ಶಕ್ತಿಶಾಲಿ ಕಬ್ಬಾಳಮ್ಮ ತಾಯಿಗೆ ನಮಸ್ಕಾರ ಮಾಡುತ್ತಾ ಈ ದಿನ ನಿಮ್ಮ ರಾಶಿ ಭವಿಷ್ಯ

0
770

ಮೇಷ: ಈ ದಿನ ನಿಮಗೆ ಆದಾಯ ಹೆಚ್ಚಾಗಲಿದೆ ನಿಮ್ಮ ಇಂದಿನ ಎಲ್ಲ ಕಾರ್ಯಗಳು ಸುಸೂತ್ರವಾಗಿ ನಡೆಯಲು ನಿಮ್ಮ ಕುಲ ದೇವರ ಪ್ರಾರ್ಥನೆ ಜೊತೆಗೆ ನಿಮ್ಮ ಮನೆಯಲ್ಲಿರುವ ಹಿರಿಯರ ಮಾರ್ಗದರ್ಶನ ಮತ್ತು ಅವರ ಆಶಿರ್ವಾದ ನಿಮಗೆ ಅವಶ್ಯಕತೆ ಇದೆ.
ವೃಷಭ: ಈ ದಿನ ಆರೋಗ್ಯದ ವಿಷಯದಲ್ಲಿ ಮತ್ತು ಪ್ರಯಾಣದ ವಿಷಯದಲ್ಲೂ ಹೆಚ್ಚಿನ ಜಾಗ್ರತೆ ಇರಲಿ. ನಿಮ್ಮ ತಂದೆ ತಾಯಿಯ ಆಶಿರ್ವಾದ ನಿಮ್ಮ ಮೇಲೆ ಸ್ವಲ್ಪ ಹೆಚ್ಚು ಇರುವುದರಿಂದ ಬರುವ ಎಷ್ಟೋ ಆಪತ್ತುಗಳಿಗೆ ನಿಮ್ಮ ಶುಭ ಫಲವೇ ನಿಮಗೆ ದಾರಿ ನೀಡಲಿದೆ.

ಮಿಥುನ: ದೇವರ ಕಾರ್ಯಗಳಲ್ಲಿ ಹೆಚ್ಚಿನ ಸಮಯ ನೀಡುವ ಅವಕಾಶ ನಿಮಗೆ ದೊರೆಯಲಿದೆ. ಹಿರಿಯರ ಆಶಿರ್ವಾದ ಪಡೆಯಿರಿ. ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ನಿನಗೆ ಸಿಗಲಿದೆ. ಸ್ನೇಹಿತರ ಆಗಮನ ಹೆಚ್ಚಿನ ಸಂತೋಷ ನೀಡಲಿದೆ.
ಕರ್ಕಾಟಕ: ದಾನ ಧರ್ಮದ ಕಾರ್ಯದಲ್ಲಿ ನಿಮ್ಮನು ನೀವು ಹೆಚ್ಚಿಗೆ ತೊಡಗಿಸಿಕೊಳ್ಳಿ. ಈ ಶುಭ ದಿನ ಸಾಧ್ಯ ಆದರೆ ನಿಮ್ಮ ಕುಲ ದೇವರ ಪ್ರಾರ್ಥನೆ ಹೆಚ್ಚು ಮಾಡಿ ಒಮ್ಮೆ ದರ್ಶನ ಮಾಡೀರಿ ನಿಮಗೆ ಶುಭ ಫಲ ದೊರೆಯಲಿದೆ.

ಸಿಂಹ: ದೂರದ ಊರಿನಿಂದ ನಿಮ್ಮ ಮನೆಗೆ ನೆಂಟರು ಬರುವ ನಿರೀಕ್ಷೆ ಇದೆ. ಈ ದಿನ ಹೆಚ್ಚಿನ ಸುಖ ಶಾಂತಿ ನೆಮ್ಮದಿ ನಿಮಗೆ ದೊರೆಯಲಿದ್ದು ಸಂಜೆ ಆರು ಗಂಟೆ ನಂತರದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ ನಿಮ್ಮ ಮನೆಗೂ ನಿಮಗೂ ಶುಭವಾಗಲಿದೆ.
ಕನ್ಯಾ: ಈ ದಿನ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ ಕಾಡಲಿದೆ ಸಣ್ಣ ಅಲರ್ಜಿ ನಿಮ್ಮನು ಹೆಚ್ಚಿನ ರೀತಿಯಲ್ಲಿ ಕಾಡಲಿದೆ. ನಿಮಗೆ ಬಾಕಿ ಬರಬೇಕಾದ ಸಾಲದ ಮೊತ್ತ ಯಾವುದೇ ಸಮಸ್ಯೆ ಇಲ್ಲದೆ ಬರಲಿದೆ. ಈ ದಿನ ಕುಲ ದೇವರ ಪ್ರಾರ್ಥನೆ ಮತ್ತು ದರ್ಶನ ಪಡೆಯಿರಿ

ತುಲಾ: ಯಾರೋ ಮಾಡಿದ ತಪ್ಪುಗಳಿಗೆ ಈ ದಿನ ನಿಮ್ಮ ಸ್ವಾಭಿಮಾನಕ್ಕೆ ದಕ್ಕೆ ಬರಲಿದೆ. ನಿಮಗೆ ನೀಡಿರುವ ಎಲ್ಲ ರೀತಿಯ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿರಿ. ಸಂಜೆ ಸಮಯದಲ್ಲಿ ಹಸುವಿಗೆ ಕಡಲೆ ಆಹಾರ ತಿನ್ನಿಸಿ ನಿಮಗೆ ಶುಭವಾಗಲಿದೆ.
ವೃಶ್ಚಿಕ: ಆಸ್ತಿಯ ವಿಚಾರಗಳಿಗೆ ಬಂಧುಗಳು ಅಥವ ಸಹೋದರರ ನಡುವೆ ಭಿನ್ನಾಭಿಪ್ರಾಯ ಉಂಟಾಗಲಿದೆ. ನಿಮ್ಮ ಹಿರಿಯ ಮಾರ್ಗ ದರ್ಶನ ನಿಮಗೆ ಅವಶ್ಯಕತೆ ಹೆಚ್ಚಿನ ರೀತಿಯಲ್ಲಿದೆ. ಸಂಜೆ ನಾಲ್ಕು ಗಂಟೆ ಯಿಂದ ಆರು ಗಂಟೆಗೆ ಸಲ್ಲುವ ಶುಭ ಸಮಯದಲ್ಲಿ ಗಣೇಶನ ದರ್ಶನ ಪಡೆಯಿರಿ.

ಧನಸ್ಸು: ಈ ದಿನ ನಿಮ್ಮ ಎಲ್ಲ ರೀತಿಯ ಕೆಲಸಗಳಿಗೆ ಸಣ್ಣ ಪುಟ್ಟ ತೊಡಕು ಬರುವುದು ಸಹಜ ಈ ದಿನ ಆದಿತ್ಯವಾರ ಆಗಿರುವುದರಿಂದ ನಿಮಗೆ ಈ ಸಮಸ್ಯೆ ಅಷ್ಟೇನೂ ಕಾಡದು. ಸಾಧ್ಯ ಆದರೆ ಕುಲ ದೇವರ ದರ್ಶನ ಪಡೆಯಿರಿ ಶುಭವಾಗಲಿದೆ.
ಮಕರ: ಈ ದಿನ ಯಾರೋ ಹೇಳಿ ಕೊಟ್ಟ ಮಾತುಗಳನ್ನು ನಂಬಿ ಮೋಸ ಹೋಗಬೇಡಿ. ಸಹೋದರರ ನಡುವೆ ಉತ್ತಮ ಬಂದವ್ಯ ನಿಮಗೆ ದೊರೆಯಲಿದೆ. ನಿಮ್ಮ ಮನೆಯಲ್ಲಿ ಇರುವ ಅನೇಕ ಜನರು ನಿಮಗೆ ಹಲವು ಉಪದೇಶ ನೀಡುವ ಸಾಧ್ಯತೆ ಇರುತ್ತದೆ.

ಕುಂಭ: ಈ ದಿನ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ ಕಾಡಲಿದೆ. ಎಣ್ಣೆ ಉತ್ಪನ್ನ ತಿನ್ನುವ ಮುನ್ನ ಸ್ವಲ್ಪ ಎಚ್ಚರಿಕೆ ಇರಲಿ. ಚರ್ಮಕ್ಕೆ ಸಂಭಂದ ಪಟ್ಟ ಹಲವು ರೀತಿಯ ಬಾದೆ ನಿಮ್ಮನು ಕಾಡಲಿದೆ. ಈ ದಿನ ಸುಬ್ರಮಣ್ಯ ಸ್ವಾಮಿಯ ದರ್ಶನ ನಿಮಗೆ ಅನೇಕ ರೀತಿಯ ಲಾಭ ನೀಡಲಿದೆ.
ಮೀನ: ಜೀವನದಲ್ಲಿ ನೀವು ಎಷ್ಟೋ ವಿಷಯಗಳು ಎಲ್ಲವು ಮುಗಿತು ಹೋಯಿತು ಎನ್ನುವಷ್ಟರಲ್ಲಿ ನಿಮಗೆ ಹೊಸ ಚೈತನ್ಯ ಮೂಡಲಿದೆ. ನಿಮ್ಮ ಸಂಗಾತಿಯು ನಿಮ್ಮ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡು ನಿಮ್ಮ ಜೀವನದ ಪಯಣದಲ್ಲಿ ಸಾಗುವರು. ಈ ದಿನ ನಿಮಗೆ ಶುಭವಾಗಲು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

LEAVE A REPLY

Please enter your comment!
Please enter your name here