ರಾತ್ರಿ ಕೆಟ್ಟ ಕನಸು ಬೀಳಬಾರದು ಎಂದರೆ ಏನು ಮಾಡಬೇಕು?

0
933

ಕನಸು ಎಂಬುದು ಒಂದು ವಿಚಿತ್ರ ಕೆಲವು ಕನಸುಗಳು ಹಿಂದೆ ನೆಡೆದು ಹೋದ ಘಟನೆಗಳು ಆಗಿದ್ದರೆ ಇನ್ನು ಕೇಲವು ಮುಂದೆ ಏನೋ ನೆಡೆಯಬೇಕಾಗಿರುವುದು ಬೀಳಬಹುದು ಇನ್ನು ಕೆಲವಂತೂ ಏನು ಅರ್ಥನೆ ಇಲ್ಲದ ಹಾಗೆ ಒಂದೊದಕ್ಕೆ ಅರ್ಥನೆ ಸಿಗದೆ ಇರುವ ರೀತಿಯಲ್ಲಿ ಕನಸುಗಳು ಬೀಳುತ್ತವೆ. ಅದರಲ್ಲಿ ಕೆಲವು ಕನಸುಗಳು ನಿದ್ದೆ ಇಂದ ಎದ್ದಾಗಲು ನೆನಪಿನಲ್ಲಿ ಇರುತ್ತವೆ ಇನ್ನು ಕೆಲವು ನೆನಪಿಗೆ ಬರುವುದೇ ಇಲ್ಲ. ಹಾಗೆಯೇ ಕೆಲವು ಭಯವನ್ನು ಹುಟ್ಟಿಸಿದರೆ ಇನ್ನು ಕೆಲವು ಸಂತೋಷವನ್ನು ತರುತ್ತವೆ ಎಷ್ಟು ವಿಚಿತ್ರ ಅಲ್ಲವೇ ಈ ಕನಸು ಎಂಬುದು. ಈ ಭಯವನ್ನು ಹುಟ್ಟಿಸುವ ಕೆಟ್ಟ ಕನಸುಗಳು ಬೀಳದ ಹಾಗೆ ಜೊತೆಗೆ ಸುಖವಾಗಿ ನಿದ್ದೆ ಬರುವ ಹಾಗೆ ಮಾಡುವುದಾದರೂ ಹೇಗೆ ಎಂದು ತಿಳಿಯೋಣ ಬನ್ನಿ.

ಏಲಕ್ಕಿ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ ಅಲ್ಲವೇ ಆ ಸ್ವಲ್ಪ ಏಲಕ್ಕಿಯನ್ನು ತೆಗೆದುಕೊಂಡು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಆ ವಸ್ತ್ರವನ್ನು ನಿಮ್ಮ ದಿಂಬಿನ ಪಕ್ಕದಲ್ಲಿ ಇಟ್ಟುಕೊಂಡು ಮಲಗಿದರೆ ಯಾವುದೇ ರೀತಿಯ ಕೆಟ್ಟ ಕನಸುಗಳು ಬೀಳುವುದಿಲ್ಲ ಜೊತೆಗೆ ಒಳ್ಳೆಯ ನಿದ್ದೆ ಬರುತ್ತದೆ ಈ ಹಿಂದೆ ನಮ್ಮ ಮನೆಯಲ್ಲಿದ್ದ ಹಿರಿಯರು ಹೀಗೆ ಮಾಡುತ್ತಾ ಇದ್ದರು ಇದಕ್ಕೆ ವೈಜ್ಞಾನಿಕ ಕಾರಣಗಳು ಸಹ ಸಾಕಷ್ಟು ಇದೆ. ಮಲಗುವಾಗ ದಕ್ಷಿಣದ ಕಡೆಗೆ ತಲೆಯನ್ನು ಹಾಕಿಕೊಂಡು. ಉತ್ತರದ ಕಡೆಗೆ ಕಾಲು ಇಟ್ಟು ನಿದ್ರಿಸಿದರೆ ಚೆನ್ನಾಗಿ ನಿದ್ದೆ ಬರುತ್ತದೆ. ಕೆಟ್ಟ ಕನಸುಗಳು ಬರುವುದಿಲ್ಲ. ಆರೋಗ್ಯದಲ್ಲೂ ನಿಮಗೆ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ವೈದ್ಯರು ದ್ರುಡಿಕರಿಸಿದ್ದಾರೆ.

ನಿದ್ದೆ ಮಾಡುವ ಮೊದಲು 5 ರಿಂದ 10 ನಿಮಿಷಗಳ ಕಾಲ ಧ್ಯಾನ ಮಾಡಿದರೆ ಉತ್ತಮ ಫಲ ಸಿಗುತ್ತದೆ. ಅಥವ ಕಣ್ಣು ಮುಚ್ಚಿ ಸುಮ್ಮನೆ ಕುಳಿತು ಯಾವುದೇ ಯೋಚೆನೆ ಮಾಡಬೇಡಿ ಉಸಿರು ಚೆನ್ನಾಗಿ ಆಡುತ್ತಾ ಮನಸ್ಸು ಕೇಂದ್ರಿಕರಿಸಿ. ಜೊತೆಗೆ ಕಣ್ಣು ಮುಚ್ಚಿಕೊಂಡು ಯಾವುದಾದರೂ ಒಂದು ವಸ್ತುವಿನ ಮೇಲೆ ದೃಷ್ಟಿ ಕೇಂದ್ರೀಕರಿಸಬೇಕು. ಮನಸ್ಸನ್ನು ಆ ವಸ್ತುವಿನ ಮೇಲೆ ಕೇಂದ್ರೀಕರಿಸಬೇಕು. ಮನಸ್ಸಿನಲ್ಲಿ ಯಾವುದೇ ಇತರೆ ಆಲೋಚನೆ ಬರಲು ಬಿಡಬಾರದು. ಇದರಿಂದ ಮನಸ್ಸು ಪ್ರಶಾಂತವಾಗಿ, ಹಗುರವಾಗಿ ಒಳ್ಳೆಯ ನಿದ್ದೆ ಬರುತ್ತದೆ.

ಒಂದು ಗ್ಲಾಸ್‌ನಲ್ಲಿ ನೀರು ತುಂಬಿ ಅದಕ್ಕೆ ರಾಗಿ ಹಾಕಿ ಬಳಿಕ ಅದನ್ನು ದಿಂಬಿನ ಪಕ್ಕ ಇಟ್ಟುಕೊಂಡು ನಿದ್ರಿಸಬೇಕು. ಈ ರೀತಿ ಮಾಡುವುದರಿಂದ ಒಳ್ಳೆಯ ನಿದ್ದೆ ಬರುತ್ತದೆ. ಕೆಟ್ಟ ಕನಸು ಬೀಳಲ್ಲ. ಬೆಳ್ಳುಳ್ಳಿಯ ಎಸಳನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ ಒಳ್ಳೆಯ ನಿದ್ದೆ ಜೊತೆಗೆ ಕೆಟ್ಟ ಕನಸು ಬರುವುದಿಲ್ಲ. ಇದು ಪಾಸಿಟಿವ್ ಎನರ್ಜಿ ಜಾಸ್ತಿ ಆಗುವ ಹಾಗೇ ಮಾಡುತ್ತೆ. ನಿಮಗೂ ರಾತ್ರಿ ಸರಿಯಾಗಿ ನಿದ್ರೆ ಬರದೆ ಕೆಟ್ಟ ಕನಸು ಬೀಳುತ್ತಿದ್ದಾರೆ ಇವುಗಳನ್ನು ಪ್ರಯತ್ನಿಸಿ ಒಳ್ಳೆಯ ನಿದ್ರೆ ಮಾಡಿ.

LEAVE A REPLY

Please enter your comment!
Please enter your name here