ನೀವು ತುಂಬಾ ಕುಳ್ಳಗಾಗಿರಲು ಕಾರಣ ಗೊತ್ತಿಲ್ವ ಹಾಗಾದ್ರೆ ಇದನ್ನು ಓದಿ.

0
719

ನೀವು ಕುಳ್ಳಗಾಗಿದ್ದಿರ ಎಂದು ಎಲ್ಲರೂ ನಿಮ್ಮನ್ನು ಗೇಲಿ ಮಾಡುತ್ತಿದ್ದರಾ, ನೀವು ಎತ್ತರ ಬೆಳೆಯದಿರಲು ಕಾರಣಗಳು ಗೊತ್ತಾ. ಚಿಕ್ಕಂದಿರಲ್ಲಿದ್ದಾಗ ನಿಮ್ಮ ಬೆಳವಣಿಗೆ ತುಂಬಾ ಚೆನ್ನಾಗಿ ಆಗುತ್ತಿರುತ್ತದೆ ಆದರೆ ವಯಸ್ಸಾಗುತ್ತಿದ್ದಂತೆ ಬೆಳವಣಿಗೆ ನಿಂತು ಹೋಗುತ್ತದೆ. ಇದರಿಂದ ನಿಮ್ಮ ಸುತ್ತಮುತ್ತಲಿನ ಜನಗಳು, ಗೆಳೆಯರು ನಿಮ್ಮನ್ನು ಗೇಲಿ ಮಾಡುತ್ತಾರೆ. ಕೆಲವರು ಇದು ವಂಶ ಪಾರಂಪರಿಕವಾಗಿ ಹೆರಿಡಿಟಿ ಪ್ರಾಬ್ಲೆಮ್ ಬಂದಿರುವುದು ಎನ್ನುತ್ತಾರೆ. ಹೆರಿಡಿಟಿ ಪ್ರಾಬ್ಲೆಮ್ ಕೂಡ ಒಂದು ಕಾರಣವಾಗಿದ್ದು ಎತ್ತರ ಬೆಳೆಯದಿರಲು ಇನ್ನು ಅನೇಕ ಕಾರಣಗಳಿವೆ.

ಮೊದಲಿಗೆ ನಮ್ಮ ದೇಹದಲ್ಲಿ ಮೂಳೆಗಳ ಬೆಳವಣಿಗೆಗೆ ಬೇಕಾಗುವ ಹಾರ್ಮೋನ್ ಗಳ ಕೊರತೆ ಉಂಟಾಗುವುದು. ಅಂದರೆ ನಮ್ಮ ದೇಹದಲ್ಲಿ ಪಿಟ್ಯುಟರಿ ಗ್ರಂಥಿಗಳಿಂದ ಹೊರಬರುವ ಹಾರ್ಮೋನ್ ಗಳು ನಮ್ಮ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಒಂದು ವೇಳೆ ಈ ಹಾರ್ಮೋನ್ ಗಳ ಕೊರತೆ ಅಥವಾ ಸಮತೋಲನದಲ್ಲಿ ವ್ಯತ್ಯಾಸ ಉಂಟಾದರೆ ನಮ್ಮ ಮೂಳೆಗಳ ಬೆಳವಣಿಗೆ ಕುಂಠಿತವಾಗುತ್ತದೆ. ಇದರಿಂದ ನೀವು ಎತ್ತರವಾಗಿ ಬೆಳೆಯುವುದು ಸಾಧ್ಯವಾಗುವುದಿಲ್ಲ.

ಟೆನ್ಶನ್ ಲೈಫ್ ಈಗಿನ ಆಧುನಿಕ ಯುಗದಲ್ಲಿ ಎಲ್ಲರೂ ಒತ್ತಡದ ಜೀವನವನ್ನು ಅನುಭವಿಸುತ್ತಿದ್ದಾರೆ. ಈ ಒತ್ತಡದ ಜೀವನದಿಂದ ಸರಿಯಾಗಿ ನಿದ್ದೆ ಬರುವುದಿಲ್ಲ ಇದರಿಂದ ನಮ್ಮ ದೇಹದಲ್ಲಿ ಬಿಡುಗಡೆಯಾಗುವ ವುಮನ್ ಗ್ರೋಥ್ ಹಾರ್ಮೋನ್ ಗಳ ಕೊರತೆ ಉಂಟಾಗುವುದು. ನಾವು ಪ್ರತಿನಿತ್ಯ ಕಡಿಮೆ ಅಂದರೂ ಎಂಟು ಗಂಟೆಗಳ ಕಾಲ ನಿದ್ದೆ ಮಾಡಬೇಕು. ಇದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಬೆಳವಣಿಗೆಯು ಕೂಡ ಚೆನ್ನಾಗಿ ಆಗುತ್ತದೆ. ಮನುಷ್ಯನ ದೇಹದ ಬೆಳವಣಿಗೆಯು ಹುಟ್ಟಿದಾಗಿನಿಂದ ಸುಮಾರು 15 ರಿಂದ 20 ವರ್ಷಗಳವರೆಗೆ ಆಗುತ್ತದೆ ಆದರೆ ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಕೆಲವು ಚಟಗಳಿಗೆ ವ್ಯಾಸನವಾಗುತ್ತಿದ್ದರೆ. ಅಂದರೆ ಧೂಮಪಾನ ಮದ್ಯಪಾನ ಸೇವನೆ ಹೀಗೆ ಹಲವಾರು ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ನಮ್ಮ ದೇಹದಲ್ಲಿ ದೇಹದ ಬೆಳವಣಿಗೆಗೆ ಬೇಕಾಗುವ ಹಾರ್ಮೋನುಗಳ ಕೊರತೆ ಉಂಟಾಗುತ್ತದೆ.

ಪೌಷ್ಟಿಕಾಂಶದ ಕೊರತೆ ಇತ್ತೀಚಿನ ದಿನಗಳಲ್ಲಿ ಪೌಷ್ಟಿಕಾಂಶ ತುಂಬಿರುವ ಆಹಾರವೇ ದೊರೆಯುತ್ತಿಲ್ಲ ಅದರಲ್ಲೂ ಎಲ್ಲರೂ ಹೊರಗಡೆ ಸಿಗುವ ಜಂಕ್ ಫುಡ್ ಗಳನ್ನು ಇಷ್ಟ ಪಡುತ್ತಾರೆ. ಇದರಿಂದ ನಮ್ಮ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ವಿಟಮಿನ್ ಗಳ ಕೊರತೆ ಉಂಟಾಗುತ್ತದೆ ಇದು ನಮ್ಮ ದೇಹದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ ಅದರಿಂದ ನಾವು ಉತ್ತಮ ಆಹಾರ, ಹಣ್ಣುಗಳು, ತರಕಾರಿಗಳನ್ನು ತಿನ್ನಬೇಕು. ಈಗಿನ ದಿನಗಳಲ್ಲಿ ಉತ್ತಮ ಆಹಾರದ ಕೊರತೆ, ಧೂಳು ಮತ್ತು ಪ್ರದೂಷಣೆಯಿಂದ ನಮ್ಮ ಆರೋಗ್ಯ ಬಹಳ ಬೇಗ ಹದಗೆಡುತ್ತದೆ. ಇದರಿಂದ ನಾವು ಆಸ್ಪತ್ರೆ ಮತ್ತು ಔಷಧಿಗಳ ಮೊರೆ ಹೋಗುತ್ತೇವೆ. ಚಿಕ್ಕ ವಯಸ್ಸಿನಲ್ಲಿ ಹೆಚ್ಚು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಅದು ನಮ್ಮ ದೇಹದ ಬೆಳವಣಿಗೆ ಮೇಲೂ ಅಡ್ಡ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ನಾವು ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಮಾಹಿತಿ ನಕಲು ಮಾಡುವುದು ಬಿಟ್ಟು ತಪ್ಪದೇ ಶೇರ್ ಮಾಡಿ.

LEAVE A REPLY

Please enter your comment!
Please enter your name here