನಮ್ಮ ದೇಹದಲ್ಲಿ ಲವಣ ಅಂಶವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಮೂತ್ರಪಿಂಡದಲ್ಲಿ ಲವಣದ ಅಂಶ ಹೆಚ್ಚಾದಾಗ ಅವು ಘನ ರೂಪಕ್ಕೆ ಬದಲಾಗಿ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಉಂಟಾಗುತ್ತದೆ. ಇದನ್ನು ಕಿಡ್ನಿ ಸ್ಟೋನ್ ಎಂದು ಕರೆಯುತ್ತಾರೆ.ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿ ಮತ್ತು ಜೀವನ ಶೈಲಿ, ನಾವು ತಿನ್ನುವ ಆಹಾರ ಇವುಗಳಿಂದ ನಮ್ಮ ದೇಹದಲ್ಲಿ ಬದಲಾವಣೆ ಆಗಿ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಕಾಣಿಸಿಕೊಳ್ಳಬಹುದು.

ಇದರ ಲಕ್ಷಣಗಳನ್ನು ನೋಡುವುದಾದರೆ. ಮೂತ್ರದಲ್ಲಿ ಉರಿ, ಹೊಟ್ಟೆನೋವು, ವಾಂತಿ. ಸೊಂಟ ನೋವು, ಹೀಗೆ ಅಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕಿಡ್ನಿ ಸಮಸ್ಯೇ ಇಂದ ಪರಿಹಾರ ಕಂಡುಕೊಳ್ಳಲು ಎಲ್ಲರೂ ಆಸ್ಪತ್ರೆಗೆ ಹೋಗಿ ಹೆಚ್ಚು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಅದಕ್ಕೆ ನಮ್ಮ ಮನೆಯಲ್ಲೇ ಇದೆ ಪರಿಹಾರ. ನಮ್ಮ ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಕಿಡ್ನಿ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಈರುಳ್ಳಿಯಿಂದ ತುಂಬಾ ಅನುಕೂಲಗಳಿವೆ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ. ಈರುಳ್ಳಿಗೆ ಮೂತ್ರಪಿಂಡದಲ್ಲಿರುವ ಕಲ್ಲನ್ನು ಕರಗಿಸುವ ಶಕ್ತಿ ಇದೆ ಇದನ್ನು ಪ್ರತಿನಿತ್ಯ ನಮ್ಮ ಆಹಾರದಲ್ಲಿ ಸಮತೋಲನವಾಗಿ ಸೇವಿಸುವುದರಿಂದ ಮೂತ್ರಪಿಂಡದ ಸಮಸ್ಯೆಯಿಂದ ಮುಕ್ತರಾಗಬಹುದು.

ಎಲೆಕೋಸು ಯಾರಿಗೆ ತಿಳಿದಿಲ್ಲ ಹೇಳಿ. ಎಲೆಕೋಸು ದೇಹದ ತೂಕವನ್ನು ನಿಯಂತ್ರಿಸುವುದರಲ್ಲಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಅತ್ಯಂತ ಪರಿಣಾಮಕಾರಿ ಪದಾರ್ಥವಾಗಿದೆ. ಎಲೆಕೋಸು ಮೂತ್ರಪಿಂಡದಲ್ಲಿ ತ್ಯಾಜ್ಯಗಳು ಶೇಖರಣೆ ಯಾಗದಂತೆ ತಡೆಗಟ್ಟುತ್ತದೆ. ಎಲೆಕೋಸನ್ನು ಹೆಚ್ಚಾಗಿ ತಿನ್ನುವುದರಿಂದ ಮೂತ್ರಪಿಂಡದ ಸಮಸ್ಯೆ ಇಂದ ಮುಕ್ತಿ ಪಡೆಯಬಹುದು. ಮೂಲಂಗಿ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಮೂಲಂಗಿ ಯಲ್ಲಿ ಹೆಚ್ಚು ಪೌಷ್ಟಿಕಾಂಶ ಗಳು ಮತ್ತು ಔಷಧೀಯ ಗುಣಗಳು ಇವೆ. ಇದನ್ನು ಹೆಚ್ಚಾಗಿ ತಿನ್ನುವುದರಿಂದ ಮೂತ್ರಪಿಂಡವು ಸ್ವಚ್ಛವಾಗಿರುವಂತೆ ಇದು ಕಾಪಾಡುತ್ತದೆ. ಮತ್ತು ನಮ್ಮ ದೇಹದಲ್ಲಿ ಲವಣದ ಅಂಶವನ್ನು ನಿಯಮಿತವಾಗಿ ಇರುವಂತೆ ನೋಡಿಕೊಳ್ಳುತ್ತದೆ.

ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಹೆಚ್ಚಾಗಿ ತಿನ್ನುವುದರಿಂದ ಮೂತ್ರಪಿಂಡ ಸಮಸ್ಯೆಯಿಂದ ಮುಕ್ತಿಗೊಳ್ಳಬಹುದು. ಕರಿಬೇವಿನ ಸೊಪ್ಪನ್ನು ನಾವು ಪ್ರತಿನಿತ್ಯ ನಮ್ಮ ಆಹಾರದಲ್ಲಿ ಬಳಸುತ್ತೇವೆ. ಇದನ್ನು ತಿನ್ನುವವರಿಗಿಂತ ಪಕ್ಕದಲ್ಲಿ ತೆಗೆದು ಇಡುವವರೇ ಜಾಸ್ತಿ. ಕರಿ ಬೇವಿನ ಸೊಪ್ಪನ್ನು ಹೆಚ್ಚಾಗಿ ತಿನ್ನುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಆಗಿದ್ದರೆ ನಿಧಾನವಾಗಿ ಕರಗುವುದು ಮತ್ತು ಕರಿಬೇವಿನ ಸೊಪ್ಪನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಹೆಚ್ಚು ಪರಿಣಾಮವನ್ನು ಕಾಣಬಹುದು. ಈಗಾಗಲೇ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ಕ್ಯಾರೆಟ್ ಅನ್ನು ಹೆಚ್ಚಾಗಿ ತಿನ್ನುವುದರಿಂದ ಕಿಡ್ನಿಯಲ್ಲಿನ ಸೋಂಕನ್ನು ಕಡಿಮೆ ಮಾಡುತ್ತದೆ ಮತ್ತು ಕ್ಯಾರೆಟ್ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

LEAVE A REPLY

Please enter your comment!
Please enter your name here