ನಮ್ಮ ಎಲ್ಲ ಕಷ್ಟಗಳನ್ನು ದೂರ ಮಾಡುವ ಚೆಲುವನಾರಾಯಣ ಸ್ವಾಮಿ

0
997

ಮೇಲುಕೋಟೆ ಚೆಲುವನಾರಾಯಣ ಅಂದ್ರೆ ನಮಗೆ ಮೊದಲು ನೆನಪು ಆಗೋದು ಅಲ್ಲಿನ ಸುಂದರ ಪರಿಸರ ಮತ್ತು ಅತೀ ವಿಜೃಂಭಣೆಯಿಂದ ನಡೆಯುವ ವೈರಮುಡಿ ಉತ್ಸವ. ಇದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಹಲವಾರು ರಾಜ್ಯಗಳಿಂದ ಆಗಮಿಸುತ್ತಾರೆ. ಅಷ್ಟಲದೆ ಇಲ್ಲಿರುವ ಚೆಲುವನಾರಾಯಣ ಸ್ವಾಮಿ ಸಾಕಷ್ಟು ಪವಾಡಗಳನ್ನು ಮಾಡಿದ್ದಾರೆ ಇಂದಿನಿಂದ ಇಂದಿನ ವರೆಗೂ ಈತನಿಂದ ಲಕ್ಷಾಂತರ ಜನಕ್ಕೆ ಒಳಿತಾಗಿದೆ.

ಮೈಸೂರಿನಿಂದ ಈ ದೇಗುಲ ಕೆಲವೇ ಕಿಲೋಮೀಟರ್ ನಷ್ಟು ದೂರ ಇದೆ. ಪಾಂಡವಪುರ ಜಿಲ್ಲೆ ಯಿಂದ ಕೇವಲ ೩೦ ಕಿಲೋಮೀಟರ್ ಸಾಗಿದರೆ ಸಾಕು ವೈಷ್ಣ ಮತದ ಪುಣ್ಯ ಕ್ಷೇತ್ರ ಇದು. ಭಾರತ ದೇಶದಲ್ಲಿ ೧೦೮ ವೈಷ್ಣವ ಕ್ಷೇತ್ರಗಳು ಇದೆ ಅದ್ರಲ್ಲಿ ಪ್ರಮುಖವಾದದ್ದು ಇದು ಸಹ ಒಂದು. ಕರ್ನಾಟಕದಲ್ಲಿ ಇರುವುದು ಇದು ಒಂದೇ ಕ್ಷೇತ್ರ ಎಂದರೆ ತಪ್ಪಾಗಲಾರದು. ಇನ್ನು ಉಳಿದ ಬೇರೆ ಕ್ಷೇತ್ರಗಳು ಅಂದ್ರೆ ಅವುಗಳು ಕಂಚಿ ಮತ್ತು ಶ್ರೀ ರಂಗ ಕ್ಷೇತ್ರ.

ಈ ಹಿಂದೆ ಮೇಲುಕೋಟೆಯನ್ನು ಯದುಗಿರಿ ಅಥವಾ ವೇದಾದ್ರಿ ಎಂಬ ಹೆಸರಿನಿಂದ ಕರೆಯುತ್ತ ಇದ್ದರು. ವೈಷ್ಣವ ಧರ್ಮ ಸ್ಥಾಪನೆ ಮಾಡಿದ ಶ್ರೀ ರಾಮಾನುಜ ಚಾರ್ಯ ಅವರು ವೈಷ್ಣ ಸಿದ್ದಾಂತ ಪ್ರಚಾರ ಮಾಡುತ್ತಾ ಮೇಲುಕೋಟೆಯಲ್ಲೇ ೨೦ ವರ್ಷ ಉಳಿದಿದ್ದರು ಎಂದು ಇತಿಹಾಸ ಹೇಳುತ್ತದೆ. ಶ್ರೀ ರಾಮಾನುಜ ಚಾರ್ಯರು ಮೇಲುಕೋಟೆಯಲ್ಲಿ ಇದ್ದಾಗ ಒಮ್ಮೆ ಅವರ ಕನಸಿನಲ್ಲಿ ನಿಗೂಢ ಶಕ್ತಿ ಯೊಂದು ಬಂದು ಭೂಮಿಯಲ್ಲಿ ವಿಗ್ರಹ ಅಡಗಿರುವುದು ಸೂಚನೆ ನೀಡಿತು. ಅದರ ಸೂಚನೆಯಂತೆ ಭೂಮಿಯಲ್ಲಿದ್ದ ವಿಗ್ರಹವನ್ನು ಶೋಧಿಸಿ ತೆಗೆದು ನಂತರ ದೇವರ ಪ್ರಾಣ ಪ್ರತಿಷ್ಟಾಪನೆ ಮಾಡಲಾಯಿತು. ನಂತರ ದೇವರ ಪವಾಡಗಳು ಹೆಚ್ಚಿನ ರೀತಿಯಲ್ಲಿ ನಡೆದವು. ಅಲ್ಲಿನ ಸುತ್ತ ಮುತ್ತ ಇರೋ ಸಾಕಷ್ಟು ಜನರು ದೇವರ ದರ್ಶನ ಪಡೆದುಕೊಂಡು ತಮ್ಮ ಹಲವು ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.

ಈ ದೇಗುಲವು ಹೊಯ್ಸಳರ ಕಾಲದಲ್ಲಿ ನಿರ್ಮಾಣ ಆಗಿದೆ ಎಂದು ಪುರಾಣದಲ್ಲಿ ಉಲ್ಲೇಖ ಇದೆ. ಈ ದೇಗುಲವನ್ನು ಮೈಸೂರು ಒಡೆಯರ್ ಕಾಲದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಲಾಗಿದೆ ಮತ್ತು ದೇಗುಲದ ಸ್ಥಳವನ್ನು ಮತ್ತಷ್ಟು ವಿಸ್ತಾರ ಮಾಡಿ ಕಟ್ಟಲಾಗಿದೆ ಎಂದು ಇತಿಹಾಸದಲ್ಲಿ ನಾವು ಇಂದಿಗೂ ಸಹ ತಿಳಿಯಬಹುದು. ಗರ್ಭಗುಡಿಯಲ್ಲಿ ಶಂಖು ಚಕ್ರ ಗದಾ ಅಭಯ ಹಸ್ತದೊಂದಿಗೆ ನಿಂತಿರುವ ಶ್ರೀಮಾನ್ ಶಕ್ತಿಶಾಲಿ ಚೆಲುವನಾರಾಯಣ ಸ್ವಾಮಿ ನಾವು ಕಣ್ಣಲ್ಲಿ ನೋಡುವುದು ಒಂದು ಪುಣ್ಯ ಎಂದರೆ ತಪ್ಪಾಗಲಾರದು. ನಮ್ಮ ವೆಬ್ಸೈಟ್ ನಲ್ಲಿ ಇರುವ ಎಲ್ಲ ಬರವಣಿಗೆಗಳಿಗೆ ಮತ್ತು ಚಿತ್ರಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ಚಿತ್ರಗಳು ಅಥವ ಬರವಣಿಗೆ ನಕಲು ಮಾಡಿದ್ರೆ ಅಂತಹ ಜನರ ವಿರುದ್ದ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ಚೆಲುವನಾರಾಯಣ ಸ್ವಾಮಿಯ ಈ ಮಾಹಿತಿ ತಪ್ಪದೇ ಶೇರ್ ಮಾಡಿ ತಪ್ಪದೇ ದೇಗುಲಕ್ಕೆ ಒಮ್ಮೆ ಆದರು ಭೇಟಿ ನೀಡಿ.

LEAVE A REPLY

Please enter your comment!
Please enter your name here