ಲಾಲ್ ಬಾಗ್ ಬಗ್ಗೆ ನಿಮಗೆ ಗೊತಿಲ್ಲದ ವಿಶೇಷ ಮಾಹಿತಿ

0
1048

ಲಾಲ್ ಬಾಗ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಈ ಲಾಲ್ ಬಾಗ್ ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಇದೂ ಒಂದು. ಬೆಂಗಳೂರಿನ ನವ ಜೋಡಿಗಳಿಗೆ ಹೊರಗಡೆ ಸುತ್ತಾಡಲು ಹೋಗ ಬೇಕೆಂದರೆ ಮೊದಲು ನೆನಪಾಗುವುದೇ ಲಾಲ್ ಬಾಗ್ ಅಷ್ಟರಮಟ್ಟಿಗೆ ಈ ಸ್ಥಳ ಪ್ರಸಿದ್ಧಿಯನ್ನು ಪಡೆದಿದೆ. ಲಾಲ್ ಬಾಗ್ ಅನ್ನು ತುಂಬಾ ಜನಗಳು ನೋಡಿರುತ್ತಾರೆ ಮತ್ತು ಅನೇಕ ಜನರು ನೋಡುವ ಬಯಕೆಯನ್ನು ಹೊಂದಿರುತ್ತಾರೆ. ಆದರೆ ಲಾಲ್ ಬಾಗ್ ನ ಇತಿಹಾಸದ ಬಗ್ಗೆ ತುಂಬಾ ಜನಗಳಿಗೆ ಗೊತ್ತಿರುವುದಿಲ್ಲ.

ಲಾಲ್ ಬಾಗ್ ನಲ್ಲಿರುವ ಗಾಜಿನ ಮನೆ ದೊಡ್ಡ ಗಡಿಯಾರ ಅಲ್ಲಿರುವ ಕೆರೆ ಸುಂದರ ಪರಿಸರ ಹೂತೋಟ ಹಳೇ ಕಾಲದ ದೊಡ್ಡ ದೊಡ್ಡ ಮರಗಳು ಪ್ರವಾಸಿಗಳನ್ನು ಅಲ್ಲಿಗೆ ಮನ ಸೆಳೆಯುವಂತೆ ಆಕರ್ಷಿಸುತ್ತವೆ. ಬೆಂಗಳೂರಿಗರಿಗೆ ಈ ಸ್ಥಳವು ವಾರಾಂತ್ಯದಲ್ಲಿ ಸ್ವಲ್ಪ ರಿಲಾಕ್ಸ್ ಮಾಡಲು ಒಂದು ಉತ್ತಮವಾದ ಸ್ಥಳವಾಗಿದೆ. ಸರಿ ಸುಮಾರು 240 ಎಕರೆ ಪ್ರದೇಶದಲ್ಲಿರುವ ಈ ಲಾಲ್ ಬಾಗ್ ಸುಮಾರು 2000 ವಿವಿಧ ರೀತಿಯ ಗಿಡಗಳನ್ನು ಹೊಂದಿದೆ. ಟಿಪ್ಪು ಸುಲ್ತಾನನ ಕಾಲದಲ್ಲಿ ಪೂರ್ಣಗೊಂಡ ಈ ಲಾಲ್ ಬಾಗ್ ಮೊಘಲ್ ರ ಉದ್ಯಾನವನದ ರೀತಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿರುವ ಶಿರಾ ತಾಲೂಕಿನ ಮೊಘಲ್ ಉದ್ಯಾನವನವು ಲಾಲ್ ಬಾಗ್ ಅನ್ನು ನಿರ್ಮಿಸಲು ಪ್ರೇರಕವಾಗಿದೆ.

ಲಾಲ್ ಬಾಗ್ ಗೆ ಲಾಲ್ ಬಾಗ್ ಎಂದು ಹೆಸರು ಬರಲು ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಟಿಪ್ಪುಸುಲ್ತಾನನ ತಂದೆಯಾದ ಹೈದರಾಲಿಯ ತಾಯಿ ಹೆಸರು ಲಾಲಾ ಬಾಯಿ ಇದರಿಂದ ಲಾಲ್ ಬಾಗ್ ಎಂದು ಹೆಸರಿಡಲಾಯಿತು ಎಂದು ಇತಿಹಾಸಕಾರರು ಹೇಳುತ್ತಾರೆ. ಇನ್ನೊಂದು ಮುಖ್ಯ ಕಾರಣವೆಂದರೆ ಮೈಸೂರಿನ ಶ್ರೀರಂಗಪಟ್ಟಣದಲ್ಲಿರುವ ಲಾಲ್ ಮಹಲ್ ಇದರ ಹತ್ತಿರ ಇರುವ ಫೋಟೋ ಲಾಲ್ ಬಾಗ್ ಮಾದರಿಯಲ್ಲಿ ಇದೆ ಎಂದು ಹೆಸರಿಟ್ಟಿರಬಹುದು ಎಂದು ಇತಿಹಾಸಕಾರರಾದ ಮನ್ಸೂರ್ ಹೇಳಿದ್ದಾರೆ.

ಪ್ರತಿವರ್ಷ ಗಣರಾಜ್ಯೋತ್ಸವ ಮತ್ತು ಸ್ವತಂತ್ರ ದಿನಾಚರಣೆಯ ದಿನದಂದು ಇಲ್ಲಿ ಏರ್ಪಡಿಸುವ ಪುಷ್ಪ ಪ್ರದರ್ಶನ ಬಹಳ ಸುಂದರವಾಗಿರುತ್ತದೆ. ಲಾಲ್ ಬಾಗ್ ಗೆ ಹೋದರೆ ಪ್ರಮುಖವಾಗಿ ನಮ್ಮನ್ನು ಆಕರ್ಷಿಸುವ ವಿಷಯಗಳೆಂದರೆ ಮೊದಲಿಗೆ ನಮ್ಮ ಕೆಂಪೇಗೌಡರ ಪ್ರತಿಮೆ ನಂತರ ಗಂಡನ ಕ್ರಿಸ್ಟಲ್ ಪ್ಯಾಲೇಸ್ ನ ಮಾದರಿಯಲ್ಲಿರುವ ಗಾಜಿನ ಮನೆ. ಅಲ್ಲಿರುವ ಹುಲ್ಲಿನ ಗಡಿಯಾರ ಸುಂದರವಾದ ದೊಡ್ಡ ಕೆರೆ ಮೂರು ಸಾವಿರ ವರ್ಷಗಳ ಹಳೆಯ ದೊಡ್ಡ ಬಂಡೆ ವಿವಿಧ ಅನೇಕ ಬಗೆಯ ಗಿಡಗಳು ನೂರಾರು ವರ್ಷಗಳ ಹಳೆಯ ದೊಡ್ಡ ದೊಡ್ಡ ಮರಗಳು ಮತ್ತು ಪ್ರತಿ ವರ್ಷ ಅಲ್ಲಿ ಏರ್ಪಡಿಸುವ ಪುಷ್ಪ ಪ್ರದರ್ಶನ. ಹೀಗೆ ಹಲವಾರು ವಿಷಯಗಳು ನಮ್ಮನ್ನು ಆಕರ್ಷಿಸುತ್ತವೆ. ಇದುವರೆಗೂ ನೀವು ಲಾಲ್ ಬಾಗ್ ಅನ್ನು ನೋಡಿಲ್ಲವೇ ಹಾಗಾದರೆ ರಜಾ ದಿನಗಳಲ್ಲಿ ಸಮಯ ಮಾಡಿಕೊಂಡು ಒಮ್ಮೆಯಾದರೂ ಲಾಲ್ ಬಾಗ್ ಗೆ ಭೇಟಿ ಕೊಡಿ. ನಿಮ್ಮ ರಜಾ ದಿನಗಳನ್ನು ಎಂಜಾಯ್ ಮಾಡಿರಿ.

LEAVE A REPLY

Please enter your comment!
Please enter your name here