ಇತ್ತೀಚಿನ ಸಾವಿನಲ್ಲಿ ಹಾರ್ಟ್ ಅಟ್ಯಾಕ್ ಇಂದ ಸಾಯುತ್ತಿರುವ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಿದೆ ಹಾರ್ಟ್ ಅಟ್ಯಾಕ್ ಬಂದಾಗ ಸೂಕ್ತ ಸಮಯದಲ್ಲಿ ಸರಿಯಾಗಿ ಪ್ರತಿಕ್ರಿಯಿಸುವುದು ತುಂಬಾ ಮುಖ್ಯ ಇಲ್ಲದಿದ್ದರೆ ಪ್ರಾಣಕ್ಕೆ ಆಪತ್ತು ಖಂಡಿತ. ಈ ಹಾರ್ಟ್ ಅಟ್ಯಾಕ್ ಬರುವ ಮೊದಲು ದೇಹದಲ್ಲಿ ಹಲವಾರು ಲಕ್ಷಣಗಳು ಕಾಣಿಸುತ್ತವೆ. ಆದರೆ ಅದನ್ನು ಬಹಳಷ್ಟು ಮಂದಿ ತಲೆ ಕೆಡಿಸಿಕೊಳ್ಳುವುದಿಲ್ಲ ಇದರಿಂದ ಅವರ ಪ್ರಾಣಕ್ಕೆ ತೊಂದರೆ ಆಗುತ್ತದೆ ಆದ್ದರಿಂದ ಹಾರ್ಟ್ ಅಟ್ಯಾಕ್ ಆಗುವ ಮುಂಚೆ ಬರುವ ಲಕ್ಷಣಗಳನ್ನು ತಿಳಿದುಕೊಂಡು ಅದರ ಬಗ್ಗೆ ಎಚ್ಚರಿಕೆ ವಹಿಸಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದರೆ ಹಾರ್ಟ್ ಅಟ್ಯಾಕ್ ಬಾರದಂತೆ ನೋಡಿಕೊಳ್ಳಬಹುದು.
ಹಾಗಾದರೆ ಆ ಲಕ್ಷಣಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ. ನೆಗಡಿ ಜ್ವರ ಕೆಮ್ಮು ನಿತ್ಯ ಬಿಟ್ಟು ಬಿಟ್ಟು ಬರುತ್ತಿದ್ದಾರೆ ಅದು ಕಡಿಮೆ ಆಗದೆ ಇದ್ದರೆ ಅದು ಹಾರ್ಟ್ ಅಟ್ಯಾಕ್ ಬರುವ ಮೊದಲು ಕಾಣಿಸುವ ಲಕ್ಷಣದಲ್ಲಿ ಒಂದಾಗಿದೆ ಹಾಗಾಗಿ ಇದಕ್ಕೆ ಸೂಕ್ತ ವೈದ್ಯರ ಬಳಿ ಚಿಕಿತ್ಸೆ ಪಡೆದರೆ ಹಾರ್ಟ್ ಹಟ್ಯಾಕ್ ಆಗುವುದನ್ನು ತಪ್ಪಿಸಬಹುದು. ಉಸಿರಾಟ ಸೂಕ್ತವಾಗಿ ಆಗದಿದ್ದರೂ ಗಾಳಿಯನ್ನು ತೆಗೆದುಕೊಳ್ಳುವಲ್ಲಿ ಹೊರ ಹಾಕುವಲ್ಲಿ ನಿತ್ಯ ತೊಂದರೆ ಆಗುತ್ತಿದ್ದರೆ ಅದು ಹಾರ್ಟ್ ಅಟ್ಯಾಕ್ ನ ಲಕ್ಷಣವಾಗಿದೆ. ಎದೆಯಲ್ಲಿ ತುಂಬಾ ಅಸೌಕರ್ಯವಾಗಿ ಇರುವುದು, ತುಂಬಾ ತೂಕ ಇಟ್ಟು ಎದೆಮೇಲೆ ಒತ್ತಿದಂತೆ ಅನ್ನಿಸುತ್ತಿರುವ ಲಕ್ಷಣಗಳು ಹಾರ್ಟ್ ಅಟ್ಯಾಕ್ ಸೂಚನೆಗಳು. ಈ ಲಕ್ಷಣಗಳು ಏನಾದರೂ ಯಾರಿಗಾದರೂ ಇದರೆ ತಡ ಮಾಡಬಾರದು. ಕೂಡಲೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.

ತುಂಬಾ ಮಂಪರಾಗಿದ್ದು ನಿದ್ದೆ ಬಂದಂತೆ ಇದ್ದರೂ ಬೆವರು ಜಾಸ್ತಿ ಬರುತ್ತಿದ್ದರೂ ಈ ಲಕ್ಷಣಗಳು ಹಾರ್ಟ್ ಅಟ್ಯಾಕ್ ಸೂಚನೆ. ತುಂಬಾ ಸುಸ್ತಾಗುವುದು ಮೈಕೈ ನೋವು ಇನ್ನಿತರೆ ಲಕ್ಷಣಗಳು ಸಹ ಹಾರ್ಟ್ ಅಟ್ಯಾಕ್ ಬರುವ ಮೊದಲು ಕಾಣಿಸುವ ಲಕ್ಷಣಗಳು, ವಾಂತಿ ಬರುವಂತಿದ್ದರೆ ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಗ್ಯಾಸ್ ಅಸಿಡಿಟಿಯಂತಹ ಸಮಸ್ಯೆಗಳು ಹೆಚ್ಚಾಗಿ ಬರುವುದು, ಹೊಟ್ಟೆ ನೋವು ಇನ್ನಿತರೆ ಲಕ್ಷಣಗಳು ಹಾರ್ಟ್ ಅಟ್ಯಾಕ್ ಸೂಚನೆಗಳು. ಕಣ್ಣಿನ ತುದಿಯಲ್ಲಿ ಕುರುಪುಗಳು ಆಗುತ್ತಿದ್ದರೆ ಅದು ಹಾರ್ಟ್ ಅಟ್ಯಾಕ್ ಬರುತ್ತದೆ ಎಂಬುದಕ್ಕೆ ಸೂಚನೆಗಳು.ಕಾಲುಗಳು ಪಾದಗಳು ಹಿಮ್ಮಡಿ ಊದಿಕೊಳ್ಳುತ್ತಿದ್ದರೆ ಅದು ಸಹ ಹಾರ್ಟ್ ಅಟ್ಯಾಕ್ ಲಕ್ಷಣ.
ಎಡ ದವಡೆಯಲ್ಲಿ ಆರಂಭವಾಗುವ ನೋವು ಭುಜದ ಮೇಲಿಂದ ಎಡಗೈ ಕೆಳಗಿನ ತನಕ ಬರುತ್ತಿದ್ದರೆ ಅದನ್ನು ಖಚಿತವಾಗಿ ಹಾರ್ಟ್ ಅಟ್ಯಾಕ್ ಸೂಚನೆ ಎಂದು ಭಾವಿಸಬೇಕು. ಹೃದಯ ಸಮಸ್ಯೆಗಳು ಇರುವವರಿಗೆ ಹಾರ್ಟ್ ಬೀಟ್ ರೇಟ್ ಯಾವಾಗಲೂ ಒಂದೇ ರೀತಿ ಇರಲ್ಲ. ಬದಲಾಗುತ್ತಿರುತ್ತದೆ ಸ್ಥಿರವಾಗಿ ಇರಲ್ಲ. ಆ ರೀತಿ ಇರದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು ಹೈಬಿಪಿ ಇರುವವರಿಗೆ ಹಾರ್ಟ್ ಅಟ್ಯಾಕ್ ಬರುವ ಅವಕಾಶ ಹೆಚ್ಚಾಗಿ ಇರುತ್ತದೆ. ಈ ಮೇಲೆ ತಿಳಿದುಕೊಂಡ ಲಕ್ಷಣಗಳಲ್ಲಿ ಯಾವುದೇ ಒಂದು ಲಕ್ಷಣ ಕಂಡು ಬಂದರೂ ಸಹ ತಪ್ಪದೆ ವೈದ್ಯರ ಬಳಿ ಹೋಗಿ ಅವರ ಸಲಹೆ ಪಡೆದುಕೊಂಡು ಹಾರ್ಟ್ ಹಟ್ಯಾಕ್ ಆಗುವುದನ್ನು ತಪ್ಪಿಸಿಕೊಂಡು ಪ್ರಾಣಕ್ಕೆ ಆಗುವ ಅಪತ್ತನ್ನು ದೂರಮಾಡಿಕೊಳ್ಳಿ.