ಕ್ಯಾನ್ಸರ್ ಖಾಯಿಲೆಗೆ ಮುಖ್ಯ ಏನು ಗೊತ್ತೇ ಮಾಹಿತಿ ತಿಳಿಯಿರಿ

0
1172

ಎಲ್ಲರಿಗೂ ತಿಳಿದಿರುವಂತೆ ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ ಮತ್ತು ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ ಅಂದರೆ ಇದು ಸಾಂಕ್ರಾಮಿಕ ರೋಗವಲ್ಲ ಇದು ಎಲ್ಲಾ ವಯಸ್ಕರಿಗೂ ಈ ಕಾಯಿಲೆ ಬರುತ್ತದೆ. ಅಂದರೆ ಚಿಕ್ಕ ಮಕ್ಕಳಿಗೂ ಬರಬಹುದು ಮತ್ತು ದೊಡ್ಡವರಿಗೂ ಬರಬಹುದು. ಆದರೆ ಇದು ವಯಸ್ಕರಿಗೆ ಹೆಚ್ಚು ಬರುತ್ತದೆ. ಕ್ಯಾನ್ಸರ್ ಕಾಯಿಲೆ ಒಮ್ಮೆ ಬಂದರೆ ಅದು ದೇಹದ ಯಾವುದೇ ಭಾಗಕ್ಕಾದರೂ ಬರಬಹುದು. ಆಗ ಆ ಭಾಗದ ಜೀವಕೋಶಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ ಇದರಿಂದ ಆ ನಿರ್ದಿಷ್ಟ ಭಾಗವು ಕ್ಷೀಣಿಸುತ್ತಾ ಹೋಗುತ್ತದೆ.

ಕ್ಯಾನ್ಸರ್ ಕಾಯಿಲೆಗೆ ಮುಖ್ಯ ಕಾರಣಗಳೆಂದರೆ: ಅತೀಯಾದ ಧೂಮಪಾನ ಪ್ರತಿ ನಿತ್ಯ ಮದ್ಯಪಾನ ಒತ್ತಡದ ಜೀವನ ತೂಕ ಹೆಚ್ಚಾಗಿರುವಿಕೆ ಅತಿಯಾದ ಯೋಚನೆ ಮತ್ತು ಮಾಲಿನ್ಯ ಪೂರ್ಣ ಪ್ರದೇಶಗಳು. ಕೆಲವೊಮ್ಮೆ ಈ ಕಾಯಿಲೆ ವಂಶಪಾರಂಪರ್ಯವಾಗಿ ಕೂಡ ಬರಬಹುದು ಅಂದರೆ ಇದು ನಮ್ಮ ಹಿರಿಯರಲ್ಲಿ ಯಾರಲ್ಲಾದರೂ ಕಾಣಿಸಿಕೊಂಡಿದ್ದರೆ ನಮಗೂ ಬರುವ ಸಾಧ್ಯತೆ ಇರುತ್ತದೆ ಎಂಬುದು ವೈದ್ಯರ ಮಾತು. ಆದ್ರೆ ಪಾರಂಪರೆಯಾಗಿ ಬಂದಿರುವುದು ಕೆಲವಷ್ಟೇ.

ಮೊದಲೇ ಹೇಳಿದಂತೆ ಕ್ಯಾನ್ಸರ್ ಕಾಯಿಲೆಯು ದೇಹದ ಯಾವುದಾದರೂ ಒಂದು ಭಾಗಕ್ಕೆ ಬರುತ್ತದೆ ನಂತರ ಆ ಭಾಗದ ಕಾರ್ಯಕ್ಷಮತೆ ಕ್ಷೀಣಿಸುತ್ತಾ ಹೋಗುತ್ತದೆ. ಕ್ಯಾನ್ಸರ್ ಕಾಯಿಲೆ ಬಂದಿರುವುದನ್ನು ತಿಳಿಯಲು ಕ್ಯಾನ್ಸರ್ ರೋಗ ಬಂದಿದ್ದರೆ ದೇಹದ ಯಾವುದಾದರೂ ಒಂದು ಭಾಗದಲ್ಲಿ ಅಸಹಜವಾದ ಗೆಡ್ಡೆ ಬಂದಿರುತ್ತದೆ ಅಥವಾ ಯಾವುದಾದರೂ ಒಂದು ನಿರ್ದಿಷ್ಟ ಭಾಗದಲ್ಲಿ ಬಹಳ ನೋವು ಮತ್ತು ರಕ್ತಸ್ರಾವ ಆಗುತ್ತಿರುತ್ತದೆ. ನಂತರ ಕ್ಯಾನ್ಸರ್ ಬಂದರೆ ಅಜೀರ್ಣದ ಸಮಸ್ಯೆ ಆಗುವುದು ದೇಹದಲ್ಲಿ ರಕ್ತ ಕಡಿಮೆಯಾಗುವುದು ನಿಶ್ಯಕ್ತಿ ಹೊಂದುವುದು ತೂಕ ಕಡಿಮೆಯಾಗುವುದು ಬಹಳ ಬೇಗ ರಕ್ತ ಹೆಪ್ಪುಗಟ್ಟುವುದು ಅತಿಯಾಗಿ ಬೆವರುವುದು ಹೀಗೆ ಮುಂತಾದ ಲಕ್ಷಣಗಳ ಮೂಲಕ ಕ್ಯಾನ್ಸರ್ ರೋಗವನ್ನು ಪತ್ತೆಹಚ್ಚಬಹುದು.

ಕ್ಯಾನ್ಸರ್ ರೋಗದ ಲಕ್ಷಣಗಳು ಕಂಡರೆ ಸಿಟಿ ಸ್ಕ್ಯಾನ್ ಎಂ ಆರ್ ಐ ಸ್ಕ್ಯಾನ್ ಎಕ್ಸ್ ರೇ ಅಲ್ಟ್ರಾಸೌಂಡ್ ಹೀಗೆ ಹಲವಾರು ವಿಧದ ಕ್ಯಾನ್ ಗಳನ್ನು ಮಾಡುವುದರಿಂದ ಕ್ಯಾನ್ಸರ್ ಅನ್ನು ಕಂಡುಹಿಡಿಯಬಹುದು. ಇದು ದೇಹದ ಯಾವ ಭಾಗಕ್ಕೆ ಒಂದಿರುತ್ತದೆ ಅದರ ಮೇಲೆ ಯಾವ ಸ್ಕ್ಯಾನ್ ಮಾಡಬೇಕೆಂದು ನಿರ್ಧರಿಸುತ್ತಾರೆ. ಅಂದರೆ ಬ್ಲಡ್ ಕ್ಯಾನ್ಸರ್ ಗೇ ಬೇರೆಯ ರೀತಿಯ ಬೋನ್ ಕ್ಯಾನ್ಸರ್ ಗೆ ಬೇರೆಯರಿಗೆ ಸ್ಕಿನ್ ಕ್ಯಾನ್ಸರ್ ಗೆ ಬೇರೆ ರೀತಿಯ ಸ್ಕ್ಯಾನ್ ಗಳನ್ನು ಮಾಡುತ್ತಾರೆ. ಕ್ಯಾನ್ಸರ್ ಗೆ ಚಿಕಿತ್ಸೆ ಯನ್ನು ಐದು ಹಂತಗಳಲ್ಲಿ ವಿಂಗಡಿಸಿಕೊಂಡು ಕೊಡುತ್ತಾರೆ. ಮೊದಲ ಹಂತದಿಂದ ಕೊನೆಯ ಹಂತದವರೆಗೆ ಬೇರೆ ಬೇರೆ ರೀತಿಯ ಚಿಕಿತ್ಸೆಗಳನ್ನು ಕೊಡುತ್ತಾರೆ. ಮೊದಲು ಮತ್ತು ಎರಡನೇ ಹಂತದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾರೆ. ಮೂರು ನಾಲ್ಕು ಮತ್ತು ಐದನೇ ಹಂತಗಳಲ್ಲಿ ಕಿಮೊತೆರಪಿ ಮತ್ತು ರೇಡಿಯೋಥೆರಪಿ ಗಳನ್ನು ಉಪಯೋಗಿಸಿ ಕ್ಯಾನ್ಸರನ್ನು ನಿವಾರಿಸುತ್ತಾರೆ. ಕೊನೆಯ ಹಂತದಲ್ಲಿರುವವರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವು ಬರಬಹುದು ಆದ್ದರಿಂದ ಮೊದಲೇ ಈ ಕಾಯಿಲೆಯನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು.

LEAVE A REPLY

Please enter your comment!
Please enter your name here