ಸನ್ನಿ ಲಿಯೋನ್ ಜೀವನ ಶೈಲಿಯ ಬಗ್ಗೆ ಗೊತಿಲ್ಲದ ಸಂಗತಿಗಳು

0
870

ಸನ್ನಿ ಲಿಯೋನ್ ಎಂದರೆ ಯಾರಿಗೆ ತಿಳಿದಿಲ್ಲ ಹೇಳಿ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಸನ್ನಿ ಲಿಯೋನ್ ಚಿಕ್ಕ ಮಕ್ಕಳಿಂದ ವಯಸ್ಕರ ವರೆಗೂ ತುಂಬಾ ಅಚ್ಚುಮೆಚ್ಚು. ಅವರನ್ನು ಟಿವಿ ಪರದೆಯ ಮೇಲೆ ನೋಡಲು ಎಲ್ಲರೂ ಕಾತುರರಾಗಿರುತ್ತಾರೆ. ಈಗಂತೂ ಬರೀ ಬಾಲಿವುಡ್ ನಲ್ಲಿ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಕೂಡಾ ಜನಪ್ರಿಯತೆ ಹೊಂದುತ್ತಿದ್ದಾರೆ. ಯಾವುದೇ ಸ್ಟಾರ್ ನಟ ನಟಿಯರು ಆಗಲಿ ಅವರ ಜನಪ್ರಿಯತೆಯನ್ನು ಕಾಪಾಡಿಕೊಳ್ಳಲು ಅವರು ಫಿಟ್ ಆಗಿರುವುದು ತುಂಬಾ ಅಗತ್ಯ ಅದೇ ರೀತಿ ಸನ್ನಿ ಲಿಯೋನ್ ಕೂಡ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಅನೇಕ ನಿಯಮಗಳನ್ನು ರೂಡಿಸಿಕೊಂಡಿದ್ದಾರೆ.

ಸನ್ನಿ ಲಿಯೋನ್ ಅವರು ನೀಲಿ ಚಿತ್ರದ ತಾರೆ ಆಗಿದ್ದರೂ ಕೂಡ ಅವರು ತಮ್ಮ ಜೀವನದಲ್ಲಿ ತುಂಬಾ ಆದರ್ಶಗಳನ್ನು ಪಾಲಿಸುತ್ತಿದ್ದು ಅದು ಇತರರಿಗೆ ಮಾದರಿಯಾಗಿದೆ. ಸನ್ನಿ ಲಿಯೋನ್ ತಮ್ಮ ಆರೋಗ್ಯ ಮತ್ತು ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಅನೇಕ ನಿಯಮಗಳನ್ನು ಪಾಲಿಸುತ್ತಿದ್ದಾರೆ ಅದರಲ್ಲಿ ಮೊದಲನೆಯದಾಗಿ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುವುದು. ಅವರು ಪ್ರತಿದಿನ ತಪ್ಪದೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾರೆ ಇದರಿಂದ ಅವರ ದೇಹ ಸದೃಢವಾಗಿ ಮತ್ತು ಸುಂದರವಾಗಿ ಇದೆ.

ನಂತರ ಅವರು ಜಿಮ್ ನ ಜೊತೆ ಯೋಗವನ್ನು ಕೂಡ ಮಾಡುತ್ತಾರೆ. ಸನ್ನಿ ಲಿಯೋನ್ ಪ್ರಕಾರ ಯೋಗ ಮಾಡುವುದು ದೇಹ ಮತ್ತು ಮನಸ್ಸಿಗೆ ಒಳ್ಳೆಯದು ಎಂದು ಹೇಳುತ್ತಾರೆ. ಯೋಗ ಮಾಡುವುದರಿಂದ ಮನಸ್ಸು ಉಲ್ಲಾಸಭರಿತವಾಗಿರುತ್ತದೆ ಇದರಿಂದ ದಿನಪೂರ್ತಿ ಎಷ್ಟು ಕೆಲಸ ಮಾಡಿದರು ಆಯಾಸವಾಗುವುದಿಲ್ಲ ಎಂದು ಹೇಳುತ್ತಾರೆ. ಅವರು ಹೇಳುವ ಪ್ರಕಾರ ಯೋಗ ಮತ್ತು ಜಿಮ್ ಮಾಡುವುದು ಕಷ್ಟದ ಕೆಲಸವೇ ಅಲ್ಲ. ಅದಕ್ಕೆ ಮನಸ್ಸು ಮಾಡಬೇಕು ಅಷ್ಟೇ ಶ್ರದ್ದೆಯಿಂದ ಮತ್ತು ಇಷ್ಟ ಪಟ್ಟು ಯಾವ ಕೆಲಸವನ್ನು ಮಾಡಿದರೂ ಅದು ನಮಗೆ ಬೇಸರ ತರುವುದಿಲ್ಲ ಎಂದು ಹೇಳುತ್ತಾರೆ.

ಯೋಗ ಮತ್ತು ಜಿಮ್ ಜೊತೆಗೆ ಅವರು ಪ್ರತಿದಿನ ಮುಂಜಾನೆಯೇ ಎದ್ದು 20 ರಿಂದ 30 ನಿಮಿಷಗಳ ಕಾಲ ವಾಕ್ ಮಾಡುತ್ತಾರೆ. ಪ್ರತಿದಿನ ಬೆಳಗ್ಗೆ ಬೇಗ ಎದ್ದು ಮಾಡುವುದರಿಂದ ನಮ್ಮ ದೇಹವು ಕ್ರಿಯಾಶೀಲತೆಯಿಂದ ಕೂಡಿರುತ್ತದೆ ಮತ್ತು ದಿನಪೂರ್ತಿ ನಾವು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ ಎಂದು ಅವರ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ತಮ್ಮ ದೇಹದ ಬಗ್ಗೆ ಕಾಳಜಿ ವಹಿಸುವ ಸನ್ನಿ ಲಿಯೋನ್ ತಾವು ಸೇವಿಸುವ ಆಹಾರ ಬಗ್ಗೆಯು ಬಹಳ ಎಚ್ಚರದಿಂದ ಇರುತ್ತಾರೆ ಸನ್ನಿ ಲಿಯೋನ್ ಮನಸ್ಸಿಗೆ ಬಂದಂತೆ ಹೊರಗಡೆ ಸಿಗುವ ಕರಿದ ಪದಾರ್ಥಗಳನ್ನು ಆಗಲಿ ಅಥವಾ ಜಂಕ್ ಫುಡ್ ಗಳನ್ನು ಸೇವಿಸುವುದಿಲ್ಲ ಅವರು ಊಟದ ಸಮಯದಲ್ಲಿ ಅದನ್ನು ಸೇವಿಸುತ್ತಾರೆ ಮತ್ತು ಹೆಚ್ಚು ತರಕಾರಿಗಳನ್ನು ಸೇವಿಸುತ್ತಾರೆ. ಕೆಲ ಸಮಯ ಅವರು ಹಸಿ ತರಕಾರಿಗಳನ್ನು ಕೂಡ ಸೇವಿಸುತ್ತಾರೆ ಹೆಚ್ಚು ಹಣ್ಣುಗಳನ್ನು ತಿನ್ನುವುದು ಹಣ್ಣಿನ ಜ್ಯೂಸ್ ಗಳನ್ನು ಕುಡಿಯುವುದು ಏಳ ನೀರನ್ನು ಕುಡಿಯುವುದನ್ನು ರೂಢಿಸಿಕೊಂಡಿದ್ದಾರೆ ಇದರಿಂದ ಅವರ ಆರೋಗ್ಯವು ಉತ್ತಮವಾಗಿ ಇಟ್ಟುಕೊಂಡಿದ್ದಾರೆ.

LEAVE A REPLY

Please enter your comment!
Please enter your name here