ಸಾಯಿಬಾಬ ಅವರಿಗೆ ಭಕ್ತಿಯಿಂದ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

0
703

ಮೇಷ: ಈ ದಿನ ನೀವು ಸಿಟ್ಟಿನಿಂದಲೇ ಇದ್ದರೆ ಇಂದಿನ ಯಾವ ಕಾರ್ಯದಲ್ಲೂ ನಿಮಗೆ ಫಲ ಸಿಗದು. ನಿಮ್ಮ ಕೋಪ ನಿಮ್ಮನೇ ಸುಡುವುದು ಎಚ್ಚರ ಇರಲಿ. ವಿದೇಶಿ ಪ್ರಯಾಣ ಮಾಡುವ ಆಸೆ ಹೊಂದಿದ್ದರೆ ನಿಮ್ಮ ಕನಸು ಸದ್ಯದಲ್ಲೇ ನೆನೆಸಾಗುವ ಸಾಧ್ಯತೆ ಇದೆ. ನಿಮ್ಮ ಗುರುಗಳ ಆಶಿರ್ವಾದ ಪಡೆಯಿರಿ.
ವೃಷಭ: ಈ ದಿನ ನಿಮ್ಮ ಗ್ರಹಗತಿ ಅಷ್ಟೇನೂ ಉತ್ತಮವಾಗಿಲ್ಲ ಆದ್ದರಿಂದ ಗುರು ಗ್ರಹದ ಮಂತ್ರ ಪಾರಾಯಣ ಮಾಡಿರಿ ನಿಮ್ಮ ಹಲವು ಸಮಸ್ಯೆ ದೂರ ಆಗಲಿದೆ. ನಿಮ್ಮ ಆರೋಗ್ಯ ಉತ್ತಮವಾಗಿ ಇರಲಿದ್ದು ಈ ದಿನ ಸಂಜೆ ಸಮಯ ಆರೋಗ್ಯ ಕಾಡಲಿದೆ. ಗುರು ಮಂತ್ರ ಬೆಳ್ಳಗೆ ಸಮಯ ಪಾರಾಯಣ ನಿಮಗೆ ಸಮಸ್ಯೆ ಕಡಿಮೆ ಮಾಡಲಿದೆ.

ಮಿಥುನ: ಅನ್ಯರ ಮಾತು ಕೇಳಿ ಹಾಳಾಗಿದ್ದು ಸಾಕಾಗಿದೆ ಈಗಾಗಲೇ ಅನ್ಯರ ಮಾತು ಕೇಳಿ ತುಂಬಾ ತಪ್ಪುಗಳು ಮಾಡಿ ಅದಕ್ಕೆ ತಕ್ಕ ಫಲ ಅನುಭವಿಸಿದ್ದೀರಿ. ನಿಮ್ಮ ಸ್ವಂತ ಬುದ್ದಿ ಮತ್ತು ಸ್ವಂತ ನಿರ್ಧಾರ ನಿಮಗೆ ಹೆಚ್ಚಿನ ಶುಭ ಫಲ ಸಿಗುವಂತೆ ಮಾಡಲಿದೆ.
ಕಟಕ: ಈ ದಿನ ಉದ್ಯೋಗ ಸಿಗದೇ ನಿರಾಶೆ ಆದವರಿಗೆ ಶುಭ ಸುದ್ದಿ ಸಿಗಲಿದೆ. ನಿಮ್ಮ ಹಲವು ನಿರೀಕ್ಷಿತ ಕೆಲಸಗಳು ಇಂದು ಯಾವುದೇ ಅಡ್ಡಿ ಆತಂಕ ಇಲ್ಲದೆದ್ ಸುಸೂತ್ರವಾಗಿ ನಡೆಯುವುದು. ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಿರಿ ಶುಭಆಗಲಿದೆ.

ಸಿಂಹ: ಈ ದಿನ ನಿಮಗೆ ಆರ್ಥಿಕ ಸಮಸ್ಯೆ ಸ್ವಲ್ಪ ಹೆಚ್ಚಾಗಿ ಕಾಡಬಹುದು. ಹಣದ ಸಮಸ್ಯೆಗೆ ಬೇಸರ ಪಟ್ಟು ಜನರ ಮೇಲೆ ಕೋಪ ತೂರಿಸಬೇಡಿ. ಸಂಜೆ ಸಮಯಕ್ಕೆ ಎಲ್ಲವು ಶುಭವಾಗಲಿದೆ. ಸಾಯಿಬಾಬ ಗುರುಗಳ ನಂಬಿ ನಿಮಗೆ ಖಂಡಿತ ಶುಭಫಲ ಸಿಗಲಿದೆ.
ಕನ್ಯಾ: ಕುಲ ದೇವರ ಧ್ಯಾನ ಮತ್ತು ದರ್ಶನ ಸಾಕಷ್ಟು ಲಾಭ ತರಲಿದೆ. ಹಲವು ದಿನಗಳಿಂದ ಉಳಿದಿದ್ದ ಅನೇಕ ಕೆಲಸಗಳು ಯಾವುದೇ ಒತ್ತಡ ಅಡ್ಡಿ ಆತಂಕ ಇಲ್ಲದೆ ಶೀಘ್ರವೇ ನೆರವೇರುವುದು. ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಹೆಚ್ಚಿದೆ.

ತುಲಾ: ಮಾಡದ ತಪ್ಪಿಗೆ ನೀವು ಸಿಲುಕಿಕೊಳ್ಳುವ ಸಾಧ್ಯತೆ ಇರುತ್ತದೆ. ಕೆಲಸದ ವಿಷಯದಲ್ಲಿ ಮತ್ತು ಇನ್ನಿತರೇ ವ್ಯಾಜ್ಯ ಹಲವು ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಹೋಗಿ ಸಮಸ್ಯೆಗೆ ಗುರಿ ಆಗಬೇಡಿ. ಗುರುಗಳ ಆಶಿರ್ವಾದ ಪಡೆಯಿರಿ ಶುಭವಾಗಲಿದೆ.
ವೃಶ್ಚಿಕ: ಈ ದಿನ ನೀವು ಸಾಧ್ಯ ಆದಷ್ಟು ಗುರು ಗ್ರಹದ ಮಂತ್ರ ಪಾರಾಯಣ ಮಾಡುವುದರಿಂದ ನಿಮಗೆ ಈ ದಿನ ಹೆಚ್ಚಿನ ರೀತಿಯಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯಲಿದೆ. ಸಂಜೆ ಏಳು ಗಂಟೆ ನಂತರ ನಿಮ್ಮ ಕುಟುಂಬದ ಜನ ಅಥವ ಸ್ನೇಹಿತರು ನಿಮ್ಮಿಂದ ಸಹಾಯ ನಿರೀಕ್ಷೆ ಮಾಡುವ ಸೂಚನೆ ಇದೆ.

ಧನಸ್ಸು: ಕೆಲಸದ ವಿಷಯದಲ್ಲಿ ನಿಮಗೆ ಮಾನಸಿಕ ಕಿರಿ ಕಿರಿ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಓದಿನ ಕಡೆ ಒತ್ತು ನೀಡದೆ ಅನ್ಯ ಜೀವನದ ಕಡೆ ಹೆಚ್ಚು ಆಲೋಚನೆ ಮಾಡುವರು. ಚಿಂತೆಯಿಂದ ನಿಮಗೆ ಯಾವುದೇ ಪ್ರಯೋಜನ ಸಿಗದು ಅದು ನಿಮ್ಮನ್ನು ಮೆಲ್ಲನೆ ಆರೋಗ್ಯದ ಸಮಸ್ಯೆಗಳಿಗೆ ದೂಡಲಿದೆ.
ಮಕರ: ವಿರಪೀತ ಸಾಲ ಮಾಡಿ ಸಾಲಗಾರರ ಕೈಗೆ ಸಿಕ್ಕಿ ಸಮಸ್ಯೆ ಆಗುವ ಸಾಧ್ಯತೆ ಇದೆ. ಈ ದಿನ ನಿಮಗೆ ಅಷ್ಟೇನೂ ಲಾಭದಾಯಕ ದಿನ ಅಲ್ಲ. ಸಣ್ಣ ಉದ್ಯಮ ಮಾಡುವವರಿಗೆ ಅಷ್ಟೇನೂ ಲಾಭ ಇಲ್ಲ. ನಿಮ್ಮ ಎಲ್ಲ ಸಮಸ್ಯೆ ದೂರ ಆಗಲು ಗುರು ಮಂತ್ರ ಪಾರಾಯಣ ಮಾಡಿ.

ಕುಂಭ: ನಿಮ್ಮನು ನಂಬಿದ ಅನೇಕ ಜನರು ನಿಮ್ಮ ಸಹಾಯ ಕೇಳಿ ಬರುವ ಸಂಭವ ಇರುತ್ತದೆ. ಸಂಜೆ ನಂತರ ಹಸುವಿಗೆ ಒಂದು ಹಿಡಿ ಅಕ್ಕಿ ಮತ್ತು ಬೆಲ್ಲವನ್ನು ನೀಡಿ ನಿಮಗೆ ಹೆಚ್ಚಿನ ಸುಖ ಶಾಂತಿ ನೆಮ್ಮದಿ ದೊರೆಯಲಿದೆ. ಈ ದಿನ ನಿಮಗೆ ಸಮಾಧಾನಕರ
ಮೀನ: ಆರೋಗ್ಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಸುಧಾರಣೆ ಆಗಲಿದೆ. ಆದರು ನೀವು ನಿಮ್ಮ ಜಾಗ್ರತೆಯಲ್ಲಿ ಇರುವುದು ಉತ್ತಮ. ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ ಸಿಗಲಿದೆ. ಜೀವನದಲ್ಲಿ ಹೆಚ್ಚಿನ ಭರವಸೆ ಮೂಡಲಿದೆ. ಗುರು ಮಂತ್ರ ಪಾರಾಯಣ ಮಾಡಿ ನಿಮಗೆ ರಾಶಿಗೆ ಹೆಚ್ಚಿನ ಶುಭ ಫಲ ಸಿಗಲಿದೆ.

LEAVE A REPLY

Please enter your comment!
Please enter your name here