ಪ್ರಪಂಚದ ಏಕೈಕ ಬ್ರಹ್ಮನ ದೇಗುಲ ಮತ್ತು ಬೇರೆ ಎಲ್ಲೂ ಬ್ರಹ್ಮ ದೇವರ ಪೂಜೆ ಮಾಡಲ್ಲ

0
1164

ಬ್ರಹ್ಮನ ದೇವಸ್ಥಾನಗಳು ಇರದಿರಲು ಕಾರಣವೇನು

ನಮ್ಮ ಭಾರತ ದೇಶವನ್ನು ದೇವಾಲಯಗಳ ನಾಡು ಎಂದು ಕರೆಯುತ್ತಾರೆ ಏಕೆಂದರೆ ನಮ್ಮ ನಾಡಿನಲ್ಲಿ ಇರುವ ಎಲ್ಲ ದೇವರುಗಳಿಗೂ ಸಹ ದೇವಾಲಯಗಳನ್ನು ಕಟ್ಟಿಸಿ ಪೂಜೆ ಸಲ್ಲಿಸುತ್ತರೆ ಅದರಲ್ಲೂ ಜಗತ್ತಿನ ಸೃಷ್ಟಿ ಮಾಡಿದ ಬ್ರಹ್ಮ ವಿಷ್ಣು ಮಹೇಶ್ವರರಿಗೆ ವಿಶೇಷ ಸ್ಥಾನವೇ ನಮ್ಮಲ್ಲಿ ಇದೆ. ಆದರೆ ಬ್ರಹ್ಮನಿಗೆ ಮಾತ್ರ ಯಾವುದೇ ದೇವಲಯವಿಲ್ಲ ಜೊತೆಗೆ ಯಾರು ಸಹ ಪೂಜೆ ಮಾಡುವುದಿಲ್ಲ ಇದಕ್ಕೆ ಕಾರಣ ಏನು ಯಾಕೆ ಬ್ರಹ್ಮನನ್ನು ಪೂಜಿಸುವುದಿಲ್ಲ ಎಂದು ತಿಳಿಯೋಣ ಬನ್ನಿ.

ಪುರಾಣದ ಪ್ರಕಾರ ಇದು ಭೃಗು ಮಹರ್ಷಿಗಳ ಶಾಪ ಎಂದು ಹೇಳುತ್ತದೆ. ಆ ಶಾಪ ಏನು ಎಂದರೆ ಒಂದು ಸಲ ಲೋಕಕಲ್ಯಾಣಕ್ಕಾಗಿ ಯಜ್ಞವನ್ನು ಆಚರಿಸಲು ಮಹರ್ಷಿಗಳು ನಿರ್ಣಯ ಮಾಡಿದರು ಆಗ ತ್ರಿಮೂರ್ತಿಗಳು ಯಾರು ಹೆಚ್ಚು ಎಂದು ತಿಳಿದುಕೊಳ್ಳಲು ಭೃಗು ಮಹರ್ಷಿಯನ್ನು ಕಳುಹಿಸಿದರು ನಂತರ ಭೃಗು ಮಹರ್ಷಿಗಳು ಮೊದಲು ಸತ್ಯ ಲೋಕಕ್ಕೆ ಹೋಗುತ್ತಾನೆ ಆ ಸಮಯದಲ್ಲಿ ಬ್ರಹ್ಮ ದೇವ ವೇದಗಾನವನ್ನು ಮಾಡುತ್ತಿದ್ದರೆ ಅವರ ಸ್ವರಕ್ಕೆ ಸರಸ್ವತಿ ದೇವಿ ವೀಣೆಯನ್ನು ನುಡಿಸುವುದರಲ್ಲಿ ತಲ್ಲೀನಳಾಗಿದ್ದಾಳು. ಭೃಗು ಮಹರ್ಷಿಗಳು ಅಲ್ಲಿಗೆ ಬಂದರು ಸಹ ಅದನ್ನು ಗಮನಿಸದೆ ಅವರ ಸಂಗೀತಕ್ಕೆ ಎಲ್ಲರೂ ತಲ್ಲೀನನಾಗಿದ್ದ ನೋಡಿ ಭೃಗು ಮಹರ್ಷಿಗಳು ಕಲಿಯುಗದಲ್ಲಿ ಭೂಲೋಕದಲ್ಲಿ ನಿನಗೆ ಯಾವುದೇ ರೀತಿಯ ಪೂಜೆಗಳು ಆಗದೆ ಇರಲಿ ಎಂದು ಶಾಪವನ್ನು ಕೊಡುತ್ತಾರೆ. ಹಾಗಾಗಿ ಬ್ರಹ್ಮದೇವನಿಗೆ ಯಾವುದೇ ರೀತಿಯ ಪೂಜೆ ನೆಡೆಯುವುದಿಲ್ಲ.

ಬ್ರಹ್ಮನಿಗೆ ರಾಜಸ್ತಾನದ ಅಜ್ಮಿರ್ ಪಟ್ಟಣದ ವಾಯುವ್ಯ ಭಾಗದಲ್ಲಿ ಸುಮಾರು 10 ಕಿಲೋಮೀಟರ್ ದೂರಕ್ಕೆ ಹೋದರೆ ಅಲ್ಲಿ ಸಿಗುವುದೇ ಪುಷ್ಕರ್ ಇಲ್ಲಿ ಇರುವ ಗಾಯತ್ರಿ ಗಿರಿ ಯಲ್ಲಿ ಒಂದು ಶಕ್ತಿಪೀಠವಿದೆ ಇದನ್ನೇ ಬ್ರಹ್ಮ ಪುಷ್ಕರಿಣಿ ಎಂದು ಕರೆಯುತ್ತಾರೆ. ಬ್ರಹ್ಮನಿಗೆ ಇರುವ ಏಕೈಕ ದೇವಾಲಯ ಎಂದರೆ ಇದು ಒಂದೇ ಇದಕ್ಕೆ ತೀರ್ಥರಾಜ್ ಎಂಬ ಹೆಸರು ಕೂಡ ಇದೆ. ಇಲ್ಲಿರುವ ಬ್ರಹ್ಮ ದೇವರಿಗೆ ವಿಶೇಷ ಶಕ್ತಿ ಇದೆ ಇಡೀ ಜಗತ್ತಿನಲ್ಲಿ ಇರುವುದು ಇದು ಒಂದೇ ದೇಗುಲ ಆದ್ದರಿಂದ ಸಾಕಷ್ಟು ಶಕ್ತಿಯನ್ನು ಹೊಂದಿದ್ದು ಪ್ರತಿ ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ.

ಪದ್ಮ ಪುರಾಣದಲ್ಲಿ ವಜ್ರನಾಭ ಎಂಬ ಹೆಸರಿನ ರಾಕ್ಷಸ ಪ್ರಜೆಗಳಿಗೆ ಹಿಂಸೆ ಕೊಡುತ್ತಿದ್ದನು ಇದನ್ನು ನೋಡಲು ಆಗದೆ ಇದನ್ನು ನೋಡಲು ಆಗದೆ ತನ್ನ ಕೈಯಲ್ಲಿ ಇರುವ ತಾವರೆ ಹೂವನ್ನು ಆಯುದವನ್ನಾಗಿ ಮಾಡಿಕೊಂಡು ಆ ರಾಕ್ಷಸನನ್ನು ಬ್ರಹ್ಮದೇವ ಸಂಹರಿಸಿದನು.ಆಗ ಹೂವಿನ ದಳಗಳು ಮೂರು ಕಡೆ ಬಿದ್ದು ಮೂರು ಸರೋವರ ಆದವು ಅವುಗಳನ್ನು ಜ್ಯೇಷ್ಠ ಪುಷ್ಕರ್. ಮದ್ಯ ಪುಷ್ಕರ್. ಕನಿಷ್ಠ ಪುಷ್ಕರ್ ಎಂದು ಕರೆಯುತ್ತಾರೆ. ಆದರೆ ಈ ಸ್ಥಳದಲ್ಲಿ ಇರುವ ಪ್ರಜೆಗಳು ಹೇಳುವ ಪ್ರಕಾರ ಸರಸ್ವತಿ ದೇವಿಯ ಸಮ್ಮುಖದಲ್ಲಿ ಶಿವ. ವಿಷ್ಣು. ಇಬ್ಬರು ಸೇರಿ ಬ್ರಹ್ಮನಿಗೆ ಗಾಯತ್ರಿ ಎಂಬ ಕನ್ಯೆಯನ್ನು ಕೊಟ್ಟು ವಿವಾಹ ಮಾಡಿದರು ಇದನ್ನು ಸಹಿಸಲು ಆಗದೆ ಸರಸ್ವತಿ ಬ್ರಹ್ಮನನ್ನು ಮುದುಕನಾಗುವಮಾತೆ ಎಂದು ಶಪಿಸುತ್ತಾಳೆ. ಹಾಗಾಗಿ ಬ್ರಹ್ಮನಿಗೆ ಯವುದೇ ರೀತಿಯ ಪೂಜೆ ಪುನಸ್ಕಾರಗಳು ನೆಡೆಯುವುದಿಲ್ಲ.

LEAVE A REPLY

Please enter your comment!
Please enter your name here