ಶಿವನ ರುದ್ರಾಕ್ಷಿಗೆ ಎಷ್ಟೆಲ್ಲಾ ಶಕ್ತಿ ಇದೆ ನಿಮಗೆ ಗೊತ್ತೇ

0
1011

ರುದ್ರನ ಅಕ್ಷಿಯೇ ರುದ್ರಾಕ್ಷಿ. ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಹೀಗಾಗಿ ರುದ್ರಾಕ್ಷಿಗೆ ಪೂಜೆ ಪುನಸ್ಕಾರಗಳಲ್ಲಿ ವಿಶೇಷವಾದ ಸ್ಥಾನವಿದೆ. ನಮಗೆ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರೆ ರುದ್ರಾಕ್ಷಿ ಪೂಜೆ ಮಾಡುವುದರಿಂದ ಅದೆಲ್ಲ ಕಡಿಮೆ ಆಗುತ್ತಾ ಹೋಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ ಮಾತು ಎಂದು ಮರೆಯುವುದಿಲ್ಲ. ರುದ್ರಾಕ್ಷಿ ಪೂಜೆ ಮಾಡಿದ್ರೆ ಸಕಲ ದೋಷಗಳು ನಿವಾರಣೆ ಆಗುತ್ತದೆ ಜೀವನದಲ್ಲಿ ನಮಗೆ ಗೊತ್ತಿಲ್ಲದೇ ಸಾಕಷ್ಟು ತಪ್ಪುಗಳು ಮಾಡಿರುತ್ತೇವೆ ಅದೆಲ್ಲವು ನಮ್ಮನು ಪ್ರತಿ ನಿತ್ಯ ಕಾಡುತ್ತಲೇ ಇರುತ್ತದೆ ಇಂತಹ ದೋಷ ನಿವಾರಣೆ ಆಗಲು ರುದ್ರಾಕ್ಷಿ ಪೂಜೆ ಅಗತ್ಯ. ಪುರಾಣದ ಪ್ರಕಾರ ತ್ರಿಪುರಾಸುರ ರಾಕ್ಷಸನ ಸಂಹಾರದ ನಂತರ ಪರಶಿವನ ಕಣ್ಣಿನಿಂದ ಬಂದ ಆನಂದದ ಅಶ್ರು ಬಿಂದುಗಳು ರುದ್ರಾಕ್ಷಿ ಮಣಿಗಳಾದವು. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿ ಮಣಿಗಳು ಶಿವಭಕ್ತರ ಕೊರಳ ಮಣಿ ಮಾಲೆಯಾಗಿ ಉಪಯೋಗಿಸಲ್ಪಡುತ್ತದೆ. ಇದನ್ನು ಜಪಮಾಲೆಯಾಗಿಯೂ ಉಪಯೋಗಿಸುತ್ತಾರೆ. ಶಿವನ ಆರಾಧನೆ ಮಾಡುವಾಗ ಕೈಯಲ್ಲಿ ರುದ್ರಾಕ್ಷಿಯನ್ನು ಧರಿಸಿ ಪೂಜೆ ಮಂತ್ರಗಳನ್ನು ಪಠಿಸುತ್ತ ಜಪ ಮಾಡಿದರೆ ಉತ್ತಮ ಫಲ ಸಿಗುತ್ತದೆ.

ಸಾಮಾನ್ಯವಾಗಿ ರುದ್ರಾಕ್ಷಿ ಮಾಲೆಯಲ್ಲಿ 108 ರುದ್ರಾಕ್ಷಿಗಳಿರುತ್ತವೆ. ಆ ಮಾಲೆಯಿಂದ ಪೂಜೆ ಮಾಡಿದರೆ ಹೆಚ್ಚಿನ ಫಲ ಸಿಗುತ್ತದೆ ಎಂಬುದು ಎಲ್ಲರ ನಂಬಿಕೆ. ಆದರೆ 108 ಅಲ್ಲದೆ ಇನ್ನು ಹಲವು ಭಿನ್ನವಾದ ಸಂಖ್ಯೆಯಲ್ಲಿ ರುದ್ರಾಕ್ಷಿಗಳು ಇರುವ ಮಾಲೆಯಲ್ಲಿ ಪೂಜೆಗಳನ್ನು ಮಾಡಬಹುದು. ಒಂದೊಂದು ವಿಧದ ರುದ್ರಾಕ್ಷಿ ಮಾಲೆಗೆ ಒಂದೊಂದು ರೀತಿಯ ಫಲ ಸಿಗುತ್ತದೆ. ಅದೇನು ಎಂದು ತಿಳಿದುಕೊಳ್ಳೋಣ ಬನ್ನಿ. 27 ರುದ್ರಾಕ್ಷಿಗಳು ಇರುವ ಮಾಲೆಯಲ್ಲಿ ಪೂಜೆ ಮಾಡಿದರೆ ಒಳ್ಳೆಯ ಆರೋಗ್ಯ. ಹೆಚ್ಚು ಕೆಲಸ ಮಾಡುವ ಸಾಮರ್ಥ್ಯ. ಹೆಚ್ಚಿನ ಶಕ್ತಿ ದೃಢವಾದ ಮನಸ್ಸು ಸಿಗುತ್ತದೆ. 30 ರುದ್ರಾಕ್ಷಿಗಳುಳ್ಳ ಮಾಲೆಯಿಂದ ಪೂಜಿಸಿದರೆ ಧನ ಲಾಭ. ಸಂತೋಷ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ತುಂಬಾ ನಷ್ಟ ಹೋದವರು ಆರ್ಥಿಕ ಸ್ಥಿತಿಯಲ್ಲಿ ತೊಂದರೆ ಇದ್ದವರು ಇದನ್ನು ಪೂಜಿಸಿದರೆ ಒಳ್ಳೆಯ ಫಲ ಸಿಗುತ್ತದೆ. 54 ರುದ್ರಾಕ್ಷಿಗಳು ಇರುವ ಮಾಲೆಯಿಂದ ಪೂಜೆಗಳನ್ನು ಮಾಡಿದರೆ ಮನಸ್ಸಿಗೆ ಶಾಂತಿ ಸಿಗುತ್ತದೆ. ಮನೋಸ್ಥೈರ್ಯ ಹೆಚ್ಚುತ್ತದೆ ಮನಸ್ಸು ನಿಯಂತ್ರಣದಲ್ಲಿರುತ್ತದೆ ಕೆಟ್ಟ ಆಲೋಚನೆಗಳು ಬರುವುದಿಲ್ಲ ಒತ್ತಡ ಆತಂಕ ದೂರವಾಗುತ್ತದೆ.

108 ರುದ್ರಾಕ್ಷಿಗಳು ಇರುವ ಮಾಲೆಯಿಂದ ಪೂಜಿಸಿದರೆ ಅಂದುಕೊಂಡ ಕೆಲಸಗಳು ನೆರವೇರುತ್ತವೆ ಯಾವ ಕೆಲಸ ಕೈಗೊಂಡರೂ ಯಶಸ್ವಿಯಾಗುತ್ತದೆ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಯಾವುದೇ ತೊಂದರೆಗಳು ಬರುವುದಿಲ್ಲ ನೋಡಿದರಲ್ಲ ರುದ್ರಾಕ್ಷಿ ಮಾಲೆಯಲ್ಲಿ ಎಷ್ಟೆಲ್ಲ ಶಕ್ತಿ ಅಡಗಿದೆ ಹಾಗಾಗಿ ನಿಮ್ಮ ಮನಸ್ಸು ಸರಿ ಇಲ್ಲದ ಸಮಯದಲ್ಲಿ ರುದ್ರಾಕ್ಷಿ ಮಾಲೆಯನ್ನು ತೆಗೆದುಕೊಂಡು ಪ್ರಶಾಂತವಾದ ಜಾಗದಲ್ಲಿ ಕುಳಿತು ಜಪ ಮಾಡಿದರೆ ಮನಸ್ಸು ಆಗುರವಾಗುತ್ತದೆ. ತಿಳಿಯಿತಲ್ಲ ಎಷ್ಟು ರುದ್ರಾಕ್ಷಿಯಿಂದ ಏನೆಲ್ಲಾ ಲಾಭ ಇದೆ ಎಂದು. ನಮ್ಮ ವೆಬ್ಸೈಟ್ ನಲ್ಲಿ ಪ್ರಕಟವಾದ ಎಲ್ಲ ಮಾಹಿತಿಗಳಿಗೆ ವಿಶೇಷ ಕಾಪಿರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ಚಿತ್ರಗಳು ಅಥವ ಬರವಣಿಗೆ ನಕಲು ಮಾಡಿದ್ರೆ ಅಂತಹ ವ್ಯಕ್ತಿಗಳ ವಿರುದ್ದ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here