ಯಾವ ದೇವರಿಗೆ ಯಾವ ನೈವೇದ್ಯ ಇಟ್ಟರೆ ನಿಮಗೆ ಫಲ ಹೆಚ್ಚು ಸಿಗುತ್ತದೆ ತಿಳಿಯಿರಿ

0
1042

ನಮ್ಮಲ್ಲಿ ಹಲವಾರು ಧರ್ಮಗಳಿವೇ ಅವರು ಆಯಾ ಧರ್ಮಕ್ಕೆ ಸೇರಿದವರು ತಮ್ಮ ಅಭಿರುಚಿ ಇಷ್ಟಕ್ಕೆ ಅನುಗುಣವಾಗಿ ತಮ್ಮ ಇಷ್ಟ ದೈವವನ್ನು ಪೂಜಿಸುತ್ತಾರೆ. ವಾರದಲ್ಲಿ ದೇವರಿಗೆ ಇಷ್ಟವಾದ ದಿನ ಪೂಜೆ ಮಾಡಿ ಬಳಿಕ ನೈವೇದ್ಯ ಮಾಡುತ್ತಾರೆ. ಆದರೆ ವಾರದಲ್ಲಿ ಒಂದೊಂದು ದಿನ ಒಂದೊಂದು ದೇವರಿಗೆ ಪ್ರಿಯ ಅದು ಈ ದೇವರ ದಿನ ಎಂದು ಕರೆಯುತ್ತೇವೆ ಅಂದರೆ ಸೋಮವಾರ ಶಿವನ ದಿನ ಮಂಗಳವಾರ ಆಂಜನೇಯ ಮತ್ತು ಆದಿ ಶಕ್ತಿ ದಿನ. ಗಣಪತಿಯ ಮತ್ತು ಅಯ್ಯಪ್ಪನ ದಿನ ಭುದವಾರ, ಗುರುವಾರ ರಾಘವೇಂದ್ರ ಸ್ವಾಮಿಗಳ ಅಥವ ಸಾಯಿಬಾಬ ಅವರ ದಿನ. ಶುಕ್ರವಾರ ಲಕ್ಷ್ಮಿದಿನ. ಶನಿವಾರ ಶನಿದೇವ ಅಥವ ಆಂಜನೇಯನ ದಿನ ಎಂದು ಪೂಜೆ ಸಲ್ಲಿಸುತ್ತೇವೆ. ಹಾಗೆಯೇ ಆಯಾಯ ದೇವರನ್ನು ಪೂಜಿಸಿದಂತೆ ಆಯಾ ದೇವರಿಗೆ ಇಡುವ ನೈವೇದ್ಯವನ್ನೂ ಸಹ ಭಿನ್ನವಾಗಿರುತ್ತವೆ. ಹಾಗಿದ್ದರೆ ಯಾವ ದೇವರಿಗಾಗಲಿ ಪೂಜೆ ಮಾಡುವಾಗ ಯಾವ ನೈವೇದ್ಯ ಇಡಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀರಾಮನನ್ನು ಪೂಜಿಸುವಾಗ ಪಾನಕ ಕೋಸಂಬರಿ ನೈವೇದ್ಯವಾಗಿ ಇಟ್ಟು ಪೂಜೆ ಮಾಡಿದರೆ ಎಲ್ಲವೂ ಶುಭವಾಗುತ್ತದೆ. ಬೇಡಿಕೊಂಡಿದ್ದು ನೆರವೇರುತ್ತದೆ.ಹಾಗೂ ದಂಪತಿಗಳು ತುಳಸಿ ಪೂಜೆ ಮಾಡಿದರೆ ಇನ್ನೂ ಒಳ್ಳೆಯದು. ಅವರ ವೈವಾಹಿಕ ಜೀವನ ಚೆನ್ನಾಗಿರುತ್ತದೆ. ಶಿವನ ವಾರ ಸೋಮವಾರ ಶಿವನನ್ನು ಪೂಜಿಸುವಾಗ ಬೇಡಿದ ವರನ್ನು ಕೂಡಲೆ ಕೊಡುವ, ಕರೆದ ಕೂಡರೆ ಹೂಂ ಗುಟ್ಟುವ ಬೋಳಾ ಶಂಕರನಾಗಿ ಶಿವನನ್ನು ಭಕ್ತರು ಆರಾಧಿಸುತ್ತಾರೆ. ಈ ದೇವರಿಗೆ ಮೊಸರನ್ನ ವನ್ನು ನೈವೇದ್ಯವಾಗಿ ಇಡಬೇಕು.

ಬಹಳಷ್ಟು ಮಂದಿ ಭಕ್ತರು ಪ್ರತಿವರ್ಷ ಅಯ್ಯಪ್ಪ ಮಾಲೆ ಧರಿಸಿ ಮಾಲೆ ತೆಗೆಯಲು ಶಬರಿಮಲೆಗೆ ಹೋಗುತ್ತಿರುತ್ತಾರೆ. ಬೇಡಿದ ವರಗಳನ್ನು ನೆರವೇರಿಸುವ ದೈವವಾಗಿ ಅಯ್ಯಪ್ಪ ಸ್ವಾಮಿಯನ್ನು ಭಕ್ತರು ನಂಬುತ್ತಾರೆ. ಈ ದೇವರಿಗೆ ಸಜ್ಜೆ ಎಂದರೆ ಇಷ್ಟ. ಹಾಗಾಗಿ ಪೂಜೆ ಮಾಡುವಾಗ ನೈವೇದ್ಯವಾಗಿ ಸಜ್ಜೆಯನ್ನು ಸಮರ್ಪಿಸಿದರೆ ಭಕ್ತರು ಬೇಡಿದ್ದು ನೆರವೇರುತ್ತದೆ. ಶ್ರೀಕೃಷ್ಣನಿಗೆ ಯಾವ ಆಹಾರ ಎಂದರೆ ಇಷ್ಟ ಎಂಬುದು ಎಲ್ಲರಿಗೂ ಗೊತ್ತು. ಕೃಷ್ಣನಿಗೆ ಭಕ್ತರು ಬೆಣ್ಣೆಕಳ್ಳ ಎಂದು ಪ್ರೀತಿಯಿಂದ ಕರೆಯುತ್ತಾರೆ. ಹೌದು ಬೆಣ್ಣೆ ಎಂದರೆ ಕೃಷ್ಣನಿಗೆ ತುಂಬಾ ಇಷ್ಟ. ಹಾಗಾಗಿ ಕೃಷ್ಣನ್ನು ಪೂಜಿಸುವಾಗ ಬೆಣ್ಣೆಯನ್ನು ನೈವೇದ್ಯವಾಗಿ ಸಮರ್ಪಿಸಬೇಕು. ಇದರಿಂದ ಭಕ್ತರು ಕೋರಿಕೊಂಡಿದ್ದು ನೆರವೇರುತ್ತದೆ.

ಆಂಜನೇಯ ಸ್ವಾಮಿ ರಾಮನ ಭಕ್ತ. ರಾಮನ್ನು ಆಂಜನೇಯ ಪೂಜಿಸುವಷ್ಟು ಬೇರೆ ಯಾರೂ ಪೂಜಿಸಲ್ಲ. ಹನುಮಂತನಿಗೆ ಬೆಲ್ಲ ಅಥವಾ ಲಡ್ಡು ಉದ್ದಿನ ವಡೆ ನೈವೇದ್ಯವಾಗಿ ಇಡಬೇಕು. ಶುಕ್ರವಾರ ಲಕ್ಷ್ಮಿದೇವಿಯ ವಾರ ಲಕ್ಷ್ಮಿಯನ್ನು ಪೂಜೆ ಮಾಡುವಾಗ ಬೆಲ್ಲದ ಹೂರಣವನ್ನು ನೈವೇದ್ಯವಾಗಿ ಇಟ್ಟರೆ ದೇವಿ ಅನುಗ್ರಹ ಲಭಿಸುತ್ತದೆ. ಗಣಪತಿ ಎಂದರೆ ಯಾರಿಗೆ ಇಷ್ಟ ಆಗಲ್ಲ ಅದರಲ್ಲೂ ಮಕ್ಕಳಿಗೆ ಗಣಪತಿ ಎಂದರೆ ಇಷ್ಟ ಈ ಗಣಪತಿಯನ್ನು ಪೂಜೆ ಮಾಡುವಾಗ ಕಡುಬು, ಮೋದಕವನ್ನು ನೈವೇದ್ಯವಾಗಿ ಇಟ್ಟರೆ ಅಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ ನಡೆಯುತ್ತವೆ. ಒಟ್ಟಾರೆ ದೇವರಿಗೆ ನೈವೇದ್ಯ ಮಾಡಲು ಇಡುವ ಆಹಾರವು ಸಿಹಿಯ ಪದಾರ್ಥ ಹೆಚ್ಚಾಗಿ ಇರುತ್ತದೆ. ತಿಳಿದುಕೊಂಡಿರಲ್ಲ ಇನ್ನು ಮೇಲೆ ದೇವರಿಗೆ ಪೂಜೆ ಮಾಡುವಾಗ ಆಯಾಯ ದೇವರಿಗೆ ಆಯಾಯ ಆಹಾರವನ್ನು ಇಟ್ಟು ನೈವೇದ್ಯ ಮಾಡಿ ದೇವರ ಕೃಪೆ ಪಡೆದುಕೊಳ್ಳಿ.

LEAVE A REPLY

Please enter your comment!
Please enter your name here