ಸಾವಿನ ಬಗ್ಗೆ ಚಿಂತೆ ಏಕೆ? ನಿಮ್ಮ ಆಯಸ್ಸು ವೃದ್ದಿ ಮಾಡಲು ಈ ಸರಳ ಟಿಪ್ಸ್ ಪಾಲಿಸಿ

0
1000

ಸಾವಿಲ್ಲದ ಮನೆಯಲ್ಲಿ ಸಾಸಿವೆ ಕಾಳು ಸಿಗುವುದಿಲ್ಲ ಎಂದು ನೀವೆಲ್ಲಾ ಕೇಳಿರುತ್ತೀರಾ. ಹೀಗೆ ಪ್ರತಿಯೊಬ್ಬರ ಮನೆಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಯಾರಾದರೊಬ್ಬರು ಸಾವನ್ನಪ್ಪಿರುತ್ತಾರೆ. ಭೂಮಿಯ ಮೇಲೆ ಯಾರೂ ಶಾಶ್ವತವಾಗಿ ಬದುಕುವುದಿಲ್ಲ. ಇಲ್ಲಿ ಯಾರೂ ಚಿರಂಜೀವಿಗಳಲ್ಲ. ಆಯಸ್ಸು ಮುಗಿದ ಮೇಲೆ ಎಲ್ಲರೂ ಹೋಗಲೇಬೇಕು ಆದರೆ ಕೆಲವರು ತಮ್ಮ ಸಾವನ್ನು ತಾವೇ ತಂದುಕೊಳ್ಳುತ್ತಾರೆ. ಕೆಲವೊಮ್ಮೆ ತಮ್ಮ ಬೇಜವಾಬ್ದಾರಿತನದಿಂದ ಅಪಘಾತವಾಗುವುದು ಧೂಮಪಾನ ಮದ್ಯಪಾನ ಡ್ರಗ್ ಸೇವನೆ ಹೀಗೆ ಹಲವಾರು ಚಟಗಳಿಗೆ ವ್ಯಸನವಾಗುವುದು ಅಥವಾ ಇನ್ಯಾವುದೋ ಆರೋಗ್ಯದ ಸಮಸ್ಯೆ ಇಂದ ಸಾವನ್ನಪ್ಪಬಹುದು. ಸಾವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಆಯಸ್ಸನ್ನು ಸ್ವಲ್ಪ ದಿನಗಳ ಕಾಲ ವೃದ್ದಿಸಬಹುದು ಅಂದರೆ ಸಾವನ್ನು ಸ್ವಲ್ಪ ನಿಧಾನವಾಗಿ ಬರುವಂತೆ ಮಾಡಬಹುದು. ಅದು ಹೇಗೆ ಅನ್ನುತ್ತೀರಾ ಬನ್ನಿಅದನ್ನು ನಾವು ಹೇಳುತ್ತೇವೆ.

ಭೂಮಿಯ ಮೇಲೆ ಪ್ರತಿಯೊಂದು ಜೀವಿಯೂ ಉಸಿರಾಡುತ್ತದೆ. ಒಂದು ನಿಮಿಷ ಉಸಿರು ನಿಂತ ಆದರೆ ಅವನು ಪರಲೋಕ ಸೇರುತ್ತಾನೆ ಆದ್ದರಿಂದ ಉಸಿರಾಟದ ಪ್ರಕ್ರಿಯೆಯು ತುಂಬಾ ಅತ್ಯಮೂಲ್ಯವಾದದ್ದು. ನಮ್ಮ ಉಸಿರಾಟದ ಪ್ರಕ್ರಿಯೆ ಅಕ್ರಮ ಬದ್ಧವಾಗಿರಬೇಕು ಸ್ವಲ್ಪ ಏರುಪೇರಾದರೂ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ನಮ್ಮ ಉಸಿರಾಟ ನಿಧಾನವಾಗಿ ಮತ್ತು ಸರಾಗವಾಗಿ ಉಸಿರಾಡಬೇಕು. ಹೆಚ್ಚು ವೇಗವಾಗಿ ಉಸಿರಾಡುವುದರಿಂದ ನಮ್ಮ ದೇಹವು ಮಾನಸಿಕವಾಗಿ ಉದ್ವೇಗಕ್ಕೆ ಒಳಗಾಗುವುದು ಇದರಿಂದ ರಕ್ತದೊತ್ತಡ ಹೃದಯಾಘಾತ ಆಗುವ ಸಂಭವ ಹೆಚ್ಚಾಗಿರುತ್ತದೆ. ನಾವು ಓದುವಾಗ ಅಥವಾ ಜೋರಾಗಿ ನಡೆಯುವಾಗ ಮತ ಯಾವುದು ಸುದ್ದಿಗಳನ್ನು ಕೇಳಿದಾಗ ನಮ್ಮ ಉಸಿರಾಟ ನಮಗೆ ಗೊತ್ತಿಲ್ಲದಂತೆ ಏರುಪೇರಾಗುತ್ತದೆ ಇದು ನಮ್ಮ ಗಮನಕ್ಕೆ ಬರುವುದಿಲ್ಲ. ಇಂತಹ ಸಂದರ್ಭಗಳಲ್ಲೇ ಹೆಚ್ಚು ಹೃದಯಾಘಾತ ಅಥವಾ ರಕ್ತದೊತ್ತಡ ಹೆಚ್ಚಾಗುವುದು. ಆದ್ದರಿಂದ ನಾವು ಹೆಚ್ಚು ನಿಧಾನವಾಗಿ ಸರಾಗವಾಗಿ ಮತ್ತು ದೀರ್ಘವಾಗಿ ಉಸಿರಾಡುವುದರಿಂದ ಆಮ್ಲಜನಕವು ನಮ್ಮ ದೇಹಕ್ಕೆ ಸೇರಿಕೊಂಡು ಇಂಗಾಲದ ಡಯಾಕ್ಸೈಡ್ ನಮ್ಮ ದೇಹದಿಂದ ಸರಾಗವಾಗಿ ಆಚೆ ಹೋಗಲು ಅನುವು ಮಾಡಿಕೊಡುತ್ತದೆ.

ಪ್ರತಿದಿನ ಯೋಗ ಪ್ರಾಣಾಯಾಮ ವ್ಯಾಯಾಮಗಳನ್ನು ಮಾಡಬೇಕು. ಊಟ ಮಾಡ್ದಾ ಪೌಷ್ಟಿಕಾಂಶ ಇರುವ ಆಹಾರಗಳನ್ನು ಹೆಚ್ಚಿಸಬೇಕು ಹಣ್ಣುಗಳು ತರಕಾರಿಗಳನ್ನು ತಿನ್ನಬೇಕು ಹೆಚ್ಚು ನೀರನ್ನು ಕುಡಿಯಬೇಕು. ಬೆಳಗ್ಗೆ ಸಮಯ ಬೇಗ ಎದ್ದು ವಾಕ್ ಮಾಡಬೇಕು. ಧೂಮಪಾನ ಮದ್ಯಪಾನ ಸೇವನೆಯನ್ನು ಬಿಡಬೇಕು. ಊಟ ಆದ ತಕ್ಷಣ ಮಲಗಬಾರದು. ಉತ್ತಮ ವಾತಾವರಣ ಶುದ್ಧಗಾಳಿ ಬರುವಂತಹ ಜಾಗದಲ್ಲಿ ಹೆಚ್ಚು ಸಮಯಗಳನ್ನು ಕಳೆಯಿರಿ. ನಮ್ಮ ಆಹಾರ ಸೇವನೆ ಕ್ರಮಬದ್ಧವಾಗಿ ಇರಬೇಕು. ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಸೋಮಾರಿತನದಿಂದ ಕೂರಬಾರದು. ನಮ್ಮ ದೇಹಕ್ಕೆ ನಾವು ಎಷ್ಟು ಕೆಲಸ ಕೊಡುತ್ತೇವೆ ಅದಕ್ಕೆ ತಕ್ಕನಾದ ಅಷ್ಟು ವಿಶ್ರಾಂತಿಯನ್ನು ಸಹ ನೀಡಬೇಕು. ಈ ಎಲ್ಲಾ ಕ್ರಮಗಳನ್ನು ಪಾಲಿಸುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಆದ್ದರಿಂದ ನಮ್ಮ ಆಯಸ್ಸು ಕೂಡ ಹೆಚ್ಚಾಗುತ್ತದೆ.

LEAVE A REPLY

Please enter your comment!
Please enter your name here