ಶಕ್ತಿಶಾಲಿ ರಾಜರಾಜೇಶ್ವರಿ ತಾಯಿಗೆ ನಮಿಸುತ್ತಾ ಈ ದಿನದ ನಿಮ್ಮ ಭವಿಷ್ಯ

0
594

ಮೇಷ : ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆ ಬರಲಿದ್ದು ನಿಮ್ಮ ಜಾಗ್ರತೆಯಲ್ಲಿ ನೀವು ಇರುವುದು ತುಂಬಾ ಒಳ್ಳೇದು. ಈ ದಿನ ನಿಮ್ಮ ಎಲ್ಲ ರೀತಿಯ ಕೆಲಸಗಳು ಯಾವುದೇ ಸಮಸ್ಯೆ ಇಲ್ಲದೆ ನೆರವೇರುತ್ತದೆ. ತಾಯಿ ಚಾಮುಂಡಿ ತಾಯಿಯ ದರ್ಶನ ಪಡೆಯಿರಿ.
ವೃಷಭ: ಎಂದೋ ಮಾಡಿದ ತಪ್ಪುಗಲ್ಲಿಗೆ ಇಂದು ನಿಮಗೆ ಪಶ್ಚಾತಾಪ ಆಗುವ ಸಂಭವ ಇದೆ. ನಿಮ್ಮ ಹಳೆಯ ನೆನಪುಗಳು ನಿಮ್ಮನು ಹೆಚ್ಚು ಕಾಡಿ ನಿಮ್ಮ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಸುವಿಗೆ ಬೆಲ್ಲವನ್ನು ತಿನ್ನಿಸಿ ನಿಮ್ಮ ಎಲ್ಲ ಸಮಸ್ಯೆಗಳು ದೂರ ಆಗುತ್ತದೆ.

ಮಿಥುನ: ನಿಮ್ಮ ಸ್ನೇಹಿತರಿಂದಲೇ ನಿಮಗೆ ಹೆಚ್ಚಿನ ಮೋಸ ಆಗುವ ಸಂಭವ ಇದೆ. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರುವುದು ಲೇಸು. ತಂದೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳಿ ನಿಮಗೆ ಚಾಮುಂಡಿ ತಾಯಿ ಶುಭವನ್ನು ಮಾಡಲಿ.
ಕಟಕ: ಎಂದೂ ಮಾಡಿದ ಕೆಲಸಗಳಿಗೆ ನಿಮ್ಮ ಮೇಲೆ ಇಂದು ಆಪಾದನೆ ಬಂದು ಮಾತಿನ ಚಕಮಕಿ ಆಗುವ ಸಾಧ್ಯತೆ ಇರುತ್ತದೆ. ಈ ದಿನ ನಿಮಗೆ ಹೆಚ್ಚಿನ ಧನ ಲಾಭ ಆಗಲು ನೀವು ಹಸುವಿಗೆ ಒಂದು ಹಿಡಿ ಅಕ್ಕಿಯ ಜೊತೆಗೆ ಬೆಲ್ಲವನ್ನು ಮಿಶ್ರಣ ಮಾಡಿ ತಿನಿಸಿ ನಿಮಗೆ ಶುಭವಾಗಲಿದೆ.

ಸಿಂಹ: ಉದ್ಯೋಗದಲ್ಲಿ ಒತ್ತಡ ಹೆಚ್ಚಾಗುವ ಸಂಭವ ಇದೆ. ದಾಂಪತ್ಯದಲ್ಲಿ ಹೆಚ್ಚಿನ ಸುಖ ಶಾಂತಿ ನೆಮ್ಮದಿ ನಿಮಗೆ ದೊರೆಯುತ್ತದೆ, ವಿದ್ಯಾರ್ಥಿಗಳಿಗೆ ತಂದೆ ತಾಯಿಯಿಂದ ಒಂದಿಷ್ಟು ಒತ್ತಡ ಬರುವ ಸಾಧ್ಯತೆ ಇರುತ್ತದೆ. ಚಾಮುಂಡಿ ತಾಯಿಯ ದರ್ಶನ ನಿಮಗೆ ವಿಶೇಷ ಲಾಭ ನೀಡಲಿದೆ.
ಕನ್ಯಾ: ಆಸ್ತಿಯ ವಿಷಯದಲ್ಲಿ ಸಹೋದರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಹಿರಿಯರ ಮಾತುಗಳನ್ನು ತಪ್ಪದೇ ಪಾಲಿಸಿರಿ. ಈ ದಿನ ನಿಮಗೆ ಹೆಚ್ಚಿನ ಶುಭ ಫಲ ಬರಲು ಚಾಮುಂಡಿ ತಾಯಿಗೆ ನಮಿಸಿ ಸ್ತೋತ್ರ ಪಾರಾಯಣ ಮಾಡಿ.

ತುಲಾ: ಮೂರನೇ ವ್ಯಕ್ತಿಗಳ ಜಗಳ ಬಿಡಿಸಲು ಹೋಗಿ ನೀವು ಮತ್ತೊಂದು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇರುತ್ತದೆ. ನಿಮ್ಮ ಮನೆ ಹತ್ತಿರದಲ್ಲಿರುವ ದೇವಿ ದೇಗುಲಕ್ಕೆ ತೆರಳಿ ನಿಮ್ಮ ಕುಟುಂಬದ ಹೆಸರಲ್ಲಿ ಸಂಜೆ ಆರು ಗಂಟೆ ಯಿಂದ ಎಂಟು ಗಂಟೆಗೆ ಸಲ್ಲುವ ಲಗ್ನದಲ್ಲಿ ಅರ್ಚನೆ ಮಾಡಿಸಿರಿ ನಿಮಗೆ ಶುಭ ಆಗಲಿದೆ
ವೃಶ್ಚಿಕ: ಮುಖ್ಯವಾದ ವ್ಯಕ್ತಿಗಳು ನಿಮ್ಮ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡು ಹೆಚ್ಚಿನ ಜವಾಬ್ದಾರಿ ನೀಡುವರು. ತಾಯಿಯ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ಈ ದಿನ ನಿಮ್ಮ ರಾಶಿಗೆ ಹೆಚ್ಚಿನ ಫಲ ಸಿಗಲು ದೇವಿ ಸ್ತೋತ್ರ ಸಂಜೆ ಆರು ಗಂಟೆ ಒಳಗೆ ಪಾರಾಯಣ ಮಾಡಿರಿ.

ಧನಸ್ಸು: ಈ ದಿನ ನೀವು ಅಂದುಕೊಂಡ ಎಲ್ಲ ಕೆಲಸಗಳು ನೆರವೇರಲು ತಾಯಿ ಚಾಮುಂಡಿ ಆಶಿರ್ವಾದ ಪಡೆಯಿರಿ. ನೀವು ಇಂದು ಹೆಚ್ಚಿನ ಶಿಸ್ತಿನಿಂದ ಕೂಡಿದ್ದರೆ ಅನೇಕ ಲಾಭಗಳು ನಿಮಗೆ ದೊರೆಯಲಿದೆ. ಸಂಜೆ ಸಮಯದಲ್ಲಿ ಚಾಮುಂಡಿ ತಾಯಿಯ ಆಶಿರ್ವಾದ ಪಡೆಯುವುದು ಮರೆಯಬೇಡಿ.
ಮಕರ: ಆರೋಗ್ಯ ಸಮಸ್ಯೆ ಕಾಡಲಿದೆ ಹೆಚ್ಚಿನ ಜಾಗ್ರತೆ ಇಟ್ಟುಕೊಳ್ಳಿ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಚಾಮುಂಡಿ ದೇವಿ ದರ್ಶನ ಪಡೆದು ನಿಂಬೆ ಹಣ್ಣಿನಲ್ಲಿ ದೀಪ ಹಚ್ಚಿರಿ. ನಿಮ್ಮ ಆಸೆಯಂತೆ ನಿವೇಶನ ಖರೀದಿ ಮಾಡುವ ಅವಕಾಶ ನಿಮಗೆ ಸಿಗಲಿದೆ.

ಕುಂಭ: ಹೆಚ್ಚಿನ ನಂಬಿಕೆ ಇಟ್ಟುಕೊಂಡು ಅನ್ಯ ಜನರೊಂದಿಗೆ ಹಣಕಾಸಿನ ವಿಷಯದಲ್ಲಿ ತೊಂದ್ರೆ ಮಾಡಿಕೊಳ್ಳಬೇಡಿ. ಈ ದಿನ ನಿಮಗೆ ಹೆಚ್ಚಿನ ಲಾಭ ದೊರೆಯಲು ನಿಮ್ಮ ಮನೆ ಹತ್ತಿರ ಇರುವ ಚಾಮುಂಡಿ ದೇವಿಯ ದರ್ಶನ ಪಡೆದು ನಿಂಬೆ ಹಣ್ಣಿನ ದೀಪ ಹಚ್ಚಿರಿ. ನಿಮ್ಮ ಆರೋಗ್ಯದಲ್ಲಿ ಉತ್ತಮ ಸ್ಥಿರತೆ ಉಂಟಾಗಲಿದೆ.
ಮೀನ: ಹೆಚ್ಚಿನ ಒತ್ತಡ ನಿಮ್ಮನು ಕಾಡಲಿದೆ. ನಿಮ್ಮ ಊರಿಗೆ ಭೇಟಿ ನೀಡುವ ಅವಕಶ ನಿಮಗೆ ದೊರೆಯಲಿದೆ. ಕುಲ ದೇವರ ಪ್ರಾರ್ಥನೆ ಈ ದಿನ ಹೆಚ್ಚು ಮಾಡಿರಿ. ಸಾಲಗಾರರಿಗೆ ಹೆಚ್ಚಿನ ಒತ್ತಡ ಆಗಲಿದೆ. ನಿಮ್ಮ ಗ್ರಹಗತಿಗಳು ನಿಮ್ಮ ಕಡೆ ಇರುವುದರಿಂದ ನಿಮಗೆ ಹೆಚ್ಚಿನ ಸಮಸ್ಯೆ ಆಗದು.

LEAVE A REPLY

Please enter your comment!
Please enter your name here