ಕೆಮ್ಮು ನೆಗಡಿ ನಿಮ್ಮ ಹತ್ರ ಸುಳಿಯಬಾರದು ಅಂದ್ರೆ ಕಿತ್ತಳೆ ಹಣ್ಣಿನಿಂದ ಹೀಗೆ ಮಾಡಿ

0
1093

ಕಿತ್ತಳೆ ಹಣ್ಣು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ, ಪ್ರತಿಯೊಬ್ಬರೂ ಕಿತ್ತಳೆ ಹಣ್ಣನ್ನು ತಿನ್ನುತ್ತಾರೆ. ಕಿತ್ತಳೆ ಹಣ್ಣು ಬರೀ ಬಾಯಿಗೆ ರುಚಿ ಕೊಡುವುದಲ್ಲದೆ ಆರೋಗ್ಯಕ್ಕೂ ಕೂಡ ಒಳ್ಳೆಯದು. ಇದರ ಉಪಯೋಗಗಳನ್ನು ತಿಳಿದರೆ ಕಿತ್ತಳೆ ಹಣ್ಣನ್ನು ತಿಂದವರು ಕೂಡ ಕಿತ್ತಳೆ ಹಣ್ಣನ್ನು ತಿನ್ನುತ್ತಾರೆ. ಹೆಚ್ಚು ಬಾಯಾರಿಕೆ ಆಗುವುದು ಸಹಜ ಇಂತಹ ಸಮಯದಲ್ಲಿ ನೀರನ್ನು ಕುಡಿಯುವ ಬದಲು ಕಿತ್ತಳೆ ಹಣ್ಣಿನ ರಸವನ್ನು ಕುಡಿಯುವುದರಿಂದ ಬಾಯಾರಿಕೆಯನ್ನು ನೀಗಿಸುವುದಲ್ಲದೆ ಇದು ನಾಲಿಗೆಗೆ ರುಚಿಯನ್ನೂ ಕೂಡ ಕೊಡುತ್ತದೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುತ್ತದೆ ಇದನ್ನು ಹೆಚ್ಚಾಗಿ ತಿನ್ನುವುದರಿಂದ ನಮ್ಮ ದೇಹದಲ್ಲಿನ ರಕ್ತ ಶುದ್ಧಿಯಾಗುತ್ತದೆ.

ಕಿತ್ತಳೆ ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಹೃದಯಾಘಾತವಾಗುವ ಸಂಭವ ಕಡಿಮೆ ಇರುತ್ತದೆ. ಕಿತ್ತಳೆ ಹಣ್ಣಿನ ರಸಕ್ಕೆ ಜೇನು ತುಪ್ಪವನ್ನು ಮಿಶ್ರಣ ಮಾಡಿ ಪ್ರತಿನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಶೀತ ಕೆಮ್ಮು ನೆಗಡಿಯಂತಹ ರೋಗಗಳು ಹತ್ತಿರ ಕೂಡ ಸುಳಿಯುವುದಿಲ್ಲ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸಿ ಅದರಲ್ಲಿ ಉಪ್ಪಿನಕಾಯಿಯನ್ನು ಮಾಡಿ ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿ ಬಹಳ ಸುಧಾರಣೆ ಕಾಣಬಹುದು. ಇದು ನಮ್ಮ ದೇಹದಲ್ಲಿ ರಕ್ತದ ಒತ್ತಡ ಅಂದರೆ ಬಿ ಪಿ ಯನ್ನು ನಿಯಂತ್ರಣದಲ್ಲಿಡುವುದು.

ಕಿತ್ತಳೆ ಹಣ್ಣಿನ ಜ್ಯೂಸನ್ನು ಪ್ರತಿ ನಿತ್ಯ ಕುಡಿಯುವುದರಿಂದ ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಸಣ್ಣಪುಟ್ಟ ಕಾಯಿಲೆಗಳು ಬಂದರೆ ಶೀತ ಕೆಮ್ಮು ನೆಗಡಿ, ತಲೆನೋವು ಇಂತಹ ರೋಗಗಳು ಹತ್ತಿರ ಕೂಡ ಸುಳಿಯುವುದಿಲ್ಲ. ಗರ್ಭಿಣಿಯರು ಕಿತ್ತಳೆ ಹಣ್ಣು ತಿನ್ನುವುದರಿಂದ ಅಥವಾ ಅದರ ಜ್ಯೂಸನ್ನು ಕುಡಿಯುವುದರಿಂದ ಅವರ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಹುಟ್ಟುವ ಮಗುವಿನ ಆರೋಗ್ಯವು ಕೂಡ ಚೆನ್ನಾಗಿರುತ್ತದೆ. ಆದ್ದರಿಂದ ಗರ್ಭಿಣಿಯರಿಗೆ ಕಿತ್ತಳೆ ಹಣ್ಣನ್ನು ಹೆಚ್ಚು ಸೇವಿಸಲು ಕೊಡಿ.

ಕಿತ್ತಳೆ ಹಣ್ಣಿನ ಸಿಪ್ಪೆಯ ಎಣ್ಣೆಯಿಂದ ಸೂಕ್ಷ್ಮ ಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ತಡೆಯುವ ಶಕ್ತಿ ಇದೆ ಎಂದು ಇತ್ತೀಚಿನ ಸಂಶೋಧನೆಗಳಲ್ಲಿ ತಿಳಿಸಲಾಗಿದೆ. ಆದ್ದರಿಂದ ಒಂದು ಲೋಟ ನೀರಿನಲ್ಲಿ ಒಂದು ಹನಿ ಕಿತ್ತಲೆ ಹಣ್ಣಿನ ಸಿಪ್ಪೆಯ ಎಣ್ಣೆಯನ್ನು ಮಿಶ್ರಣಮಾಡಿ ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ದೇಹದಲ್ಲಿ ಬ್ಯಾಕ್ಟೀರಿಯಾ ಗಳ ಬೆಳವಣಿಗೆ ಆಗುವುದಿಲ್ಲ ಮತ್ತು ಈ ಎಣ್ಣೆಯಿಂದ ಆಹಾರ ಅಳೆಸುವುದು ಅಥವಾ ಹಾಲು ಹುಳಿಯಾಗದಂತೆ ತಡೆಗಟ್ಟಬಹುದು ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ. ಮಕ್ಕಳು ಊಟ ಮಾಡಲು ಹಠ ಮಾಡುತ್ತಿದ್ದರೆ ಕಿತ್ತಳೆ ಹಣ್ಣನ್ನು ಅವರಿಗೆ ತಿನ್ನಿಸುವುದರಿಂದ ಮಕ್ಕಳ ದೇಹಕ್ಕೆ ಬೇಕಾಗುವಷ್ಟು ಪೌಷ್ಟಿಕಾಂಶವೂ ಹಣ್ಣಿನಿಂದ ದೊರೆಯುತ್ತದೆ ಮತ್ತು ಇದು ಮಕ್ಕಳ ಹಸಿವನ್ನು ನೀಗಿಸುತ್ತದೆ. ಕಿತ್ತಳೆ ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ಅಥವಾ ಕಿತ್ತಳೆ ಹಣ್ಣಿನ ಜ್ಯೂಸನ್ನು ಕುಡಿಯುವುದರಿಂದ ನಮ್ಮ ದೇಹ ತಂಪಾಗಿರುತ್ತದೆ ಮತ್ತು ಇದು ನಮ್ಮ ದೇಹದಲ್ಲಿ ನೀರಿನಂಶವನ್ನು ಹೆಚ್ಚಿಸುತ್ತದೆ. ಮಾಹಿತಿ ತಪ್ಪದೇ ಶೇರ್ ಮಾಡಿ.

LEAVE A REPLY

Please enter your comment!
Please enter your name here