ಬಾಯಲ್ಲಿ ನೀರೂರಿಸುವ ಬೆಳ್ಳುಳ್ಳಿ ಉಪ್ಪಿನಕಾಯಿ

0
1142

ಉಪ್ಪಿನಕಾಯಿ ಎಂದರೆ ಯಾರಿಗೆ ಇಷ್ಟ ಆಗುವುದಿಲ್ಲ ಹೇಳಿ ಆದರೆ ಬೆಳ್ಳುಳ್ಳಿ ಉಪ್ಪಿನಕಾಯಿ ಯಲ್ಲಿ ಸಿಗುವ ರುಚಿ ಬೇರೆ ಯಾವ ಉಪ್ಪಿನಕಾಯಿಯನ್ನು ಸಿಗುವುದಿಲ್ಲ ಅನಿಸುತ್ತದೆ ಅಷ್ಟು ರುಚಿಕರವಾಗಿರುತ್ತದೆ ಬೆಳ್ಳುಳ್ಳಿ ಉಪ್ಪಿನಕಾಯಿ. ಬೆಳ್ಳುಳ್ಳಿ ಉಪ್ಪಿನ ಕಾಯಿ ಬೇಕಾಗುವ ಸಾಮಗ್ರಿಗಳು: ಬೆಳ್ಳುಳ್ಳಿ ಉಪ್ಪು ಅಚ್ಚ ಕಾರದ ಪುಡಿ ಮೆಂತ್ಯೆ ರಾಗಿ ವಿನೆಗರ್ ನಿಂಬೆಹಣ್ಣು ಒಳ್ಳೆಣ್ಣೆ ಮೆಣಸಿನಕಾಯಿ ಸೋಂಪು ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನವನ್ನು ತಿಳಿಯೋಣ. ಬೆಳ್ಳುಳ್ಳಿ ಉಪ್ಪಿನಕಾಯಿ ಎನ್ನುವ ಮಾಡಲು ಮೊದಲಿಗೆ 250 ಗ್ರಾo ಬೆಳ್ಳುಳ್ಳಿಯನ್ನು ತೆಗೆದಿಟ್ಟುಕೊಂಡು ಅದರ ಸಿಪ್ಪೆಯನ್ನು ಬಿಡಿಸಿಟ್ಟುಕೊಳ್ಳಿ. ಬೆಳ್ಳುಳ್ಳಿಯು ನಾಟಿ ಬೆಳ್ಳುಳ್ಳಿ ಆಗಿದ್ದರೂ ಪರವಾಗಿಲ್ಲ ಅಥವಾ ಫಾರಂ ಬೆಳ್ಳುಳ್ಳಿ ಆಗಿದ್ದರೂ ಪರವಾಗಿಲ್ಲ. ನಂತರ ಒಂದು ಬಾಣಲೆಗೆ ಕಾಲು ಚಮಚ ಮೆಂತ್ಯವನ್ನು ಹಾಕಿ ಅದಕ್ಕೆ ಮೂರು ಚಮಚ ರಾಗಿಯನ್ನು ಮಿಶ್ರಣ ಮಾಡಿ ಚೆನ್ನಾಗಿ ಬಾಡಿಸಿ ಡ್ರೈ ರೋಸ್ಟ್ ಮಾಡಿಟ್ಟುಕೊಳ್ಳಿ.

ಅದಕ್ಕೆ ಸ್ವಲ್ಪ ಸೋಂಪನ್ನು ಮಿಕ್ಸ್ ಮಾಡಿ ಚೆನ್ನಾಗಿ ಫ್ರೈ ಮಾಡಿ ನಂತರ ಇದನ್ನು ಸ್ವಲ್ಪ ಹೊತ್ತು ಆರಲು ಬಿಡಿ. ನಂತರ ಇನ್ನೊಂದು ಬಾಣಲೆಗೆ ಅರ್ಧ ಕಪ್ ಎಣ್ಣೆಯನ್ನು ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಿ ಎಣ್ಣೆ ಬಿಸಿಯಾದ ನಂತರ ಅದಕ್ಕೆ ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ರೋಸ್ಟ್ ಮಾಡಿ. ಈಗ ಮೊದಲೇ ಫ್ರೈ ಮಾಡಿದ ಮಸಾಲೆಯನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿಟ್ಟುಕೊಳ್ಳಿ.

ನಂತರ ಒಂದು ಬೌಲ್ ಗೆ ಕರಿದ ಬೆಳ್ಳುಳ್ಳಿ ಮತ್ತು ಎಣ್ಣೆಯನ್ನು ಸುರಿಯಿರಿ. ಎಣ್ಣೆ ಸ್ವಲ್ಪ ಹೆಚ್ಚಾಗೇ ಇರಲಿ ಇದರಿಂದ ಬೆಳ್ಳುಳ್ಳಿ ಉಪ್ಪಿನಕಾಯಿ ಬೇಗ ಹಾಳಾಗುವುದಿಲ್ಲ. ನಂತರ ಎಣ್ಣೆಯಲ್ಲಿರುವ ಬೆಳ್ಳುಳ್ಳಿ ಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಒಂದು ಚಮಚ ಅರಿಶಿಣ ಪುಡಿ 1 ಚಮಚ ಅಚ್ಚ ಕಾರದ ಪುಡಿ ಮೆಣಸಿನ ಕಾಯಿಯ ಪೇಸ್ಟ್ ಮತ್ತು ಮೊದಲೇ ಪುಡಿ ಮಾಡಿಟ್ಟುಕೊಂಡ ಮಸಾಲೆ ಪುಡಿಯನ್ನು 4 ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಿರಿ.

ಈಗ ಉಪ್ಪು ಕಾರ ಸರಿ ಇದೆಯೇ ಎಂದು ಪರೀಕ್ಷಿಸಿ ಏನಾದರೂ ಉಪ್ಪು ಕಾರದಲ್ಲಿ ಹೆಚ್ಚು ಕಡಿಮೆ ಆಗಿದ್ದರೆ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾರವನ್ನು ಮಿಶ್ರಣ ಮಾಡಿ. ಕೊನೆಯಲ್ಲಿ ಎಲ್ಲವೂ ಸರಿ ಇದೆ ಎಂದು ಖಚಿತಪಡಿಸಿಕೊಂಡ ನಂತರ ಎರಡು ಸ್ಪೂನ್ ವಿನೆಗರ್ ಅನ್ನು ಹಾಕಿರಿ. ಈಗ ಉಪ್ಪಿನಕಾಯಿ ರೆಡಿಯಾಗಿದೆ ಈ ಉಪ್ಪಿನಕಾಯಿಯನ್ನು ಒಂದು ಗಾಜಿನ ಬಾಟಲಿಗೆ ಹಾಕಿ ಭದ್ರವಾಗಿ ಮುಚ್ಚಳವನ್ನು ಮುಚ್ಚಿ ಮತ್ತು ಇದನ್ನು ಮೂರು ದಿನಗಳ ಕಾಲ ಬಿಸಿಲಿನಲ್ಲಿ ಇಡೀ. ಇದರಿಂದ ಬೆಳ್ಳುಳ್ಳಿಗೆ ಮಸಾಲೆಗಳು ಚೆನ್ನಾಗಿ ಹಿಡಿಯುತ್ತದೆ ಮತ್ತು ಉಪ್ಪಿನ ಕಾಯಿ ಹೆಚ್ಚು ದಿನ ಬಾಳಿಕೆ ಬರುತ್ತದೆ. ಮೂರು ದಿನಗಳ ನಂತರ ಬೆಳ್ಳುಳ್ಳಿಯ ಉಪ್ಪಿನಕಾಯಿ ಸವಿಯಲು ಸಿದ್ಧ.

LEAVE A REPLY

Please enter your comment!
Please enter your name here