ಒಂದು ವರ್ಷದ ಒಳಗಿನ ಮಕ್ಕಳಿಗೆ ಮುತ್ತು ಕೊಟ್ಟರೆ ಅವರ ಜೀವಕ್ಕೆ ಅಪಾಯ ಅಂತೆ

0
1189

ಯಾವುದೇ ಮುದ್ದು ಮಕ್ಕಳನ್ನು ನೋಡಿದರು ಆ ಮಕ್ಕಳ ಪರಿಚಯ ಇರಲಿ ಇರದೇ ಇರಲಿ ಆ ಮಕ್ಕಳಿಗೆ ಮುತ್ತು ಕೊಡಬೇಕು ಮುದ್ದಾಡಬೇಕು ಎಂದು ಆಸೆ ಆಗುತ್ತದೆ. ಮಕ್ಕಳನ್ನು ಎತ್ತಿಕೊಳ್ಳುವುದು ಸರಿ ಆದರೆ ಆ ಮಕ್ಕಳ ಕೆನ್ನೆಗೆ ಮುತ್ತು ಕೊಡುವುದು ತಪ್ಪು ಎಂದು ವಿಜ್ಞಾನಿಗಳು ಒಂದು ಸಮೀಕ್ಷೆ ಮಾಡಿ ಹೇಳಿದ್ದಾರೆ ಯಾವುದೇ ಕಾರಣಕ್ಕೂ ಮಕ್ಕಳ ಕೆನ್ನೆಗೆ ಮುತ್ತು ಕೊಡಬಾರದು. ಸಾಮಾನ್ಯವಾಗಿ ಮಕ್ಕಳ ಕೆನ್ನೆಗೆ ಮುತ್ತು ಕೊಡುವಾಗ ಹಿರಿಯರು ಹೇಳುತ್ತಾರೆ ಕೆನ್ನೆಗೆ ಮುತ್ತು ಕೊಡಬೇಡಿ ಎಂದು ಆದರೆ ಆ ಸಂದರ್ಭದಲ್ಲಿ ಸಾಮಾನ್ಯವಾಗಿ ಹಾಗೆ ಹೇಳಿದವರನ್ನು ಮನಸ್ಸಿನಲ್ಲಿ ಬೈದುಕೊಂಡು ಬರುತ್ತೇವೆ ಆದರೆ ಅವರು ತಿಳಿದು ಹೇಳುತ್ತಾರೋ ತಿಳಿಯದೆ ಹೇಳುತ್ತಾರೋ ಆದರೆ ಅವರ ಮಾತು ಮಾತ್ರ ಸತ್ಯ.

ಮಕ್ಕಳ ಕೆನ್ನೆಗೆ ಮುತ್ತು ಕೊಡಬಾರದು ಏಕೆ ಗೊತ್ತೇ. ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆ ಮಗುವಿನ ಶರೀರವು ಯಾವುದೇ ರೋಗಗಳನ್ನು ತಡೆದುಕೊಳ್ಳುವಸ್ಟು ಶಕ್ತಿ ಇರುವುದಿಲ್ಲ ಹಾಗಾಗಿ ಆ ಮಕ್ಕಳಿಗೆ ಮುತ್ತು ಕೊಟ್ಟರೆ ಅದು ಒಂದು ರೀತಿಯ ಇನ್ಫೆಕ್ಷನ್ ಆಗುತ್ತದೆ ಅದು ಚಿಕ್ಕದಾಗಿ ಆಗಬಹುದು ಇಲ್ಲ ಮಕ್ಕಳ ಪ್ರಾಣಕ್ಕೆ ಅಪಾಯ ಬರಬಹುದು

ಮುತ್ತು ಕೊಡುವ ಹಿರಿಯರಲ್ಲಿ ತುಟಿಗಳಲ್ಲಿ ಕಣ್ಣಿಗೆ ಕಾಣದ ವೈರಸ್ ಗಳಿರುತ್ತವೆ ಅವು ಮಕ್ಕಳಿಗೆ ಮುತ್ತು ಕೊಟ್ಟಾಗ ಆ ವೈರಸ್ಗಳು ಮಕ್ಕಳ ತುಟಿಗೆ ಕೆನ್ನಗೆ ಸೇರುತ್ತವೆ ಜೊತೆಗೆ ಆ ವೈರಸ್ ಗಳು ಮಕ್ಕಳ ಮೇಲೆ ಎಷ್ಟು ಬೇಗ ಪರಿಣಾಮ ಬೀರುತ್ತವೆ ಎಂದರೆ ಊಹಿಸಲು ಸಾಧ್ಯವಿಲ್ಲ ಇನ್ನು ಮಕ್ಕಳಿಗೆ ಏನಾದರೂ ಸಮಸ್ಯೆ ಇದ್ದು ಆ ಮಕ್ಕಳಿಗೆ ಮುತ್ತು ಕೊಟ್ಟಾಗ ಆ ಮಕ್ಕಳಿಗೆ ಲೀವರ್ ಮೆದುಳಿಗೆ ಸಂಬಂಧಿಸಿದ ರೋಗಗಳು ಅಥವ ಅವರ ಬೆಳವಣಿಗೆಯಲ್ಲಿ ಕುಂಟಿತವಾಗುವ ಸಂಭವ ಹೆಚ್ಚು ಇರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮಕ್ಕಳ ಕೆನ್ನೆಗೆ ಆಗಲಿ ತುಟಿಗಳಿಗೆ ಆಗಲಿ ಮುತ್ತು ಕೊಡಬೇಡಿ ಇದು ಕೇವಲ ಹೊರಗಿನ ಜನರು ಮಾತ್ರ ಮಕ್ಕಳ ತಂದೆ ತಾಯಿ ಪೋಷಕರು ಸಹ ಮುತ್ತು ಕೊಡಬಾರದು ಅದರಲ್ಲೂ ಮಕ್ಕಳಿಗೆ 5 ತಿಂಗಳು ಆಗುವ ತನಕ ತುಂಬಾ ಸೂಕ್ಷ್ಮವಾಗಿ ನೋಡಿಕೊಳ್ಳಬೇಕು.

ಜೊತೆಗೆ ಮಕ್ಕಳು ಇರುವ ಮನೆಯಲ್ಲಿ ಸೊಳ್ಳೆಗಳು ಇವೆ ಎಂದು ಆಲ್ ಔಟ್ ಗುಡ್ ನೈಟ್ ಗಳನ್ನು ಅಥವ ಸೊಳ್ಳೆ ಬತ್ತಿ ಹಚ್ಚುವುದು ಹೆಚ್ಚಿನ ಅಪಾಯ ಮತ್ತು ದೇವರ ಕೋಣೆಯಲ್ಲಿ ನೀವು ಹಚ್ಚುವ ಕರ್ಪೂರದ ಹೋಗೆ ಮತ್ತು ದೇವರಿಗೆ ಅರ್ಪಿಸುವ ಉದಿನ ಕಡ್ಡಿ ಹೊಗೆ ಮಕ್ಕಳ ಕಡೆ ಬರದಂತೆ ಆದಷ್ಟು ತಡೆ ಮಾಡಿರಿ. ಮಕ್ಕಳು ಸಾಕಷ್ಟು ಸೂಕ್ಷ್ಮತೆ ಹೊಂದಿರುವುದರಿಂದ ಇದು ಮಕ್ಕಳ ಉಸಿರಾಟಕ್ಕೆ ತೊಂದರೆಯಾಗುತ್ತದೇ ಹಾಗಾಗಿ ಆದಷ್ಟು ಮಕ್ಕಳ ಬಗ್ಗೆ ತುಂಬಾ ಜಾಗರೂಕತೆ ವಹಿಸಿ ಮಕ್ಕಳನ್ನು ನೋಡಿಕೊಳ್ಳಿ. ಮಾಹಿತಿ ತಪ್ಪದೇ ಶೇರ್ ಮಾಡಿ ಎಲ್ಲರಿಗು ಸಹಾಯ ಆಗಲಿ.

LEAVE A REPLY

Please enter your comment!
Please enter your name here