ಈ ಗಿಡದ ಉಪಯೋಗ ಗೊತ್ತಾದ್ರೆ ನೀವೇ ಆಶ್ಚರ್ಯ ಪಡ್ತೀರ

0
1105

ಆರೋಗ್ಯಕ್ಕೆ ಅತ್ಯಂತ ಉಪಕಾರಿಯಾದ ಮಂಗರವಳ್ಳಿ ಗಿಡದ ಬಗ್ಗೆ ನೀವು ಯಾವತ್ತೂ ಕೇಳುವುದಿಲ್ಲ. ಇದಕ್ಕೆ ನೆರಲೆ ಕುಡಿ ಎಂದು ಕರೆಯುತ್ತಾರೆ. ಒಂದರ್ಥದಲ್ಲಿ ಹೇಳುವುದಾದರೆ ಇದು ಒಂದು ಬಳ್ಳಿ. ಅದರ ಪಕ್ಕದಲ್ಲಿ ಬೆಳೆಯುವ ಮರಗಳು, ಮತ್ತು ಗೋಡೆಗಳ ಸಹಾಯದಿಂದ ಹದಿನೈದರಿಂದ ಇಪ್ಪತ್ತು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಈ ಗಿಡವು ನೋಡಲು ಪೂರ್ತಿ ಹಸಿರಾಗಿದ್ದು ಇದರ ಕಾಂಡವು ತಿನ್ನಲು ಬಹಳ ರುಚಿಯಾಗಿರುತ್ತದೆ. ಈ ಕಾಂಡವು ನೋಡಲು ಚೌಕಾಕಾರವಾಗಿದ್ದು ಚಪ್ಪಟೆಯಾಗಿರುತ್ತದೆ. ಇದು ಶ್ರಾವಣ ಮಾಸದಲ್ಲಿ ಹೂವನ್ನು ಬಿಡುತ್ತದೆ. ಒಂದುವರೆ ಅಡಿ ಇಂದ ಎರಡು ಅಡಿಗೆ ಒಂದು ಗಿಣ್ಣು ಇದ್ದು ಆ ಜಾಗದಲ್ಲಿ ಎಲೆಗಳು ಬೆಳೆಯುತ್ತದೆ. ಇದರ ಇನ್ನೊಂದು ವೈಶಿಷ್ಟತೆ ಏನೆಂದರೆ ಇದರಲ್ಲಿ ಮೂರು ಮೂಲೆಯ ಮಂಗರವಲ್ಲಿ ಬಳ್ಳಿಯನ್ನು ಕಾಣಬಹುದು.

ಮಂಗರವಳ್ಳಿ ಗಿಡವು ಆರೋಗ್ಯಕ್ಕೆ ತುಂಬಾ ಉಪಕಾರಿಯಾಗಿದ್ದು ಅದರ ಉಪಯೋಗಗಳು ಈ ಕೆಳಕಂಡಂತಿವೆ. ಮೂಳೆ ಮುರಿತ ಉಂಟಾದಲ್ಲಿ ಮಂಗರವಳ್ಳಿ ಗಿಡದ ಕಾಂಡವನ್ನು ಚೆನ್ನಾಗಿದೆ ಅದನ್ನು ಪಟ್ಟು ಹಾಕುವುದರಿಂದ ಮೂಳೆ ಮುರಿತದ ನೋವು ಕಡಿಮೆಯಾಗುತ್ತದೆ. ಹಳ್ಳಿಯ ಕಡೆ ನಾಟಿ ವೈದ್ಯರು ಈ ಗಿಡವನ್ನೇ ಬಳಸುತ್ತಾರೆ. ಪೈಲ್ಸ್ ಅಥವಾ ಮೂಲವ್ಯಾಧಿ ಆಗಿದ್ದಲ್ಲಿ ಮಂಗರವಳ್ಳಿ ಗಿಡವನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಅದರಲ್ಲಿ ರಸ ತೆಗೆದು ಅದಕ್ಕೆ ಸ್ವಲ್ಪ ಜೇನುತುಪ್ಪ ಮಿಶ್ರಣ ಮಾಡಿ ಪ್ರತಿನಿತ್ಯ ಕುಡಿಯುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು ಮತ್ತು ಅದರ ರಸವನ್ನು ಮೂಲವ್ಯಾಧಿ ಅಥವಾ ಪೈಲ್ಸ್ ಇರುವ ಜಾಗದಲ್ಲಿ ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ.

ಬಿದ್ದು ಗಾಯಗಳಾಗಿದ್ದರೆ ಗಾಯವನ್ನು ಸ್ವಚ್ಛ ನೀರಿನಿಂದ ತೊಳೆದು ನಂತರ ಮಂಗರವಳ್ಳಿ ಗಿಡವನ್ನು ಚೆನ್ನಾಗಿ ಜಜ್ಜಿ ರಸತೆಗೆದು ಅದನ್ನು ಗಾಯದ ಮೇಲೆ ಲೇಪಿಸಿರಿ. ನಂತರ ಆ ಗಾಯವನ್ನು ಒಂದು ಬಟ್ಟೆಯಿಂದ ಕಟ್ಟಿ ಇದರಿಂದ ಆಗಿರುವ ಗಾಯ ಬೇಗ ವಾಸಿಯಾಗುತ್ತದೆ. ತುರಿಕೆ ಅಥವಾ ಚರ್ಮದ ರೋಗದಿಂದ ಬಳಲುತ್ತಿರುವವರು ಮಂಗರವಳ್ಳಿ ಗಿಡವನ್ನು ಚೆನ್ನಾಗಿ ಜಜ್ಜಿ ಅದರ ರಸವನ್ನು ಪ್ರತಿನಿತ್ಯ ಎರಡು ಚಮಚ ಕುಡಿಯುವುದರಿಂದ ನಿಮ್ಮ ಚರ್ಮದ ಸಮಸ್ಯೆ ದೂರವಾಗುವುದು ಮತ್ತು ಆ ರಸವನ್ನು ಚರ್ಮದ ಮೇಲೆ ಲೇಪಿಸುವುದರಿಂದ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ

ಶೀತ, ಕೆಮ್ಮು ಮತ್ತು ನೆಗಡಿ ಯಿಂದ ಬಳಲುತ್ತಿದ್ದರೆ ಮಂಗರವಳ್ಳಿ ಗಿಡದ ಕಾಂಡವನ್ನು ತೆಗೆದುಕೊಂಡು ಕಾಂಡದ ಸಿಪ್ಪೆಯನ್ನು ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ನಂತರ ಈ ಕಾಂಡದ ತುಂಡುಗಳ ಜೊತೆಗೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಮತ್ತು ಮೆಣಸಿನಕಾಯಿಯನ್ನು ಮಿಶ್ರಣ ಮಾಡಿ ಬಾಣಲಿಗೆ ಹಾಕಿ ಸಾಸಿವೆ ಎಣ್ಣೆಯಿಂದ ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಯಿತುರಿಯನ್ನು ಮಿಶ್ರಣ ಮಾಡಿಕೊಳ್ಳಿ. ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಚಟ್ನಿಪುಡಿ ಶೀತ, ಕೆಮ್ಮು ಮತ್ತು ನೆಗಡಿಗೆ ಉತ್ತಮ ಔಷಧ ಇದನ್ನು ಚಪಾತಿ,ರೊಟ್ಟಿ ಅಥವಾ ದೋಸೆ ಜೊತೆ ತಿನ್ನಬಹುದು.

LEAVE A REPLY

Please enter your comment!
Please enter your name here