ಈ ಮುದ್ರಗಳನ್ನು ಮಾಡಿದರೆ ಮನುಷ್ಯನಿಗೆ ಯಾವುದೇ ಖಾಯಿಲೆ ಬರೋದಿಲ್ಲ

0
3140

ಏನು ಆಧುನಿಕ ಯುಗದಲ್ಲಿ ನಮ್ಮ ಆರೋಗ್ಯವನ್ನು ಸಮತೋಲನವಾಗಿ ಕಾಪಾಡಿಕೊಳ್ಳುವುದು ತುಂಬಾ ಕಷ್ಟದ ವಿಷಯವಾಗಿದೆ. ಪ್ರತಿದಿನ ಉತ್ತಮ ಆಹಾರ ಸೇವನೆ ಮಾಡುವುದು ಯೋಗ ಮಾಡುವುದು ವ್ಯಾಯಾಮ ಮಾಡುವುದು ಹೀಗೆ ಹಲವಾರು ರೀತಿಯಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನ ಪಡುತ್ತೇವೆ. ಅದೇ ರೀತಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇನ್ನೊಂದು ಸುಲಭ ಮಾರ್ಗವೆಂದರೆ ಅದು ಮುದ್ರಾ ಯೋಗ. ಹೇಳಬೇಕೆಂದರೆ ಮುದ್ರಾ ಯೋಗವು ಯೋಗದ ಒಂದು ಅಂಶವೆಂದು ಪರಿಗಣಿಸಲಾಗಿದೆ.

ನಾವು ಉತ್ತಮ ಆರೋಗ್ಯವನ್ನು ಹೊಂದಿರಬೇಕೆಂದು ನಮ್ಮ ದೇಹದ ಎಲ್ಲಾ ಭಾಗಗಳು ಮತ್ತು ಅದರ ಕಾರ್ಯಗಳು ಸಮತೋಲನ ವಾಗಿರಬೇಕು. ನಮ್ಮ ದೇಹದ ಆರೋಗ್ಯ ಮತ್ತು ಅದರ ಕಾರ್ಯಗಳು ಸಮತೋಲನವಾಗಿರ ಬೇಕೆಂದರೆ ಮುದ್ರಾ ಯೋಗದಿಂದ ಸುಲಭಸಾಧ್ಯ. ಮುದ್ರಾ ಯೋಗ ವನ್ನು ಸುಲಭವಾದ ರೀತಿಯಲ್ಲಿ ಹೇಳಬೇಕೆಂದರೆ ನಮ್ಮ ಕೈಯ ಬೆರಳುಗಳನ್ನು ಬಳಸಿ ವಿವಿಧ ಭಂಗಿಗಳನ್ನು ಮಾಡುವ ವಿಧಾನವನ್ನು ಹಸ್ತ ಮುದ್ರೆಗಳನ್ನುವರು. ಹೀಗೆ ಹಸ್ತ ಮುದ್ರ ಗಳನ್ನು ಮಾಡಿ ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು.

ನಮ್ಮ ದೇಹದಲ್ಲಿರುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ಪವರ್ ನಮ್ಮ ಕೈ ಬೆರಳುಗಳ ತುದಿ ಕಿವಿ ತುಟಿ ಮೂಗು ಮತ್ತು ಕಾಲ್ಬೆರಳುಗಳ ಮೂಲಕ ನಮ್ಮ ದೇಹದಿಂದ ಹೊರ ಬರುತ್ತಿರುತ್ತದೆ. ಮುದ್ರಾ ಯೋಗ ಮಾಡುವ ಮೂಲಕ ಆ ಪವರ್ ಅನ್ನು ನಮ್ಮ ದೇಹಕ್ಕೆ ಮರುಕಳಿಸಬಹುದು. ಇದರಿಂದ ನಮ್ಮ ದೇಹದಲ್ಲಿನ ಚೈತನ್ಯ ಹಾಗೆಯೇ ಉಳಿಯುತ್ತದೆ ಮತ್ತು ದೇಹದ ಆರೋಗ್ಯ ಸ್ಥಿತಿಯೇ ನಿಯಮಿತವಾಗಿರುತ್ತದೆ. ಹಾಗಾದರೆ ಸರಳವಾಗಿ ಮುದ್ರಾ ಯೋಗ ವನ್ನು ಮಾಡುವ ಬಗೆಯನ್ನು ತಿಳಿಯೋಣ ಬನ್ನಿ.

ಸೂರ್ಯ ಮುದ್ರೆ: ಹೆಬ್ಬೆಟ್ಟಿನ ಬುಡಕ್ಕೆ ಉಂಗುರ ಬೆರಳಿನ ತುದಿಯನ್ನು ಹಾಕಿಸುತ್ತಾ ಹೆಬ್ಬೆಟ್ಟನ್ನು ಉಂಗುರ ಬೆರಳಿನ ಮೇಲೆ ಇಡುವುದರಿಂದ ಅದು ಸೂರ್ಯ ಮುದ್ರೆಯಾಗುತ್ತದೆ ನಮ್ಮ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ ಮತ್ತು ದೇಹದ ಉಷ್ಣಾಂಶ ನಿಯಮಿತವಾಗಿ ಇರುತ್ತದೆ. ದೇಹದ ಕೊಬ್ಬಿನ ಅಂಶ ಕಡಿಮೆ ಆದಷ್ಟು ಮನುಷ್ಯನಿಗೆ ಹಾರ್ಟ್ ಅಟ್ಯಾಕ್ ಸಮಸ್ಯೆ ಬರೋದಿಲ್ಲ ಇನ್ನು ಹತ್ತಾರು ಲಾಭಗಳು ಇದೆ.

ವಾಯು ಮುದ್ರೆ: ನಮ್ಮ ದೇಹದಲ್ಲಿ ವಾಯು ಹೆಚ್ಚಾದಾಗ ನಮ್ಮ ದೇಹದ ವಿವಿಧ ಭಾಗಗಳಲ್ಲಿ ನೋವುಗಳು ಉಂಟಾಗುತ್ತವೆ. ಹಲವರಿಗೆ ಸ್ವಲ್ಪ ಓಡಾಡಿದರು ಸಾಕು ಕಾಲು ನೋವು ಹೆಚ್ಚು ಬರುತ್ತದೆ ವಯಸ್ಸಾದ ಜನಕ್ಕಂತೂ ಮಂಡಿ ನೋವು ಒಂದು ದೊಡ್ಡ ಸಮಸ್ಯೆ ಆಗೋದಿದೆ ನೀವು ಆಗ ವಾಯು ಮುದ್ರೆ ಮಾಡುವುದರಿಂದ ಈ ನೋವನ್ನು ದೂರ ಮಾಡಬಹುದು. ಹೆಬ್ಬೆಟ್ಟಿನ ಬುಡಕ್ಕೆ ತೋರುಬೆರಳಿನ ತುದಿಯನ್ನು ತಾಕಿಸುತ್ತಾ ಹೆಬ್ಬೆಟ್ಟನ್ನು ತೋರು ಬೆರಳಿನ ಮೇಲೆ ಇರುವುದನ್ನು ಎನ್ನುತ್ತಾರೆ. ಮತ್ತು ವರುಣ ಮುದ್ರೆ ಹೆಬ್ಬೆರಳಿನ ತುದಿಗೆ ಕಿರು ಬೆರಳಿನ ತುದಿಯನ್ನು ತಾಕಿಸಿದಾಗ ಆಗುವುದೇ ವರುಣ ಮುದ್ರೆ. ಈ ಮುದ್ರೆಯನ್ನು ಮಾಡುವುದರಿಂದ ನಮ್ಮ ದೇಹದಲ್ಲಿನ ನೀರಿನ ಅಂಶ ನಿಯಮಿತವಾಗಿರುತ್ತದೆ ಮತ್ತು ಇದರಿಂದ ನಮ್ಮ ದೇಹದ ಸೌಂದರ್ಯ ಹೆಚ್ಚುತ್ತದೆ.

ಜ್ಞಾನ ಮುದ್ರೆ: ತೋರು ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ತಾಕಿಸಿದಾಗ ಆಗುವುದೇ ಜ್ಞಾನ ಮುದ್ರೆ. ಏಕಾಗ್ರತೆಯ ಕೊರತೆ ಇದ್ದರೆ ಈ ಮುದ್ರೆಯನ್ನು ಮಾಡುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ ಮತ್ತು ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ. ಮತ್ತು ಪ್ರಾಣ ಮುದ್ರೆ ಉಂಗುರ ಬೆರಳಿನ ತುದಿಯನ್ನು ಹೆಬ್ಬೆರಳಿನ ತುದಿಗೆ ಮತ್ತು ಕಿರು ಬೆರಳಿನ ತುದಿಗೆ ಸ್ಪರ್ಶ ಮಾಡುತ್ತಿದ್ದರೆ ಆಗುವುದೇ ಪ್ರಾಣ ಮುದ್ರೆ. ಈ ಮುದ್ರೆಯನ್ನು ಮಾಡುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

LEAVE A REPLY

Please enter your comment!
Please enter your name here