ಉತಮ್ಮ ಆರೋಗ್ಯಕ್ಕಾಗಿ ಆಡುಮುಟ್ಟದ ಸೊಪ್ಪು ಇದರ ಉಪಯೋಗ ತಿಳಿದರೆ ಆಶ್ಚರ್ಯ ಪಡ್ತೀರ

0
1080

ಆಡು ಮುಟ್ಟದ ಸೊಪ್ಪನ್ನು ಸೋಗೆಗಿಡದ ಸೊಪ್ಪು ಎಂದು ಕೂಡ ಕರೆಯುತ್ತಾರೆ. ಕೆಮ್ಮು, ಶೀತ, ನೆಗಡಿ ಅಸ್ತಮಾ, ಇಂತಹ ಯಾವುದೇ ಕಾಯಿಲೆಗಳು ಇರಲಿ ಇದರಿಂದ ಗುಣಪಡಿಸುವುದು. ಬನ್ನಿ ಹಾಗಾದರೆ ಆಡು ಮುಟ್ಟದ ಸೊಪ್ಪು ನಿಂದ ಯಾವ ಯಾವ ಕಾಯಿಲೆಗಳಿಗೆ ಔಷಧಿಗಳನ್ನು ಹೇಗೆ ತಯಾರಿಸಬಹುದು ಎಂದು ತಿಳಿಯೋಣ.ದಮ್ಮು ಅಥವಾ ಕೆಮ್ಮಿಗೆ ಆಡು ಮುಟ್ಟದ ಸೊಪ್ಪು ರಾಮ ಬಾಣವಿದ್ದಂತೆ. ಮೊದಲಿಗೆ ಆಡು ಮುಟ್ಟದ ಸೊಪ್ಪನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿಕೊಳ್ಳಿ. ನಂತರ ಬೆಳ್ಳುಳ್ಳಿ, ಮೆಣಸು ಮತ್ತು ಹಿಪ್ಪಲಿಗಳನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಟ್ಟುಕೊಂಡು ಅದಕ್ಕೆ ಒಂದೆರಡು ಹನಿ ಸ್ವಲ್ಪ ಬಿಸಿ ನೀರನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ನಂತರ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಇದನ್ನು ಪ್ರತಿನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಮ್ಮ ಕೆಮ್ಮು ಕಡಿಮೆಯಾಗುವುದು.

ಅಮೃತ ಬಳ್ಳಿ ಬೇರು ಮತ್ತು ಆಡು ಮುಟ್ಟದ ಸೊಪ್ಪಿನ ಬೇರನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನಂತರ ಅದನ್ನು ಬಿಸಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕುದಿಸಿದ ನೀರಿನಲ್ಲಿ ಅಮೃತಬಳ್ಳಿಯ ಬೇರಿನ ಮತ್ತು ಆಡು ಮುಟ್ಟದ ಸೊಪ್ಪಿನ ಬೇರಿನ ಅಂಶಗಳು ನೀರಿನಲ್ಲಿ ಬೆರೆತು ಕಷಾಯವಾಗುತ್ತದೆ. ಈ ಕಷಾಯವನ್ನು ಪ್ರತಿನಿತ್ಯ ಕುಡಿಯುವುದರಿಂದ ಗೂರಲು ಮತ್ತು ಉಬ್ಬಸ ನಂತ ರೋಗಗಳು ಕಡಿಮೆಯಾಗುತ್ತದೆ. ಜ್ವರ ಬಂದಾಗ ಈ ಕಷಾಯವನ್ನು ಸೇವಿಸುವುದರಿಂದ ಜ್ವರದ ಪ್ರಮಾಣ ಕಡಿಮೆಯಾಗುತ್ತದೆ. ದೇಹದ ಯಾವುದೇ ಭಾಗದಿಂದ ರಕ್ತ ಸೋರುವಿಕೆಯ ಕಾಯಿಲೆ ಉಂಟಾದರೆ ಅಂದರೆ ಮಲದ್ವಾರ, ಮೂಗು, ಕಿವಿ ಇಲ್ಲವಾದಲ್ಲಿ ಕಣ್ಣಿನಿಂದ ರಕ್ತ ಬರುತ್ತಿದ್ದರೆ ಅಥವಾ ದೇಹದ ಒಳಭಾಗದಲ್ಲಿ ರಕ್ತ ಸೋರಿಕೆ ಉಂಟಾಗುತ್ತಿದ್ದರೆ ಆಡು ಮುಟ್ಟದ ಸೊಪ್ಪಿನ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಮಿಶ್ರಣ ಮಾಡಿ ಪ್ರತಿನಿತ್ಯ ಕುಡಿಯುವುದರಿಂದ ಈ ಕಾಯಿಲೆಯಿಂದ ಮುಕ್ತಿಗೊಳ್ಳಬಹುದು.

ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂದರೆ ಕಡಿತ ತುರಿಕೆ ಅಥವಾ ನವೆಯಿಂದ ಬೇಸತ್ತು ಹೋಗಿದ್ದರೆ ಆಡು ಮುಟ್ಟದ ಸೊಪ್ಪನ್ನು ಗೋಮೂತ್ರದಲ್ಲಿ ಚೆನ್ನಾಗಿ ಅರೆದು ಅದಕ್ಕೆ ಸ್ವಲ್ಪ ಅಡಿಗೆ ಹರಿಶಿಣ ವನ್ನು ಮಿಶ್ರಣ ಮಾಡಿರಿ. ಈ ಮಿಶ್ರಣವನ್ನು ತುರಿಕೆಯಾಗುವ ಜಾಗದಲ್ಲಿ ಲೇಪಿಸುವುದರಿಂದ ನಿಮ್ಮ ಸಮಸ್ಯೆ ದೂರವಾಗುವುದು. ಆಡು ಮುಟ್ಟದ ಸೊಪ್ಪಿನ ಎಲೆ, ಬೇವಿನ ಎಲೆ ಮತ್ತು ಜೇನುತುಪ್ಪ ವನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ಚೆನ್ನಾಗಿ ಅರೆದು ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣ ವನ್ನು ಸೇವಿಸುವುದರಿಂದ ಮೂತ್ರ ಕಟ್ಟಿಕೊಂಡಿದ್ದರೆ ಸಮಸ್ಯೆ ದೂರಾಗುವುದು. ಹುಳುಕಡ್ಡಿ ಸಮಸ್ಯೆಯಿಂದ ಬಳಲುತ್ತಿದ್ದರೆ ಆಡು ಮುಟ್ಟದ ಸೊಪ್ಪು ಎಲೆಯನ್ನು ತಿನ್ನುವುದರಿಂದ ಸಮಸ್ಯೆಯ ದೂರವಾಗುವುದು. ಎಲೆಗಳು ಸ್ವಲ್ಪ ಕಹಿ ಎನಿಸಿದಲ್ಲಿ ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ ತಿನ್ನಿರಿ. ಮಾಹಿತಿ ನಕಲು ಮಾಡದೇ ತಪ್ಪದೇ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here