ಸತ್ತವರ ಫೋಟೋಗಳನ್ನು ದೇವರ ಕೋಣೆಯಲ್ಲಿ ಇಡಬಾರದು ಎನ್ನುತಾರೆ ಏಕೆ ಅಂದ್ರೆ

0
1126

ನಮ್ಮ ಭಾರತದ ಸಾಕಷ್ಟು ಜನರ ಮನೆಯಲ್ಲಿ ದೇವರ ಮನೆಗಳು ಪ್ರತ್ಯೇಕ ಇರುತ್ತವೆ ದೇವರ ಮನೆ ಇಲ್ಲ ಎಂದರೆ ಒಂದು ಪುಟ್ಟ ಜಾಗದಲ್ಲಿ ದೇವರ ವಿಗ್ರಹಗಳು. ದೇವರ ಫೋಟೋಗಳನ್ನು ಇಟ್ಟು ಪೂಜೆ ಮಾಡುತ್ತಾರೆ ಅಲ್ಲವೇ ಇದು ನಮ್ಮ ಸಂಪ್ರದಾಯ. ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ದೇವರ ವಿಗ್ರಹ ಫೋಟೋ ಇಟ್ಟು ಪೂಜೆ ಮಾಡುತ್ತಾರೆ ಆದರೆ ಕೆಲವರು ತಮ್ಮ ಮನೆಯಲ್ಲಿ ಸತ್ತವರ ಹಿರಿಯರ ಫೋಟೋಗಳನ್ನು ಸಹ ದೇವರ ಮನೆಯಲ್ಲಿ ದೇವರ ಪಕ್ಕದಲ್ಲೇ ಇಟ್ಟು ಪೂಜೆ ಮಾಡುತ್ತಾರೆ ಯಾಕೆಂದರೆ ಸತ್ತವರು ಸಹ ದೇವರಿಗೆ ಸಮಾನ ಅವರು ದೇವರ ಬಳಿ ಹೋಗಿರುತ್ತಾರೆ ಎಂದು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಾರೆ ಆದರೆ ಹೀಗೆ ಮಾಡುವುದರಿಂದ ಒಳ್ಳೆಯದಾಗುತ್ತ ನೋಡೋಣ ಬನ್ನಿ.

ಮನೆಯಲ್ಲಿ ಎಷ್ಟೇ ಒಳ್ಳೆಯವರು ಎಷ್ಟೇ ಪ್ರೀತಿ ಪಾತ್ರರು ಆಗಿದ್ದರು ಅವರು ಸತ್ತ ನಂತರ ಅವರ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಬಾರದು ಜೊತೆಗೆ ದೇವರ ಫೋಟೋಗಳ ಪಕ್ಕದಲ್ಲಿ ಇಡಬಾರದು ದೇವರ ಮನೆ ಅಥವಾ ದೇವರ ಫೋಟೋಗಳ ಪಕ್ಕದಲ್ಲಿ ಇಟ್ಟರೆ ಅದು ಮನೆಗೆ ತುಂಬಾ ದೋಷ ಎಂದು ವಾಸ್ತು ಪ್ರಕಾರ ತಿಳಿಸುತ್ತದೆ. ಹೀಗೆ ಮಾಡುವುದರಿಂದ ನಮಗೆ ಗೊತಿಲ್ಲದ ಹಾಗೇ ಸಾಕಷ್ಟು ಸಮಸ್ಯೆಗಳು ನಮ್ಮ ಮನೆಗೆ ಬರುತ್ತದೆ ಎಂದು ಪುರಾಣದಲ್ಲಿ ಉಲ್ಲೇಖ ಇದೆ.

ಜೊತೆಗೆ ಮನುಷ್ಯನ ದೇಹ ಸಾಯುತ್ತದೆ ಅವರ ಉಸಿರು ನಿಲ್ಲುತ್ತದೆ ಆದರೆ ಮನುಷ್ಯನ ಆತ್ಮಕ್ಕೆ ಯಾವುದೇ ಕಾರಣಕ್ಕೂ ಸಾವು ಎಂಬುದು ಇರುವುದಿಲ್ಲ ಆತ್ಮ ಎಂಬುದು ಸತ್ತ ನಂತರ ಅವರ ಆತ್ಮೀಯರ ಜೊತೆಯಲ್ಲೇ ಇರುತ್ತದೆ ನಾವು ಅವರ ಪೋಟೋಗೆ ಪೂಜಿಸುವಾಗ ಅವರ ಆತ್ಮಕ್ಕೆ ಪೂಜೆ ಸಲ್ಲಿಸುತ್ತೇವೆ ಹಾಗಾಗಿ ಯಾವುದೇ ಕಾರಣಕ್ಕೂ ದೇವರ ಜೊತೆ ಆತ್ಮವನ್ನು ಪೂಜಿಸಬಾರದು ಎಂಬುದು ಶಾಸ್ತ್ರ ಹೇಳುತ್ತದೆ. ಕನಿಷ್ಠ ಪಕ್ಷ ದೇವರ ಫೋಟೋ ಅಥವ ದೇವರ ಕೋಣೆಯಿಂದ ಐದು ಅಡಿ ಅಂತರ ಬಿಟ್ಟು ಫೋಟೋಗಳನ್ನು ಹಾಕಬಹುದು.

ದೇವರ ಮನೆಯಲ್ಲಿ ಅಥವಾ ದೇವರ ಪಕ್ಕದಲ್ಲಿ ಇಟ್ಟು ಪೂಜೆ ಮಾಡಿದರೇ ಮನೆಯ ಯಜಮಾನನಿಗೆ ಆರೋಗ್ಯದ ಸಮಸ್ಯೆ ಎಂಬುದು ಕಾಡುತ್ತದೆ ಜೊತೆಗೆ ಯಾವುದೇ ಕೆಲಸಗಳು ಸುಲಭವಾಗಿ ನೆಡೆಯುವುದಿಲ್ಲ. ಮನೆಯಲ್ಲಿ ಶಾಂತಿ ನೆಮ್ಮದಿ ಎಂಬುದು ಇರುವುದಿಲ್ಲ. ಜೊತೆಗೆ ದೇವರ ಮನೆಯಲ್ಲಿ ಇಟ್ಟಾಗ ನಮಗೆ ಮನಸ್ಸನ್ನು ಏಕಾಗ್ರತೆಯಲ್ಲಿ ಇಟ್ಟುಕೊಂಡು ಪೂಜೆ ಸಲ್ಲಿಸಲು ಆಗುವುದಿಲ್ಲ ನಮ್ಮ ದೃಷ್ಟಿ ಹೆಚ್ಚಾಗಿ ಅವರ ಫೋಟೋಗಳ ಮೇಲೆ ಹೋಗುತ್ತದೆ ವಿನಹ ದೇವರ ಮೇಲೆ ಹೋಗುವುದಿಲ್ಲ ಹಾಗಾಗಿ ಯವುದೇ ಕಾರಣಕ್ಕೂ ಸತ್ತವರ ಫೋಟೋವನ್ನು ದೇವರ ಬಳಿ ಅಥವಾ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಬಾರದು ಎಂದು ಶಾಸ್ತ್ರದಲ್ಲಿ ಉಲ್ಲೇಖ ಇದೆ. ನಂಬುವುದು ಬಿಡುವುದು ನಿಮಗೆ ಬಿಟ್ಟ ವಿಚಾರ ಶಾಸ್ತ್ರದ ಪ್ರಕಾರ ನಾವು ನಿಮೆಗೆ ಮಾಹಿತಿ ತಿಳಿಸಿದ್ದೇವೆ.

LEAVE A REPLY

Please enter your comment!
Please enter your name here