ಹಾಗಲಕಾಯಿಯನ್ನು ತಿನ್ನುವವರಿಗೆ ಮಾತ್ರ ಈ ಮೂವತ್ತು ಲಾಭ ಸಿಗೋದು

0
1258

ಹಾಗಲಕಾಯಿ ಯಾರಿಗೆ ಗೊತ್ತಿಲ್ಲ ಹೇಳಿ ಸಾಮಾನ್ಯವಾಗಿ ಹಾಗಲ ಕಾಯಿಯನ್ನು ಪಲ್ಯ ಮತ್ತು ಸಾಂಬಾರ್ ಮಾಡಲು ಬಳಸುತ್ತಾರೆ. ಹಾಗಲಕಾಯಿ ತಿನ್ನಲು ಕಹಿಯಾಗಿರುತ್ತದೆ ಆದ್ದರಿಂದ ತುಂಬಾ ಜನಗಳು ಇದನ್ನು ತಿನ್ನಲು ಇಷ್ಟಪಡುವುದಿಲ್ಲ ಆದರೆ ಇದರಲ್ಲಿರುವ ಔಷಧೀಯ ಗುಣಗಳ ಬಗ್ಗೆ ತಿಳಿದರೆ ಅದು ಕಹಿಯಾಗಿದ್ದರೂ ಪರವಾಗಿಲ್ಲ ಇದನ್ನು ನಾವು ತಿನ್ನುತ್ತದೆ ಎನ್ನುತ್ತೀರಾ. ಸುಳ್ಳು ಸಿಹಿಯಾಗಿರುತ್ತದೆ ಸತ್ಯ ಕಹಿಯಾಗಿರುತ್ತದೆ ಆದರೆ ನಾವು ಎಷ್ಟು ಸತ್ಯವಾಗಿರುತ್ತೇವೆಯೋ ಅಷ್ಟೇ ನಮಗೆ ಒಳಿತು, ಅದೇ ರೀತಿ ಹಾಗಲಕಾಯಿ ಕೂಡ ಕಹಿಯಾಗಿರುತ್ತದೆ ಇದನ್ನು ನಾವು ಎಷ್ಟು ಜಾಸ್ತಿ ತಿನ್ನುತ್ತೇವೆಯೋ ಅಷ್ಟೇ ನಮಗೆ ಮತ್ತು ನಮ್ಮ ಆರೋಗ್ಯಕ್ಕೆ ಒಳಿತು.

ಹಾಗಲ ಕಾಯಿ ತಿನ್ನುವುದರಿಂದ ಆಗುವ ಉಪಯೋಗಗಳು ಮತ್ತು ಆರೋಗ್ಯದ ಬದಲಾವಣೆಗಳ ಬಗ್ಗೆ ತಿಳಿಯುವುದಾದರೆ. ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವವರು ಅಥವಾ ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೆ ಹಾಗಲಕಾಯಿಯನ್ನು ತಿನ್ನರಿ. ಇದರಿಂದ ಜೀರ್ಣಕ್ರಿಯೆಗೆ ಚೆನ್ನಾಗಿ ಆಗುತ್ತದೆ. ಮತ್ತು ಆಹಾರದಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ಸಂಪೂರ್ಣವಾಗಿ ಸೇರುತ್ತದೆ. ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರು ಹಾಗಲಕಾಯಿಯನ್ನು ಹೆಚ್ಚು ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗಿ ಮಲಬದ್ಧತೆಯ ಸಮಸ್ಯೆ ದೂರವಾಗುವುದು.

ಹಾಗಲಕಾಯಿಯಲ್ಲಿ ಔಷಧೀಯ ಗುಣಗಳು ಹೆಚ್ಚಾಗಿ ಇರುವುದರಿಂದ ಇದನ್ನು ಔಷಧಿಯನ್ನು ತಯಾರಿಸಲು ಬಳಸುತ್ತಾರೆ. ಹಾಗಲಕಾಯಿಯ ಎಲೆಗಳಿಂದ ಮಾಡಿದ ಟೀ ಅನ್ನು ಕುಡಿಯುವುದರಿಂದ ಮಲೇರಿಯಾ ಅಂತಹ ಸಮಸ್ಯೆಗಳು ದೂರವಾಗುತ್ತದೆ. ಕೊಲಂಬಿಯಾ ನಂತಹ ದೇಶಗಳಲ್ಲಿ ಈ ಟೀ ಅನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರೇ ಹೆಚ್ಚು, ಪ್ರತಿ ಮನೆಯಲ್ಲೂ ಒಬ್ಬರಲ್ಲ ಒಬ್ಬರಿಗೆ ಸಕ್ಕರೆ ಕಾಯಿಲೆ ಬಂದಿರುತ್ತದೆ. ಹಾಗಲಕಾಯಿ ಸಕ್ಕರೆ ಕಾಯಿಲೆಗೆ ರಾಮ ಬಾಣವಿದ್ದಂತೆ. ಹಾಗಲಕಾಯಿಯನ್ನು ಜ್ಯೂಸ್ ಮಾಡಿ ಪ್ರತಿನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಮತ್ತು ಇದು ನಮ್ಮ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ಹಾಗಲಕಾಯಿಯನ್ನು ಪಲ್ಯ ಮತ್ತು ಸಾಂಬಾರ್ ರೀತಿಯಲ್ಲಿ ಹೆಚ್ಚಾಗಿ ಉಪಯೋಗಿಸುವುದರಿಂದ ಸಕ್ಕರೆ ಕಾಯಿಲೆ ಬರುವುದಿಲ್ಲ. ಕರುಳಿನಲ್ಲಿ ಲಾಡಿ ಹುಳುವಿನ ಸಮಸ್ಯೆಯಿಂದ ಏನಾದರೂ ನೀವು ಬಳಲುತ್ತಿದ್ದರೆ ಹಾಗಲಕಾಯಿಯಿಂದ ತಯಾರಾದ ಔಷಧಿಯನ್ನು ಸೇರಿಸುವುದರಿಂದ ಲಾಡಿ ಹುಳುವಿನ ಸಮಸ್ಯೆ ದೂರವಾಗುತ್ತದೆ. ಹಿಂದಿನ ಕಾಲದಲ್ಲಿ ಸಿಡುಬು ಮತ್ತು ದಡಾರ ಕಾಯಿಲೆಗಳಿಗೆ ತುತ್ತಾದರೆ ಸಾವೇ ಬರುತ್ತಿತ್ತು. ಹಾಗಲಕಾಯಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಸಿಡುಬು ಮತ್ತು ದಡಾರ ನಂತಹ ಕಾಯಿಲೆಗಳು ಬರುವುದಿಲ್ಲ.

ಹಾಗಲಕಾಯಿಯು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುತ್ತದೆ. ಇದನ್ನು ಹೆಚ್ಚಾಗಿ ಸೇವಿಸುವುದರಿಂದ ಇದು ನಮಗೆ ಯಾವುದೇ ರೋಗಗಳು ಬೇಗ ಬರದಂತೆ ನೋಡಿಕೊಳ್ಳುತ್ತದೆ. ಹಾಗಲಕಾಯಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಇದು ನಮ್ಮ ರಕ್ತವನ್ನು ಶುದ್ಧಗೊಳಿಸುತ್ತದೆ ಮತ್ತು ಇದು ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸಹಕರಿಸುತ್ತದೆ. ಇಷ್ಟೆಲ್ಲಾ ಔಷಧೀಯ ಗುಣಗಳು ಇರುವ ಹಾಗಲಕಾಯಿ ಕಹಿ ಎಂದು ತಿನ್ನದೇ ಇರಬೇಡಿ ಇದನ್ನು ಹೆಚ್ಚಾಗಿ ಸೇವಿಸಿ ಇದರಿಂದ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

LEAVE A REPLY

Please enter your comment!
Please enter your name here