ಉತ್ತಮ ಆರೋಗ್ಯಕ್ಕಾಗಿ ಈ ಸೊಪ್ಪು ಪ್ರತಿ ನಿತ್ಯ ತಿನ್ನಿ

0
894

ಈಗಿನ ಆಧುನಿಕ ಕಾಲದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಕಷ್ಟ. ಉತ್ತಮವಾದ ಪೌಷ್ಟಿಕಾಂಶ ಬರಿತ ಆಹಾರ ಪದಾರ್ಥಗಳು ಸಿಗುವುದು ತುಂಬಾನೇ ಕಷ್ಟ ವಾಗಿದೆ. ಅದರಿಂದ ನಾವು ಹೆಚ್ಚು ಹಣ್ಣುಗಳು ತರಕಾರಿಗಳು ಮತ್ತು ಸೊಪ್ಪನ್ನು ತಿನ್ನುತ್ತೇವೆ. ವೈದ್ಯರು ಸಹ ಹೇಳುತ್ತಾರೆ. ಕಣ್ಣು ತರಕಾರಿ ಸೊಪ್ಪುಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಬೇಕಾಗುವಷ್ಟು ಪೌಷ್ಠಿಕಾಂಶಗಳು ದೊರೆಯುತ್ತವೆ. ಇನ್ನು ಸೊಪ್ಪುಗಳ ವಿಚಾರಕ್ಕೆ ಬರುವುದಾದರೆ ಸೊಪ್ಪುಗಳಲ್ಲಿ ಅನೇಕ ರೀತಿಯ ಸೊಪ್ಪುಗಳು ಸಿಗುತ್ತವೆ. ಎಲ್ಲಾ ಸೊಪ್ಪು ಗಳಲ್ಲೂ ಒಂದಲ್ಲ ಒಂದು ರೀತಿಯ ಆರೋಗ್ಯಕ್ಕೆ ಉಪಯೋಗವಾಗುವಂತಹ ಅಂಶಗಳು ಇದ್ದೇ ಇರುತ್ತದೆ. ಉತ್ತಮ ಆರೋಗ್ಯಕ್ಕಾಗಿ ಹೆಚ್ಚು ಗಳನ್ನು ತಿನ್ನಬೇಕು ಇಂತಹ ಸೊಪ್ಪುಗಳಲ್ಲಿ ಬಸಳೆ ಸೊಪ್ಪು ಕೂಡ ಒಂದು.

ಬಸಳೆಸೊಪ್ಪಿನ ವೈಶಿಷ್ಟಗಳನ್ನು ನೋಡುವುದಾದರೆ ಬಸಳೆ ಸೊಪ್ಪಿನಲ್ಲಿ ಕಬ್ಬಿಣದಂಶ ಮತ್ತು ಫೋಟೋ ಹೆಚ್ಚಾಗಿರುತ್ತದೆ ಮತ್ತು ವಿಟಮಿನ್ ಎ ವಿಟಮಿನ್ ಬಿ ಅಂಶಗಳು ಹೆಚ್ಚಾಗಿರುತ್ತದೆ. ತುಂಬಾ ಸಣ್ಣಗಾಗಿ ಇರುವವರು ಈ ಸೊಪ್ಪನ್ನು ಹೆಚ್ಚು ತಿನ್ನುವುದರಿಂದ ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಬಸಳೆಸೊಪ್ಪು ಹಸಿವನ್ನು ಹೆಚ್ಚಿಸುತ್ತದೆ. ಇದರಿಂದ ನಾವು ಹೆಚ್ಚು ಆಹಾರವನ್ನು ಸೇವಿಸುತ್ತವೆ. ಇದರಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಸೇರಿಕೊಂಡು ನಮ್ಮ ಆರೋಗ್ಯವನ್ನು ಹೆಚ್ಚಿಸುವುದಲ್ಲದೆ ತೂಕವನ್ನು ಕೂಡ ಹೆಚ್ಚಿಸುತ್ತದೆ.

ಸರಿಯಾಗಿ ಊಟ ಸೇರುತ್ತಿಲ್ಲವೆನ್ನುವವರು ಮತ್ತು ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವವರು ಬಸಳೆ ಸೊಪ್ಪನ್ನು ಹೆಚ್ಚಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ಆಗುತ್ತದೆ. ಇದರಿಂದ ನಾವು ಸೇವಿಸಿದ ಆಹಾರದಲ್ಲಿರುವ ಪೋಷಕಾಂಶಗಳು ಸಂಪೂರ್ಣವಾಗಿ ನಮ್ಮ ದೇಹವನ್ನು ಸೇರುತ್ತವೆ. ಮಲವಿಸರ್ಜನೆಯ ಸಮಸ್ಯೆಯಿಂದ ಬಳಲುತ್ತಿರುವವರು ಬಸಳೆ ಸೊಪ್ಪನ್ನು ಹೆಚ್ಚಾಗಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ತುಂಬಾ ಚೆನ್ನಾಗಿ ಆಗಿ ಮಲ ವಿಸರ್ಜನೆ ಚೆನ್ನಾಗಿ ಆಗುತ್ತದೆ. ಬಸಳೆ ಸೊಪ್ಪಿನಲ್ಲಿ ಹೇರಳವಾಗಿ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಹೇರಳವಾಗಿರುತ್ತದೆ ಇದನ್ನು ಹೆಚ್ಚಾಗಿ ತಿನ್ನುವುದರಿಂದ ನಮ್ಮ ಮೌಲ್ಯಗಳು ಗಟ್ಟಿ ಯಾಗುವುದಿಲ್ಲದೆ ಸಂಧಿಗಳ ನೋವೂ ಜಾಯಿಂಟ್ ಪೈನ್ ಕೂಡ ಕಡಿಮೆಯಾಗುತ್ತದೆ. ಬಸಳೆ ಸೊಪ್ಪು ದೇಹಕ್ಕೆ ತಂಪು. ಬೇಸಿಗೆ ಕಾಲದಲ್ಲಿ ಬಸಳೆ ಸೊಪ್ಪನ್ನು ಹೆಚ್ಚಾಗಿ ತಿನ್ನುವುದರಿಂದ ದೇಹಕ್ಕೆ ತಂಪನ್ನು ನೀಡುತ್ತದೆ. ಇದರಿಂದ ಬೇಸಿಗೆಯಲ್ಲಿ ಆಗುವ ಬೆವರಿನ ಗುಳ್ಳೆಗಳು ಆಗುವುದಿಲ್ಲ.

ಬಸಳೆ ಸೊಪ್ಪನ್ನು ಹೆಚ್ಚಾಗಿ ತಿನ್ನುವುದರಿಂದ ರಕ್ತ ಶುದ್ಧಿಯಾಗುತ್ತದೆ ಇದರಿಂದ ಅಶುದ್ಧ ರಕ್ತದಿಂದ ಉಂಟಾಗುವ ಆದಂತಹ ಸಮಸ್ಯೆಗಳು ಕೂಡ ಬರುವುದಿಲ್ಲ. ಗರ್ಭಿಣಿಯರು ಬಸಳೆ ಸೊಪ್ಪನ್ನು ಹೆಚ್ಚಾಗಿ ತಿನ್ನುವುದರಿಂದ ಅವರ ಆರೋಗ್ಯವೂ ಉತ್ತಮವಾಗಿರುತ್ತದೆ ಮತ್ತು ಹುಟ್ಟುವ ಮಗುವಿನ ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ ಮತ್ತು ಮಗುವು ಆರೋಗ್ಯದಿಂದ ಜನಿಸುತ್ತದೆ. ಆದ್ದರಿಂದ ವಾರಕ್ಕೆ ಎರಡರಿಂದ ಮೂರು ಬಾರಿಯಾದರೂ ಬಸಳೆ ಸೊಪ್ಪಿನ ಸಾಂಬಾರ್ ಅಥವಾ ಪಲ್ಯವನ್ನು ಮಾಡಿ ತಿನ್ನಿ. ಪ್ರತಿ ಬಾರಿ ಸೊಪ್ಪಿನ ಸಾಂಬಾರ್ ಮಾಡುವಾಗ ಅದರ ಜೊತೆ ಬಸಳೆ ಸೊಪ್ಪು ಕೂಡ ಇರಲಿ ಇದರಿಂದ ಉತ್ತಮ ಆರೋಗ್ಯ ನಿಮ್ಮ ಜೊತೆಗೆ ಇರುತ್ತದೆ

LEAVE A REPLY

Please enter your comment!
Please enter your name here