ಬುದ್ದ ಹೇಳಿದ ಜೀವನದ ಸತ್ಯಗಳು ತಿಳಿಯಿರಿ

0
996

ಇಂದು ಇಡೀ ಜಗತ್ತಿಗೆ ಬುದ್ದ ಎಂದರೆ ಯಾರು ಎಂದು ತಿಳಿದಿದೆ ಅಷ್ಟರ ಮಟ್ಟಿಗೆ ಆತ ಜಗತ್ತಿಗೆ ಸಂದೇಶ ನೀಡಿ ಹೋಗಿದ್ದಾರೆ. ಬುದ್ದ ಭಾರತದಲ್ಲಿ ಜನಿಸಿದರು ಆತ ಭಾರತದ ವ್ಯಕ್ತಿ ಆದರು ನಮ್ಮ ಭಾರತದಲ್ಲಿ ಅಷ್ಟಾಗಿ ಬುದ್ದನ ಪೂಜೆ ಮಾಡುವುದಿಲ್ಲ ಅದರಲ್ಲೂ ಹೆಚ್ಚಾಗಿ ಬುದ್ದ ಹೇಳಿದ ಯಾವ ಮಾತುಗಳು ನಾವು ಪಾಲನೆ ಮಾಡುತ್ತಿಲ್ಲ ಆದರೆ ಚೀನಾದಲ್ಲಿ ಸರಿ ಸುಮಾರು ನೂರು ಕೋಟಿಗೂ ಹೆಚ್ಚು ಜನ ಬುದ್ದನ ಪೂಜೆ ಮಾಡುತ್ತಾರೆ ಆತನ ತತ್ವ ಮತ್ತು ಸಿದ್ದಾಂತಗಳನ್ನು ಅನುಸರಿಸುತ್ತಾರೆ ಬುದ್ದ ಹೇಳಿದ ಕೆಲವು ಜೀವಂತ ಪ್ರಸಂಗ ನಿಮಗೆ ನಾವು ತಿಳಿಸಿದ್ದೇವೆ.

ಬುದ್ಧ ಭಿಕ್ಷಾಟನೆ ಮಾಡುತ್ತಾ ಹೋಗುವಾಗ ಒಂದು ಮನೆಯ ಬಳಿ ಹೋಗಿ ನಿಲ್ಲುತ್ತಾನೆ ಆಗ ಮನೆಯ ಒಳಗಿಂದ ಒಬ್ಬ ಮಹಿಳೆಯು ಹೊರ ಬರುತ್ತಳೇ ಅವಳು ಮೊದಲೇ ತುಂಬಾ ಕೋಪ ಕೊಂಡಿದ್ದಳು ಅವಳು ಬಂದು ಬುದ್ದನ್ನು ನೋಡಿ ನೋಡದಕ್ಕೆ ಗುಳಿ ರೀತಿ ಇದ್ದಿಯ ದುಡಿದು ಬದುಕುವುದಕ್ಕೆ ಏನು ಕಸ್ಟ ನಿನಗೆ ನೀನು ಹಾಳಾಗುವುದಲ್ಲದೆ ನಿನ್ನ ಶಿಷ್ಯರನ್ನು ಹಾಳುಮಾಡುತ್ತಿಯಲ್ಲ ಎಂದು ತುಂಬಾ ಬೈಯುತ್ತಾಳೆ.

ಅವಳು ಎಷ್ಟು ಅಪಮಾನ ಅವಮಾನದ ಮಾತುಗಳನ್ನು ಆಡಿದರು ಬುದ್ಧ ಏನು ಮಾತನಾಡದೆ ಕಿರು ನಗೆಯನ್ನು ಸೂಚಿಸುತ್ತಿದ್ದ ಆದರೆ ಅವರ ಜೊತೆ ಇದ್ದ ಶಿಷ್ಯರು ಮಾತ್ರ ತುಂಬಾ ಕೋಪಕೊಂಡಿದ್ದರು ಆಗ ಬುದ್ಧನು ಶಿಷ್ಯರನ್ನು ನೋಡಿ ಆಕೆಯನ್ನು ಉದ್ದೇಶಿಸಿ ಪ್ರಸನ್ನ ವದನದೊಂದಿಗೆ ಮಾತಾ ಸಣ್ಣ ಸಂದೇಹವನ್ನು ನಿವಾರಿಸುತ್ತಿರಾ ಎಂದು ಕೇಳಿದ. ಅದಕ್ಕೆ ಅವಳು ಕೇಳಿಕೊಳ್ಳುವುದು ನಿನಗೆ ಅಭ್ಯಾಸ ಅಲ್ಲವೇ ಹೇಳು ನಿನ್ನ ಸಂದೇಹವನ್ನು ತೀರಿಸುತ್ತೇನೆ ಎಂದನು ಆಗ ಬುದ್ಧನು ತನ್ನ ಕೈಯಲ್ಲಿ ಇದ್ದ ಭಿಕ್ಷಾ ಪಾತ್ರೆಯನ್ನು ತೋರಿಸಿ ತಾಯಿ ನಾನು ನಿನಗೆ ಒಂದು ವಸ್ತುವನ್ನು ಕೊಟ್ಟಾಗ ಅದನ್ನು ತಿರಸ್ಕಾರ ಮಾಡಿದರೆ ಅದು ಯಾರಿಗೆ ಸೇರುತ್ತದೆ ಎಂದು ಕೇಳಿದ ಅದಕ್ಕೆ ಅವಳು ನಾನು ಬೇಡ ಎಂದು ತಿರಸ್ಕರ ಮಾಡಿದ ವಸ್ತು ನಿನಗೆ ಸೇರುತ್ತದೆ ಎಂದಳು.

ಆಗ ಬುದ್ಧನು ಹೌದು ನಿಜ ತಾಯಿ ಹಾಗೆಯೇ ನಾನು ಸಹ ನಿನ್ನ ಬೈಗುಲಗಳನ್ನು ಸ್ವೀಕಾರ ಮಾಡುತ್ತಿಲ್ಲ ಎಂದು ಹೇಳಿದ ತಕ್ಷಣ ಅವಳು ಮಾಡಿದ ತಪ್ಪು ಅವಳಿಗೆ ಅರಿವು ಆಗುತ್ತದೆ . ಈ ಘಟನೆಯ ಮೂಲಕ ಬುದ್ಧ ಅತಿದೊಡ್ಡ ಧರ್ಮಸೂಕ್ಮವನ್ನು ಭೋದಿಸಿದ ಅದು ಏನೆಂದರೆ ನಮ್ಮನ್ನು ಅವಹೇಳನ ಮಾಡುವವರು ಅಡಿಕೊಳ್ಳುವವರು. ಅವಮಾನ ಮಾಡುವವರು ನಮ್ಮ ಸುತ್ತಲೂ ತುಂಬಾ ಮಂದಿ ಇರುತ್ತಾರೆ ಇದರಲ್ಲಿ ಕೆಲವರು ಬಹಿರಂಗವಾಗಿ ಟೀಕೆ ಮಾಡಿದರೆ ಇನ್ನು ಕೆಲವರು ಹಿಂದೆ ಮಾತನಾಡುತ್ತಾರೆ ಇವುಗಳನ್ನು ನಾವು ಸ್ವೀಕರಿಸಲಿಲ್ಲ ಎಂದರೆ ಅವುಗಳು ಯಾವುವು ನಮಗೆ ಅಡ್ಡಿ ಬರುವುದಿಲ್ಲ ಹಾಗಾಗಿ ಯಾವುದೇ ಅಪಮಾನ ಅವಮಾನಗಳನ್ನು ಸ್ವೀಕಾರ ಮಾಡಬೇಡಿ. ಎಂದು ಬುದ್ದನ್ನು ಹೇಳಿದ್ದಾನೆ. ನಮ್ಮ ವೆಬ್ಸೈಟ್ ನಲ್ಲಿರುವ ಎಲ್ಲ ಮಾಹಿತಿ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here