ಈ ಲಕ್ಷಣಗಳು ಇದ್ದರೆ ಅದು ಕುಷ್ಠರೋಗ ಆಗಿರಬಹುದು

0
1747

ಕುಷ್ಟರೋಗದ ಬಗ್ಗೆ ಎಲ್ಲರೂ ಕೇಳಿರುತ್ತೀರಾ. ಕುಷ್ಟರೋಗಕ್ಕೆ ಔಷಧಿಯನ್ನು ಕಂಡು ಹಿಡಿದಿದ್ದರೂ ನಿರೋಗಂ ಮಿತಿ ಮೀರಿದರೆ ಅದು ಸಾವನ್ನು ತಂದೊಡ್ಡುತ್ತದೆ. ಆದ್ದರಿಂದ ಈ ರೋಗದ ಲಕ್ಷಣಗಳು ಹೇಗಿರುತ್ತವೆ ಮತ್ತು ಈ ಖಾಯಿಲೆ ಯಾರಿಗೆ ಬರುತ್ತೆ ಎಂದು ನೀವು ಮುಂಚೆಯೇ ತಿಳಿದರೆ ಈ ರೋಗವನ್ನು ತಡೆಗಟ್ಟಬಹುದು. ಕುಷ್ಠರೋಗ ಬಂತೆಂದರೆ ಮನುಷ್ಯನ ದೇಹದ ಅನೇಕ ಭಾವಗಳು ತೊಂದರೆಗೆ ಒಳಗಾಗುತ್ತದೆ ಅಂದರೆ ಮೊದಲಿಗೆ ಚರ್ಮ ನಂತರ ಕೈಕಾಲು ನರಗಳು ಕಣ್ಣುಗಳು ಹೀಗೆ ಒಂದರ ನಂತರ ಒಂದು ಭಾಗಗಳು ಹಾಳಾಗುತ್ತಾ ಹೋಗುತ್ತವೆ. ಈ ಕುಷ್ಠರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರೇ ಎಂಬ ಬ್ಯಾಕ್ಟೀರಿಯಾಗಳಿಂದ ಬರುತ್ತದೆ. ಈ ರೋಗವನ್ನು ಹ್ಯಾನ್ಸನ್ಸ್ ಕಾಯಿಲೆ ಎಂದು ಕೂಡ ಕರೆಯುತ್ತಾರೆ. ಕುಷ್ಠರೋಗ ಒಂದು ಸಾಂಕ್ರಾಮಿಕ ಕಾಯಿಲೆಯಾಗಿದೆ ಇದು ಒಬ್ಬರಿಂದ ಒಬ್ಬರಿಗೆ ಬಹುಬೇಗ ಹರಡುತ್ತದೆ. ಯಾವುದೇ ಒಬ್ಬ ಕುಷ್ಟ ರೋಗಿಯನ್ನು ಮುಟ್ಟುವುದರಿಂದ ಅವರು ಬಳಸಿದ ವಸ್ತುಗಳನ್ನು ಬಳಸುವುದರಿಂದ ಈ ರೋಗವು ಇನ್ನೊಬ್ಬರಿಗೆ ಬರುತ್ತದೆ.

ಈ ರೋಗವು ನಮ್ಮ ಬೇಜವಾಬ್ದಾರಿತನದಿಂದ ಬರುತ್ತದೆ ಅಂದರೆ ನಾವು ಸೇವಿಸುವ ಆಹಾರ ಪೌಷ್ಟಿಕಾಂಶದಿಂದ ಕೂಡಿರದಿದ್ದರೆ ನಾವು ಮಲಗುವ ಜಾಗ ಸ್ವಚ್ಛವಾಗಿ ಇರದಿದ್ದರೆ ನಾವು ಕುಡಿಯುವ ನೀರು ಕಲುಷಿತ ವಾಗಿದ್ದರೆ ನೀರಿನಲ್ಲಿ ಅನೇಕ ರೀತಿಯ ಬ್ಯಾಕ್ಟಿರಿಯ ಸೇರಿದ್ದರು ಈ ಸೋಂಕು ನಮ್ಮ ದೇಹದ ಒಳಗೆ ಬೇಗನೆ ಬಂದು ಬಿಡುತ್ತದೆ. ಈ ರೋಗದ ಲಕ್ಷಣಗಳನ್ನು ನೋಡುವುದಾದರೆ ಪ್ರಾಥಮಿಕ ಹಂತದಲ್ಲಿ ನಮ್ಮ ದೇಹದ ಚರ್ಮದ ಮೇಲೆ ಸಣ್ಣ ಸಣ್ಣ ಕೆಂಪು ಅಥವಾ ಕಂದು ಬಣ್ಣದ ಕಲೆಗಳು ಉಂಟಾಗುತ್ತವೆ. ಈ ಕಲೆಗಳು ಆಗಿರುವ ಜಾಗದಲ್ಲಿ ಮುಟ್ಟಿದರೆ ಸ್ಪರ್ಶ ಜ್ಞಾನ ಆಗುವುದಿಲ್ಲ.

ಮೊದಲಿಗೆ ಒಂದು ಎರಡು ಕಲೆಗಳು ಆಗುತ್ತಾ ಹೋಗುತ್ತದೆ ನಂತರದ ದಿನಗಳಲ್ಲಿ 10 ರಿಂದ 15 ಕಲೆಗಳು ಹೀಗೆ ದೇಹದ ತುಂಬಾ ಕಲೆಗಳು ಉಂಟಾಗುತ್ತದೆ. ಕಾಲಕ್ರಮೇಣ ನಮ್ಮ ದೇಹದಲ್ಲಿನ ನರಗಳು ಹಾಳಾಗುತ್ತಾ ಹೋಗುತ್ತವೆ ಇದರಿಂದ ನಮ್ಮ ದೇಹದ ಭಾಗಗಳು ತಮ್ಮ ಸ್ವಾಧೀನವನ್ನು ಕಳೆದುಕೊಳ್ಳಬಹುದು ನಂತರದ ದಿನಗಳಲ್ಲಿ ಕುರುಡುತನ ಬರಬಹುದು. ಆದ್ದರಿಂದ ಈ ರೋಗವನ್ನು ಪ್ರಾಥಮಿಕ ಹಂತದಲ್ಲೇ ಕಂಡುಹಿಡಿದು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಒಳ್ಳೆಯದು.

ಇದಕ್ಕೆ ಪರಿಹಾರವೆಂದರೆ ಮೊದಲಿಗೆ ವೈದ್ಯರು ಹೇಳಿದ ಸಲಹೆಗಳನ್ನು ಸರಿಯಾಗಿ ಪಾಲಿಸಬೇಕು. ಡ್ಯಾಪ್ಸೋನ್ ಟ್ಯಾಬ್ಲೆಟ್ ಅನ್ನು ಪ್ರತಿದಿನ ಆರು ತಿಂಗಳ ಕಾಲ ಸೇವಿಸಬೇಕು ಮತ್ತು ಕ್ಲೊಫಾಝಿಮಿನ್ ಮಾತ್ರೆಗಳನ್ನು 12 ತಿಂಗಳುಗಳ ಕಾಲ ಸೇವಿಸಬೇಕು. ಈ ಮಾತ್ರೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಗುತ್ತದೆ. ರೋಗ ಬಂದ ಮೇಲೆ ಕಷ್ಟ ಪಡುವುದಕ್ಕಿಂತ ರೋಗವನ್ನು ಬರದಂತೆ ತಡೆಗಟ್ಟುವುದು ಒಳ್ಳೆಯದು. ಮೇಲೆ ಹೇಳಿದಂತೆ ಕುಷ್ಟರೋಗದ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಮೊದಲು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆಯನ್ನು ಕೊಡಿಸಬೇಕು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಬಗೆಯನ್ನು ಅರಿತು ಈ ರೋಗವು ಬೇರೆ ವ್ಯಕ್ತಿಗಳಿಗೆ ಹರಡದಂತೆ ನೋಡಿಕೊಳ್ಳಬೇಕು. ಇದರಿಂದ ಕುಷ್ಟ ರೋಗವನ್ನು ತಡೆಗಟ್ಟಬಹುದು.

LEAVE A REPLY

Please enter your comment!
Please enter your name here