ನಿಮ್ಮ ಮನಸ್ಸು ಮತ್ತು ದೇಹ ಆರೋಗ್ಯವಾಗಿ ಇರಲು ನೀವು ಈ ಕೆಲಸ ಮಾಡಲೇ ಬೇಕು

0
813

ಇತ್ತೀಚಿನ ಆಧುನಿಕ ಯುಗದಲ್ಲಿ ಎಲ್ಲರೂ ವೇಗವನ್ನು ಇಷ್ಟಪಡುತ್ತಾರೆ. ಎಲ್ಲಾ ಕೆಲಸಗಳು ಕುಳಿತ ಜಾಗದಲ್ಲಿ ಆಗಬೇಕೆಂದು ಎಲ್ಲರೂ ಬಯಸುತ್ತಾರೆ. ಎಲ್ಲಾ ಕೆಲಸಗಳನ್ನು ಯಂತ್ರಗಳ ಸಹಾಯದಿಂದ ಮಾಡುತ್ತಾರೆ. ಹೆಚ್ಚುತ್ತಿರುವ ಕಾರ್ಖಾನೆಗಳು ವಾಹನಗಳಿಂದ ಪರಿಸರ ಮಾಲಿನ್ಯವಾಗುತ್ತಿದೆ. ನಾವು ಸೇವಿಸುತ್ತಿರುವ ಆಹಾರದಲ್ಲಿ ಕೂಡ ಉತ್ತಮವಾದ ಪೌಷ್ಠಿಕಾಂಶ ದೊರೆಯುತ್ತಿಲ್ಲ. ಎಲ್ಲಾ ಬೆಳೆಗಳ ಮೇಲೆ ರಾಸಾಯನಿಕವನ್ನು ಸಿಂಪಡಿಸಿ ಬೆಳೆಯುತ್ತಾರೆ. ಎಲ್ಲರಿಗಿಂತ ಎತ್ತರಕ್ಕೆ ಬೆಳೆಯಬೇಕು ಹೆಚ್ಚು ಹೆಚ್ಚು ಹಣ ಗಳಿಸಬೇಕು ಎಂದು ಎಲ್ಲರೂ ವೇಗವಾಗಿ ಓಡುತ್ತಾ ತಮ್ಮ ಆರೋಗ್ಯ ಮತ್ತು ನೆಮ್ಮದಿಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಉತ್ತಮವಾದ ಆರೋಗ್ಯ ಮತ್ತು ಮಾನಸಿಕವಾಗಿ ನೆಮ್ಮದಿಯಿಂದ ಇರಲು ಟಿಪ್ಸ್ ಗಳನ್ನು ಪಾಲಿಸಿರಿ.

ಎಲ್ಲರಿಗು ಜಂಕ್ ಫಂಡ್ ತಿನ್ನುವ ಅಬ್ಯಾಸ ಇದ್ದೆ ಇರುತ್ತದೇ ಬೀದಿ ಬದಿಯಲ್ಲಿ ಮತ್ತು ಹೋಟೆಲ್ನಲ್ಲಿ ತಿನ್ನುವ ಜಂಕ್ ಫುಡ್ ಗಳಿಗೆ ಸಾಕಷ್ಟು ಕೆಮಿಕಲ್ಸ್ ಮಿಕ್ಸ್ ಮಾಡಿ ಕೊಡುವುದು ಈಗಾಗಲೇ ನಿಮಗೆ ಗೊತ್ತಿರುವ ವಿಚಾರ ಇನ್ನು ಎಣ್ಣೆಯಲ್ಲಿ ಕರಿದ ತಿಂಡಿಗಳು ಏನೇ ತಿಂದರು ಅರ್ಥ ಗಂಟೆ ಬಿಟ್ಟು ಒಂದು ಲೋಟ ಬಿಸಿ ಬಿಸಿ ನೀರು ಕುಡಿಯಿರಿ ನಿಮಗೆ ಸಾಕಷ್ಟು ಸಹಾಯ ಆಗಲಿದೆ. ಯೋಗ ಮಾಡುವುದು ಮತ್ತು ಅಜ್ಞಾನವನ್ನು ಮಾಡುವುದು ದೇಹಕ್ಕೆ ಒಳಿತು ಎಂದು ಎಲ್ಲರಿಗೂ ಗೊತ್ತೇ ಇದೆ. ಮುಂಜಾನೆಯ ಸಮಯದಲ್ಲಿ ಯೋಗ ಮತ್ತು ಧ್ಯಾನ ಮುಗಿದ ನಂತರ ಸ್ವಲ್ಪ ಹೊತ್ತು ದೀರ್ಘವಾಗಿ ಉಸಿರಾಡಿರಿ. ಇದರಿಂದ ನಮ್ಮ ದೇಹಕ್ಕೆ ಸಾಕಷ್ಟು ಆಮ್ಲಜನಕ ದೊರೆಯುತ್ತದೆ. ಇದರಿಂದ ನಮ್ಮ ದೇಹದಲ್ಲಿ ಶ್ವಾಸಕೋಶಗಳು ತುಂಬಾ ಚೆನ್ನಾಗಿ ಕೆಲಸ ನಿರ್ವಹಿಸುತ್ತವೆ. ಆಗ ಶ್ವಾಸಕೋಶಗಳು ನಮ್ಮ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಒಳಗೊಂಡಿರುವ ರಕ್ತವನ್ನು ಸರಬರಾಜು ಮಾಡುತ್ತದೆ ಇದರಿಂದ ಯಾವುದೇ ಖಾಯಿಲೆ ದೇಹಕ್ಕೆ ಬರುವುದಿಲ್ಲ.

ಪ್ರತಿನಿತ್ಯ ಯಾವುದಾದರೂ ಮೂರು ರೀತಿಯ ಹಣ್ಣುಗಳನ್ನು ತಿನ್ನಿರಿ ಒಂದೇ ವಿಧವಾದ ಹಣ್ಣುಗಳನ್ನು ತಿನ್ನುವ ಬದಲು ಪ್ರತಿ ದಿನ ಬೇರೆ ಬೇರೆ ರೀತಿಯ ಹಣ್ಣುಗಳನ್ನು ತಿನ್ನಿರಿ ಹಾಗೂ ನಮ್ಮ ದೇಹಕ್ಕೆ ಎಲ್ಲಾ ತರಹದ ವಿಟಮಿನ್ ಗಳು ಮತ್ತು ಪೋಷಕಾಂಶಗಳು ದೊರೆಯುತ್ತದೆ. ಕನಿಷ್ಠಪಕ್ಷ ವಾರಕ್ಕೆ ಎರಡರಿಂದ ಮೂರು ಬಾರಿಯಾದರೂ ಹಣ್ಣಿನ ಜ್ಯೂಸನ್ನು ಕುಡಿಯಿರಿ. ಇದರಿಂದ ನಮ್ಮ ದೇಹವು ತಂಪಾಗುತ್ತದೆ. ಹಸಿರು ಬಣ್ಣದ ತರಕಾರಿ ನಿಮಗೆ ಹೆಚ್ಚಿನ ಅವಶ್ಯಕತೆ ಇದೆ ಪ್ರತಿ ನಿತ್ಯ ತಪ್ಪದೇ ತಿನ್ನಿರಿ.

ಮಧ್ಯಪಾನ ಧೂಮಪಾನ ಅಂತಹ ಕೆಟ್ಟ ಚಟಗಳಿಗೆ ವ್ಯಸನಿಗಳಾಗಬೇಡಿ. ಇವುಗಳನ್ನು ಮಾಡುವುದರಿಂದ ನಮ್ಮ ದೇಹವು ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಮತ್ತು ಇದರಿಂದ ನೀವು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿರಾ. ಹೊರಗಡೆ ಸಿಗುವ ಜಂಕ್ ಫುಡ್ ಗಳನ್ನು ಹೆಚ್ಚು ತಿನ್ನಬೇಡಿ ಅವುಗಳು ಬಾಯಿಗೆ ರುಚಿ ಕೊಡುತ್ತವೆ. ಆದರೆ ಅವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ. ಅದರ ಬದಲು ಸೊಪ್ಪುಗಳು ತರಕಾರಿಗಳು ಮತ್ತು ಕಾಳುಗಳನ್ನು ಹೆಚ್ಚಾಗಿ ಸೇವಿಸಿದರೆ ನಮಗೆ ಹೆಚ್ಚು ಪೌಷ್ಟಿಕಾಂಶವನ್ನು ನೀಡುವುದಲ್ಲದೆ ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಸಹಕಾರಿಯಾಗುತ್ತವೆ. ಇದರಿಂದ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ ಮತ್ತು ಮಾನಸಿಕವಾಗಿಯೂ ಕೂಡ ಸದೃಢವಾಗಿರುತ್ತದೆ.

ಉತ್ತಮವಾದ ಆರೋಗ್ಯ ಮತ್ತು ಮಾನಸಿಕವಾಗಿ ನೆಮ್ಮದಿ ಆಗಿ ಇರಲು ಯೋಗ ಪ್ರಾಣಾಯಾಮ ಉತ್ತಮ ಆಹಾರ ಸೇವನೆ ಬರೀ ಇಷ್ಟು ಮಾಡಿದರೆ ಸಾಲುವುದಿಲ್ಲ. ನಮ್ಮ ಸುತ್ತಮುತ್ತಲಿನ ವಾತಾವರಣ ಮತ್ತು ಪರಿಸರ ಚೆನ್ನಾಗಿ ಇರಬೇಕು. ಮನೆಯ ಒಳಗಡೆ ಮತ್ತು ಹೊರಗಡೆಯ ಪರಿಸರ ಶುಭ್ರವಾಗಿ ಇರುವಂತೆ ನೋಡಿಕೊಳ್ಳಿ. ಮನೆಯನ್ನು ಸ್ವಚ್ಛವಾಗಿಟ್ಟುಕೊಂಡರೆ ನಮ್ಮ ಮನಸ್ಸು ಸಂತೋಷವಾಗಿರುತ್ತದೆ. ತಮ್ಮ ಬ್ಯುಸಿ ಕೆಲಸಗಳ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ತೋಟಗಾರಿಕೆ ಮತ್ತು ಪರಿಸರದ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಇದರಿಂದ ನಿಮ್ಮ ದೇಹ ಮತ್ತು ಮನಸ್ಸು ಎರಡೂ ಆರೋಗ್ಯದಿಂದ ಇರುತ್ತದೆ.

LEAVE A REPLY

Please enter your comment!
Please enter your name here