ಮಹಾ ಗಣಪತಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
691

ಮೇಷ: ಈ ದಿನ ಹೆಚ್ಚಿನ ದಾನ ಧರ್ಮಗಳನ್ನು ಮಾಡುವುದರಿಂದ ನಿಮಗೆ ಹೆಚ್ಚಿನ ಶುಭ ಫಲ ದೊರೆಯಲಿದೆ. ಸಂಜೆ ನಂತರ ಹೊಟ್ಟೆಗೆ ಸಂಭಂಧ ಪಟ್ಟಂತೆ ಒಂದಿಷ್ಟು ಆರೋಗ್ಯ ಸಮಸ್ಯೆ ನಿಮಗೆ ಬರಲಿದ್ದು ಮುಂಜಾಗ್ರತೆ ತೆಗೆದುಕೊಳ್ಳುವುದು ಲೇಸು. ಗಣಪತಿಗೆ ಭಕ್ತಿಯಿಂದ ನಮಿಸಿ.
ವೃಷಭ: ಈ ದಿನ ನೀವು ಹೆಚ್ಚಿನ ಚಟುವಟಿಕೆಯಿಂದ ಇರುತ್ತೀರಿ. ಸಾಲದ ಸುಳಿಯಲ್ಲಿ ಇರುವ ಜನಕ್ಕೆ ಸಾಲಗಾರರಿಂದ ಹೆಚ್ಚಿನ ಕಾಟ ಆಗಲಿದೆ. ಈ ದಿನ ನೀವು ಗಣಪತಿಗೆ ದೇಗುಲಕ್ಕೆ ತೆರಳಿ ವಿಘ್ನೇಶ್ವರನಿಗೆ ಗರಿಕೆ ಅರ್ಪಣೆ ಮಾಡಿದ್ರೆ ನಿಮ್ಮ ಎಷ್ಟೋ ಸಮಸ್ಯೆ ದೂರ ಆಗುತ್ತೆ.

ಮಿಥುನ: ಕಾಲಕ್ಕೆ ತಕ್ಕಂತೆ ನಿಮ್ಮ ಬಳಿ ಇರುವ ಜನರೇ ನಿಮ್ಮ ವಿರುದ್ದ ತಿರುಗಿ ಬೀಳುವ ಸಾಧ್ಯತೆ ಇರುವುದರಿಂದ. ಈ ದಿನ ನೀವು ಹೆಚ್ಚು ಜಾಗ್ರತೆ ಇರುವುದು ತುಂಬಾ ಒಳ್ಳೇದು. ಈ ದಿನ ನಿಮಗೆ ಆರೋಗ್ಯ ಹೆಚ್ಚಿನ ರೀತಿಯಲ್ಲಿ ಉತ್ತಮವಾಗಿದ್ದು. ಗಣಪತಿಗೆ ಗರಿಕೆ ಇಟ್ಟು ಪೂಜಿಸಿ.
ಕಟಕ: ಆರೋಗ್ಯದಲ್ಲಿ ಸಣ್ಣ ಬದಲಾವಣೆ ಆಗಬಹುದು. ಸ್ನೇಹಿತರ ಜೊತೆಗೆ ಹೆಚ್ಚಿನ ಸುತ್ತಾಟ ನಿಮಗೆ ಧಣಿವು ಮಾಡಬಹುದು. ಕುಟುಂಬದ ಜನ ನಿಮ್ಮ ಬಳಿ ಬಂದು ಸಮಸ್ಯೆ ಹೇಳಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ದಿನ ನಿಮಗೆ ಉತ್ತಮವಾಗಿದೆ.

ಸಿಂಹ: ಕೋರ್ಟು ಇನ್ನಿತರೇ ವ್ಯಜಗಳು ಇದ್ದಲ್ಲಿ ಹೆಚ್ಚಿನ ಲಾಭ ನಿಮಗೆ ದೊರೆಯಲಿದೆ. ಈ ದಿನ ನಿಮಗೆ ಆರ್ಥಿಕ ಪರಿಸ್ತಿತಿ ನಿನ್ನೆಗಿಂತ ಹೆಚ್ಚು ಸುಧಾರಣೆ ಆಗಲಿದೆ. ಸ್ನೇಹಿತರನ್ನು ಭೇಟಿ ಮಾಡುವ ಅವಕಾಶ ದೊರೆಯಲಿದೆ. ನಿಮ್ಮ ಮನೆಯಲ್ಲಿ ಇರುವ ಗಣಪನಿಗೆ ಗರಿಕೆ ಸಮರ್ಪಣೆ ಮಾಡಿ
ಕನ್ಯಾ: ಈ ದಿನ ನಿಮ್ಮನು ಸಹಾಯ ಕೇಳಿ ಬರುವ ಜನಕ್ಕೆ ಹೆಚ್ಚಿನ ರೀತಿಯಲ್ಲಿ ನೀವು ಸಹಾಯ ಮಾಡುವಿರಿ. ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಾಣಲಿದೆ. ಉದ್ಯೋಗ ಸಿಗದವರಿಗೆ ಸ್ವಲ್ಪ ಹೆಚ್ಚಿನ ಪ್ರಯತ್ನ ಮಾಡಿದ್ರೆ ಇಂದು ನಿಮಗೆ ಶುಭ ದಿನ ಆಗಲಿದೆ.

ತುಲಾ: ನಿಮ್ಮ ಜೊತೆಗೆ ಇರುವ ಜನರೇ ನಿಮ್ಮನು ಅನುಮಾನಿಸುವ ಕಾಲ ಬಂದಿದೆ ನೀವು ಎಲ್ಲ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರುವುದು ಉತ್ತಮ. ಆರ್ಥಿಕ ಸಮಸ್ಯೆ ಯಾವುದೇ ರೀತಿ ಬರದಿದ್ದರು ಹೆಚ್ಚಿನ ರೀತಿಯಲ್ಲಿ ಹಣವನ್ನು ಖರ್ಚು ಮಾಡುತ್ತೀರಿ.
ವೃಶ್ಚಿಕ: ಸಾಕಷ್ಟು ಪ್ರಯಾಣ ಮಾಡುವಿರಿ. ನಿಮ್ಮ ಪ್ರೀತಿಪಾತ್ರ ಜನರಿಂದ ಹೊಗಳಿಕೆ ಸಿಗಲಿದೆ. ಆರೋಗ್ಯ ವ್ರುದ್ದಿಯಾಗಲಿದೆ. ಮನೆ ಕಟ್ಟುವ ಆಸೆ ಇದ್ದವರಿಗೆ ಸಮಯ ಕೂಡಿ ಬರಲಿದೆ. ಸಂಜೆ ಏಳು ಗಂಟೆ ನಂತರ ಗಣೇಶನ ದರ್ಶನ ಮಾಡಿದ್ರೆ ನಿಮಗೆ ವಿಶೇಷ ಲಾಭ ದೊರೆಯಲಿದೆ

ಧನಸ್ಸು: ಸ್ನೇಹಿತರ ಜೊತೆಗೆ ಹೆಚ್ಚಿನ ಮೋಜು ಮಸ್ತಿ ಮಾಡುವಿರಿ ಕೊನೆಗೆ ಆರ್ಥಿಕ ಸಮಸ್ಯೆಗಳಿಗೆ ನೀವೇ ಗುರಿಯಾಗಿ ಸಮಸ್ಯೆ ಮಾಡಿಕೊಳ್ಳುತ್ತೀರಿ. ಈ ದಿನ ನಿಮ್ಮ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ ಕಾಡಲಿದೆ. ಶೀತಕ್ಕೆ ಸಂಭಂದಪಟ್ಟ ಆಹಾರಗಳಿಂದ ಇಂದು ದೂರ ಇರುವುದು ಸೂಕ್ತ.
ಮಕರ: ಕಾರ್ಯ ಸಾಧನೆಗಾಗಿ ನೀವು ನಿಮ್ಮ ಶತ್ರುಗಳನ್ನು ನಂಬಬೇಕಾದ ಪರಿಸ್ತಿತಿ ನಿಮಗೆ ಬರಲಿದೆ. ಆದರು ನಿಮ್ಮ ಜಾಗ್ರತೆ ನಿಮ್ಮಲ್ಲೇ ಇರಲಿ. ಈ ದಿನ ನಿಮಗೆ ಆರ್ಥಿಕವಾಗಿ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಓದಿನ ಒತ್ತಡ ಹೆಚ್ಚಾಗಿ ಕೋಪ ಹೊರಹಾಕುವ ಸಂಭವ ಇದೆ.

ಕುಂಭ: ದೇವರ ಅನುಗ್ರಹ ನಿಮ್ಮ ಮೇಲೆ ಹೆಚ್ಚಿದೆ ನಿಮ್ಮ ಎಲ್ಲ ಕೆಲಸಗಳಿಗೆ ಆ ಭಗವಂತ ನಿಮ್ಮ ಮೇಲೆ ಹೆಚ್ಚಿನ ಕೃಪೆ ತೋರುವನು. ಈಶಾನ್ಯ ದಿಕ್ಕಿನಲ್ಲಿ ನಿಮಗೆ ಬೆಳ್ಳಗೆ ಕಂಡು ಬರುವ ಒಂದು ಪ್ರಾಣಿಗೆ ಆಹಾರ ತಪ್ಪದೇ ನೀಡಿ ನಿಮಗೆ ವಿಶೇಷ ಲಾಭ ದೊರೆಯಲಿದೆ.
ಮೀನ: ನೀವು ನಿಮ್ಮ ಎಲ್ಲ ಕಾರ್ಯಗಳು ಮತ್ತು ಕೆಲಸಗಳಿಗೆ ಗಣಪತಿಯನ್ನು ನಂಬುವುದರಿಂದ ನಿಮಗೆ ಹೆಚ್ಚಿನ ಲಾಭ ದೊರೆಯಲಿದೆ. ಆರೋಗ್ಯದಲ್ಲಿ ಒಂದಿಷ್ಟು ಬದಲಾವಣೆ ಆಗಲಿದ್ದು ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ಉದ್ಯೋಗ ಇಲ್ಲದವರಿಗೆ ಒಳ್ಳೆ ಕಡೆ ಸಿಗುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here