ರಾವಣಾಸುರನ ಬಗ್ಗೆ ನಿಮಗೆ ಗೊತ್ತಿಲ್ಲದ ಆಸಕ್ತಿ ವಿಷಯಗಳು

0
1042

ರಾವಣಾಸುರ ಯಾರಿಗೆ ಗೊತ್ತಿಲ್ಲ ಹೇಳಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋದರೆ ಸಾಕು ಅಲ್ಲೇ ನಿಂತಿರುವ ರಾವಣಾಸುರನ ದರ್ಶನವಾಗುತ್ತದೆ. ಅಲ್ಲವೇ ಹಾಗಾದರೆ ಈ ರಾವಣಾಸುರ ಯಾರು ಗೊತ್ತೇ ಇವನು ಒಬ್ಬ ಅಸುರ ಇವನು ಜನರಗೆ ತುಂಬಾ ಹಿಂಸೆ ಕೊಡುತ್ತಿದ್ದ ಅದರ ಜೊತೆಗೆ ರಾಮನ ಪತ್ನಿಯಾದ ಸೀತೆಯನ್ನು ಅಪಹರಣ ಮಾಡಿ ಲಂಕೆಗೆ ಎತ್ತಿಕೊಂಡು ಹೋದ. ನಾವು ನಮ್ಮ ಹಿರಿಯರಿಂದ ಸಾಕಷ್ಟು ಕಥೆಗಳನ್ನು ಕೇಳಿದ್ದೇವೆ ಸಾಕಷ್ಟು ಸಿನಿಮಾದಲ್ಲೂ ರಾವಣನ ಕ್ರೂರ ಮುಖವನ್ನು ನಾವು ತೆರೆ ಮೇಲೆ ಕಂಡಿದ್ದೇವೆ. ಈತನಿಗೆ ಹತ್ತು ತಲೆಗಳು ಇದ್ದವು ಅತೀ ಹೆಚ್ಚು ಶಿವನ ಭಕ್ತನಾಗಿದ್ದ. ಒಮ್ಮೆ ಪರ ಶಿವನ ಜಪ ಮಾಡುತ್ತಾ ವರ್ಷಗಳು ಕಳೆದವು ಶಿವನು ದರ್ಶನ ನೀಡಲೇ ಇಲ್ಲ ಆಗ ಶಿವನು ದರ್ಶನ ನೀಡಲಿಲ್ಲ ಎಂದು ತನ್ನ ಒಂದೊಂದು ಶಿರವನ್ನು ತಾನೇ ಸ್ವಯಂ ಕತ್ತರಿಸಿಕೊಂಡನು ಇನ್ನೇನು ತನ್ನ ಕೊನೆ ಶಿರವನ್ನು ಕತ್ತರಿಸಬೇಕು ಎನ್ನುವಾಗ ಸಾಂಬ ಸದಾಶಿವನು ದರ್ಶನ ನೀಡಿ ಈತನಿಗೆ ವರ ದಾನ ಮಾಡಿದರು ಎಂಬ ಕಥೆ ನಮ್ಮ ಪುರಾಣದಲ್ಲಿದೆ. ರಾವಣನು ಕ್ರೂರ ಎಂದು ಎಲ್ಲರಿಗೂ ಗೊತ್ತು ಆದರೆ ಇನ್ನೂ ಇವನ ಬಗ್ಗೆ ಇರುವ ಅಶಕ್ತಿದಾಯಕ ವಿಷಯಗಳು ಗೊತ್ತೇ ಬನ್ನಿ ತಿಳಿಯೋಣ.

ರಾಮಯಣವು ಸೀತೆಯನ್ನು ಅಪಹರಿದ್ದು ರಾವಣಾಸುರನ ಎಂದು ಹೇಳಿದರೆ ಜೈನ ರಾಮಾಯಣವು ರಾವಣನ ಮಗಳು ಸೀತೆ ಎಂದು ಹೇಳುತ್ತದೆ. ರಾವಣನು ಅಲಂಕಾರ ಪ್ರಿಯ ಯಾವುದೇ ಮಹಿಳೆಯು ಸಹ ಅಷ್ಟು ಸುಂದರವಾಗಿ ಅಲಂಕಾರ ಮಾಡಿಕೊಳ್ಳಲು ಆಗದಷ್ಟು ಚೆನ್ನಾಗಿ ಅಲಂಕಾರ ಮಾಡಿಕೊಳ್ಳುತ್ತಿದ್ದ. ಸಂಗೀತಗಾರರು ಬಳಸುವ ವೀಣೆಯನ್ನು ತಯಾರಿಸಿದ್ದು ರಾವಣಾಸುರನೆ ಆ ವೀಣೆಯ ಹೆಸರು ರುದ್ರವೀಣೆ. ಈತನ ಶಿವ ಭಕ್ತಿ ಎಷ್ಟರ ಮಟ್ಟಿಗೆ ಇತ್ತು ಅಂದ್ರೆ ಶಿವನ ಈತನ ಜೊತೆಗೆ ಬರಲು ಒಪ್ಪದೇ ಇದ್ದಾಗ ಆತ ಕೈಲಾಸವನ್ನೇ ಎತ್ತುಕೊಂಡು ಹೋಗಿದ್ದ.

ರಾವಣಾಸುರನು ಸಾಕಷ್ಟು ಬುದ್ದಿವಂತನಾಗಿದ್ದನು ಈತ ಮಾತಿನಲ್ಲೂ ಮತ್ತು ಖಗೋಳ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಪಾರಂಗತನಾಗಿದ್ದನ್ನು ಈತನನ್ನು ಮೀರಿಸುವುದು ಅಷ್ಟು ಸುಲಭದ ಮಾತಲ್ಲ. ರಾವಣ ಜನರನ್ನು ಹಿಂಸೆ ಮಾಡುತ್ತಿದ್ದ ಆದರೆ ಅವರ ಕುಟುಂಬದವರನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ರಾವಣಸುರನು ಅತೀ ಹೆಚ್ಚು ಶಿವನ ಪರಮಭಕ್ತ. ನಿತ್ಯ ಶಿವನ ಆರಾಧನೆಯನ್ನು ಮಾಡುತ್ತಿದ್ದನು. ಜಾತಿ ಧರ್ಮ ಇವುಗಳನ್ನು ರಾವಣಸುರನು ವಿರೋಧ ಮಾಡುತ್ತಿದ್ದನು ಎಲ್ಲರೂ ಒಂದೇ ಜಾತಿ ಎಂಬುದು ಇವನ ವಾದ.

ರಾವಣಸುರನು ಪುಷ್ಪಕ ವಿಮಾನವನ್ನು ಸ್ವಂತ ಕತೃತ್ವ ಶಕ್ತಿಯಿಂದ ತಯಾರಿಸುತ್ತಿದ್ದ. ರಾವಣನ ಹತ್ತು ತಲೆಗಳಲ್ಲೂ ಸಹ ಪ್ರತಿಭೆ ಎಂಬುದು ಇತ್ತು ಇವನು ತುಂಬಾ ಬುದ್ಧಿವಂತನಾಗಿದ್ದನು. ರಾವಣಸುರನಿಗೆ ಎಲ್ಲ ರೀತಿಯ ಶಾಸ್ತ್ರಗಳು. ವೇದಗಳು ಪುರಾಣಗಳು ವಿದ್ಯೆಗಳು ಸಹ ಅವನಲ್ಲಿ ತುಂಬಿದ್ದವು ಸರಸ್ವತಿಯನ್ನು ತುಂಬಾ ಚೆನ್ನಾಗಿ ಒಲ್ಲೈಸಿಕೊಂಡಿದ್ದನು. ಹಾಗಾಗಿ ಶ್ರೀಲಂಕಾದ ಕೆಲವು ಪ್ರದೇಶಗಳಲ್ಲಿ ಈಗಲೂ ಸಹ ರಾವಣಸುರನನ್ನು ತುಂಬಾ ಭಕ್ತಿಯಿಂದ ದೈವವಾಗಿ ಪೂಜಿಸುತ್ತಾರೆ.

LEAVE A REPLY

Please enter your comment!
Please enter your name here