ಸತ್ತವರು ಕನಸಲ್ಲಿ ಬಂದರೆ ಏನು ಅರ್ಥ ಮತ್ತು ಏಕೆ ಆ ರೀತಿ ಕನಸು ಬೀಳುತ್ತೆ

0
1481

ಹುಟ್ಟಿದ ಮೇಲೆ ಸಾಯಲೇ ಬೇಕು ಯಾವುದೇ ಮನುಷ್ಯ ಆದರೂ ಸಹ ಹುಟ್ಟಿದ ನಂತರ ಅವನು ಒಂದಲ್ಲ ಒಂದು ದಿನ ಸಾಯುತ್ತಾನೆ ಇದು ಎಲ್ಲ ಮನುಷ್ಯನ ನೈಸರ್ಗಿಕ ಜೀವನ. ಈ ಮನುಷ್ಯನ ಜೀವನ ಎಂಬುದು ಒಂದು ರೀತಿಯ ವಿಚಿತ್ರ ಅದರಲ್ಲಿ ಒಂದು ಅವನಿಗೆ ಬೀಳುವ ಕನಸುಗಳು ಅವುಗಳು ಹೇಗಿರುತ್ತವೆ ಅಂದರೆ ಕೆಲವೊಂದುಕ್ಕೆ ಅರ್ಥ ಇದ್ದರೆ ಇನ್ನು ಕೆಲವುಗಳಿಗೆ ಅರ್ಥ ಇರುವುದಿಲ್ಲ. ನಮ್ಮ ಭಾರತದ ಜನರು ಕನಸಿಗೆ ವಿಶೇಷ ಬೆಲೆ ಕೊಡುತ್ತಾರೆ ಏಕೆ ಅಂದರೆ ಕನಸುಗಳಿಗೆ ಜೀವ ಇದೆ ಎಂದು ಅದು ಮುಂದೆ ಆಗುವ ಘಟನೆ ಬಗ್ಗೆ ನಮಗೆ ಸೂಚನೆ ನೀಡುತ್ತೆ ಎಂದು ತಿಳಿದಿದ್ದೇವೆ. ಈಗಾಗಲೇ ಸಾಕಷ್ಟು ಜನಕ್ಕೆ ನಾನಾ ರೀತಿಯ ಕನಸುಗಳು ಬಿದ್ದು ಅದೆಲ್ಲವೂ ಮುಂದೊಮ್ಮೆ ನಿಜವಾಗಿರುತ್ತದೆ ಹೀಗೆ ನಮ್ಮಲಿ ಸಾಕಷ್ಟು ಉದಾಹರಣೆ ಇದೆ.

ಈ ಕನಸಲ್ಲಿ ಯಾರೆಲ್ಲ ಬಂದು ಹೋಗುತ್ತಾರೆ ಅಲ್ಲವೇ ಆದರೆ ಈ ಕನಸುಗಳು ಕೆಲವು ನೆನಪಿಗೆ ಬಂದರೆ ಇನ್ನು ಕೆಲವು ನೆನಪಿಗೆ ಬರುವುದಿಲ್ಲ. ಜೊತೆಗೆ ಕೆಲವೊಮ್ಮೆ ಈ ಕನಸಿನಲ್ಲಿ ಸತ್ತ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಾರೆ ಆದರೆ ಇದಕ್ಕೂ ಸಹ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಈ ರೀತಿ ಸತ್ತ ವ್ಯಕ್ತಿಗಳು ಕನಸಲ್ಲಿ ಕಾಣಿಸಿಕೊಂಡರೆ ಏನು ಗೊತ್ತೇ. ನಮಗೆ ಬೇಕಿರುವ ತುಂಬಾ ಆತ್ಮೀಯರು ನಮ್ಮ ಕನಸ್ಸಲ್ಲಿ ಬಂದರೆ ಅದನ್ನು ವೈಜ್ಞಾನಿಕ ಕಾರಣದಲ್ಲಿ ವಿಜಿಟೇಶನ್ ಡ್ರಿಮ್ಸ್ ಎಂದು ಕರೆಯುತ್ತೇವೆ. ಅಂದರೆ ನಮ್ಮ ಆತ್ಮೀಯರು ನಮಗೆ ಯಾವುದೋ ಒಂದು ಶುಭ ಸುದ್ದಿಯನ್ನು ಹೇಳಲು ಬಯಸುತ್ತಿದ್ದಾರೆ ಎಂದು ಅರ್ಥ. ಜೊತೆಗೆ ತಮ್ಮ ಕನಸಲ್ಲಿ ಆತ್ಮೀಯರು ಸದಾ ಆರೋಗ್ಯವಾಗಿ. ತುಂಬಾ ಯೌವನವಂತರಾಗಿ ಕಾಣಿಸುತ್ತಾರೆ. ಹಾಗೂ ನಮ್ಮ ಆತ್ಮೀಯರು ಮೇಲಿನ ಲೋಕದಲ್ಲಿ ಶಾಂತಿಯಾಗಿ ಪ್ರಶಾಂತವಾಗಿ ಇದ್ದರೆ ಎಂದು ಅರ್ಥ.

ಇನ್ನು ನಮಗೆ ಯಾವುದಾದರೂ ದೊಡ್ಡ ಸಮಸ್ಯೆಗಳು ಸಂಭವಿಸುವುದನ್ನು ಸಹ ತಿಳಿಸಲು ನಮ್ಮ ಕನಸಲ್ಲಿ ಬರುತ್ತಾರೆ. ಇದು ಸಾಕಷ್ಟು ಜನಕ್ಕೆ ಅನುಭವ ಸಹ ಆಗಿರುತ್ತೆ. ಎಲ್ಲರಿಗು ತಿಳಿದಿರುವ ಹಾಗೇ ಮನುಷ್ಯನ ದೇಹಕ್ಕೆ ಮಾತ್ರ ಸಾವು ಬಂದಿರುತ್ತೆ ಹೊರತು ಆತನ ಆತ್ಮಕ್ಕೆ ಸಾವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸತ್ತ ವ್ಯಕ್ತಿಗಳಿಗೆ ವರ್ಷಕ್ಕೆ ಒಮ್ಮೆ ಅವರು ತುಂಬಾ ಇಷ್ಟ ಮಾಡುತ್ತಿದ್ದ ತಿನಿಸುಗಳನ್ನು ಮಾಡಿ ಅವರಿಗೆ ಎಂದು ಹೊಸ ಬಟ್ಟೆಯನ್ನು ತಂದು ಅವರ ಫೋಟೋ ಇಟ್ಟು ಬಟ್ಟೆ ತಿನಿಸು ಎಲ್ಲವನ್ನು ಇಟ್ಟು ಅವರನ್ನು ನೆನೆಯುವುದು ನಮ್ಮ ಹಿಂದೂ ಪುರಾಣದಲ್ಲಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಆಗಿದೆ.

ಒಬ್ಬ ವ್ಯಕ್ತಿ ಸತ್ತ 11 ದಿನದ ಒಳಗೆ ತನ್ನ ಪ್ರೀತಿ ಪಾತ್ರ ಜನರೊಂದಿಗೆ ಮಾತನಾಡಲು ಬಯಸುತ್ತಾನೆ ಇದು ಸಾಕಷ್ಟು ಜನಕ್ಕೆ ಅನುಭವ ಆಗಿರುವುದು ಸತ್ಯ. ಮತ್ತೊಂದೆಡೆ ಅದೇ ಆತ್ಮ ತೃಪ್ತಿ ಪಟ್ಟಿಲ್ಲ ಎಂದಾದರೆ ಅವರನ್ನು ತಿಂಗಳಿಗೆ ನಾಲ್ಕೈದು ಬಾರಿ ಕನಸಿನಲ್ಲಿ ಬಂದು ಕಾಡುವುದು ಸತ್ಯ. ನೀವು ಯಾರಾದರು ವ್ಯಕ್ತಿಗೆ ಮೋಸ ಮಾಡಿದ್ರೆ ಆ ವ್ಯಕ್ತಿ ಬದುಕಿದ್ದಾಗ ನರಕ ಯಾತನೆ ಪಟ್ಟಿದ್ದಾರೆ ಅಂತಹ ವ್ಯಕ್ತಿಗಳು ಸಹ ನಿಮಗೆ ಕನಸಿನಲ್ಲಿ ಬಂದು ಕಾಡುವರು ನಿಮ್ಮ ಏಳಿಗೆಗೆ ತೊಂದರೆ ಮಾಡುವರು ಎಂದು ಶಾಸ್ತ್ರದಲ್ಲಿ ಉಲ್ಲೇಖ ಇದೆ. ಹಾಗಾಗಿ ಸತ್ತ ವ್ಯಕ್ತಿಗಳು ಕನಸಲ್ಲಿ ಬಂದರೆ ಭಯ ಪಡುವ ಅವಶ್ಯಕೆ ಇಲ್ಲ ಯಾವ ಕಾರಣಕ್ಕೆ ಬಂದಿದ್ದಾರೆ ಎಂಬುದು ತಿಳಿದುಕೊಳ್ಳಲು ಪ್ರಯತ್ನ ಮಾಡಿ.

LEAVE A REPLY

Please enter your comment!
Please enter your name here